Personality Test: ಮುಖದ ಮೇಲಿರುವ ಮಚ್ಚೆಯಿಂದಲೂ ತಿಳಿಯಬಹುದಂತೆ ನಿಮ್ಮ ವ್ಯಕ್ತಿತ್ವ ಎಂಥಹದ್ದೆಂದು

ಸಾಮಾನ್ಯವಾಗಿ ನಮ್ಮ ನಡವಳಿಕೆಯ ಆಧಾರದ ಮೇಲೆ ನಮ್ಮ ವ್ಯಕ್ತಿತ್ವ ಹೇಗಿದೆ ಎಂದು ಜನ ತಿಳಿದುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಕಣ್ಣಿನ ಬಣ್ಣ, ಮೂಗಿನ ಆಕಾರ, ಪಾದದ ಆಕಾರ ಸೇರಿದಂತೆ ದೇಹದ ಅಂಗಾಂಗಗಳ ಆಕಾರವನ್ನು ನೋಡಿ ಸಹ ನಮ್ಮ ನಿಗೂಢ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲದೆ ಮುಖದ ಮೇಲಿರುವ ಮಚ್ಚೆಯಿಂದಲೂ ಸಹ ವ್ಯಕ್ತಿತ್ವ ಪರೀಕ್ಷೆ ಮಾಡಬಹುದಂತೆ. ನಿಮಗೇನಾದರೂ ತುಟಿ ಮೇಲೆ, ಮೂಗಿನ ಮೇಲೆ, ಹಣೆ ಮೇಲೆ , ಕೆನ್ನೆ ಮೇಲೆ ಮಚ್ಚೆಯಿದ್ದರೆ ನಿಮ್ಮ ನಿಗೂಢ ವ್ಯಕ್ತಿತ್ವ ಹೇಗಿರುತ್ತೇ ಎಂಬುದನ್ನು ತಿಳಿದುಕೊಳ್ಳಿ.

Personality Test: ಮುಖದ ಮೇಲಿರುವ ಮಚ್ಚೆಯಿಂದಲೂ ತಿಳಿಯಬಹುದಂತೆ ನಿಮ್ಮ ವ್ಯಕ್ತಿತ್ವ ಎಂಥಹದ್ದೆಂದು
Face Moles
Image Credit source: wikiHow
Updated By: ಅಕ್ಷತಾ ವರ್ಕಾಡಿ

Updated on: Apr 20, 2025 | 8:31 AM

ಮುಖ, ಕೈ ಸೇರಿದಂತೆ ದೇಹದ ಮೇಲೆ ಒಂದಲ್ಲಾ ಒಂದು ಮಚ್ಚೆ (Mole) ಇದ್ದೇ ಇರುತ್ತದೆ. ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯನ ದೇಹದಲ್ಲೂ ಒಂದಲ್ಲಾ ಒಂದು ಮಚ್ಚೆ ಇದ್ದೇ ಇರುತ್ತದೆ. ಸಾಮುದ್ರಿಕಾ ಶಾಸ್ತ್ರದಲ್ಲಿ ಮಚ್ಚೆ ದೇಹದ ಯಾವ ಭಾಗದಲ್ಲಿದೆ ಎಂಬುದರ ಮೇಲೆ ಶುಭ ಅಶುಭವನ್ನು, ಅದೃಷ್ಟ (good luck), ದುರಾದೃಷ್ಟವನ್ನು ತಿಳಿಯಬಹುದು. ಅದೇ ರೀತಿ  ಈ ಮಚ್ಚೆಗಳಿಂದ ನಮ್ಮ ವ್ಯಕ್ತಿತ್ವವನ್ನು (personality) ಸಹ ತಿಳಿಯಬಹುದಂತೆ. ಹೌದು ದೇಹದ ಅಂಗಾಂಗಗಳ ಆಕಾರವನ್ನು ನೋಡಿ ವ್ಯಕ್ತಿತ್ವವನ್ನು ಪರೀಕ್ಷಿಸುವಂತೆ ಮುಖದ ಮೇಲಿನ ಮಚ್ಚೆಯಿಂದಲೂ ಸಹ ವ್ಯಕ್ತಿತ್ವ ಪರೀಕ್ಷೆ ಮಾಡಬಹುದು. ನಿಮ್ಮ ಹಣೆಯ ಮೇಲೆ ಅಥವಾ ತುಟಿಯ ಮೇಲೆ, ಇಲ್ಲವೇ ಕೆನ್ನೆಯ ಮೇಲೆ ಮೆಚ್ಚೆಯಿದ್ದರೆ ನಿಮ್ಮ ಗುಣ ಸ್ವಭಾವ ಎಂತಹದ್ದು ಎಂಬುದನ್ನು ತಿಳಿದುಕೊಳ್ಳಿ.

ಮುಖದ ಮೇಲಿನ ಮಚ್ಚೆಯಿಂದ ತಿಳಿಯಬಹುದು ವ್ಯಕ್ತಿತ್ವದ ರಹಸ್ಯ:

ಹಣೆಯ ಮೇಲೆ ಮಚ್ಚೆ:

ಹಣೆಯ ಮೇಲೆ ಮಚ್ಚೆ ಇರುವವರ ಜೀವನವು ಹೋರಾಟಗಳಿಂದ ತುಂಬಿರುತ್ತದೆಯಂತೆ.  ಇಂತಹ ವ್ಯಕ್ತಿಗಳು ಈ ಹೋರಾಟಗಳ ನಂತರ, ತಮ್ಮ ಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಪಡೆಯುತ್ತಾರೆ.  ಆದ್ದರಿಂದಲೇ ಹಣೆಯ ಮೇಲೆ ಮಚ್ಚೆ ಇರುವವರನ್ನು ತುಂಬಾ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಮತ್ತು ಈ ವ್ಯಕ್ತಿಗಳು ಸೃಜನಶೀಲತೆ ಮತ್ತು ಬುದ್ಧಿವಂತಿಕೆಯನ್ನು ಸಹ ಹೊಂದಿರುತ್ತಾರೆ.

ಕೆನ್ನೆಯ ಮೇಲೆ ಮಚ್ಚೆ:

ಕೆನ್ನೆಯ ಮೇಲಿನ ಮಚ್ಚೆಯನ್ನು ಸೌಂದರ್ಯದ ಸಂಕೇತವೆಂದೂ ಪರಿಗಣಿಸಲಾಗುತ್ತದೆ. ಕೆನ್ನೆಯ ಮೇಲೆ ಮಚ್ಚೆ ಇರುವ ಜನರು ಸಾಮಾನ್ಯವಾಗಿ ಹರ್ಷಚಿತ್ತದಿಂದ ಇರುತ್ತಾರೆ. ಅವರಿಗೆ ತಮ್ಮ ಮೇಲೆ ವಿಶ್ವಾಸವನ್ನಿಟ್ಟಿರುತ್ತಾರೆ. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಇಷ್ಟ ಪಡುವ ಇವರು ಇತರರೊಂದಿಗೆ ಬಹು ಬೇಗನೇ ಬೆರೆಯುತ್ತಾರೆ. ಅಷ್ಟೇ ಅಲ್ಲದೆ ಇವರು ತುಂಬಾ ಸೃಜನಶೀಲ ವ್ಯಕ್ತಿಗಳಾಗಿರುತ್ತಾರೆ.

ಇದನ್ನೂ ಓದಿ
ಈ ಸಮಯಗಳಲ್ಲಿ ಅಪ್ಪಿ ತಪ್ಪಿಯೂ ಮೊಬೈಲ್‌ ಮುಟ್ಟಬೇಡಿ
ಕರ್ನಾಟಕದ ಈ ಜಿಲ್ಲೆಗಳು ಯಾವುದಕ್ಕೆ ಫೇಮಸ್ ಗೊತ್ತಾ? ಇಲ್ಲಿದೆ ಮಾಹಿತಿ
ದವಡೆ ಸಮಸ್ಯೆಯನ್ನು 60 ಸೆಕೆಂಡುಗಳಲ್ಲಿ ಪರಿಹರಿಸಿದ ಚಾಟ್‌ಜಿಪಿಟಿ!
ಯುನೆಸ್ಕೋದ ವಿಶ್ವ ನೋಂದಣಿ ಪಟ್ಟಿಗೆ ಭಗವದ್ಗೀತೆ, ನಾಟ್ಯಶಾಸ್ತ್ರ ಸೇರ್ಪಡೆ

ಮೂಗಿನ ಮೇಲೆ ಮಚ್ಚೆ:

ಮೂಗಿನ ಮೇಲೆ ಮಚ್ಚೆ ಇರುವ ಜನರು ಯಾವಾಗಲೂ ಹೊಸ ವಿಷಯಗಳನ್ನು ಕಲಿಯಲು ಮತ್ತು ಆಗಾಗ್ಗೆ ಎಲ್ಲಿಗಾದರೂ ಪ್ರಯಾಣಿಸಲು ಉತ್ಸುಕರಾಗಿರುತ್ತಾರೆ. ಅವರ ಈ  ಸ್ವಭಾವವು ಅವರಿಗೆ ಜೀವನದಲ್ಲಿ ಅನೇಕ ಹೊಸ ಹೊಸ  ಅನುಭವಗಳನ್ನು ನೀಡುತ್ತದೆ. ಮತ್ತು ಇವರು ತುಂಬಾ ಸ್ವಾಭಿಮಾನ ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ.

ಇದನ್ನೂ ಓದಿ: 5 ವರ್ಷಗಳಿಂದ ಪರಿಹಾರವಾಗದ ದವಡೆ ಸಮಸ್ಯೆಯನ್ನು 60 ಸೆಕೆಂಡುಗಳಲ್ಲಿ ಪರಿಹರಿಸಿದ ಚಾಟ್‌ಜಿಪಿಟಿ!

ಮೂಗಿನ ಕೆಳಗೆ ಮಚ್ಚೆ:

ಮೂಗಿನ ಕೆಳಗೆ ಮತ್ತು ತುಟಿಯ ಮೇಲ್ಭಾಗದಲ್ಲಿ ಮಚ್ಚೆ ಇರುವ ಜನರು ತಮ್ಮ ಜೀವನದಲ್ಲಿ ಕಟ್ಟುನಿಟ್ಟಿನ ಶಿಸ್ತನ್ನು ಅನುಸರಿಸುತ್ತಾರಂತೆ. ಜೀವನದಲ್ಲಿ ಯಾವುದೇ ಪರಿಸ್ಥಿತಿ ಬಂದರೂ, ಅವರು ತಮ್ಮ ಶಿಸ್ತಿನೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲವಂತೆ. ಮತ್ತು ಅವರ ಈ ವ್ಯಕ್ತಿತ್ವವು ಅವರನ್ನು ಇತರರಿಗಿಂತ ಭಿನ್ನವಾಗಿರುಂತೆ ಮಾಡುತ್ತದೆ.

ತುಟಿಗಳ ಮೇಲೆ ಮಚ್ಚೆಗಳು:

ತುಟಿಯ ಮೇಲೆ ಮಚ್ಚೆ ಇರುವ ಜನರು ತುಂಬಾ ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುವವರಾಗಿರುತ್ತಾರೆ. ಮಾತನಾಡುವ ಶೈಲಿ,  ಜೀವನಶೈಲಿಯಿಂದ ಹಿಡಿದು ಕೆಲಸದವರೆಗೆ ಇವರ ಎಲ್ಲಾ ನಡೆಗಳು ಜನರನ್ನು ಆಕರ್ಷಿಸುತ್ತದೆ. ಹೀಗೆ ಇವರು ತಮ್ಮ ಆಕರ್ಷಕ ವ್ಯಕ್ತಿತ್ವದಿಂದಲೇ ಎಲ್ಲರ ಹೃದಯವನ್ನು ಗೆಲ್ಲುತ್ತಾರೆ. ಮತ್ತು ಇವರು ತುಂಬಾ ಮಹತ್ವಾಕಾಂಕ್ಷೆಯುಳ್ಳವರಾಗಿರುತ್ತಾರೆ.

ಗಲ್ಲದ ಮೇಲಿನ ಮಚ್ಚೆ:

ಗಲ್ಲದ ಮೇಲೆ ಮಚ್ಚೆಯನ್ನು ಹೊಂದಿರುವವರು ದಯಾಳು ಸ್ವಭಾವದವರಾಗಿರುತ್ತಾರೆ. ಇವರು ಯಾವಾಗಲೂ ಯಶಸ್ವಿ ಮತ್ತು ಸಮತೋಲಿತ ಜೀವನವನ್ನು ನಡೆಸುವವರಾಗಿರುತ್ತಾರೆ. ತಾರ್ಕಿಕ ಚಿಂತಕರೂ ಆಗಿರುವ ಇವರು ಆಗಾಗ್ಗೆ ಸ್ವಲ್ಪ ಹಠಮಾರಿತನವನ್ನೂ ತೋರಿಸುತ್ತಾರೆ. ಒಟ್ಟಾರೆ ಇವರು ದೃಢನಿಶ್ಚಯ ಮತ್ತು ಕಾಳಜಿಯುಳ್ಳ ವ್ಯಕ್ತಿಗಳು.

ಜೀವನ ಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ