Google Doodle: ಪಾನಿ ಪುರಿಗೆ ವಿಶೇಷ ಗೌರವ ನೀಡಿದ ಗೂಗಲ್ ಡೂಡಲ್

|

Updated on: Jul 12, 2023 | 10:57 AM

ಗೂಗಲ್ ಭಾರತದ ಜನಪ್ರಿಯ ಬೀದಿ ಆಹಾರಗಳಲ್ಲಿ ಒಂದಾದ ಪಾನಿ ಪುರಿಗೆ ಮೀಸಲಾಗಿರುವ ವಿಶಿಷ್ಟವಾದ ಡೂಡಲ್ ಅನ್ನು ಸಿದ್ಧಪಡಿಸಿದೆ.

Google Doodle: ಪಾನಿ ಪುರಿಗೆ ವಿಶೇಷ ಗೌರವ ನೀಡಿದ ಗೂಗಲ್ ಡೂಡಲ್
Google Doodle
Image Credit source: Google
Follow us on

ಇಂದು (ಜುಲೈ 12) ಗೂಗಲ್ ಭಾರತದ ಜನಪ್ರಿಯ ಬೀದಿ ಆಹಾರಗಳಲ್ಲಿ ಒಂದಾದ ಪಾನಿ ಪುರಿಗೆ ಮೀಸಲಾಗಿರುವ ವಿಶಿಷ್ಟವಾದ ಡೂಡಲ್(Doodle) ಅನ್ನು ಸಿದ್ಧಪಡಿಸಿದೆ. 2015 ರಲ್ಲಿ ,ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ರೆಸ್ಟೋರೆಂಟ್ 51 ಆಯ್ಕೆಗಳನ್ನು ನೀಡುವ ಮೂಲಕ ಪಾನಿ ಪುರಿಯ ಅತ್ಯಂತ ರುಚಿಯನ್ನು ಪೂರೈಸುವ ಮೂಲಕ ವಿಶ್ವ ದಾಖಲೆಯನ್ನು ಮಾಡಿತ್ತು. ಆದ್ದರಿಂದ ಈ ದಿನವನ್ನು ಗೌರವಿಸಲು ಗೂಗಲ್ ವಿಶಿಷ್ಟವಾದ ಡೂಡಲ್ ಸಿದ್ಧಪಡಿಸಿದೆ. ಬೀದಿ ಬದಿಯ ವ್ಯಾಪಾರಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ.

ಪಾನಿಪುರಿಯನ್ನು ಭಾರತದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯಾಗುತ್ತದೆ. ಆಂಧ್ರಪ್ರದೇಶ,ಮಹಾರಾಷ್ಟ್ರ ಹಾಗೂ ಕೆಲವು ರಾಜ್ಯಗಳಲ್ಲಿ ಪಾನಿ ಪುರಿ ಎಂದು ಕರೆದರೆ, ಇನ್ನೂ ಕೆಲವು ಕಡೆಗಳಲ್ಲಿ ಗೋಲ್ ಗಪ್ಪೆ ಅಥವಾ ಗೋಲ್ ಗಪ್ಪಾ, ಪುಚ್ಕಾಸ್ ಎಂದು ಕರೆಯಲಾಗುತ್ತದೆ. ಪುಚ್ಕಾಸ್ ಅಥವಾ ಫುಚ್ಕಾಸ್ ಎಂಬ ಹೆಸರನ್ನು ಪಶ್ಚಿಮ ಬಂಗಾಳ ಮತ್ತು ಬಿಹಾರ ಮತ್ತು ಜಾರ್ಖಂಡ್‌ನ ಕೆಲವು ಭಾಗಗಳಲ್ಲಿ ಬಳಸಲಾಗುತ್ತದೆ, ಇದರಲ್ಲಿ ಹುಣಸೆ ಹಣ್ಣಿನ ತಿರುಳಿನೊಂದಿಗೆ ವಿಶೇಷ ರುಚಿಯನ್ನು ನೀಡುತ್ತದೆ.

ಇದನ್ನೂ ಓದಿ: ವಿಶ್ವ ಪೇಪರ್ ಬ್ಯಾಗ್ ದಿನದ ಇತಿಹಾಸ, ಮಹತ್ವ ಇಲ್ಲಿದೆ

ಗೂಗಲ್ ಡೂಡಲ್​​ನ ಜೊತೆಗೆ ವಿವಿಧ ಬಗೆಯ ಪಾನಿ ಪುರಿಯ ಆಟವನ್ನು ಆಡಬಹುದು. ಪ್ರತಿ ಗ್ರಾಹಕರು ಸಂತೋಷವಾಗಿರಲು ಅವರ ರುಚಿ ಮತ್ತು ಪ್ರಮಾಣ ಆದ್ಯತೆಗೆ ಹೊಂದಿಕೆಯಾಗುವ ಪೂರಿಗಳನ್ನು ಆಯ್ಕೆ ಮಾಡುವ ಕಾರ್ಯವನ್ನು ಆಟಗಾರನಿಗೆ ವಹಿಸಲಾಗುತ್ತದೆ.

ಈ ಹಂತಗಳನ್ನು ಅನುಸರಿಸಿ:

  • www.google.com ಗೆ ಲಾಗಿನ್ ಮಾಡಿ.
  • ಮೇಲೆ ಕಾಣುವ ಡೂಡಲ್ ಮೇಲೆ ಕ್ಲಿಕ್ ಮಾಡಿ.
  • ನೀವು ಸಮಯ ಅಥವಾ ವಿಶ್ರಾಂತಿಯಲ್ಲಿ ಆಡಲು ಎರಡು ಆಯ್ಕೆಗಳಿರುತ್ತವೆ.
  • ಸರಿಯಾದ ಪಾನಿ ಪುರಿಯನ್ನು ನೀವು ಕ್ಲಿಕ್ ಮಾಡುವ ಜೋಡಿಸುತ್ತಾ ಹೋಗಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: