Chanakya Niti : ಪತ್ನಿಯಾದವಳು ಪತಿಯ ಈ ತಪ್ಪುಗಳನ್ನು ಎಂದಿಗೂ ಮುಚ್ಚಿಡಲೇಬಾರದು

ಬಹುತೇಕ ದಂಪತಿಗಳು ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ಒಬ್ಬರನ್ನೊಬ್ಬರು ಅನುಸರಿಸಿಕೊಂಡು ಹೋಗುತ್ತಾರೆ. ಆದರೆ ಚಾಣಕ್ಯನು ತನ್ನ ನೀತಿ ಶಾಸ್ತ್ರದಲ್ಲಿ ಪತಿಯ ಈ ಕೆಲವು ತಪ್ಪುಗಳನ್ನು ಅಥವಾ ಕೆಟ್ಟ ಅಭ್ಯಾಸಗಳನ್ನು ಪತ್ನಿಯು ಎಂದಿಗೂ ನಿರ್ಲಕ್ಷಿಸಬಾರದಂತೆ. ಇದರಿಂದ ಭವಿಷ್ಯದಲ್ಲಿ ಪಶ್ಚಾತ್ತಾಪ ಪಡಬೇಕಾಗಬಹುದಂತೆ. ಹಾಗಾದ್ರೆ ಹೆಂಡತಿಯು ತನ್ನ ಗಂಡನ ಯಾವ ಕೆಟ್ಟ ಅಭ್ಯಾಸಗಳನ್ನು ಮುಚ್ಚಿಡಬಾರದು ಎನ್ನುವ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

Chanakya Niti : ಪತ್ನಿಯಾದವಳು ಪತಿಯ ಈ ತಪ್ಪುಗಳನ್ನು ಎಂದಿಗೂ ಮುಚ್ಚಿಡಲೇಬಾರದು
ಚಾಣಕ್ಯ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 11, 2024 | 4:00 PM

ವೈವಾಹಿಕ ಸಂಬಂಧ ಎನ್ನುವುದು ಜೋಡೆತ್ತುಗಳು ಇದ್ದಂತೆ. ಒಂದು ಎತ್ತಿನ ನಡವಳಿಕೆ ಸರಿಯಿಲ್ಲದೇ ಹೋದರೂ ಅದು ಸಂಸಾರದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಪತಿಯಾದವಳು ಅನೇಕ ಬಾರಿ ಎಲ್ಲವನ್ನು ಸಹಿಸಿಕೊಂಡು ಹೋಗುತ್ತಾಳೆ. ಕೆಲವೊಮ್ಮೆ ಪತಿಯ ಕೆಟ್ಟ ನಡವಳಿಕೆ ಹಾಗೂ ಅಭ್ಯಾಸವನ್ನು ಮುಚ್ಚಿಡುತ್ತಾಳೆ. ಆದರೆ ಈ ತಪ್ಪನ್ನು ಮಾಡಿದರೆ ಆಕೆಯು ತನ್ನ ಭವಿಷ್ಯದಲ್ಲಿ ತೊಂದರೆ ಅನುಭವಿಸಬೇಕೆಂದು ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ.

  • ಸುಳ್ಳು ಹೇಳುವುದು : ಹೆಂಡತಿ ತನ್ನ ಗಂಡನ ಸುಳ್ಳು ಹೇಳುವ ಅಭ್ಯಾಸವಿದ್ದರೆ ಅದನ್ನು ಮುಚ್ಚಿಬಾರದು ಎಂದು ಚಾಣಕ್ಯನು ತಿಳಿಸಿದ್ದಾನೆ. ಪತ್ನಿಯು ಪತಿಯ ಈ ಅಭ್ಯಾಸವನ್ನು ಕುಟುಂಬಕ್ಕೆ ಬಹಿರಂಗಪಡಿಸಬೇಕು. ಇಲ್ಲದಿದ್ದರೆ ಆಕೆಯು ಜೀವನದಲ್ಲಿ ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
  • ಅನುಮಾನಿಸುವ ಅಭ್ಯಾಸ : ಕೆಲವೊಮ್ಮೆ ಪತಿಯು ಪತ್ನಿಯನ್ನು ಎಲ್ಲರ ಮುಂದೆ ಅವಮಾನಿಸುತ್ತಾರೆ. ಆದರೆ ಈ ವಿಷಯವನ್ನು ಹೆಂಡತಿಯು ತನ್ನ ಮನೆ ಹಾಗೂ ಕುಟುಂಬದ ಸದಸ್ಯರ ಮುಂದೆ ಹೇಳಬೇಕು. ಈ ಅಭ್ಯಾಸವನ್ನು ಹೇಳದೇ ಹೋದಲ್ಲಿ ಸಮಸ್ಯೆಯು ಗಂಭೀರ ಸ್ವರೂಪವನ್ನು ಪಡೆದುಕೊಳ್ಳಬಹುದು.
  • ಕೋಪಗೊಳ್ಳುವುದು : ಕೆಲವು ಗಂಡಸರಿಗೆ ಮೂಗಿನ ತುದಿ ಮೇಲೆಯೇ ಕೋಪ ವಿರುತ್ತದೆ. ಸಣ್ಣ ಪುಟ್ಟ ವಿಷಯಕ್ಕೂ ಹೆಂಡತಿಯ ಮೇಲೆ ಸಿಡುಕುತ್ತಾರೆ. ಆದರೆ ಹೆಂಡತಿಯು ಪತಿಯ ಈ ಸ್ವಭಾವವನ್ನು ಸಹಿಸಿಕೊಳ್ಳುತ್ತಾಳೆ. ಆದರೆ ಅತಿಯಾದ ಕೋಪವು ಸಂಸಾರದಲ್ಲಿ ಸಮಸ್ಯೆಯನ್ನು ತಂದೊಡ್ಡಬಲ್ಲದು. ಗಂಡನ ಈ ಗುಣಸ್ವಭಾವದ ಬಗ್ಗೆ ಪತ್ನಿಯಾದವಳು ತನ್ನ ತಾಯಿ ಮನೆ ಹಾಗೂ ಗಂಡನ ಮನೆಯ ಸದಸ್ಯರ ಬಳಿ ಹೇಳುವುದು ಅಗತ್ಯ.
  • ಬೇರೆ ಹೆಣ್ಣಿನ ಸಹವಾಸ : ಪತ್ನಿಯು ಪತಿಯನ್ನು ನಂಬಬೇಕು ನಿಜ, ಆದರೆ ಯಾರನ್ನೂ ಕೂಡ ಕುರುಡಾಗಿ ನಂಬಬಾರದು. ಅನೇಕ ಬಾರಿ ಪುರುಷರು ಬೇರೆ ಹೆಣ್ಣಿನ ಸಹವಾಸ ಮಾಡಿ ತಮ್ಮ ಹೆಂಡತಿಗೆ ಮೋಸ ಮಾಡುತ್ತಾರೆ. ಚಾಣಕ್ಯ ತತ್ವಗಳ ಪ್ರಕಾರ, ಪುರುಷನು ಬೇರೆ ಹೆಣ್ಣಿನ ಸಹವಾಸ ಮಾಡಿದರೆ ಅದು ವೈವಾಹಿಕ ಜೀವನದ ಅಡಿಪಾಯವನ್ನು ಅಲುಗಾಡಿಸುತ್ತದೆ. ಗಂಡನ ಈ ಜೀವನದ ರಹಸ್ಯವು ಹೆಂಡತಿಗೆ ತಿಳಿದರೆ ಅದನ್ನು ಮುಚ್ಚಿಡಬಾರದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ