AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ಚಿತ್ರದಲ್ಲಿರುವ ಮರದ ಕೊಂಬೆಯಲ್ಲಿ ಅಡಗಿರುವ ಐದು ಪಕ್ಷಿಗಳನ್ನು ಪತ್ತೆ ಮಾಡಿ, ನಿಮ್ಮ ಉತ್ತರ ಹೇಳುತ್ತೆ ನಿಮ್ಮ ವ್ಯಕ್ತಿತ್ವ

ಇತ್ತೀಚೆಗಿನ ದಿನಗಳಲ್ಲಿ ದೃಷ್ಟಿ ಸಾಮರ್ಥ್ಯ ಮತ್ತು ಮೆದುಳನ್ನು ಚುರುಕುಗೊಳಿಸುವ ಆಪ್ಟಿಕಲ್ ಇಲ್ಯೂಷನ್ ಫೋಟೋಗಳು ಆಗಾಗ ವೈರಲ್​ ಆಗುತ್ತಿದೆ. ಇದೀಗ ಈ ಫೋಟೋದಲ್ಲೂ ಮರದ ಕೊಂಬೆಯನ್ನು ನೋಡಬಹುದು. ತಕ್ಷಣ ನೋಡಿದಾಗ ಇದು ಮರದ ಕೊಂಬೆಯೆಂದು ಭಾವಿಸುತ್ತೀರಾ. ಆದರೆ ತುಂಬಾನೇ ಸೂಕ್ಷ್ಮವಾಗಿ ಗಮನಿಸಿದರೆ ಈ ಕೊಂಬೆಗಳಲ್ಲಿ ಐದು ಪಕ್ಷಿಗಳ ಆಕಾರವನ್ನು ಕಾಣಬಹುದು. ಈ ಐದು ಪಕ್ಷಿಗಳ ಆಕಾರವನ್ನು ಪತ್ತೆ ಹಚ್ಚುವ ಮೂಲಕ ನಿಮ್ಮ ವ್ಯಕ್ತಿತ್ವಯೇನು ಎಂಬುದನ್ನು ತಿಳಿಯಬಹುದು.

Personality Test: ಚಿತ್ರದಲ್ಲಿರುವ ಮರದ ಕೊಂಬೆಯಲ್ಲಿ ಅಡಗಿರುವ ಐದು ಪಕ್ಷಿಗಳನ್ನು ಪತ್ತೆ ಮಾಡಿ, ನಿಮ್ಮ ಉತ್ತರ ಹೇಳುತ್ತೆ ನಿಮ್ಮ ವ್ಯಕ್ತಿತ್ವ
ಆಪ್ಟಿಕಲ್ ಇಲ್ಯೂಷನ್
ಸಾಯಿನಂದಾ
| Edited By: |

Updated on: Dec 12, 2024 | 2:57 PM

Share

ಕಣ್ಣು ಮತ್ತು ಮೆದುಳಿಗೆ ಸವಾಲೊಡ್ಡುವ ಕುತೂಹಲಕಾರಿ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವು ನಮ್ಮ ಕಣ್ಣಿನ ಸೂಕ್ಷ್ಮತೆ ಮತ್ತು ಯೋಚನಾ ಸಾಮರ್ಥ್ಯವನ್ನು ಪರೀಕ್ಷಿಸುವಂತಿದ್ದರೆ ಕೆಲವೊಂದು ನಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಈ ಕೆಲವು ಚಿತ್ರದಲ್ಲಿ ಅಡಗಿಕೊಂಡಿರುವ ವಿಷಯಗಳನ್ನು ಹುಡುಕುವ ಮಜಾನೇ ಬೇರೆ. ಇದೀಗ ಅಂತಹದ್ದೇ ವ್ಯಕ್ತಿತ್ವ ರಿವೀಲ್ ಮಾಡುವ ಫೋಟೋ ವೈರಲ್ ಆಗಿದ್ದು. ಇದನ್ನು ಗಮನಿಸಿದಾಗ ಮರದ ಕೊಂಬೆಯೆನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಆದರೆ ಈ ಕೊಂಬೆಯಲ್ಲಿ ಐದು ಪಕ್ಷಿಗಳ ಆಕಾರವನ್ನು ಪತ್ತೆ ಹಚ್ಚಲು ನಿಮ್ಮಿಂದ ಸಾಧ್ಯವೇ. ನೀವು ಗುರುತಿಸಲು ಸಾಧ್ಯವಾಗುವುದನ್ನು ಅವಲಂಬಿಸಿ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಬಹುದು.

ಹೌದು, ನೋಡಿದ ತಕ್ಷಣವೇ ಇದು ಮರದ ಕೊಂಬೆಯೆನಿಸಿದರೂ ನಿಮ್ಮ ಬುದ್ಧಿವಂತಿಕೆಗೆ ಸವಾಲು ಎನಿಸುವ ಚಿತ್ರವಿದಾಗಿದೆ. ಈ ಚಿತ್ರದಲ್ಲಿ ನೀವು ಮರವನ್ನು ಕಾಣುತ್ತೀರಿ ಎನ್ನುವುದೇನೋ ನಿಜ. ಆದರೆ ಇಲ್ಲಿರುವ ಕೆಲವು ಕೊಂಬೆಗಳು ಐದು ಪಕ್ಷಿಗಳ ಆಕಾರವನ್ನು ಹೊಂದಿದೆ. ಈ ಮರದ ಬಾಗಿದ ಕೊಂಬೆಗಳ ನಡುವೆ ಪಕ್ಷಿಗಳು ಆಕಾರವು ಅಡಗಿರುವುದನ್ನು ಕಂಡು ಹಿಡಿಯುವುದು ತುಂಬಾ ಕಷ್ಟವಾಗಬಹುದು.

ಇದನ್ನೂ ಓದಿ: ಭಾರತದಲ್ಲಿ ವಿಚ್ಛೇದನ ಪ್ರಮಾಣ ಮೂರು ಪಟ್ಟು ಹೆಚ್ಚಳ, ಕರ್ನಾಟಕಕ್ಕೆ ಎಷ್ಟನೇ ಸ್ಥಾನ? ವಿಶ್ವಸಂಸ್ಥೆಯ ವರದಿಯಲ್ಲಿ ಏನಿದೆ?

ಆದರೆ ಈ ಚಿತ್ರವನ್ನು ಕೆಲ ಹೊತ್ತಿನವರೆಗೆ ಸರಿಯಾಗಿ ಗಮನಿಸಿದರೆ ಮಾತ್ರ ಉತ್ತರವನ್ನು ಪತ್ತೆ ಹಚ್ಚುವುದು ಕಷ್ಟವೇನಲ್ಲ. ಎಷ್ಟೇ ಹುಡುಕಿದರೂ ಐದು ಪಕ್ಷಿಗಳು ನಿಮ್ಮ ಕಣ್ಣಿಗೆ ಬೀಳುತ್ತೀಲ್ಲವೇ, ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಈ ಪಕ್ಷಿಗಳ ಆಕಾರವನ್ನು ಪತ್ತೆ ಮಾಡಿದರೆ ನಿಮ್ಮ ವ್ಯಕ್ತಿತ್ವ ಹೇಗೆ ಎನ್ನುವುದನ್ನು ರಿವೀಲ್ ಮಾಡುತ್ತದೆ.

ನೀವು ಐದು ಪಕ್ಷಿಗಳನ್ನು ಗುರುತಿಸಿದರೆ ನೀವು ಅಸಾಧಾರಣ ತಾರ್ಕಿಕ ಚಿಂತನೆ ಮತ್ತು ವೀಕ್ಷಣಾ ಕೌಶಲ್ಯಗಳನ್ನು ಹೊಂದಿದ್ದೀರಿ ಎಂದರ್ಥ. ನೀವು ಇನ್ನು ಕೂಡ ಹುಡುಕಾಟವನ್ನು ಮುಂದುವರೆಸಿದ್ದೀರಿ ಎಂದರೆ ನಿಮ್ಮ ತಾಳ್ಮೆ ಹಾಗೂ ಕೆಲಸದಲ್ಲಿ ಎಷ್ಟು ಆಸಕ್ತಿಯಿದೆ ಎನ್ನುವುದನ್ನು ತಿಳಿಸುತ್ತದೆ. ಅದಲ್ಲದೇ, ನೀವು ಐದು ಪಕ್ಷಿಗಳ ಆಕಾರವನ್ನು ಕಂಡುಹಿಡಿಯುವ ಪ್ರಕ್ರಿಯೆಯನ್ನು ಆನಂದಿಸುತ್ತಿದ್ದರೆ ಸವಾಲುಗಳನ್ನು ಸ್ವೀಕರಿಸುವ ಮನೋಭಾವ ಹೊಂದಿದ್ದೀರಾ. ಜೀವನದಲ್ಲಿ ಎಲ್ಲಾ ವಿಷಯಗಳನ್ನು ವಿವರವಾಗಿ ತಿಳಿದುಕೊಳ್ಳಲು ಇಷ್ಟಪಡುವ ವ್ಯಕ್ತಿ ಎಂದು ಅರ್ಥ ಮಾಡಿಕೊಳ್ಳಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ; ದರ್ಶನ್ ಮನವಿ ವಜಾ
ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ; ದರ್ಶನ್ ಮನವಿ ವಜಾ
ಬೆಂಗಳೂರಿನಲ್ಲಿ 800 KG ಜಿಲೆಟಿನ್‌ ಜಪ್ತಿ, ದೊಡ್ಡ ಅಪಾಯ ಜಸ್ಟ್ ಮಿಸ್!
ಬೆಂಗಳೂರಿನಲ್ಲಿ 800 KG ಜಿಲೆಟಿನ್‌ ಜಪ್ತಿ, ದೊಡ್ಡ ಅಪಾಯ ಜಸ್ಟ್ ಮಿಸ್!
ಮದ್ಯದ ಬಾಟಲ್ ಇಟ್ಟುಕೊಂಡು ಯಾರಿವಳು ಯಾರಿವಳು ಹಾಡು ಹಾಡಿದ ಸ್ವಾಮೀಜಿ
ಮದ್ಯದ ಬಾಟಲ್ ಇಟ್ಟುಕೊಂಡು ಯಾರಿವಳು ಯಾರಿವಳು ಹಾಡು ಹಾಡಿದ ಸ್ವಾಮೀಜಿ
ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ಜಾಗ ಒತ್ತುವರಿ ಆರೋಪ
ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ಜಾಗ ಒತ್ತುವರಿ ಆರೋಪ
ಪ್ರಜ್ವಲ್ ರೇವಣ್ಣ ಬಳಿ ಮತ್ತೊಂದು ಮೊಬೈಲ್ ಪತ್ತೆ!
ಪ್ರಜ್ವಲ್ ರೇವಣ್ಣ ಬಳಿ ಮತ್ತೊಂದು ಮೊಬೈಲ್ ಪತ್ತೆ!
ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ
ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ
ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್, ದರ್ಶನ್; ನಾನೇನು ಮಾಡೋಕಾಗಲ್ಲ DGP
ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್, ದರ್ಶನ್; ನಾನೇನು ಮಾಡೋಕಾಗಲ್ಲ DGP
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!
ಒಂಟಿ ಮನೆಗಳನ್ನೇ ದರೋಡೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ
ಒಂಟಿ ಮನೆಗಳನ್ನೇ ದರೋಡೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ
ನಾಗೇಂದ್ರ ರಾಜೀನಾಮೆ ಪಟ್ಟು, ರಾಜ್ಯಾದ್ಯಂತ ಪ್ರತಿಭಟನೆಗೂ ಬಿಜೆಪಿ ಪ್ಲ್ಯಾನ್
ನಾಗೇಂದ್ರ ರಾಜೀನಾಮೆ ಪಟ್ಟು, ರಾಜ್ಯಾದ್ಯಂತ ಪ್ರತಿಭಟನೆಗೂ ಬಿಜೆಪಿ ಪ್ಲ್ಯಾನ್