ಸಾಂದರ್ಭಿಕ ಚಿತ್ರ
ಈಗಿನ ಕಾಲದ ಮಕ್ಕಳು ತುಂಬಾನೇ ಬುದ್ದಿವಂತರು ಅಷ್ಟೇ ಕಿಡಿಗೇಡಿಗಳು. ಕುಳಿತಲ್ಲಿಯೇ ಕುಳಿತುಕೊಳ್ಳುವುದು ಕಡಿಮೆಯೇ. ಏನಾದರೊಂದು ತರಲೆ ತುಂಟಾಟಗಳನ್ನು ಮಾಡುತ್ತಾ ಹೆತ್ತವರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿರುತ್ತಾರೆ. ಹೊರಗಡೆ ಹೋದಾಗ ತುಂಟಾಟವು ಅತಿರೇಕಕ್ಕೆ ಮಿತಿದರೆ ಒಂದೇಟು ಬೀಳುತ್ತದೆ ಆದರೆ ಪೋಷಕರು ತಮ್ಮ ಅತಿ ತುಂಟ ಮಕ್ಕಳನ್ನು ನಿಭಾಯಿಸುವುದನ್ನು ತಿಳಿದುಕೊಂಡರೆ ಯಾವುದೇ ಟೆನ್ಶನ್ ಇಲ್ಲದೆ ಆರಾಮಾಗಿರಬಹುದು.
- ಮಕ್ಕಳ ಮಾತನ್ನು ಹೆತ್ತವರು ಕಿವಿಗೊಟ್ಟು ಕೇಳುವುದು ಒಳ್ಳೆಯದು. ನಿಮ್ಮ ಮಕ್ಕಳು ಏನನ್ನಾದರೂ ಒಳ್ಳೆಯ ಕೆಲಸ ಮಾಡಿದರೆ ಸಾರ್ವಜನಿಕವಾಗಿ ಅವರನ್ನು ಹೊಗಳಿ, ಇದರಿಂದ ಮಗುವಿನಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ.
- ಮಕ್ಕಳು ತಮಗಿರುವ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳಲು ಕೆಲವೊಮ್ಮೆ ಹೆದರುತ್ತಾರೆ. ಆದರೆ ನಿಮ್ಮ ಮಕ್ಕಳು ಸಮಸ್ಯೆಯಲ್ಲಿ ಸಿಲುಕಿಕೊಂಡಾಗ, ಅದರಿಂದ ಹೊರಬರುವುದು ಹೇಗೆ ಎನ್ನುವುದನ್ನು ತಿಳಿಸಿ. ಆ ಸಮಸ್ಯೆಯಿಂದ ಮಕ್ಕಳನ್ನು ಪಾರು ಮಾಡಿ, ಇದರಿಂದ ಮಕ್ಕಳಿಗೆ ನಿಮ್ಮ ಮೇಲೆ ನಂಬಿಕೆಯು ಬರುತ್ತದೆ.
- ಎಲ್ಲರ ಭಾವನೆಗಳು ಒಂದೇ ರೀತಿ ಇರುವುದಿಲ್ಲ. ಪ್ರತಿಯೊಬ್ಬರೂ ವಿಭಿನ್ನ ಭಾವನೆಗಳನ್ನು ಹೊಂದಿದ್ದಾರೆ. ಈ ವಿಷಯಗಳನ್ನು ನಿಮ್ಮ ಮಕ್ಕಳಿಗೆ ಅರ್ಥ ಮಾಡಿಸುವುದು ಒಳ್ಳೆಯದು. ಇದರಿಂದ ಮಕ್ಕಳು ನಿಮ್ಮ ಭಾವನೆಗೆ ಬೆಲೆ ಕೊಡಲು ಸಾಧ್ಯವಾಗುತ್ತದೆ.
- ಮಕ್ಕಳ ಸಣ್ಣ ಸಣ್ಣ ಸಾಧನೆಯನ್ನು ಸಂಭ್ರಮಿಸಿ. ಅದಲ್ಲದೇ ಸಣ್ಣ ಪುಟ್ಟ ಯಶಸ್ಸಿನಿಂದ ಸಂತೋಷವು ಹೇಗೆ ಬರುತ್ತದೆ ಎಂದು ಮಕ್ಕಳಿಗೆ ತಿಳಿಸಿ. ಇದರಿಂದ ಮಕ್ಕಳು ತುಂಟಾಟವನ್ನು ಕಡಿಮೆ ಮಾಡಿ ಚಟುವಟಿಕೆಗಳಲ್ಲೂ ಹೆಚ್ಚೆಚ್ಚು ಭಾಗವಹಿಸುತ್ತಾರೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ