Palmistry: ನಿಮ್ಮ ಕೈಯಲ್ಲಿ ಈ ಗುರುತಿದ್ದರೆ ನೀವು ಶ್ರೀಮಂತರಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ
ಹಸ್ತಸಾಮುದ್ರಿಕೆಯಲ್ಲಿ ಅನೇಕ ರೇಖೆಗಳು, ಚಿಹ್ನೆ ಮತ್ತು ಆಕಾರಗಳನ್ನು ಮುಖ್ಯವೆಂದು ಪರಿಗಣಿಸಲಾಗಿದೆ. ಇದು ನಿಮ್ಮ ಜೀವನದಲ್ಲಿ ಏನಾಗುತ್ತದೆ ಎಂಬುದರ ಬಗ್ಗೆ ತಿಳಿಯಲು ನಿಮಗೆ ಅನುವು ಮಾಡಿಕೊಡುತ್ತದೆ. ಜೊತೆಗೆ ಈ ರೇಖೆಗಳು ವ್ಯಕ್ತಿಯ ವಯಸ್ಸು, ವಿಧಿ, ಸಂಪತ್ತು ಮತ್ತು ಅರ್ಹತೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತವೆ. ಆದರೆ ನಿಮ್ಮ ಕೈಗಳ ರೇಖೆಗಳಲ್ಲಿ ಯಾವ ರೀತಿಯ ಚಿಹ್ನೆಗಳು ಅಡಗಿವೆ ಎಂಬುದು ನಿಮಗೆ ತಿಳಿದಿದೆಯೇ? ನೀವು ಶ್ರೀಮಂತರಾಗುತ್ತಿರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಮಗು ಹುಟ್ಟಿದ ತಕ್ಷಣ ಸಮಯ ದಿನಾಂಕ ನೋಡಿ ಜಾತಕ ತಯಾರಿಸಲಾಗುತ್ತದೆ. ಇದು ಜೀವನದ ಘಟನೆಗಳು, ಅವರ ಸ್ವಭಾವವನ್ನು ತಿಳಿಸುತ್ತದೆ. ಸಾಮಾನ್ಯವಾಗಿ ಇದನ್ನು ಎಲ್ಲರೂ ಮಾಡುತ್ತಾರೆ. ಅಂತೆಯೇ, ಕೈಯಲ್ಲಿರುವ ರೇಖೆಗಳ ಮೂಲಕ ವ್ಯಕ್ತಿಯ ಭವಿಷ್ಯವನ್ನು ಸಹ ತಿಳಿಯಬಹುದು. ಹಸ್ತಸಾಮುದ್ರಿಕೆ( Palmistry) ಯಲ್ಲಿ ಅನೇಕ ರೇಖೆಗಳು, ಚಿಹ್ನೆ ಮತ್ತು ಆಕಾರಗಳನ್ನು ಮುಖ್ಯವೆಂದು ಪರಿಗಣಿಸಲಾಗಿದೆ. ಇದು ನಿಮ್ಮ ಜೀವನದಲ್ಲಿ ಏನಾಗುತ್ತದೆ ಎಂಬುದರ ಬಗ್ಗೆ ತಿಳಿಯಲು ನಿಮಗೆ ಅನುವು ಮಾಡಿಕೊಡುತ್ತದೆ. ಜೊತೆಗೆ ಈ ರೇಖೆಗಳು ವ್ಯಕ್ತಿಯ ವಯಸ್ಸು, ವಿಧಿ, ಸಂಪತ್ತು ಮತ್ತು ಅರ್ಹತೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತವೆ. ಆದರೆ ನಿಮ್ಮ ಕೈಗಳ ರೇಖೆಗಳಲ್ಲಿ ಯಾವ ರೀತಿಯ ಚಿಹ್ನೆಗಳು ಅಡಗಿವೆ ಎಂಬುದು ನಿಮಗೆ ತಿಳಿದಿದೆಯೇ? ನೀವು ಶ್ರೀಮಂತರಾಗುತ್ತಿರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಅಂಗೈಯಲ್ಲಿ ತ್ರಿಶೂಲ ಚಿಹ್ನೆ
ಸಾಮಾನ್ಯವಾಗಿ ಕೈಯಲ್ಲಿರುವ ಕೆಲವು ಚಿಹ್ನೆಗಳು ನಿಮ್ಮ ಅದೃಷ್ಟ ಬದಲಾಯಿಸಬಲ್ಲದು. ಆದರೆ ಅದನ್ನು ಸರಿಯಾಗಿ ತಿಳಿದುಕೊಳ್ಳುವ ಮನಸ್ಸು, ಜ್ಞಾನ ನಮ್ಮಲ್ಲಿ ಇರಬೇಕಾಗುತ್ತದೆ. ಕೈಬರಹ ವಿಜ್ಞಾನದ ಪ್ರಕಾರ, ಅಂಗೈಯಲ್ಲಿರುವ ತ್ರಿಶೂಲ ಚಿಹ್ನೆಯನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಚಿಹ್ನೆ ಇರುವ ವ್ಯಕ್ತಿಯನ್ನು ಸಮಾಜದಲ್ಲಿ ಗೌರವಿಸಲಾಗುತ್ತದೆ. ಕುತೂಹಲಕಾರಿ ಸಂಗತಿಯೆಂದರೆ, ತ್ರಿಶೂಲ ಚಿಹ್ನೆಯನ್ನು ಹೊಂದಿರುವ ವ್ಯಕ್ತಿಯು ಸರ್ಕಾರಿ ಉದ್ಯೋಗದಿಂದ ಪ್ರಯೋಜನ ಪಡೆಯುತ್ತಾನೆ. ಜೊತೆಗೆ ಈ ವ್ಯಕ್ತಿಗೆ ಜೀವನದಲ್ಲಿ ಹಣದ ಕೊರತೆ ಬರುವುದಿಲ್ಲ ಎಂದು ಹೇಳಲಾಗುತ್ತದೆ.
ಅಂಗೈಯಲ್ಲಿ M ಮಾರ್ಕ್
ಅದಲ್ಲದೆ ಕೈಬರಹ ವಿಜ್ಞಾನದ ಪ್ರಕಾರ, ಅಂಗೈಯಲ್ಲಿ ಮೂರು ರೇಖೆಗಳು ಸೇರಿ M ಆಕೃತಿ ಕಂಡು ಬಂದರೆ ಅಥವಾ ಅದನ್ನು ಸರಿಯಾಗಿ ಗುರುತಿಸಿದರೆ, ಅದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಅಂದರೆ ಅಂಗೈಯಲ್ಲಿರುವ ಮೂರು ರೇಖೆಗಳು ಇಂಗ್ಲಿಷ್ ಅಕ್ಷರ M ನಂತೆ ಒಟ್ಟಿಗೆ ಕಾಣುತ್ತಿದ್ದರೆ, ಅದನ್ನು M ಮಾರ್ಕ್ ಎಂದು ಕರೆಯಲಾಗುತ್ತದೆ. ಈ ಎಂ ಅಕ್ಷರವನ್ನು ತಮ್ಮ ಅಂಗೈಯಲ್ಲಿ ಹೊಂದಿರುವ ಜನರು, ತಮ್ಮ ಜೀವನದಲ್ಲಿ ಎಂದಿಗೂ ಹಣದ ಕೊರತೆಯನ್ನು ಎದುರಿಸುವುದಿಲ್ಲ. ಜೊತೆಗೆ ಈ ಚಿಹ್ನೆ ಇರುವವರು ತುಂಬಾ ಅದೃಷ್ಟವಂತರು ಎನ್ನಲಾಗುತ್ತದೆ.
ಮೀನಿನ ಚಿಹ್ನೆ
ಶಾಸ್ತ್ರದ ಪ್ರಕಾರ, ಅಂಗೈಯಲ್ಲಿ ಮೀನಿನ ಚಿಹ್ನೆಯನ್ನು ಹೊಂದಿರುವವರು ತುಂಬಾ ಅದೃಷ್ಟವಂತರು ಜೊತೆಗೆ ಭಾಗ್ಯಶಾಲಿಗಳು ಎನ್ನಲಾಗುತ್ತದೆ. ಈ ವ್ಯಕ್ತಿಗಳು ತಮ್ಮ ವೃತ್ತಿ ಜೀವನದಲ್ಲಿ ಹೆಚ್ಚಿನ ಪ್ರಗತಿಯನ್ನು ಉದ್ಯೋಗ ಅಥವಾ ವ್ಯವಹಾರಗಳ ಮೂಲಕ ಹೆಚ್ಚು ಲಾಭ ಗಳಿಸುತ್ತಾರೆ ಎನ್ನಲಾಗುತ್ತದೆ.
ಸ್ವಸ್ತಿಕ ಚಿಹ್ನೆ
ಅಂಗೈಯಲ್ಲಿ ಸ್ವಸ್ತಿಕ ಚಿಹ್ನೆ ಇರುವುದನ್ನು ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ಅಂಗೈಯಲ್ಲಿ ಈ ಗುರುತು ಇರುವವರು ತುಂಬಾ ಅದೃಷ್ಟವಂತರು. ಅಂತಹ ಜನರನ್ನು ಸಮಾಜದಲ್ಲಿ ಗೌರವಿಸಲಾಗುತ್ತದೆ. ಅದಲ್ಲದೆ ಅಂಗೈಯಲ್ಲಿ ಸ್ವಸ್ತಿಕ ಚಿಹ್ನೆ ಇರುವವರು ಗಣಪತಿ ದೇವರ ಕೃಪೆಯನ್ನು ಹೊಂದಿರುತ್ತಾರೆ. ಹಾಗಾಗಿ ಗಣಪತಿ ಸ್ಮರಣೆ ಮಾಡಿ ಯಾವುದೇ ಒಳ್ಳೆಯ ಕೆಲಸ ಮಾಡಿದರೂ ಅದರಲ್ಲಿ ಜಯ ಗಳಿಸುತ್ತಾರೆ. ಜೊತೆಗೆ ಇಂತಹ ಜನರು ವ್ಯವಹಾರದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತಾರೆ ಎನ್ನಲಾಗಿದೆ.
ಕಮಲದ ಚಿಹ್ನೆ
ನಿಮ್ಮ ಕೈಯಲ್ಲಿ ಕಮಲದ ಚಿಹ್ನೆ ಇದ್ದರೆ, ಅದನ್ನು ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದನ್ನು ವಿಷ್ಣು ಯೋಗ ಎಂದೂ ಕೂಡ ಕರೆಯುತ್ತಾರೆ. ಅಂಗೈಯಲ್ಲಿ ಕಮಲದ ಚಿಹ್ನೆಯನ್ನು ಹೊಂದಿರುವ ವ್ಯಕ್ತಿಗಳು ಅದೃಷ್ಟವಂತರು. ಅವರ ಜೀವನದಲ್ಲಿ ಎಂದಿಗೂ ಹಣದ ಕೊರತೆ ಬರುವುದಿಲ್ಲ. ಹಣವು ಅವರಿಗೆ ಒಂದಲ್ಲ ಒಂದು ರೂಪದಲ್ಲಿ ಬರುತ್ತಲೇ ಇರುತ್ತದೆ ಎನ್ನಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ