ಸಾಂದರ್ಭಿಕ ಚಿತ್ರ
ನಮ್ಮ ಸುತ್ತಮುತ್ತಲಿನಲ್ಲಿರುವ ವ್ಯಕ್ತಿ ಹೇಗೆ ಎಂದು ಅರಿತುಕೊಳ್ಳಲು ಯಾರಿಗೆ ತಾನೇ ಇರಲ್ಲ. ಕೆಲವೊಮ್ಮೆ ನಮ್ಮ ನಿಗೂಢ ವ್ಯಕ್ತಿತ್ವ ಹಾಗೂ ಗುಣಸ್ವಭಾವದ ಬಗ್ಗೆ ನಮಗೆ ತಿಳಿದಿರುವುದಿಲ್ಲ. ಆದರೆ, ವ್ಯಕ್ತಿಗಳ ನಡವಳಿಕೆಯ ಆಧಾರದ ಮೇಲೆ ಅವರ ವ್ಯಕ್ತಿತ್ವವನ್ನು ಅಳೆಯಲಾಗುತ್ತದೆ. ಅದಲ್ಲದೇ, ನಡೆಯುವ ಶೈಲಿಯಿಂದ, ಕಿವಿ, ಮೂಗು, ಕೈ, ಮುಖದ ಆಕಾರ ಹೀಗೆ ದೇಹಾಕಾರದಿಂದಲೂ ವ್ಯಕ್ತಿತ್ವವನ್ನು ತಿಳಿಯಬಹುದು. ಇಂತಹ ಪರ್ಸನಾಲಿಟಿ ಟೆಸ್ಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇದೀಗ ಇಲ್ಲಿ ವಿವಿಧ ಆಕಾಶ ಬಣ್ಣಗಳನ್ನೊಳಗೊಂಡ ಚಿತ್ರವನ್ನು ಕಾಣಬಹುದು. ಯಾವ ಆಕಾಶ ಬಣ್ಣವನ್ನು ಆಯ್ಕೆ ಮಾಡಿಕೊಳ್ಳುವಿರಿ ಎನ್ನುವುದರ ಮೇಲೆ ನಿಮ್ಮ ಗುಣಸ್ವಭಾವ ತಿಳಿಯಬಹುದು.
- ಆಕಾಶ ಬಣ್ಣ 1: ಮೊದಲನೇ ಆಕಾಶ ಬಣ್ಣದ ಚಿತ್ರ ಆಯ್ಕೆ ಮಾಡಿಕೊಂಡರೆ ಈ ವ್ಯಕ್ತಿಗಳು ಕುತೂಹಲ ಪ್ರವೃತ್ತಿಯಾಗಿರುತ್ತಾರೆ. ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳುವ ಹಾಗೂ ಕಲಿಯುವ ಕುತೂಹಲ ಹೆಚ್ಚಿರುತ್ತದೆ. ಕೆಲವೊಮ್ಮೆ ಬೇಗನೇ ಬೋರ್ ಎನಿಸಲು ಪ್ರಾರಂಭವಾಗುತ್ತದೆ. ಅದಲ್ಲದೇ ನಿಮ್ಮ ಕುತೂಹಲ ಪ್ರವೃತ್ತಿಯೇ ನಿಮ್ಮತ್ತ ಎಲ್ಲರನ್ನು ಸೆಳೆಯುತ್ತದೆ. ಸ್ವತಂತ್ರ ಮನೋಭಾವ ಹೊಂದಿದ್ದು, ನಿಮಗೆ ನಿಮ್ಮೊಂದಿಗೆ ಸಮಯ ಕಳೆಯುವುದೆಂದರೆ ತುಂಬಾನೇ ಇಷ್ಟ.
- ಆಕಾಶ ಬಣ್ಣ 2: ಎರಡನೇ ಆಕಾಶ ಬಣ್ಣದ ಚಿತ್ರ ಆಯ್ಕೆ ಮಾಡಿಕೊಳ್ಳುವ ಜನರು ಆತ್ಮೀಯರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದು, ನಿಮ್ಮಿಂದ ಹಲವರು ಸಲಹೆ ಪಡೆದುಕೊಳ್ಳುತ್ತಾರೆ. ಬದುಕಿನಲ್ಲಿ ಏನೇ ನಡೆದರೂ ಸಕಾರಾತ್ಮಕವಾಗಿ ತೆಗೆದುಕೊಂಡು ಮುನ್ನಡೆಯುವಿರಿ. ಹೀಗಾಗಿ ಬದುಕಿನಲ್ಲಿ ಎದುರಾಗುವ ಸಂಕಷ್ಟಗಳನ್ನು ನಿಭಾಯಿಸಿಕೊಂಡು ಹೋಗುವುದು ಸುಲಭವಾಗುತ್ತದೆ.
- ಆಕಾಶ ಬಣ್ಣ 3: ಮೂರನೇ ಆಕಾಶ ಬಣ್ಣದ ಚಿತ್ರ ಆಯ್ಕೆ ಮಾಡಿಕೊಳ್ಳುವ ವ್ಯಕ್ತಿಗಳು ಹೆಚ್ಚೆಚ್ಚು ತಿಳಿದುಕೊಳ್ಳುವ ಆಸಕ್ತಿ ಹೊಂದಿರುತ್ತಾರೆ. ಈ ವ್ಯಕ್ತಿಗಳಲ್ಲಿ ಜ್ಞಾನ ದಾಹವು ಅಧಿಕವಾಗಿರುತ್ತದೆ. ತನ್ನವರ ಭಾವನೆಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ. ಆದರೆ ತಮ್ಮ ಭಾವನೆಗಳನ್ನು ತೋರ್ಪಡಿಸಲು ಇಷ್ಟ ಪಡುವುದಿಲ್ಲ.
- ಆಕಾಶ ಬಣ್ಣ 4: ನಾಲ್ಕನೇ ಆಕಾಶ ಬಣ್ಣದ ಚಿತ್ರ ಆಯ್ಕೆ ಮಾಡಿಕೊಂಡರೆ ಆ ವ್ಯಕ್ತಿಗಳು ಸಾಹಸ ಮನೋಭಾವದವರು ಎನ್ನಬಹುದು. ಸದಾ ಉತ್ಸಾಹದಿಂದ ಕೆಲಸದಲ್ಲಿ ಮಗ್ನರಾಗಿರುತ್ತಾರೆ. ಜೀವನದಲ್ಲಿ ತಮಗೆ ಏನು ಬೇಕೋ ಅದನ್ನು ಪಡೆಯಲು ಕೆಲಸ ಮಾಡುತ್ತಾರೆ. ಹೀಗಾಗಿ ಸಮಸ್ಯೆಗಳು ಎದುರಾದರೆ ಆ ಬಗ್ಗೆ ತಲೆ ಕೆಡಿಸಿಕೊಳ್ಳದೇ ಮುನ್ನುಗ್ಗುತ್ತಾರೆ. ಈ ವ್ಯಕ್ತಿಗಳಲ್ಲಿ ಸಹಾಯ ಮಾಡುವ ಗುಣ ಅಧಿಕವಾಗಿರುತ್ತದೆ.
- ಆಕಾಶ ಬಣ್ಣ 5: ಐದನೇ ಆಕಾಶ ಬಣ್ಣ ಚಿತ್ರ ಆಯ್ಕೆ ಮಾಡಿಕೊಂಡರೆ ಈ ಜನರು ಶಾಂತ ಸ್ವಭಾವದವರು. ತಮ್ಮ ಪ್ರಾಮಾಣಿಕ ಗುಣದಿಂದಲೇ ಎಲ್ಲರಿಗೂ ಇಷ್ಟವಾಗುತ್ತಾರೆ . ವಾದ ವಿವಾದ, ಜಗಳದಿಂದದಿಂದ ದೂರ ಇರಲು ಇಷ್ಟ ಪಡುತ್ತಾರೆ. ಪ್ರತಿಯೊಬ್ಬರನ್ನು ಗೌರವದಿಂದ ಕಾಣುವ ಈ ವ್ಯಕ್ತಿಗಳು ತಾವು ಅಂದುಕೊಂಡಂತೆ ಜೀವನ ನಡೆಸಲು ಇಷ್ಟ ಪಡುತ್ತಾರೆ. ಯಾರ ಮಾತಿಗೂ ತಲೆ ಕೆಡಿಸಿಕೊಳ್ಳದೇ ತಮ್ಮ ಆಲೋಚನೆಯಂತೆ ನಡೆಯುತ್ತಾರೆ.
- ಆಕಾಶ ಬಣ್ಣ 6: ಆರನೇ ಆಕಾಶ ಬಣ್ಣ ಚಿತ್ರ ಆಯ್ಕೆ ಮಾಡಿಕೊಂಡರೆ ಈ ವ್ಯಕ್ತಿಗಳು ನಿಯತ್ತಿನ ವ್ಯಕ್ತಿಗಳಾಗಿದ್ದು, ಮೋಸ ವಂಚನೆಯಿಂದ ದೂರವಿರುತ್ತಾರೆ. ಸೂಕ್ಷ್ಮ ಸ್ವಭಾವ ಹೊಂದಿದ್ದು ಯಾರ ಭಾವನೆಯನ್ನು ನೋಯಿಸುವುದಿಲ್ಲ. ಆದರೆ ತಮಗೆ ಮೋಸ ಮಾಡಿದ ವ್ಯಕ್ತಿಯನ್ನು ಎಂದಿಗೂ ಕ್ಷಮಿಸುವುದಿಲ್ಲ. ಸಣ್ಣ ಸಣ್ಣ ವಿಷಯಗಳು ಈ ವ್ಯಕ್ತಿಗಳ ಮನಸ್ಸನ್ನು ಘಾಸಿಗೊಳಿಸುತ್ತದೆ. ತನ್ನ ಆತ್ಮೀಯರಿಗೆ ಪ್ರೀತಿ, ಕಾಳಜಿ ತೋರಿಸುತ್ತಾರೆ. ತನ್ನ ಸುತ್ತಮುತ್ತಲಿನ ಜನರಿಗೆ ಸಲಹೆ ನೀಡುವ ಮೂಲಕ ಪ್ರೋತ್ಸಾಹಿಸುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ