Parenting Tips : ಬೆಳೆಯುತ್ತಿರುವ ಮಗುವಿನ ಮುಂದೆ ಈ ಮಾತುಗಳನ್ನು ಆಡಲೇಬೇಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 11, 2024 | 4:45 PM

ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಮಾತಿದೆ. ಹೀಗಾಗಿ ಮಕ್ಕಳಿಗೂ ಒಳ್ಳೆಯ ಸಂಸ್ಕಾರವನ್ನು ನೀಡಿ ಬೆಳೆಸಿದರೆ ಮಾತ್ರ ಭವಿಷ್ಯದಲ್ಲಿ ಒಂದೊಳ್ಳೆ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ. ಆದರೆ ಪೋಷಕರು ಮಾಡುವ ಕೆಲವು ತಪ್ಪುಗಳು ಮಕ್ಕಳ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಹೆತ್ತ ತಂದೆ ತಾಯಿಯರು ತಮ್ಮ ಮಕ್ಕಳ ಮುಂದೆ ಈ ವಿಷಯಗಳನ್ನು ಹೇಳಲೇಬೇಡಿ. ನಿಮ್ಮ ನೇರ ನೇರವಾದ ಮಾತುಗಳು ಮಗುವಿನ ಮನಸ್ಸಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಯೇ ಹೆಚ್ಚಿರುತ್ತದೆ.

Parenting Tips : ಬೆಳೆಯುತ್ತಿರುವ ಮಗುವಿನ ಮುಂದೆ ಈ ಮಾತುಗಳನ್ನು ಆಡಲೇಬೇಡಿ
ಸಾಂದರ್ಭಿಕ ಚಿತ್ರ
Follow us on

ಪೋಷಕರು ಹಾಗೂ ಮಕ್ಕಳ ನಡುವೆ ಅವಿನಾಭಾವ ಸಂಬಂಧವಿರುತ್ತದೆ. ಹೀಗಾಗಿ ಮಗುವಿಗೆ ಮೊಟ್ಟ ಮೊದಲ ಆದರ್ಶ ವ್ಯಕ್ತಿಗಳು ತಂದೆ ತಾಯಿಯೇ ಆಗಿರುತ್ತದೆ. ಇತ್ತ ಪೋಷಕರು ಕೂಡ ತಮ್ಮ ಜವಾಬ್ದಾರಿ ಹಾಗೂ ಪಾತ್ರವನ್ನು ಅಷ್ಟೇ ಅಚ್ಚುಕಟ್ಟಾಗಿ ನಿಭಾಯಿಸಬೇಕು. ನಿಮ್ಮ ವ್ಯಕ್ತಿತ್ವ, ಮಾತು, ನಡವಳಿಕೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಕೂಡ ಅದು ಮಗುವಿನ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ಪೋಷಕರು ಮಗುವಿನ ಈ ಮಾತುಗಳನ್ನು ಆಡುವಾಗ ಸ್ವಲ್ಪ ಎಚ್ಚರ ವಹಿಸಬೇಕು.

* ಮಕ್ಕಳನ್ನು ಹೋಲಿಕೆ ಮಾಡಬೇಡಿ : ನಿಮ್ಮ ಮಕ್ಕಳನ್ನು ಬೇರೆ ಮಕ್ಕಳೊಂದಿಗಾಗಲಿ ಅಥವಾ ನಿಮ್ಮ ಬಾಲ್ಯದೊಂದಿಗೆ ಹೋಲಿಸಬೇಡಿ. ನಿಮ್ಮ ವಯಸ್ಸಿನಲ್ಲಿ ನಾನು ಹೀಗಿದ್ದೆ, ಹಾಗಿದ್ದೆ. ನಿನ್ನ ನೋಡು, ನೀನು ಹೇಗೆ ಇದ್ದಿಯಾ ಹೇಳಿದ್ದು ಒಂದು ಮಾತು ಕೂಡ ಕೇಳಲ್ಲ ಎಂದು ಹೇಳಲು ಹೋಗಲೇಬೇಡಿ. ಇದರಿಂದ ಮಕ್ಕಳ ಮನಸ್ಸಿಗೆ ನೋವಾಗಬಹುದು. ಈ ವರ್ತನೆಯಿಂದ ಪೋಷಕರ ಮೇಲೆ ಮಕ್ಕಳಿಗೆ ದ್ವೇಷದಂತಹ ಭಾವನೆಯು ಹುಟ್ಟಿಕೊಳ್ಳುತ್ತದೆ.

* ಮಕ್ಕಳ ನಿರ್ಧಾರವನ್ನು ಹೀಯಾಳಿಸಬೇಡಿ : ಹೆಚ್ಚಿನ ಪೋಷಕರು ಯಾವುದಾದರು ವಿಷಯಗಳಲ್ಲಿ ತಮ್ಮ ನಿರ್ಧಾರವನ್ನು ಮಕ್ಕಳು ಹೇಳಲು ಬಂದರೆ ಅವರ ಬಾಯಿ ಮುಚ್ಚಿಸುವುದು. ತಪ್ಪೆಂದು ಮುಖಕ್ಕೆ ಹೊಡೆದಂತೆ ಹೇಳಿ ಬಿಡುತ್ತಾರೆ. ಹೀಗೆ ಮಾಡುವುದು ನಿಜಕ್ಕೂ ಸರಿಯಲ್ಲ. ಮಕ್ಕಳಿಗೆ ತಮ್ಮ ನಿರ್ಧಾರದಲ್ಲಿ ಯಾವುದು ಸರಿ-ಯಾವುದು ತಪ್ಪು ಎನ್ನುವಾ ಬಗ್ಗೆ ಸ್ಪಷ್ಟವಾಗಿ ಹೇಳುವುದು ಪೋಷಕರ ಕೆಲಸ.

* ಮಕ್ಕಳನ್ನು ಒಡಹುಟ್ಟಿದವರೊಂದಿಗೆ ಹೋಲಿಕೆ ಮಾಡಬೇಡಿ : ಬಹುತೇಕ ಪೋಷಕರು ಮಕ್ಕಳಿಗೆ ಸಹೋದರ ಸಹೋದರಿಯರಿದ್ದರೆ ಅವರೊಂದಿಗೆ ಹೋಲಿಕೆ ಮಾಡಿ ಮಾತನಾಡುತ್ತಾರೆ. ನೀನು ನಿನ್ನ ಅಕ್ಕ-ಅಣ್ಣನನ್ನು ನೋಡಿ ಕಲಿತುಕೊಳ್ಳಬೇಕು ಎನ್ನುವ ಮಾತನ್ನು ಸದಾ ಆಡುತ್ತಾರೆ. ಈ ಮಾತುಗಳಿಂದ ಒಡಹುಟ್ಟಿದವರ ಮೇಲೆ ದ್ವೇಷದ ಭಾವನೆ ಬೆಳೆಸಿಕೊಳ್ಳುತ್ತಾರೆ. ಹೀಗಾಗಿ ಸಾಧ್ಯವಾದಷ್ಟು ಈ ರೀತಿ ಹೋಲಿಕೆ ಮಾಡಿ ಮಾತನಾಡುವುದನ್ನು ತಪ್ಪಿಸುವುದು ಉತ್ತಮ.

ಇದನ್ನೂ ಓದಿ: ಪತ್ನಿಯಾದವಳು ಪತಿಯ ಈ ತಪ್ಪುಗಳನ್ನು ಎಂದಿಗೂ ಮುಚ್ಚಿಡಲೇಬಾರದು

* ಪ್ರೀತಿ ಬಯಸಿ ಬಂದಾಗ ಮಕ್ಕಳನ್ನು ದೂರ ತಳ್ಳುವುದು : ಈಗಿನ ಕಾಲದಲ್ಲಿ ಯಾರಿಗೂ ಕೂಡ ಸಮಯವಿಲ್ಲ. ಒತ್ತಡದ ಬದುಕಿನಲ್ಲಿ ಮನೆ ಮಕ್ಕಳು ಎನ್ನುವುದನ್ನೇ ಮರೆತು ಬಿಡುತ್ತಾರೆ. ಬಿಡುವು ಸಿಕ್ಕಾಗೆಲೆಲ್ಲಾ ಫೋನ್ ನಲ್ಲೇ ಕಳೆದುಬಿಡುವುದೇ ಹೆಚ್ಚು. ಆದರೆ ಪ್ರೀತಿಯಿಂದ ಮಕ್ಕಳು ಪೋಷಕರ ಬಳಿ ಬಂದಾಗ ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡು ಎಂದು ದೂರ ಮಾಡುವುದು ಸರಿಯಲ್ಲ. ಇದರಿಂದ ಮಕ್ಕಳಿಗೆ ತಾನು ಒಂಟಿ, ತನಗೆ ಯಾರು ಇಲ್ಲ ಎನ್ನುವ ಭಾವನೆಯು ಮೂಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ