AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ottu Shavige : ಒತ್ತು ಶಾವಿಗೆಗೆ ಕಾಯಿ ಹಾಲು, ವ್ಹಾವ್ ಸೂಪರ್​​​ ಕಾಂಬಿನೇಷನ್

ಸಿಹಿ ತಿಂಡಿಯೆಂದರೆ ಯಾರಿಗೆ ಇಷ್ಟ ಹೇಳಿ? ಸಕ್ಕರೆಗಿಂತ ಬೆಲ್ಲ ಹಾಕಿ ಮಾಡಿದ ಸಿಹಿ ತಿನಿಸನ್ನು ಇಷ್ಟಪಟ್ಟು ತಿನ್ನುವವರೇ ಹೆಚ್ಚು. ಹೀಗಾಗಿ ಯಾವುದೇ ಖರ್ಚು ಇಲ್ಲದೇ ಮನೆಯಲ್ಲಿ ಮಾಡಬಹುದಾದ ತಿನಿಸುಗಳಲ್ಲಿ ಒತ್ತು ಶಾವಿಗೆ ಹಾಗೂ ಕಾಯಿ ಹಾಲು ಕೂಡ ಒಂದು. ಕರ್ನಾಟಕದ ಈ ಸಾಂಪ್ರದಾಯಿಕ ತಿನಿಸನ್ನು ಮಾಡುವುದು ಎಷ್ಟು ಸುಲಭದಾಯಕವೋ, ರುಚಿಯು ಅಷ್ಟೇ ಅದ್ಭುತವಾಗಿರುತ್ತದೆ. ಹಾಗಾದ್ರೆ ಒತ್ತು ಶಾವಿಗೆ ಹಾಗೂ ಕಾಯಿ ಹಾಲು ರೆಸಿಪಿ ಮಾಡೋದು ಹೇಗೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ

Ottu Shavige : ಒತ್ತು ಶಾವಿಗೆಗೆ ಕಾಯಿ ಹಾಲು, ವ್ಹಾವ್ ಸೂಪರ್​​​ ಕಾಂಬಿನೇಷನ್
ಒತ್ತು ಶಾವಿಗೆ
ಸಾಯಿನಂದಾ
| Edited By: |

Updated on: Sep 12, 2024 | 9:34 AM

Share

ಬೆಳಗ್ಗಿನ ತಿಂಡಿಗೆ ದೋಸೆ, ಇಡ್ಲಿ, ಚಪಾತಿ ಮಾಡೋದು ಸರ್ವೇ ಸಾಮಾನ್ಯ. ಆದರೆ ಮನೆಯಲ್ಲೇ ಇರುವ ಈ ಐಟಂಗಳಿಂದ ಒತ್ತು ಶಾವಿಗೆ ಹಾಗೂ ಕಾಯಿ ಹಾಲನ್ನು ಸುಲಭವಾಗಿ ಮಾಡಬಹುದು. ಕರ್ನಾಟಕದ ಸಾಂಪ್ರದಾಯಿಕ ರೆಸಿಪಿಗಳಲ್ಲಿ ಒಂದಾಗಿರುವ ಇದನ್ನು ಕರಾವಳಿ ಹಾಗೂ ಮಲೆನಾಡಿನ ಭಾಗಗಳಲ್ಲಿ ಹೆಚ್ಚಾಗಿ ಮಾಡುತ್ತಾರೆ. ಈ ಒತ್ತು ಶಾವಿಗೆಯನ್ನು ಚಟ್ನಿ, ಸಾಂಬಾರು ಹಾಗೂ ಚಿಕನ್ ಸಾರಿನೊಂದಿಗೆ ಸವಿಯಬಹುದು. ಆದರೆ ಈ ಕಾಯಿ ಹಾಲಿನೊಂದಿಗೆ ಸವಿದರೆ ಅದರ ರುಚಿಯೇ ಬೇರೆ.

ಒತ್ತು ಶಾವಿಗೆಗೆ ಬೇಕಾಗುವ ಸಾಮಗ್ರಿಗಳು:

* ಒಂದು ಕಾಲು ಕಪ್ ದೋಸೆ ಅಕ್ಕಿ

* ಅರ್ಧ ಕಪ್ ತೆಂಗಿನ ತುರಿ

* ರುಚಿಗೆ ತಕ್ಕಷ್ಟು ಉಪ್ಪು

* ತುಪ್ಪ

ಒತ್ತು ಶಾವಿಗೆ ಮಾಡುವ ವಿಧಾನ:

* ಮೊದಲಿಗೆ ಮಿಕ್ಸಿ ಜಾರಿಗೆ ನೆನೆಸಿದ ದೋಸೆ ಅಕ್ಕಿ ಹಾಗೂ ಅರ್ಧ ಕಪ್ ತೆಂಗಿನ ತುರಿ ಹಾಗೂ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

* ಈ ಹಿಟ್ಟನ್ನು ಒಂದು ಬಾಣಲೆಗೆ ಹಾಕಿ, ಎರಡು ಕಪ್ ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಿ.

* ಈ ಮಿಶ್ರಣವನ್ನು ಸಣ್ಣ ಉರಿಯಲ್ಲಿ ಬೇಯಲು ಬಿಡಿ, ಆಗಾಗ ಒಂದೆರಡು ಚಮಚ ತುಪ್ಪ ಹಾಕಿ ಕಲಸುತ್ತ ಇರಿ. ಐದರಿಂದ ಹತ್ತು ನಿಮಿಷಗಳ ಬಳಿಕ ಸ್ಟವ್ ಆಫ್ ಮಾಡಿ.

* ತದನಂತರದಲ್ಲಿ ಅಂಗೈಗೆ ಸ್ವಲ್ಪ ತುಪ್ಪ ಸವರಿಕೊಂಡು ಈ ಮಿಶ್ರಣವನ್ನು ಉಂಡೆಗಳಾಗಿ ಮಾಡಿಕೊಂಡು ಇಡ್ಲಿ ಪಾತ್ರೆಯಲ್ಲಿ ಇಟ್ಟು 10 ರಿಂದ 12 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.

* ಆ ಬಳಿಕ ಶಾವಿಗೆ ಅಚ್ಚಿಗೆ ಎಣ್ಣೆ ಸವರಿ, ಅದಕ್ಕೆ ಈ ಉಂಡೆಗಳನ್ನು ಹಾಕಿ ಒತ್ತಿದ್ದರೆ ಒತ್ತು ಶಾವಿಗೆ ಸಿದ್ಧ.

ಇದನ್ನೂ ಓದಿ: ಬೆಳೆಯುತ್ತಿರುವ ಮಗುವಿನ ಮುಂದೆ ಈ ಮಾತುಗಳನ್ನು ಆಡಲೇಬೇಡಿ

ಕಾಯಿ ಹಾಲು ಮಾಡಲು ಬೇಕಾಗುವ ಸಾಮಗ್ರಿಗಳು:

* ಒಂದು ಚಮಚ ನೆನೆಸಿರುವ ಅಕ್ಕಿ

* ತೆಂಗಿನ ತುರಿ

* ಗಸೆ ಗಸೆ

* ಬೆಲ್ಲ

* ಒಂದುವರೆ ಕಪ್ ತೆಂಗಿನಕಾಯಿ ಹಾಲು

* ರುಚಿಗೆ ತಕ್ಕಷ್ಟು ಉಪ್ಪು

* ಏಲಕ್ಕಿ ಪುಡಿ

ಕಾಯಿ ಹಾಲು ಮಾಡುವ ವಿಧಾನ:

* ಮಿಕ್ಸಿ ಜಾರಿಗೆ ನೆನೆಸಿರುವ ಅಕ್ಕಿ, ತೆಂಗಿನ ತುರಿ, ನೆನೆಸಿದ ಗಸ ಗಸೆ, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

* ಆ ಬಳಿಕ ಒಂದು ಪಾತ್ರೆಗೆ ಅರ್ಧ ಕಪ್ ಬೆಲ್ಲ, ಕಾಲು ಕಪ್ ನೀರು ಹಾಕಿ ಬೆಲ್ಲ ಕರಗುವ ತನಕ ಬಿಸಿ ಮಾಡಿ ರುಬ್ಬಿಕೊಂಡ ಮಿಶ್ರಣ ಹಾಗೂ ತೆಳುವಾದ ತೆಂಗಿನಕಾಯಿ ಹಾಲು ಹಾಕಿ ಕಲಸಿಕೊಳ್ಳಿ.

* ರುಚಿಗೆ ತಕ್ಕಷ್ಟು ಉಪ್ಪು, ಏಲಕ್ಕಿ ಪುಡಿ ಹಾಕಿ ಮಧ್ಯಮ ಉರಿಯಲ್ಲಿ ಮೂರರಿಂದ ನಾಲ್ಕು ನಿಮಿಷಗಳ ಕುದಿಸಿದರೆ ಕಾಯಿ ಹಾಲು ಸವಿಯಲು ಸಿದ್ಧ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sainandha P
Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More