AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ನೀವು ಸ್ಟ್ರೈಟ್‌ ಫಾರ್ವರ್ಡ್‌ ವ್ಯಕ್ತಿಯೇ ಎಂಬುದನ್ನು ಈ ಚಿತ್ರವೇ ಬಹಿರಂಗಪಡಿಸುತ್ತದೆ

ಜ್ಯೋತಿಷ್ಯಶಾಸ್ತ್ರ, ಸಂಖ್ಯಾಶಾಸ್ತ್ರದ ಮೂಲಕ ವ್ಯಕ್ತಿತ್ವ ಭವಿಷ್ಯವನ್ನು ತಿಳಿಯುವಂತೆ ವ್ಯಕ್ತಿತ್ವ ಪರೀಕ್ಷೆ ಮೂಲಕ ತಕ್ಕ ಮಟ್ಟಿಗೆ ವ್ಯಕ್ತಿಯ ಗುಣ ಸ್ವಭಾವ ಹೇಗಿದೆ ಎಂಬುದನ್ನು ತಿಳಿಯಬಹುದಾಗಿದೆ. ಇಂತಹದ್ದೊಂದು ಪರ್ಸನಾಲಿಟಿ ಟೆಸ್ಟ್‌ ಚಿತ್ರ ಹರಿದಾಡುತ್ತಿದ್ದು, ಆ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಮೊದಲು ಯಾವ ಅಂಶ ಕಾಣಿಸಿತು ಎಂಬುದರ ಆಧಾರದ ಮೇಲೆ ನೀವು ನೇರ ಸ್ವಭಾವದ ವ್ಯಕ್ತಿಯೇ, ಸಹಾನುಭೂತಿಯುಳ್ಳವರೇ, ಧೈರ್ಯಶಾಲಿಗಳೇ ಅಥವಾ ಜವಾಬ್ದಾರಿಯುತ ವ್ಯಕ್ತಿಯೇ ಎಂಬುದನ್ನು ಪರೀಕ್ಷಿಸಿ.

Personality Test: ನೀವು ಸ್ಟ್ರೈಟ್‌ ಫಾರ್ವರ್ಡ್‌ ವ್ಯಕ್ತಿಯೇ ಎಂಬುದನ್ನು ಈ ಚಿತ್ರವೇ ಬಹಿರಂಗಪಡಿಸುತ್ತದೆ
ವ್ಯಕ್ತಿತ್ವ ಪರೀಕ್ಷೆImage Credit source: Pinterest
ಮಾಲಾಶ್ರೀ ಅಂಚನ್​
|

Updated on: Nov 04, 2025 | 5:23 PM

Share

ಇತ್ತೀಚಿನ ದಿನಗಳಲ್ಲಿ ವ್ಯಕ್ತಿತ್ವ ಪರೀಕ್ಷೆಗಳು (Personality Test) ಸಿಕ್ಕಾಪಟ್ಟೆ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇವುಗಳಲ್ಲಿ ಸಾಕಷ್ಟು ವಿಧಗಳಿದ್ದು, ಪಾದದ ಆಕಾರ, ಕಣ್ಣಿನ ಆಕಾರ, ಕಣ್ಣಿನ ಬಣ್ಣ, ಮೂಗಿನ ಆಕಾರ, ತುಟಿಯ ಆಕಾರ, ಕೈಬೆರಳಿನ ಆಕಾರ ಸೇರಿದಂತೆ ದೇಹಕಾರಗಳ ಮೂಲಕ ವ್ಯಕ್ತಿತ್ವ ನಡವಳಿಕೆ, ಭಾವನಾತ್ಮಕ ನಿಲುವುಗಳ ಬಗ್ಗೆ ತಿಳಿದುಕೊಳ್ಳಬಹುದಾದೆ. ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಟೆಸ್ಟ್‌ ಕೂಡ ವ್ಯಕ್ತಿತ್ವ ಪರೀಕ್ಷೆಯ ಒಂದು ವಿಧವಾಗಿದ್ದು, ಮನೋವಿಜ್ಞಾನದ  ಆಧಾರಿತವಾಗಿರುವ ಈ ಚಿತ್ರಗಳಲ್ಲಿ ನೀವು ಮೊದಲು ಯಾವುದನ್ನು ನೋಡುತ್ತೀರಿ ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವದ ರಹಸ್ಯವನ್ನು ತಿಳಿಯಬಹುದು. ಇಲ್ಲೊಂದು ಅಂತಹದ್ದೇ ಚಿತ್ರ ವೈರಲ್‌ ಆಗಿದ್ದು, ಆ ಚಿತ್ರದಲ್ಲಿ ಪುರುಷ, ಮಹಿಳೆ, ಸಿಂಹ ಮತ್ತು ಆನೆಯಿದ್ದು, ಇದರಲ್ಲಿ ನಿಮ್ಮ ಕಣ್ಣಿಗೆ ಮೊದಲು ಕಾಣಿಸಿದ್ದೇನು ಎಂಬುದರ ಮೇಲೆ ನೀವೆಂಥಾ ವ್ಯಕ್ತಿ ಎಂಬುದುನ್ನು ತಿಳಿಸುತ್ತದೆ.

ನಿಮ್ಮ ವ್ಯಕ್ತಿತ್ವದ ರಹಸ್ಯವನ್ನು ತಿಳಿಸುವ ಚಿತ್ರವಿದು:

ಮಹಿಳೆ: ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಮಹಿಳೆಯನ್ನು ಗಮನಿಸಿದರೆ, ನೀವು ಸಹಾನುಭೂತಿಯುಳ್ಳ ವ್ಯಕ್ತಿ ಎಂದರ್ಥ. ಮುಕ್ತ ಮನಸ್ಸಿನ ವ್ಯಕ್ತಿಗಳಾದ ನೀವು ಇತರರ ಭಾವನೆಗಳಿಗೂ ಸಾಕಷ್ಟು ಬೆಲೆಯನ್ನು ಕೊಡುತ್ತೀರಿ. ಅಲ್ಲದೆ ನೀವು ಉತ್ತಮ ಸಂವಹನಕಾರರೂ ಹೌದು.

ಪುರುಷ: ಈ ನಿರ್ದಿಷ್ಟ ಚಿತ್ರದಲ್ಲಿ ನೀವು ಮೊದಲು ಪುರುಷನನ್ನು ಗಮನಿಸಿದರೆ ನೀವು ಸಿಕ್ಕಾಪಟ್ಟೆ ಆತ್ಮವಿಶ್ವಾಸವನ್ನು ಹೊಂದಿರುವ ಹಾಗೂ ನೇರ ಸ್ವಭಾವದ ವ್ಯಕ್ತಿ ಎಂದರ್ಥ. ನೀವು ನಿಮ್ಮ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು ಹೆದರುವುದಿಲ್ಲ. ಜೊತೆಗೆ ಎಲ್ಲಾ ವಿಷಯಗಳ ಬಗ್ಗೆಯೂ ನೇರವಾಗಿಯೇ ಮಾತನಾಡುವ ವ್ಯಕ್ತಿಗಳು ನೀವು.

ಆನೆ: ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಮೊದಲು ನಿಮಗೆ ಆನೆ ಕಾಣಿಸಿದರೆ ನೀವು ಜವಾಬ್ದಾರಿಯುತ ವ್ಯಕ್ತಿಗಳು ಎಂದರ್ಥ. ನಿಷ್ಠಾವಂತರಾಗಿರುವ ನೀವು ಇತತರ ಬಗ್ಗೆ ಸಾಕಷ್ಟು ಕಾಳಜಿಯನ್ನು ಹೊಂದಿರುತ್ತೀರಿ. ಸತ್ಯವಂತ ಹಾಗೂ ನಿಷ್ಠಾವಂತರಾದ ನೀವು ಇತರರಿಗೆ ಸಹಾಯ ಮಾಡಲು ಸದಾ ಮುಂದಿರುತ್ತೀರಿ.

ಇದನ್ನೂ ಓದಿ: ನಿಮ್ಮ ನಿಗೂಢ ಗುಣ ಸ್ವಭಾವ ಹೇಗಿದೆ ಎಂಬುದನ್ನು ಬಹಿರಂಗಪಡಿಸುತ್ತೆ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ

ಸಿಂಹ: ಈ ನಿರ್ದಿಷ್ಟ ಚಿತ್ರದಲ್ಲಿ ನೀವು ಮೊದಲು ಸಿಂಹವನ್ನು ನೋಡಿದರೆ ನೀವು ಧೈರ್ಯಶಾಲಿ ಸ್ವಭಾವದ ವ್ಯಕ್ತಿಗಳು ಎಂದರ್ಥ. ಧೈರ್ಯಶಾಲಿಗಳಾದ ನೀವು ಯಾವಾಗಲೂ ಹೊಸ ವಿಷಯಗಳನ್ನು ಕಲಿಯುವಲ್ಲಿ ಅನ್ವೇಷಿಸುವಲ್ಲಿ ಉತ್ಸುಹಕರಾಗಿರುವ ವ್ಯಕ್ತಿಗಳು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ