Chanakya Niti : ಚಾಣಕ್ಯನ ಪ್ರಕಾರ ಯಶಸ್ಸಿನ ಗುಟ್ಟು ಇದೆ ನೋಡಿ

ಯಶಸ್ಸು ಇದನ್ನು ಕೇಳಿದರೆ ಮನಸ್ಸಿಗೆ ಎಷ್ಟು ಖುಷಿಯಾಗುತ್ತದೆಯೋ, ಯಶಸ್ಸು ಸಾಧಿಸಲು ಕಠಿಣ ಪರಿಶ್ರಮವು ಅಷ್ಟೇ ಅಗತ್ಯ. ಅದಲ್ಲದೇ, ಎಲ್ಲರೂ ಕೂಡ ತಮ್ಮ ಜೀವನದಲ್ಲಿ ಗೆಲುವು ಸಾಧಿಸಲು ಸಾಧ್ಯವಿಲ್ಲ. ಅದೆಷ್ಟೋ ಸಲ ಗುರಿಯತ್ತ ಹೆಜ್ಜೆ ಹಾಕುವಾಗ ಸೋಲು ಬೆಂಬಿಡದೇ ಕಾಡಬಹುದು. ಈ ವೇಳೆಯಲ್ಲಿ ನಿರಂತರ ಪ್ರಯತ್ನಗಳು ನಡೆಯುತ್ತಿರಲೇಬೇಕು. ಅದರೊಂದಿಗೆ ಈ ಮೂರು ವಿಷಯಗಳನ್ನು ತಿಳಿದವರಿಗೆ ಮಾತ್ರ ಯಶಸ್ಸು ಗಳಿಸುತ್ತಾರಂತೆ. ಆಚಾರ್ಯ ಚಾಣಕ್ಯನ ಈ ಮಾತುಗಳು ಶಸ್ವಿ ವ್ಯಕ್ತಿಯಾಗಲು ಕಾರಣವಾಗುತ್ತದೆ. ಇದರಿಂದ ಸುಲಭವಾಗಿ ಗುರಿಯನ್ನು ಸಾಧಿಸಬಹುದು.

Chanakya Niti : ಚಾಣಕ್ಯನ ಪ್ರಕಾರ ಯಶಸ್ಸಿನ ಗುಟ್ಟು ಇದೆ ನೋಡಿ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 02, 2024 | 3:00 PM

ಯಶಸ್ಸು ಯಾರಿಗೆ ತಾನೇ ಬೇಡ ಹೇಳಿ, ಎಲ್ಲರೂ ಕೂಡ ತಮ್ಮ ಜೀವನದಲ್ಲಿ ತಾನು ಏನನ್ನೂ ಅಂದುಕೊಂಡಿದ್ದೇವೋ ಅದನ್ನು ಸಾಧಿಸಬೇಕು, ಗೆಲುವು ನನ್ನದಾಗಬೇಕೆಂದು ಬಯಸುವುದು ಸಹಜ. ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದುದ್ದಕ್ಕೂ ಈ ಮೂರಕ್ಷರಕ್ಕಾಗಿಯೇ ಹೋರಾಡುತ್ತಿರುತ್ತಾರೆ. ಒಬ್ಬೊಬ್ಬರಿಗೆ ಒಂದೊಂದು ರೀತಿ ಯಶಸ್ಸು ಬೇಕು ಎನ್ನುವುದಿರುತ್ತದೆ. ಆದರೆ ಈ ಯಶಸ್ಸಿನೊಂದಿಗೆ ಅದೃಷ್ಟವಿದ್ದು ಬಿಟ್ಟರೆ ವ್ಯಕ್ತಿಯನ್ನು ಪ್ರಪಂಚದಲ್ಲಿ ಹಿಡಿಯಲೂ ಸಾಧ್ಯವೇ ಇಲ್ಲ. ಮುಟ್ಟಿದ್ದೆಲ್ಲವು ಚಿನ್ನವಾಗುತ್ತಲೇ ಹೋಗುತ್ತದೆ. ಆದರೆ ಚಾಣಕ್ಯನು ಈ ಮೂರು ವಿಷಯಗಳಲ್ಲಿ ಎಡವಿದರೆ ಗೆಲುವು ಎನ್ನುವುದು ದೂರದ ಮಾತಾಗಿರುತ್ತದೆ. ಹೀಗಾಗಿ ಯಶಸ್ಸಿನ ಹಿಂದೆ ಓಡುವ ವ್ಯಕ್ತಿಯೂ ಈ ಮೂರು ವಿಷಯಗಳ ಬಗ್ಗೆ ಹೆಚ್ಚು ಗಮನವಹಿಸಬೇಕಂತೆ.

* ಸ್ನೇಹಿತರನ್ನು ಆಯ್ಕೆ ಮಾಡುವಾಗ ಜಾಗರೂಕರಾಗಿರಿ : ಪ್ರತಿಯೊಬ್ಬರ ಜೀವನದಲ್ಲಿ ಸ್ನೇಹಿತರ ಪಾತ್ರ ಅಗಾಧವಾಗಿದೆ. ಹೀಗಾಗಿ ಸ್ನೇಹಿತರನ್ನು ಆಯ್ಕೆಮಾಡುವಲ್ಲಿ ಯಾವುದೇ ವ್ಯಕ್ತಿ ಜಾಗರೂಕರಾಗಿರಬೇಕು. ಸರಿಯಾದ ವ್ಯಕ್ತಿಯನ್ನೇ ಸ್ನೇಹಿತನನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು. ಸಂತೋಷ ಮತ್ತು ದುಃಖದಲ್ಲಿ ನಿಮ್ಮನ್ನು ಬೆಂಬಲಿಸುವವರು ಮತ್ತು ಕೆಟ್ಟ ಸಮಯದಲ್ಲಿ ಯಾರು ನಿಲ್ಲುತ್ತಾರೋ ಅವರೇ ನಿಜವಾದ ಸ್ನೇಹಿತರು. ಒಂದೊಳ್ಳೆ ಗೆಳೆಯನು, ಒಳ್ಳೆಯ ಕೆಲಸಕ್ಕೆ ಸದಾ ಬೆಂಬಲವಾಗಿ ನಿಲ್ಲುತ್ತಾನೆ. ಆದರೆ ಕೆಟ್ಟ ವ್ಯಕ್ತಿಯ ಸ್ನೇಹವು ಕೆಲಸ ಹಾಗೂ ಗುರಿಯ ಮೇಲಿನ ಏಕಾಗ್ರತೆಯನ್ನು ಬದಲಾಯಿಸುವ ಸಾಧ್ಯತೆಯಿರುತ್ತದೆ. ಹೀಗಾಗಿ ಸ್ನೇಹಿತನು ಕೆಟ್ಟ ಜನರ ಸಹವಾಸದಲ್ಲಿ ಬಿದ್ದಿದ್ದರೆ ತಕ್ಷಣವೇ ಆ ಸ್ನೇಹಕ್ಕೆ ವಿದಾಯ ಹೇಳಿ ಎನ್ನುತ್ತಾನೆ ಚಾಣಕ್ಯ.

* ತಾಳ್ಮೆ ಮತ್ತು ಸಂಯಮವಿರಲಿ : ಯಾವುದೇ ಗುರಿಯನ್ನು ಸಾಧಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ನಿರಂತರವಾಗಿ ಕೆಲಸ ಮಾಡುವುದು ಬಹಳ ಮುಖ್ಯ. ತಾಳ್ಮೆ ಮತ್ತು ಸಂಯಮ ಗುಣಗಳು ಒಬ್ಬ ವ್ಯಕ್ತಿಯನ್ನು ಕಷ್ಟಕರ ಸಂದರ್ಭಗಳಿಂದ ಹೊರಬರಲು ಸಹಾಯ ಮಾಡುತ್ತದೆ. ಯಾವುದೇ ವಿಷಯದಲ್ಲಿ ಆತುರ ಪಡುವ ಬದಲು ತಾಳ್ಮೆಯಿಂದ ಶ್ರದ್ಧೆವಹಿಸಿ ಕೆಲಸ ಮಾಡುವತ್ತ ಗಮನ ಹರಿಸಿ ಎಂದು ಚಾಣಕ್ಯ ತನ್ನ ನೀತಿಯಲ್ಲಿ ಉಲ್ಲೇಖಿಸಿದ್ದಾನೆ.

* ಸಮಯವನ್ನು ಸರಿಯಾಗಿ ಬಳಸಿಕೊಳ್ಳುವುದು : ಯಶಸ್ವಿ ಜೀವನವು ನಿಮ್ಮದಾಗಲೂ ಸಮಯವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಸಮಯ ವ್ಯರ್ಥ ಮಾಡುವವರು ಬದುಕಿನಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಸಮಯವನ್ನು ಗೌರವಿಸುವ ಹಾಗೂ ಸರಿಯಾದ ಸಮಯಕ್ಕೆ ಎಲ್ಲಾ ಕೆಲಸವನ್ನು ಮಾಡಿ ಮುಗಿಸುವ ವ್ಯಕ್ತಿ ಮಾತ್ರ ಜೀವನದಲ್ಲಿ ಏಳಿಗೆ ಹಾಗೂ ಯಶಸ್ಸಿಗೆ ಹತ್ತಿರವಾಗುತ್ತಾನೆ. ಹೀಗಾಗಿ ಸಮಯದ ಸದುಪಯೋಗಪಡಿಸಿಕೊಳ್ಳುವ ಗುಣವಿರಬೇಕು ಎಂದು ಚಾಣಕ್ಯ ಹೇಳುತ್ತಾನೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಒಂದು ಸ್ಪೆಂಟ್ ಫೋರ್ಸ್, ಲಿಂಗಾಯತರಿಗೂ ಬೇಡವಾಗಿದ್ದಾರೆ: ಯತ್ನಾಳ್
ಯಡಿಯೂರಪ್ಪ ಒಂದು ಸ್ಪೆಂಟ್ ಫೋರ್ಸ್, ಲಿಂಗಾಯತರಿಗೂ ಬೇಡವಾಗಿದ್ದಾರೆ: ಯತ್ನಾಳ್
ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಹೊಡೆದಾಟ, ಪೊಲೀಸ್ ಎಂಟ್ರಿ
ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಹೊಡೆದಾಟ, ಪೊಲೀಸ್ ಎಂಟ್ರಿ
ಬೇರೆ ನಾಯಕರೇಕೆ ಯತ್ನಾಳ್​ರಂತೆ ಹೋರಾಟಕ್ಕೆ ಮುಂದಾಗಲಿಲ್ಲ? ಬಂಗಾರಪ್ಪ
ಬೇರೆ ನಾಯಕರೇಕೆ ಯತ್ನಾಳ್​ರಂತೆ ಹೋರಾಟಕ್ಕೆ ಮುಂದಾಗಲಿಲ್ಲ? ಬಂಗಾರಪ್ಪ
ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಪ್ರಕರಣ ವಾಪಸ್ ಪಡೆಯಬೇಕು: ಡಿಕೆ ಸುರೇಶ್
ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಪ್ರಕರಣ ವಾಪಸ್ ಪಡೆಯಬೇಕು: ಡಿಕೆ ಸುರೇಶ್
ಹೋರಾಟದ ಮಧ್ಯಂತರ ವರದಿ ಸಲ್ಲಿಸಲು ಇಂದು ದೆಹಲಿಗೆ ತೆರಳಲಿರುವ ಯತ್ನಾಳ್ ತಂಡ
ಹೋರಾಟದ ಮಧ್ಯಂತರ ವರದಿ ಸಲ್ಲಿಸಲು ಇಂದು ದೆಹಲಿಗೆ ತೆರಳಲಿರುವ ಯತ್ನಾಳ್ ತಂಡ
ಕ್ಯಾಚ್ ಬಿಟ್ಟ ಸರ್ಫರಾಝ್​​ ಖಾನ್​​ಗೆ ಪಂಚ್ ಕೊಟ್ಟ ರೋಹಿತ್ ಶರ್ಮಾ
ಕ್ಯಾಚ್ ಬಿಟ್ಟ ಸರ್ಫರಾಝ್​​ ಖಾನ್​​ಗೆ ಪಂಚ್ ಕೊಟ್ಟ ರೋಹಿತ್ ಶರ್ಮಾ
ನದಿಪಾತ್ರದಲ್ಲಿ ಪ್ರತಿವಾರ ಗುಡ್ಡೆಬೀಳುತ್ತಿದೆ ಬೆಟ್ಟದಷ್ಟು ತ್ಯಾಜ್ಯ
ನದಿಪಾತ್ರದಲ್ಲಿ ಪ್ರತಿವಾರ ಗುಡ್ಡೆಬೀಳುತ್ತಿದೆ ಬೆಟ್ಟದಷ್ಟು ತ್ಯಾಜ್ಯ
ಭದ್ರಾ ಹಿನ್ನೀರಿನಲ್ಲಿ ಕಾಡಾನೆಗಳ ಜಲಕ್ರೀಡೆ: ವಿಡಿಯೋ ಇಲ್ಲಿದೆ
ಭದ್ರಾ ಹಿನ್ನೀರಿನಲ್ಲಿ ಕಾಡಾನೆಗಳ ಜಲಕ್ರೀಡೆ: ವಿಡಿಯೋ ಇಲ್ಲಿದೆ
ಹರ್ಷವರ್ಧನ್​ರನ್ನು ಉಳಿಸಲು 4 ತಾಸು ಶ್ರಮಪಟ್ಟೆವು: ಖಾಸಗಿ ಅಸ್ಪತ್ರೆ ವೈದ್ಯ
ಹರ್ಷವರ್ಧನ್​ರನ್ನು ಉಳಿಸಲು 4 ತಾಸು ಶ್ರಮಪಟ್ಟೆವು: ಖಾಸಗಿ ಅಸ್ಪತ್ರೆ ವೈದ್ಯ
ಫೆಂಗಲ್ ಚಂಡಮಾರುತ, ತಿರುವಣ್ಣಾಮಲೈನಲ್ಲಿ ಭೂಕುಸಿತ
ಫೆಂಗಲ್ ಚಂಡಮಾರುತ, ತಿರುವಣ್ಣಾಮಲೈನಲ್ಲಿ ಭೂಕುಸಿತ