Parenting Tips : ನಿಮ್ಮ ಮಕ್ಕಳ ಪಾಲಿಗೆ ನೀವು ಬೆಸ್ಟ್ ಅಪ್ಪ ಆಗ್ಬೇಕಾ? ಹಾಗಾದ್ರೆ ಈ ಕೆಲಸ ಮೊದ್ಲು ಮಾಡಿ

ನಿಮ್ಮ ಮಕ್ಕಳನ್ನು ಯಾವ ರೀತಿ ಬೆಳೆಸುತ್ತೀರಿ ಎನ್ನುವುದು ತಂದೆ ತಾಯಿಯ ಮೇಲೆ ನಿರ್ಧರಿತವಾಗಿರುತ್ತದೆ. ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಬಯಸುವ ತಂದೆ ತಾಯಿಗಳಿಬ್ಬರೂ ಮಕ್ಕಳ ಪಾಲಿಗೆ ನಿಜವಾದ ಹೀರೋಗಳಾಗಿರುತ್ತಾರೆ. ಅದರಲ್ಲಿಯೂ ಮಕ್ಕಳಿಗೆ ಅಪ್ಪನೆಂದರೆ ಶಿಸ್ತಿನ ಮನುಷ್ಯ. ಆದರೆ ನೀವು ಮಕ್ಕಳ ಪಾಲಿಗೆ ಬೆಸ್ಟ್ ಅಪ್ಪ ಎನಿಸಿಕೊಳ್ಳಲು ಈ ಕೆಲವು ಗುಣಗಳನ್ನು ನಿಮ್ಮಲ್ಲಿ ಅಳವಡಿಸಿಕೊಳ್ಳಲೇಬೇಕು, ಹಾಗಾದ್ರೆ ಆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ

Parenting Tips : ನಿಮ್ಮ ಮಕ್ಕಳ ಪಾಲಿಗೆ ನೀವು ಬೆಸ್ಟ್ ಅಪ್ಪ ಆಗ್ಬೇಕಾ? ಹಾಗಾದ್ರೆ ಈ ಕೆಲಸ ಮೊದ್ಲು ಮಾಡಿ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 02, 2024 | 5:51 PM

ಎಲ್ಲಾ ಮಕ್ಕಳಿಗೂ ತಮ್ಮ ತಂದೆಯೇ ಅವರ ಜೀವನದ ರೋಲ್ ಮಾಡೆಲ್ ಆಗಿರುತ್ತಾರೆ. ಆದರೆ ಕೆಲವು ಮಕ್ಕಳು ತಂದೆಯ ಬಳಿ ಮಾತನಾಡಲು ಹೆದರುವುದಿದೆ. ತಮ್ಮ ಇಷ್ಟ ಕಷ್ಟಗಳನ್ನು ಹಂಚಿಕೊಳ್ಳಲು ಹಿಂದೇಟು ಹಾಕುತ್ತಾರೆ. ನೋಡುವುದಕ್ಕೆ ತುಂಬಾ ಒರಟು, ಬೇಗ ಸಿಟ್ಟು ಮಾಡಿಕೊಳ್ಳುವ ಗುಣವನ್ನು ಹೊಂದಿದ್ದರೂ ಮಕ್ಕಳ ವಿಷಯದಲ್ಲಿ ಅಪ್ಪನದ್ದು ಮೃದುವಾದ ಮನಸ್ಸು. ಮಕ್ಕಳಿಗೆ ಯಾವುದೇ ನೋವು ಬಾರದಂತೆ ನೋಡಿಕೊಳ್ಳುವ ಅಪ್ಪನು ಮಕ್ಕಳ ಪಾಲಿಗೆ ಬೆಸ್ಟ್ ಹಾಗೂ ಫೇವರಿಟ್ ಆಗಬೇಕೆಂದರೆ ಇಲ್ಲಿದೆ ಕೆಲವು ಟಿಪ್ಸ್

* ಮಕ್ಕಳೊಂದಿಗೆ ಗುಣಮಟ್ಟದ ಸಮಯ ಕಳೆಯಿರಿ : ಪ್ರತಿದಿನ ಮಗುವಿನೊಂದಿಗೆ ಸಮಯ ಕಳೆಯುವುದು ಕೂಡ ಬೆಸ್ಟ್ ಅಪ್ಪನ ಗುಣಗಳಲ್ಲಿ ಒಂದು. ಅವರ ಇಷ್ಟದ ಚಟುವಟಿಕೆಗಳಲ್ಲಿ ನೀವು ಕೂಡ ತೊಡಗಿಕೊಳ್ಳಿ, ಅವರ ದಿನನಿತ್ಯ ಶಾಲಾ ವರದಿಗಳಿಗೆ ಕಿವಿಯಾಗುವುದು ಬಹಳ ಮುಖ್ಯ. ಮಗುವಿಗೆ ಯಾವುದರ ಬಗ್ಗೆ ಹೆಚ್ಚು ಆಸಕ್ತಿಯಿದೆಯೋ, ಅವರೊಂದಿಗೆ ನೀವು ಕೂಡ ಆ ವಿಷಯದ ಬಗ್ಗೆಯೇ ಚರ್ಚಿಸಿ.

* ಅಪರಿಮಿತ ಪ್ರೀತಿ ನೀಡಿ, ಸುರಕ್ಷಿತ ವಾತಾವರಣ ಸೃಷ್ಟಿಸಿ : ಮಕ್ಕಳ ಮೇಲೆ ಅಪರಿಮಿತ ಪ್ರೀತಿ ಹಾಗೂ ಕಾಳಜಿಯನ್ನು ತೋರುವ ವ್ಯಕ್ತಿಯೆಂದರೆ ಅದುವೇ ತಂದೆ. ಮಕ್ಕಳ ಯಾವುದೇ ಕೆಲಸ ಮಾಡಲು ಮುಂದಾದರೂ ಬೆಂಬಲ ನೀಡಿ. ಕೇಳಿದ್ದೆಲ್ಲವನ್ನು ಕೊಡಿಸುವುದರೊಂದಿಗೆ ಸುರಕ್ಷಿತ ವಾತಾವರಣ ಹಾಗೂ ಭವಿಷ್ಯವನ್ನು ನಿರ್ಮಿಸುವುದು ಮುಖ್ಯ.

* ಮಗುವಿನ ಮೊದಲ ಸ್ನೇಹಿತ ನೀವಾಗಿರಿ : ಮಕ್ಕಳಿಗೆ ಅತ್ಯುತ್ತಮ ಸ್ನೇಹಿತರೆಂದರೆ ಅದುವೇ ತಂದೆ ತಾಯಿಯಾಗಿರುತ್ತಾರೆ. ತಂದೆ ಯಾವಾಗಲೂ ತನ್ನ ಮಕ್ಕಳೊಂದಿಗೆ ಒಳ್ಳೆಯ ಬಾಂಧವ್ಯದೊಂದಿಗೆ ಸ್ನೇಹಪರರಾಗಿರಬೇಕು. ಒಳ್ಳೆಯ ಜೀವನವನ್ನು ಕಲ್ಪಿಸುವುದರೊಂದಿಗೆ ಮಕ್ಕಳನ್ನು ಸ್ನೇಹಿತರಂತೆ ಕಾಣುವ ಮೂಲಕ ಅವರ ಸರಿತಪ್ಪುಗಳನ್ನು ತಿದ್ದಬೇಕು.

* ಉತ್ತಮ ಸಂವಹನಕಾರರಾಗಿರಿ : ಮಕ್ಕಳು ತಂದೆ ತಾಯಿಯರನ್ನು ನೋಡಿಯೇ ಕಲಿಯುವುದೇ ಹೆಚ್ಚು. ಜಗತ್ತಿನಲ್ಲಿ ಬೆಸ್ಟ್ ಅಪ್ಪ ಎಂದು ಕರೆಸಿಕೊಳ್ಳಲು ಉತ್ತಮ ಸಂವಹನಕಾರರು ಆಗುವುದು ಬಹಳ ಮುಖ್ಯ. ಒಳ್ಳೆಯ ಮಾತುಗಳೊಂದಿಗೆ ನಿಮ್ಮ ಮಗುವಿನ ಮಾತನ್ನು ಆಲಿಸಲು ಸಿದ್ಧರಾಗಿ. ಮಕ್ಕಳ ಅಭಿಪ್ರಾಯಗಳಿಗೆ ಬೆಲೆ ಕೊಡುವುದರ ಜೊತೆಗೆ ತನ್ನ ಮಾತಿನಿಂದಲೇ ಮಕ್ಕಳಿಗೆ ಬುದ್ಧಿವಾದ ಹೇಳುವುದು ಅವಶ್ಯಕ.

* ನಿಮ್ಮ ಮಗುವಿಗೆ ಮಾರ್ಗದರ್ಶಕರಾಗಿರಿ : ಮಗುವಿಗೆ ತಂದೆ ಉತ್ತಮ ಮಾರ್ಗದರ್ಶಕರು ಹಾಗೂ ಜೀವನ ಮುನ್ನಡೆಸುವ ಒಬ್ಬ ಗುರುವೂ ಕೂಡ ಹೌದು. ಹೀಗಾಗಿ ಮಕ್ಕಳಿಗೆ ಸರಿ ತಪ್ಪು, ಒಳ್ಳೆಯದು ಕೆಟ್ಟದ್ದರ ಬಗ್ಗೆ ತಂದೆ ತಿಳಿಹೇಳಬೇಕು. ಮಕ್ಕಳ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ತಂದೆಯೂ ಗಮನ ಕೊಡುವುದರ ಜೊತೆಗೆ ಮಾರ್ಗದರ್ಶನ ಮಾಡುವುದು ಬಹಳ ಮುಖ್ಯವಾಗಿರುತ್ತದೆ.

* ಮಕ್ಕಳಿಗೆ ಪ್ರೇರಣಾ ಶಕ್ತಿಯಾಗಿರಿ : ಪ್ರತಿಯೊಬ್ಬ ತಂದೆಯೂ ಮಕ್ಕಳಿಗೆ ಪ್ರೋತ್ಸಾಹ ನೀಡಿದರೆ ಸಾಕಾಗುವುದಿಲ್ಲ. ಪ್ರೇರಣಾ ಶಕ್ತಿಯಾಗಿರುವುದು ಮುಖ್ಯ. ಮಕ್ಕಳು ಸ್ವತಂತ್ರರಾಗಿ, ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳುವಂತೆ ನೋಡಿಕೊಳ್ಳಬೇಕು. ಮಕ್ಕಳೊಂದಿಗೆ ಕಠಿಣ ಸ್ವಭಾವದಿಂದ ನಡೆದುಕೊಳ್ಳುವ ಬದಲು ಆತ್ಮವಿಶ್ವಾಸ ಹಾಗೂ ಸ್ವಾಭಿಮಾನದಿಂದ ಬದುಕುವಂತೆ ಮಾಡಬೇಕು.

* ಮಕ್ಕಳ ಆರೋಗ್ಯಕ್ಕೆ ಹೆಚ್ಚು ಗಮನ ನೀಡಿ : ಅತ್ಯುತ್ತಮ ತಂದೆ ಯಾವಾಗಲೂ ತಮ್ಮ ಮಕ್ಕಳ ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ತಮ್ಮ ಮಕ್ಕಳು ಚೆನ್ನಾಗಿರಬೇಕೆಂದರೆ ತಮ್ಮ ಆರೋಗ್ಯ ಉತ್ತಮವಾಗಿರಬೇಕೆಂದು ತಂದೆ ಬಯಸುತ್ತಾರೆ. ಅದಲ್ಲದೇ, ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಹಾಗೂ ವ್ಯಾಯಾಮದಂತಹ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹಿಸಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ನರ್​ ಬಿಡುಗಡೆ ಬೆನ್ನಲ್ಲೇ ‘ಯುಐ’ ಸಿನಿಮಾ ಸುದ್ದಿಗೋಷ್ಠಿ; ಲೈವ್ ನೋಡಿ..
ವಾರ್ನರ್​ ಬಿಡುಗಡೆ ಬೆನ್ನಲ್ಲೇ ‘ಯುಐ’ ಸಿನಿಮಾ ಸುದ್ದಿಗೋಷ್ಠಿ; ಲೈವ್ ನೋಡಿ..
ಬ್ರೇಕಿಂಗ್ ನ್ಯೂಸ್​ ಮೂಲಕವೂ ಕಳಚಿತು ಗೌತಮಿ ಜಾದವ್ ಪಾಸಿಟಿವ್ ಮುಖವಾಡ
ಬ್ರೇಕಿಂಗ್ ನ್ಯೂಸ್​ ಮೂಲಕವೂ ಕಳಚಿತು ಗೌತಮಿ ಜಾದವ್ ಪಾಸಿಟಿವ್ ಮುಖವಾಡ
ಟೀಂ ಇಂಡಿಯಾವನ್ನು ಅವರ ನೆಲದಲ್ಲೇ ಸೋಲಿಸಬೇಕು; ಶೋಯೆಬ್ ಅಖ್ತರ್
ಟೀಂ ಇಂಡಿಯಾವನ್ನು ಅವರ ನೆಲದಲ್ಲೇ ಸೋಲಿಸಬೇಕು; ಶೋಯೆಬ್ ಅಖ್ತರ್
ಸ್ವಾಮೀಜಿ ಮಾತಾಡಿದ್ದು ತಪ್ಪು ಎಂದು ಹೇಳಿರುವ ಡಿಕೆ ಶಿವಕುಮಾರ್
ಸ್ವಾಮೀಜಿ ಮಾತಾಡಿದ್ದು ತಪ್ಪು ಎಂದು ಹೇಳಿರುವ ಡಿಕೆ ಶಿವಕುಮಾರ್
ಸಿದ್ದರಾಮಯ್ಯ, ಮೋದಿ ಹಣ ಹಾಕ್ತಾರೆಂದು ಅಂಚೆ ಕಚೇರಿಯಲ್ಲಿ ಜನವೋ ಜನ..!
ಸಿದ್ದರಾಮಯ್ಯ, ಮೋದಿ ಹಣ ಹಾಕ್ತಾರೆಂದು ಅಂಚೆ ಕಚೇರಿಯಲ್ಲಿ ಜನವೋ ಜನ..!
ರಸ್ತೆಯಲ್ಲೇ ಲೇಡಿ ಕಾನ್​ಸ್ಟೆಬಲ್​ ಕೆನ್ನೆಗೆ ಹೊಡೆದು, ಚುಂಬಿಸಿದ ಬೈಕ್ ಸವಾರ
ರಸ್ತೆಯಲ್ಲೇ ಲೇಡಿ ಕಾನ್​ಸ್ಟೆಬಲ್​ ಕೆನ್ನೆಗೆ ಹೊಡೆದು, ಚುಂಬಿಸಿದ ಬೈಕ್ ಸವಾರ
ಮುಡಾ ಹಗರಣದ ತನಿಖೆ ಚುರುಕು: ವಿಧಾನಸೌಧ ತಲುಪಿದ ಇಡಿ ತನಿಖೆ!
ಮುಡಾ ಹಗರಣದ ತನಿಖೆ ಚುರುಕು: ವಿಧಾನಸೌಧ ತಲುಪಿದ ಇಡಿ ತನಿಖೆ!
ತಮಿಳುನಾಡಿನಲ್ಲಿ ಫೆಂಗಲ್ ಚಂಡಮಾರುತದ ಅಬ್ಬರ; ಕೊಚ್ಚಿಹೋದ ಬಸ್​ಗಳು
ತಮಿಳುನಾಡಿನಲ್ಲಿ ಫೆಂಗಲ್ ಚಂಡಮಾರುತದ ಅಬ್ಬರ; ಕೊಚ್ಚಿಹೋದ ಬಸ್​ಗಳು
‘ಚೈತ್ರಾ ಯಾರಿಗೆ ಹಾಲು ಕೊಡ್ತಾರೆ ಅಂತ ಗೊತ್ತಾಗಲ್ಲ’: ಐಶ್ವರ್ಯಾ ನೇರ ಮಾತು
‘ಚೈತ್ರಾ ಯಾರಿಗೆ ಹಾಲು ಕೊಡ್ತಾರೆ ಅಂತ ಗೊತ್ತಾಗಲ್ಲ’: ಐಶ್ವರ್ಯಾ ನೇರ ಮಾತು
ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ CM ಶಂಕುಸ್ಥಾಪನೆ
ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ CM ಶಂಕುಸ್ಥಾಪನೆ