
ಸಾಮಾನ್ಯವಾಗಿ ವ್ಯಕ್ತಿಯ ಭವಿಷ್ಯ, ಆತನ ಗುಣಸ್ವಭಾವಗಳನ್ನು ಹಸ್ತ್ರಶಾಸ್ತ್ರ, ಜ್ಯೋತಿಷ್ಯಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರದ ಮೂಲಕ ತಿಳಿಯಬಹುದಾಗಿದೆ. ಇದರ ಹೊರತಾಗಿ ಕೂದಲು, ಪಾದ, ಕೈ ಬೆರಳು, ಮೂಗಿನ ಆಕಾರ ಹೇಗಿದೆ ಎಂಬುದರ ಮೇಲೂ ವ್ಯಕ್ತಿಯ ರಹಸ್ಯ ಗುಣ ಸ್ವಭಾವಗಳನ್ನು (Personality) ತಿಳಿಯಬಹುದಾಗಿದೆ. ಪ್ರತಿಯೊಬ್ಬರ ದೇಹಕಾರವೂ ಭಿನ್ನವಾಗಿರುತ್ತವೆ. ಉದಾಹರಣೆಗೆ ಕೆಲವರ ಕಿವಿ ದೊಡ್ಡದಾಗಿದ್ದರೆ, ಇನ್ನೂ ಕೆಲವರ ಕಿವಿ ಆಕಾರದಲ್ಲಿ ಸಣ್ಣದಾಗಿರುತ್ತದೆ. ಈ ಕಿವಿಯ ಆಕಾರದಿಂದಲೂ ಬಲು ಸುಲಭವಾಗಿ ನಿಮ್ಮ ವ್ಯಕ್ತಿತ್ವದ ರಹಸ್ಯವನ್ನು ತಿಳಿಯಬಹುದಂತೆ. ಹಾಗಿದ್ರೆ ಇಂದಿನ ಈ ಪರ್ಸನಾಲಿಟಿ ಟೆಸ್ಟ್‌ನಲ್ಲಿ ಕಿವಿಯ ಆಕಾರದ ಮೂಲಕ ನಿಮ್ಮ ಗುಣ ಸ್ವಭಾವ ಹೇಗಿದೆ ಎಂಬುದನ್ನು ಟೆಸ್ಟ್ ಮಾಡಿ.
ದೊಡ್ಡ ಕಿವಿ: ನಿಮ್ಮ ಕಿವಿ ಆಕಾರದಲ್ಲಿ ದೊಡ್ಡದಾಗಿದ್ದರೆ, ನೀವು ಶಾಂತ ಮತ್ತು ಮುಕ್ತ ಮನಸ್ಸಿನವರು ಎಂದರ್ಥ. ಎಂತಹ ಕಷ್ಟದ ಸಂದರ್ಭಗಳಲ್ಲಿಯೂ ಸಹ, ನೀವು ಶಾಂತ ಮತ್ತು ಸಂಯಮದಿಂದ ಇರುತ್ತೀರಿ. ಸಿಕ್ಕಾಪಟ್ಟೆ ಧೈರ್ಯಶಾಲಿಗಳಾದ ನೀವು ಜೀವನವನ್ನು ರೋಮಾಂಚನಕಾರಿ ಸಾಹಸದಂತೆ ನೋಡುತ್ತೀರಿ. ಹೆಚ್ಚಿನ ಆತ್ಮವಿಶ್ವಾಸವನ್ನು ಹೊಂದಿರುವ ನೀವು ಸತ್ಯವನ್ನು ಹೇಳಲು ಹಿಂಜರಿಯುವುದಿಲ್ಲ. ಜೀವನದ ಪ್ರತಿಯೊಂದು ವಿಷಯಗಳನ್ನು ಉತ್ಸಾಹದಿಂದ ಸ್ವೀಕರಿಸುವ ನೀವು ಒತ್ತಡ ಮತ್ತು ಚಿಂತೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಪ್ರತಿಯೊಂದು ಕ್ಷಣವನ್ನು ಆನಂದಿಸಲು ಬಯಸುವ ನೀವು ಭೂತಕಾಲದ ಬಗ್ಗೆ ಯೋಚಿಸುವವರಲ್ಲ ಅಥವಾ ವರ್ತಮಾನದಲ್ಲಿ ಸಿಲುಕಿಕೊಳ್ಳುವವರಲ್ಲ. ಎಲ್ಲವನ್ನು ಸ್ವೀಕರಿಸಿ ಸಂತೋಷದಿಂದ ಮುಂದೆ ಸಾಗುವ ಸ್ವಭಾವ ನಿಮ್ಮದು.
ಇದನ್ನೂ ಓದಿ: ನೀವು ಸ್ಟ್ರೈಟ್ ಫಾರ್ವರ್ಡ್ ವ್ಯಕ್ತಿಯೇ ಎಂಬುದನ್ನು ಈ ಚಿತ್ರವೇ ಬಹಿರಂಗಪಡಿಸುತ್ತದೆ
ಸಣ್ಣ ಕಿವಿ: ನಿಮ್ಮ ಕಿವಿ ಸಣ್ಣದಾಗಿದ್ದರೆ, ನೀವು ಚಿಂತನಶೀಲ ಮತ್ತು ಸಂಯಮದಿಂದ ಕೂಡಿದ ವ್ಯಕ್ತಿಗಳೆಂದು ಅರ್ಥ. ಸಿಕ್ಕಾಪಟ್ಟೆ ಯೋಚಿಸುವ ನೀವು ಪ್ರತಿಯೊಂದು ವಿಷಯಗಳ ಬಗ್ಗೆಯೂ ಎಚ್ಚರಿಕೆಯಿಂದ ಇರುತ್ತೀರಿ. ಅಲ್ಲದೆ ಬಲವಾದ ಸ್ವಯಂ ಪ್ರಜ್ಞೆಯನ್ನು ಹೊಂದಿರುವ ನೀವು ಇತರರಿಂದ ಅಷ್ಟು ಸುಲಭವಾಗಿ ಪ್ರಭಾವಿತರಾಗುವುದಿಲ್ಲ. ತುಂಬಾನೇ ನಾಚಿಕೆ ಸ್ವಭಾವದವರಾದ ನೀವು ಹೊಸ ಜನರೊಂದಿಗೆ ಅಷ್ಟು ಸುಲಭವಾಗಿ ಬೆರೆಯುವುದಿಲ್ಲ. ಶಿಸ್ತುಬದ್ಧವಾಗಿ ಜೀವನ ನಡೆಸುವ ನೀವು ಯಾವಾಗಲೂ ನಿಮ್ಮ ಗುರಿಗಳ ಮೇಲೆ ಗಮನ ಹರಿಸುತ್ತೀರಿ. ಗಾಸಿಪ್‌ಗಳಲ್ಲಿ ತೊಡಗುವ ಬದಲು ಅರ್ಥಪೂರ್ಣ ಸಂಭಾಷಣೆಗಳನ್ನು ನಡೆಸಲು ಮಾತ್ರ ನೀವು ಇಷ್ಟಪಡುತ್ತೀರಿ. ಜೊತೆಗೆ ನೀವು ಶಾಂತ ಮತ್ತು ಸ್ನೇಹಶೀಲ ವಾತಾವರಣದಲ್ಲಿ ಮಾತ್ರ ಇರಲು ಬಯಸುವ ವ್ಯಕ್ತಿಗಳು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ