ನಮ್ಮ ನಡವಳಿಕೆ, ನಾವು ಇನ್ನೊಬ್ಬರ ಜೊತೆ ನಡೆದುಕೊಳ್ಳುವ ರೀತಿ, ನಮ್ಮ ಮಾತು, ಹಾವಭಾವ ಇವೆಲ್ಲವೂ ನಮ್ಮ ವ್ಯಕ್ತಿತ್ವ (Personality) ಹೇಗೆ ಎಂಬ ಬಗ್ಗೆ ವಿವರಣೆಯನ್ನು ನೀಡುತ್ತವೆ. ಅದೇ ರೀತಿ ನಮ್ಮ ಕಣ್ಣುಗಳ ಬಣ್ಣ, ಕೂದಲಿನ ಉದ್ದ, ಆಕಾರದಿಂದ ಹಿಡಿದು, ಮೂಗಿನ ಅಕಾರದವರೆಗೆ ನಮ್ಮ ದೇಹಾಕಾರಗಳ ಮೂಲಕವೂ ನಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಕೂಡಾ ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲದೆ ಆಪ್ಟಿಕಲ್ ಇಲ್ಯೂಷನ್ (Optical illusion) ಚಿತ್ರಗಳ ಮೂಲಕವೂ ನಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ನಾವು ಪರೀಕ್ಷೆ ಮಾಡಿಕೊಳ್ಳಬಹುದು. ಅಂತಹದ್ದೊಂದು ಫೋಟೋ ಇದೀಗ ವೈರಲ್ ಆಗಿದ್ದು, ಆ ಚಿತ್ರದಲ್ಲಿ ತುಟಿ, ಮರ ಅಥವಾ ಬೇರು ಈ ಮೂರರಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು ಎಂಬ ಆಧಾರದ ಮೇಲೆ ನೀವು ಅಂತರ್ಮುಖಿಯೇ (introvert) ಅಥವಾ ಬಹಿರ್ಮುಖಿ ವ್ಯಕ್ತಿತ್ವದವರೇ ಎಂಬುದನ್ನು ಪರೀಕ್ಷಿಸಿ.
recoverytraumaltd ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಆ ಚಿತ್ರದಲ್ಲಿ ತುಟಿ, ಮರ ಅಥವಾ ಬೇರು ಈ ಮೂರರಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು ಎಂಬ ಆಧಾರದ ಮೇಲೆ ನೀವು ಅಂತರ್ಮುಖಿಯೇ ಅಥವಾ ಬಹಿರ್ಮುಖಿ ವ್ಯಕ್ತಿತ್ವದವರೇ ಅಥವಾ ಶಾಂತ ಸ್ವಭಾವದ ವ್ಯಕ್ತಿತ್ವದವರೇ ಎಂಬುದನ್ನು ಪರೀಕ್ಷಿಸಿಕೊಳ್ಳಬಹುದಾಗಿದೆ.
ವಿಡಿಯೋ ಇಲ್ಲಿದೆ ನೋಡಿ:
ನಿಮಗೇನಾದರೂ ಈ ಚಿತ್ರದಲ್ಲಿ ಮೊದಲು ಮರಗಳು ಕಾಣಿಸಿಕೊಂಡರೆ ನೀವು ಬಹಿರ್ಮುಖಿ ವ್ಯಕ್ತಿತ್ವದವರು ಎಂದು ಅರ್ಥ. ಹೊರಗೆ ಹೋಗಲು ಹೆಚ್ಚು ಇಷ್ಟಪಡುವ ನೀವು ಇತರರೊಂದಿಗೆ ಬಹು ಬೇಗನೆ ಬೆರೆಯುತ್ತೀರಿ. ಸಾಮಾಜಿಕ ಸಂದರ್ಭಗಳಲ್ಲಿ ಅಂದರೆ ಹೊರಗಡೆ ಹೋದಾಗ ನೀವು ತುಂಬಾನೇ ಸಭ್ಯ ವರ್ತನೆಯನ್ನು ತೋರುತ್ತೀರಿ. ಈ ವಿಷಯಗಳಿಂದಲೇ ಜನ ನಿಮ್ಮನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಾರೆ. ನೀವು ಬಹಿರ್ಮುಖಿಯಾಗಿದ್ದರೂ ಕೂಡಾ ನೀವು ಏನನ್ನು ಯೋಚಿಸುತ್ತೀರಿ ಎಂಬುದನ್ನು ಜನರಿಗೆ ಅರ್ಥ ಮಾಡಿಕೊಳ್ಳಲು ಕಷ್ಟಸಾಧ್ಯ.
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಮೊದಲು ನಿಮಗೆ ಬೇರುಗಳು ಕಣ್ಣಿಗೆ ಬಿದ್ದರೆ ನೀವು ಅಂತರ್ಮುಖಿ ವ್ಯಕ್ತಿತ್ವದವರು ಎಂದರ್ಥ. ತುಂಬಾನೇ ಸೌಮ್ಯ ಸ್ವಭಾವದವರಾದ ನೀವು ಬಲವಾದ ಇಚ್ಛಾಶಕ್ತಿಯುಳ್ಳವರು ಮತ್ತು ಹಠಮಾರಿಗಳಾಗಿರುತ್ತೀರಿ. ಜನರು ನಿಮ್ಮನ್ನು ಮೊದಲು ಅನರ್ಹರೆಂದು ಭಾವಿಸಿದರೂ ಅವರು ನಿಮ್ಮನ್ನು ಸಂಪೂರ್ಣವಾಗಿ ತಿಳಿದುಕೊಂಡ ಬಳಿಕ, ನಿಮ್ಮ ಸಮರ್ಥತೆಯ ಬಗ್ಗೆ ಅವರಿಗೆ ಅರ್ಥವಾಗುತ್ತದೆ.
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ನೀವೇನಾದರೂ ಮೊದಲು ತುಟಿಯನ್ನು ಕಂಡರೆ ನೀವು ತುಂಬಾನೇ ಶಾಂತ ಸ್ವಭಾವದ ವ್ಯಕ್ತಿಗಳು ಎಂದರ್ಥ. ಸರಳತೆಯನ್ನು ಆನಂದಿಸುವ ನೀವು ಶಾಂತ ಮತ್ತು ಸ್ಥಿರ ವ್ಯಕ್ತಿಯಾಗಿರುತ್ತೀರಿ. ನಾಟಕೀಯತೆಯನ್ನು ಇಷ್ಟಪಡದ ನೀವು ಶಾಂತಿಯುತ ಮತ್ತು ಸಮತೋಲಿತ ಜೀವನವನ್ನು ನಡೆಸಲು ಇಷ್ಟಪಡುವವರಾಗಿರುತ್ತೀರಿ. ಜೊತೆಗೆ ಒತ್ತಡಗಳಿಂದ ಸುಲಭವಾಗಿ ಪ್ರಭಾವಿತರಾಗದ ನೀವು ಭಾವನಾತ್ಮಕ ಸ್ಥಿರತೆ, ಆತ್ಮ ವಿಶ್ವಾಸಕ್ಕೆ ಹೆಚ್ಚು ಬೆಲೆ ಕೊಡುವವರಾಗಿರುತ್ತೀರಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ