International Zebra Day 2025: ಪರಿಸರ ಸಮತೋಲನಕ್ಕೆ ಜೀಬ್ರಾಗಳ ಸಂರಕ್ಷಣೆ ಅತ್ಯಗತ್ಯ, ಎಲ್ಲರಿಗೂ ಬೇಕು ಜಾಗೃತಿ
ಸ್ವಾರ್ಥ ಭರಿತ ಮಾನವನ ಚಟುವಟಿಕೆಗಳಿಂದಾಗಿ ಜೀವ ಸಂಕುಲದಲ್ಲಿರುವ ಪ್ರಾಣಿ ಪಕ್ಷಿಗಳ ಸಂತತಿಗಳು ನಶಿಸಿ ಹೋಗುತ್ತಿವೆ. ಅದರಲ್ಲಿಯೂ ಈ ಪರಿಸರ ನಾಶಗಳ ಕಾರಣದಿಂದಾಗಿ ಜೀಬ್ರಾಗಳ ಸಂತತಿ ಅಳಿವಿನಂಚಿನಲ್ಲಿವೆ. ಈ ನಿಟ್ಟಿನಲ್ಲಿ ಈ ಪ್ರಾಣಿಗಳ ಸಂರಕ್ಷಣೆಗಾಗಿ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಜನವರಿ 31 ರಂದು ಅಂತಾರಾಷ್ಟ್ರೀಯ ಜೀಬ್ರಾ ದಿನವನ್ನು ಆಚರಿಸಲಾಗುತ್ತಿದೆ. ಹಾಗಾದ್ರೆ ಈ ದಿನದ ಆಚರಣೆ ಯಾವಾಗ ಶುರುವಾಯಿತು? ಈ ದಿನದ ಮಹತ್ವವೇನು? ಎನ್ನುವ ಮಾಹಿತಿ ಇಲ್ಲಿದೆ.

ಮನುಷ್ಯನ ದುರಾಸೆಗೆ ಕೊನೆಯಿಲ್ಲ, ತನ್ನ ಸ್ವಾರ್ಥಕ್ಕಾಗಿ ಜೀವ ಸಂಕುಲಗಳು ನಶಿಸಿ ಹೋಗುತ್ತಿದೆ. ಅದರಲ್ಲಿ ಸಾಧು ಜೀವಿಗಳೆನಿಸಿಕೊಂಡಿರುವ ಜೀಬ್ರಾಗಳು ಅವನತಿಯ ಅಂಚಿನಲ್ಲಿದೆ. ಈ ಜೀಬ್ರಾಗಳು ಹೆಚ್ಚಾಗಿ ಆಫ್ರಿಕನ್ ಖಂಡ, ಕೀನ್ಯಾ ಮತ್ತು ಇಥಿಯೋಪಿಯಾದ ಅರೆ ಮರುಭೂಮಿ ಪ್ರದೇಶ, ನಮೀಬಿಯಾ, ಅಂಗೋಲಾ ಮತ್ತು ದಕ್ಷಿಣ ಆಫ್ರಿಕಾದ ಗುಡ್ಡಗಾಡು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಕಳೆದ ಮೂರು ದಶಕಗಳಲ್ಲಿ ಜೀಬ್ರಾಗಳನ್ನು ಚರ್ಮಕ್ಕಾಗಿ ಹಾಗೂ ಮಾಂಸಕ್ಕಾಗಿ ಬೇಟೆಯಾಡಿದ ಪರಿಣಾಮದಿಂದ ಜೀಬ್ರಾ ಸಂತತಿಗಳು ದೊಡ್ಡ ಪ್ರಮಾಣದಲ್ಲಿ ನಶಿಸಿ ಹೋಗಿವೆ. ಹೀಗಾಗಿ ಈ ಜೀಬ್ರಾಗಳ ಸಂತತಿಯೂ ಸರಿಸುಮಾರು 54% ರಷ್ಟು ಕಡಿಮೆಯಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಅಂತಾರಾಷ್ಟ್ರೀಯ ಜೀಬ್ರಾ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಅಂತಾರಾಷ್ಟ್ರೀಯ ಜೀಬ್ರಾ ದಿನದ ಇತಿಹಾಸ
ಸ್ಮಿತ್ಸೋನಿಯನ್ ರಾಷ್ಟ್ರೀಯ ಮೃಗಾಲಯ ಹಾಗೂ ಕನ್ಸರ್ವೇಶನ್ ಬಯಾಲಜಿ ಇನ್‌ಸ್ಟಿಟ್ಯೂಟ್ ನಂತಹ ಸಂರಕ್ಷಣಾ ಸಂಸ್ಥೆಗಳ ಒಕ್ಕೂಟವು ಅಂತಾರಾಷ್ಟ್ರೀಯ ಜೀಬ್ರಾ ದಿನವನ್ನು ಆಚರಿಸಲು ಆರಂಭಿಸಿತು. ಅಂದಿನಿಂದ ಪ್ರತಿ ವರ್ಷ ಜನವರಿ 31 ರಂದು ಜಾಗತಿಕ ಮಟ್ಟದಲ್ಲಿ ಅಂತಾರಾಷ್ಟ್ರೀಯ ಜೀಬ್ರಾ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಇದನ್ನೂ ಓದಿ: ನಿಂಬೆಯೊಂದಿಗೆ ಬೀಟ್ರೂಟ್ ಜ್ಯೂಸ್: ಇದನ್ನು ಕುಡಿಯುವುದರಿಂದ ಹಲವು ಆರೋಗ್ಯ ಪ್ರಯೋಜನ
ಅಂತಾರಾಷ್ಟ್ರೀಯ ಜೀಬ್ರಾ ದಿನದ ಮಹತ್ವ ಹಾಗೂ ಆಚರಣೆ
ಜೀಬ್ರಾಗಳ ಕ್ಷೀಣಿಸುತ್ತಿರುವ ಜನಸಂಖ್ಯೆಯ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮತ್ತು ಅವುಗಳ ಸಂರಕ್ಷಣೆಗಾಗಿ ಪ್ರಯತ್ನ ಮಾಡುವುದು ಈ ದಿನದ ಉದ್ದೇಶವಾಗಿದೆ. ಸಾಧುಜೀವಿಗಳಾಗಿರುವ ಜೀಬ್ರಾಗಳ ಸಂತತಿ ಸಂರಕ್ಷಣೆಗಾಗಿ ಈ ದಿನವೂ ಮಹತ್ವದ್ದಾಗಿದೆ. ಪ್ರಾಣಿಗಳನ್ನು ರಕ್ಷಣೆ ಮಾಡುವುದರಿಂದ ಪರಿಸರ ಸಮತೋಲನಕ್ಕೆ ಹೇಗೆ ಸಹಕಾರಿಯಾಗಲಿದೆ ಎನ್ನುವ ಕುರಿತಾಗಿ ಅರಿವು ಮೂಡಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ಜಾಗೃತಿ ಕಾರ್ಯಕ್ರಮ ಸೇರಿದಂತೆ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ