
ಅನಾರೋಗ್ಯಕರ ಆಹಾರ ಸೇವನೆ, ಜಡ ಜೀವನ ಶೈಲಿ ಇವೆಲ್ಲದರ ಕಾರಣದಿಂದಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದರಲ್ಲೂ ಹೈ ಕೊಲೆಸ್ಟ್ರಾಲ್ (high cholesterol) ಗಂಭಿರ ಆರೋಗ್ಯ ಸಮಸ್ಯೆಯಾಗಿದ್ದು, ಇದರಿಂದ ಹೃದ್ರೋಗ, ಪಾರ್ಶ್ವವಾಯು ಸೇರಿದಂತೆ ಗಂಭೀರ ಕಾಯಿಲೆಗಳ ಅಪಾಯ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆರೋಗ್ಯಕರ ಆಹಾರ ಪದ್ಧತಿಯ ಪಾಲನೆ, ವ್ಯಾಯಾಮದಂತಹ ದೈಹಿಕ ಚಟುವಟಿಕೆಯನ್ನು ಪಾಲಿಸುವ ಮೂಲಕ ಕೊಲೆಸ್ಟ್ರಾಲ್ ಸಮಸ್ಯೆ ಅಧಿಕವಾಗದಂತೆ ಕಾಪಾಡಿಕೊಳ್ಳಬಹುದು. ಇನ್ನೂ ಹೈ ಕೊಲೆಸ್ಟ್ರಾಲ್ ಹೊಂದಿರುವವರು ಚಿಕಿತ್ಸೆಯ ಜೊತೆಗೆ ಔಷಧಿಗಳನ್ನು ಕೂಡಾ ತೆಗೆದುಕೊಳ್ಳುತ್ತಾರೆ. ಆದರೂ ಕೂಡ ಅಪಧಮನಿಗಳಲ್ಲಿ ಸಂಗ್ರಹವಾಗಿರುವ ಕೊಲೆಸ್ಟ್ರಾಲ್ ತೆಗೆದುಹಾಕಲು ಸಾಧ್ಯವಿಲ್ಲ. ಆದರೆ ಆಯುರ್ವೇದದ (Ayurvedic medicine) ಮೂಲಕ ಈ ಸಮಸ್ಯೆಗೆ ಪರಿಹಾರ ಪಡೆಯಬಹುದು ಎಂದು ಪತಂಜಲಿಯ ಅಧ್ಯಯನ (Patanjali Research) ತಿಳಿಸಿದೆ.
ಆಯುರ್ವೇದದ ಮೂಲಕ ಹೈ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಪತಂಜಲಿಯ ಈ ಒಂದು ಆಯುರ್ವೇದ ಔಷಧಿ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿ ಮತ್ತು ಅವು ಯಾವುದೇ ಅಡ್ಡಪರಿಣಾಮಗಳನ್ನು ಹೊಂದಿಲ್ಲ ಎಂದು ಪತಂಜಲಿಯ ಹೊಸ ಸಂಶೋಧನೆ ಹೇಳಿಕೊಂಡಿದೆ.
ಪತಂಜಲಿಯು ಐದು ಔಷಧಿಗಳ ಸಂಯೋಜನೆಯನ್ನು ತಯಾರಿಸಿದ್ದು, ಈ ಔಷಧಿ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಅಂಶವನ್ನು ಕಡಿಮೆ ಮಾಡುವುದಲ್ಲದೆ, ಅಪಧಮನಿಗಳಲ್ಲಿ ಅಂಟಿಕೊಂಡಿರುವ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಅಂಶವನ್ನು ಸಹ ತೆಗೆದುಹಾಕುತ್ತವೆ ಎಂದು ಸಂಶೋಧನೆ ಹೇಳಿದೆ. ವೈದ್ಯರ ಸಲಹೆಯಂತೆ ಈ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಕೊಲೆಸ್ಟ್ರಾಲ್ ಸಂಬಂಧಿತ ಯಾವುದೇ ಕಾಯಿಲೆಯನ್ನು ಬಾರದಂತೆ ತಡೆಯಬಹುದು. ನಿಗದಿತ ವಿಧಾನದ ಪ್ರಕಾರ ಒಂದು ತಿಂಗಳು ಈ ಔಷಧಿಯನ್ನು ಸೇವಿಸಿದ ನಂತರ ಇದರ ಪರಿಣಾಮ ಗೋಚರಿಸುತ್ತವೆ ಎಂದು ಹೇಳಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಅತಿ ಹೆಚ್ಚು ಸಾಕ್ಷರತೆಯನ್ನು ಹೊಂದಿರುವ ಜಿಲ್ಲೆ ಯಾವುದು ಗೊತ್ತಾ?
ಪತಂಜಲಿಯ ಸಂಶೋಧನೆಯು ಈ ಆಯುರ್ವೇದ ಔಷಧಿಗಳ ಸಂಯೋಜನೆಯು ಕೊಲೆಸ್ಟ್ರಾಲ್ ಮತ್ತು ಅದಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಗುಣಪಡಿಸುತ್ತವೆ ಎಂದು ಹೇಳುತ್ತದೆ. ಈ ಔಷಧಿಗಳಲ್ಲಿ ದಿವ್ಯ ಸರ್ವಕಲ್ಪ ಕ್ವಾತ್, ದಿವ್ಯ ಅರ್ಜುನ್ ಕ್ವಾತ್, ಪತಂಜಲಿ ಸೀ ಬಕ್‌ಥಾರ್ನ್ ಕ್ಯಾಪ್ಸುಲ್, ದಿವ್ಯ ಲಿಪಿಡೋಮ್ ಟ್ಯಾಬ್ಲೆಟ್, ದಿವ್ಯ ಲೌಕಿ ಘನವತಿ ಟ್ಯಾಬ್ಲೆಟ್ ಸೇರಿವೆ. ವೈದ್ಯರ ಸಲಹೆಯಂತೆ ಇವುಗಳನ್ನು ನಿಗದಿತ ವಿಧಾನದ ಪ್ರಕಾರ ಒಂದು ತಿಂಗಳು ತೆಗೆದುಕೊಳ್ಳಬೇಕು. ಈ ಔಷಧಿಗಳನ್ನು ನಿಯಮಿತವಾಗಿ ತೆಗೆದುಕೊಳ್ಳುವುದರಿಂದ ಕೊಲೆಸ್ಟ್ರಾಲ್ ಸಮಸ್ಯೆ ಬುಡದಿಂದಲೇ ನಿವಾರಣೆಯಾಗುತ್ತದೆ ಎಂದು ಸಂಶೋಧನೆ ಹೇಳಿಕೊಂಡಿದೆ. ಇದರ ಸೇವನೆಯಿಂದ ರಕ್ತದಲ್ಲಿನ ಕೊಲೆಸ್ಟ್ರಾಲ್ ಕಡಿಮೆಯಾಗುವುದು ಮಾತ್ರವಲ್ಲದೆ, ಅಪಧಮನಿಗಳಲ್ಲಿ ಸಿಲುಕಿರುವ ಕೊಲೆಸ್ಟ್ರಾಲ್ ಕೂಡ ಕರಗಿ ಹೋಗುತ್ತವೆ. ಮತ್ತು ಇದು ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಕೂಡಾ ಬಹುತೇಕ ನಿವಾರಿಸುತ್ತದೆ ಎಂದು ಹೇಳಿದೆ.
ಸಂಶೋಧನೆಯ ಪ್ರಕಾರ ದಿವ್ಯ ಸರ್ವಕಲ್ಪ ಕ್ವಾತ್ ಮತ್ತು ದಿವ್ಯ ಅರ್ಜುನ್ ಕ್ವಾತ್ ಔಷಧಿಯನ್ನು ತಲಾ ಒಂದೊಂದು ಚಮಚ ಬೆರೆಸಿ ನಂತರ ಅದನ್ನು 400 ಎಂ.ಎಲ್ ನೀರಿನಲ್ಲಿ ಕುದಿಸಿ, (ಆ ನೀರನ್ನು 100 ಎಂ.ಎಲ್ ಆಗುವವರೆಗೂ ಕುದಿಸಿ) ನಂತರ, ಅದನ್ನು ತಣ್ಣಗಾಗಿಸಿ. ಇದನ್ನು ಬೆಳಿಗ್ಗೆ ಮತ್ತು ಸಂಜೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು. ಇದರೊಂದಿಗೆ, ಪತಂಜಲಿ ಸೀ ಬಕ್‌ಥಾರ್ನ್ ಕ್ಯಾಪ್ಸುಲ್ ಅನ್ನು ಬೆಳಿಗ್ಗೆ ಮತ್ತು ಸಂಜೆ ಊಟಕ್ಕೆ ಮೊದಲು ಉಗುರು ಬೆಚ್ಚಗಿನ ನೀರಿನೊಂದಿಗೆ ತೆಗೆದುಕೊಳ್ಳಬೇಕು. ದಿವ್ಯ ಲಿಪಿಡೋಮ್ ಟ್ಯಾಬ್ಲೆಟ್, ದಿವ್ಯ ಲೌಕಿ ಘನವತಿ ಟ್ಯಾಬ್ಲೆಟ್‌ಗಳನ್ನು ಬೆಳಿಗ್ಗೆ ಮತ್ತು ಸಂಜೆ ಊಟದ ನಂತರ ಉಗುರು ಬೆಚ್ಚಗಿನ ನೀರಿನೊಂದಿಗೆ ಸೇವಿಸಬೇಕು. ಇದು ನಿಜಕ್ಕೂ ಕೊಲೆಸ್ಟ್ರಾಲ್ ನಿಯಂತ್ರಿಸಲು ಸಹಕಾರಿ ಎಂದು ಪತಂಜಲಿ ಸಂಶೋಧನೆ ಹೇಳಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ