Personality Test: ಜೂನ್‌ನಲ್ಲಿ ಜನಿಸಿದವರ ವ್ಯಕ್ತಿತ್ವ ಹೇಗಿರುತ್ತೆ ಗೊತ್ತಾ?

ಪ್ರತಿಯೊಬ್ಬ ವ್ಯಕ್ತಿಯ ಗುಣ ಸ್ವಭಾವ, ವ್ಯಕ್ತಿತ್ವ ಭಿನ್ನವಾಗಿರುತ್ತವೆ. ವ್ಯಕ್ತಿಯ ಈ ಸೀಕ್ರೆಟ್‌ ಗುಣ ಸ್ವಭಾವಗಳನ್ನು ಕಣ್ಣು, ಮೂಗು, ಪಾದದ ಆಕಾರ, ಕೂದಲಿನ ಆಕಾರ ಸೇರಿದಂತೆ ದೇಹಾಕಾರದಂತಹ ಪರ್ಸನಾಲಿಟಿ ಟೆಸ್ಟ್‌ ಮೂಲಕ ತಿಳಿಯಬಹುದಾಗಿದೆ. ಇದಲ್ಲದೆ ಹುಟ್ಟಿದ ತಿಂಗಳ ಆಧಾರದ ಮೇಲೂ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿಯಬಹುದು. ಇನ್ನೇನೂ ಜೂನ್‌ ತಿಂಗಳು ಆರಂಭವಾಗುತ್ತಿದ್ದು, ಈ ಸಂದರ್ಭದಲ್ಲಿ ಜೂನ್‌ ತಿಂಗಳಲ್ಲಿ ಜನಿಸಿದವರ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯೋಣ ಬನ್ನಿ.

Personality Test: ಜೂನ್‌ನಲ್ಲಿ ಜನಿಸಿದವರ  ವ್ಯಕ್ತಿತ್ವ ಹೇಗಿರುತ್ತೆ ಗೊತ್ತಾ?
ವ್ಯಕ್ತಿತ್ವ ಪರೀಕ್ಷೆ
Image Credit source: Unsplash

Updated on: May 30, 2026 | 6:45 PM

ಸಾಮಾನ್ಯವಾಗಿ ಸಂಖ್ಯಾಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ಗಿಣಿ ಶಾಸ್ತ್ರದ ಮೂಲಕ ವ್ಯಕ್ತಿಯ ಗುಣ ಸ್ವಭಾವ, ಭವಿಷ್ಯವನ್ನು ತಿಳಿದುಕೊಳ್ಳಲಾಗುತ್ತದೆ. ಇದಲ್ಲದೆ ಸಾಮುದ್ರಿಕ ಶಾಸ್ತ್ರದಲ್ಲಿ ಕಣ್ಣು, ಮೂಗು, ಕೂದಲು, ಪಾದ ಸೇರಿದಂತೆ ವ್ಯಕ್ತಿಯ ದೇಹಾಕಾರ ಹೇಗಿದೆ ಎಂಬುದರ ಮೂಲಕವೂ ಆತನ ವ್ಯಕ್ತಿತ್ವವನ್ನು (personality) ತಿಳಿಯಬಹುದಾಗಿದೆ. ಅದೇ ರೀತಿ ಹುಟ್ಟಿದ ತಿಂಗಳ ಆಧಾರದ ಮೇಲೂ  ನಮ್ಮ ನಿಗೂಢ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯಬಹುದು. ಇನ್ನೇನೂ ಜೂನ್‌ ತಿಂಗಳು ಆರಂಭವಾಗುತ್ತಿದ್ದು, ಈ ಸಂದರ್ಭದಲ್ಲಿ ಜೂನ್‌ ತಿಂಗಳಲ್ಲಿ ಜನಿಸಿದವರ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯೋಣ ಬನ್ನಿ.

ಜೂನ್‌ ತಿಂಗಳಲ್ಲಿ ಜನಿಸಿದವರ ವ್ಯಕ್ತಿತ್ವ ಹೇಗಿರುತ್ತದೆ?

ಅದ್ಭುತ ಹಾಸ್ಯಪ್ರಜ್ಞೆ: ಜೂನ್‌ನಲ್ಲಿ ಜನಿಸಿದ ಜನರು ಗಮನಾರ್ಹವಾದ ಹಾಸ್ಯಪ್ರಜ್ಞೆಯನ್ನು ಹೊಂದಿರುತ್ತಾರೆ, ಈ ಹಾಸ್ಯ ಪ್ರಜ್ಞೆಯ ಕಾರಣ ಇತರರು ಇವರತ್ತ ಬಹು ಬೇಗನೆ ಆಕರ್ಷಿತರಾಗುತ್ತಾರೆ. ಅಲ್ಲದೆ ಇವರ ಸಂಭಾಷಣೆ ಶೈಲಿಯೂ ಉತ್ತಮವಾಗಿದೆ. ಇವರು ಖುಷಿಯಾಗಿರುತ್ತಾರೆ ಜೊತೆಗೆ ಇವರೊಂದಿಗಿರುವವರನ್ನೂ ಇವರು ಸಂತೋಷದಿಂದ ನೋಡಿಕೊಳ್ಳುತ್ತಾರೆ.

ಸ್ನೇಹಪರ ಸ್ವಭಾವ: ಜೂನ್‌ನಲ್ಲಿ ಜನಿಸಿದವರು ಇತರರರೊಂದಿಗೆ ತುಂಬಾ ಬೆರೆಯುವವರು. ಅವರು ಹೊಸ ಹೊಸ ಸ್ನೇಹಿತರನ್ನು ಮಾಡಿಕೊಳ್ಳಲು ಬಹಳ ಇಷ್ಟಪಡುತ್ತಾರೆ. ಅದಕ್ಕಾಗಿಯೇ ಅವರ ಫ್ರೆಂಡ್ಸ್‌ ಸರ್ಕಲ್‌ ಯಾವಾಗಲೂ ದೊಡ್ಡದಾಗಿರುತ್ತದೆ. ಅಲ್ಲದೆ ಜೂನ್‌ನಲ್ಲಿ ಜನಿಸಿದವರು ಸ್ವಭಾವತಃ ತುಂಬಾ ದಯಾಳುಗಳು ಮತ್ತು ಇವರು ಇತರರಿಗೆ ಸಹಾಯ ಮಾಡಲು ಯಾವಾಗಲೂ ಸಿದ್ಧರಿರುತ್ತಾರೆ.

ಹೊಸ ವಿಷಯಗಳನ್ನು ಕಲಿಯುವ ಹವ್ಯಾಸ: ಜೂನ್ ತಿಂಗಳಲ್ಲಿ ಜನಿಸಿದ ಜನರು ಹೊಸ ಹೊಸ ವಿಷಯಗಳನ್ನು ಕಲಿಯುವಲ್ಲಿ ತುಂಬಾನೇ ಆಸಕ್ತಿಯನ್ನು ಹೊಂದಿರುತ್ತಾರೆ. ಅವರು ತುಂಬಾ ಸೃಜನಶೀಲರು. ಅವರು ಎಲ್ಲದರ ಬಗ್ಗೆಯೂ ಜ್ಞಾನವನ್ನು ಹೊಂದಲು ಇಷ್ಟಪಡುತ್ತಾರೆ. ಅವರು ಓದುವುದು ಮತ್ತು ಬರೆಯುವುದನ್ನು ಆನಂದಿಸುತ್ತಾರೆ.

ಪರಿಶುದ್ಧ ಹೃದಯದವರು: ಜೂನ್ ತಿಂಗಳಲ್ಲಿ ಜನಿಸಿದ ಜನರು ಪರಿಶುದ್ಧ ಹೃದಯದವರಾಗಿರುತ್ತಾರೆ. ಅವರ ಮನಸ್ಸಿನಲ್ಲಿ ಏನಿದೆಯೋ ಅದನ್ನು ಅಲ್ಲೇ ಹೇಳಿಬಿಡುತ್ತಾರೆ. ಅವರು ಬೆನ್ನ ಹಿಂದೆ ಮಾತನಾಡುವುದಿಲ್ಲ, ಜೊತೆಗೆ ಬೆನ್ನಿಗೆ ಚೂರಿ ಕೂಡ ಹಾಕುವುದಿಲ್ಲ.  ಅವರು ಏನೇ ಮಾಡಿದರೂ ಅದನ್ನು ಧೈರ್ಯದಿಂದ ಮಾಡುತ್ತಾರೆ. ಅವರು ತಮ್ಮ ಸಂಬಂಧಗಳಲ್ಲಿ ಸಂಪೂರ್ಣ ಪ್ರಾಮಾಣಿಕತೆಯನ್ನು ಕಾಯ್ದುಕೊಳ್ಳುತ್ತಾರೆ ಮತ್ತು ತಮ್ಮ ಪ್ರೀತಿಪಾತ್ರರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ.

ಆಕರ್ಷಕ ವ್ಯಕ್ತಿತ್ವ: ಜೂನ್ ತಿಂಗಳಲ್ಲಿ ಜನಿಸಿದ ವ್ಯಕ್ತಿಗಳು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ, ಅವರು ಗಮನಾರ್ಹವಾದ ಆತ್ಮವಿಶ್ವಾಸವನ್ನು ಸಹ ಹೊಂದಿರುತ್ತಾರೆ. ಅವರು ತಮ್ಮ ಮೊದಲ ಭೇಟಿಯಲ್ಲೇ ಇತರರ ಮೇಲೆ ವಿಶಿಷ್ಟವಾದ ಪ್ರಭಾವ ಬೀರುತ್ತಾರೆ.

ಇದನ್ನೂ ಓದಿ: ಚಿತ್ರದಲ್ಲಿರುವ ಒಂದು ತರಕಾರಿಯನ್ನು ಆರಿಸಿ, ನಿಮ್ಮ ಮಾನಸಿಕ ಶಕ್ತಿ ಹೇಗಿದೆ ಪರೀಕ್ಷಿಸಿ

ಕಲಾ ಪ್ರೇಮಿಗಳು:  ಜೂನ್ ತಿಂಗಳಲ್ಲಿ ಜನಿಸಿದವರು ಕಲಾ ಪ್ರೇಮಿಗಳು. ಅವರು ಹಾಡುಗಾರಿಕೆ, ನೃತ್ಯ, ಕ್ರೀಡೆ, ಚಿತ್ರಕಲೆ ಮತ್ತು ಇನ್ನೂ ಅನೇಕ ಪ್ರತಿಭೆಗಳನ್ನು ಹೊಂದಿರುತ್ತಾರೆ.

ಭಾವನೆಗಳನ್ನು ವ್ಯಕ್ತಪಡಿಸುವುದಿಲ್ಲ: ಜೂನ್‌ನಲ್ಲಿ ಜನಿಸಿದ ಜನರ ಒಂದು ನಕಾರಾತ್ಮಕ ಅಂಶವೆಂದರೆ ಅವರು ತಮ್ಮ ಭಾವನೆಗಳನ್ನು ಇತರರಿಗೆ ವ್ಯಕ್ತಪಡಿಸುವುದಿಲ್ಲ. ಅವರು ತಮ್ಮ ಭಾವನೆಗಳನ್ನು ಮರೆಮಾಡುತ್ತಾರೆ.

ಪ್ರೇಮ ಜೀವನ:  ಜೂನ್ ತಿಂಗಳಲ್ಲಿ ಜನಿಸಿದವರು ತುಂಬಾನೇ ರೊಮ್ಯಾಂಟಿಕ್‌ ಆಗಿದ್ದು, ಅವರು ಪ್ರೀತಿಯಲ್ಲಿ ಬೇಗನೆ ಬೀಳುತ್ತಾರೆ, ಆದರೆ ಆ ಪ್ರೀತಿಯನ್ನು, ಭಾವನೆಯನ್ನು ವ್ಯಕ್ತಪಡಿಸಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ. ಸಂಬಂಧಗಳ ಬಗ್ಗೆ ತುಂಬಾನೇ ಉತ್ಸುಕರಾಗಿರುವ ಇವರು ಪ್ರೀತಿಯಲ್ಲಿ ಮೋಸ ಮಾಡುವ ಸಾಧ್ಯತೆ ತುಂಬಾ ಕಡಿಮೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:44 pm, Sat, 30 May 26

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us