AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಥೈಲ್ಯಾಂಡನ್ನು‌ “ನಗುವಿನ ನಾಡು” ಎಂದು ಕರೆಯೋದೇಕೆ ಗೊತ್ತಾ?

ಸುಮಾರು ದೇಶಗಳನ್ನು ಅವುಗಳ ಒಂದೊಂದು ವಿಶಿಷ್ಟತೆಯ ಕಾರಣದಿಂದಾಗಿ ವಿಶೇಷ ಹೆಸರುಗಳಿಂದ ಆ ದೇಶಗಳನ್ನು ಕರೆಯಲಾಗುತ್ತದೆ. ಉದಾಹರಣೆಗೆ ಫಿನ್‌ಲ್ಯಾಂಡನ್ನು ಅತ್ಯಂತ ಸಂತೋಷದ ದೇಶವೆಂದು ಕರೆದರೆ, ಜಪಾನ್‌ ದೇಶವನ್ನು ಸೂರ್ಯ ಉದಯಿಸುವ ನಾಡು ಎಂದು ಕರೆಯಾಲಾಗುತ್ತದೆ. ಅದೇ ರೀತಿ ಥೈಲ್ಯಾಂಡ್‌ ದೇಶವನ್ನು ನಗುವಿನ ನಾಡು ಎಂದು ಕರೆಯಲಾಗುತ್ತದೆ. ಅಷ್ಟಕ್ಕೂ ಈ ದೇಶವನ್ನು ಲ್ಯಾಂಡ್‌ ಆಫ್‌ ಸ್ಮೈಲ್ಸ್‌ ಎಂದು ಕರೆಯೋದೇಕೆ ಗೊತ್ತಾ? ಈ ಕುರಿತ ಇಂಟರೆಸ್ಟಿಂಗ್‌ ಮಾಹಿತಿ ಇಲ್ಲಿದೆ.

ಥೈಲ್ಯಾಂಡನ್ನು‌ “ನಗುವಿನ ನಾಡು” ಎಂದು ಕರೆಯೋದೇಕೆ ಗೊತ್ತಾ?
ಸಾಂದರ್ಭಿಕ ಚಿತ್ರ Image Credit source: Freepik
ಮಾಲಾಶ್ರೀ ಅಂಚನ್​
|

Updated on:Nov 04, 2025 | 3:36 PM

Share

ಪ್ರತಿಯೊಂದು ದೇಶವೂ ಒಂದಲ್ಲಾ ಒಂದು ವಿಶೇಷತೆಯನ್ನು ಹೊಂದಿರುತ್ತದೆ. ಈ ವಿಶಿಷ್ಟತೆಯ ಕಾರಣದಿಂದಲೇ ಕೆಲವೊಂದಿಷ್ಟು ದೇಶಗಳನ್ನು ವಿಶಿಷ್ಟ ಅಡ್ಡ  ಹೆಸರುಗಳಿಂದ ಕರೆಯಲಾಗುತ್ತದೆ. ಉದಾಹರಣೆಗೆ ನಮ್ಮ ಭಾರತವನ್ನು ವೈವಿಧ್ಯತೆಯ ದೇಶ, ವಿವಿಧತೆಯಲ್ಲಿ ಏಕತೆಯ ದೇಶ ಎಂದು ಕರೆದರೆ ಫಿನ್‌ಲ್ಯಾಂಡ್‌ ದೇಶವನ್ನು ಸಂತೋಷದ ದೇಶ, ಜಪಾನ್‌ ದೇಶವನ್ನು ಸೂರ್ಯ ಉದಯಿಸುವ ನಾಡು ಎಂದು ಕರೆಯಲಾಗುತ್ತದೆ. ಅದೇ ರೀತಿ ಪ್ರವಾಸಿಗರ ನೆಚ್ಚಿನ ದೇಶವಾದ ಥೈಲ್ಯಾಂಡನ್ನು (Thailand) ನಗುವಿನ ನಾಡು ಎಂದು ಕರೆಯಲಾಗುತ್ತದೆ. ಈ ದೇಶವನ್ನು ಲ್ಯಾಂಡ್‌ ಆಫ್‌ ಸ್ಮೈಲ್ಸ್‌ ಎಂದು ಕರೆಯೋದೇಕೆ ಗೊತ್ತಾ? ಈ ಕುರಿತ ಇಂಟರೆಸ್ಟಿಂಗ್‌ ಮಾಹಿತಿ ಇಲ್ಲಿದೆ.

ಥೈಲ್ಯಾಂಡನ್ನು ನಗುವಿನ ನಾಡು ಎಂದು ಕರೆಯೋದೇಕೆ?

ಥೈಲ್ಯಾಂಡ್‌ ದೇಶದ ಜನ ಯಾವಾಗಲೂ ಯಾವಾಗಲೂ ನಗು ನಗುತ್ತಲೇ ಇರುತ್ತಾರೆ. ಥೈಲ್ಯಾಂಡ್‌ನಲ್ಲಿ, ನಗು ಕೇವಲ ಸಂತೋಷದ ಸಂಕೇತವಲ್ಲ, ಅದು ಗೌರವ, ಸಭ್ಯತೆ, ತಾಳ್ಮೆ ಮತ್ತು ಸಾಮಾಜಿಕ ಸಾಮರಸ್ಯವನ್ನು ಮತ್ತು ವಾತ್ಸಲ್ಯವನ್ನು ತೋರಿಸುವ ಒಂದು ಮಾರ್ಗವೂ ಆಗಿದೆ. ನಗುವುದು ಸಂತೋಷದ ವಾತಾವರಣವನ್ನು ಸೃಷ್ಟಿಸುವುದು ಮಾತ್ರವಲ್ಲದೆ ಮತ್ತು ಉತ್ತಮ ಸಂಬಂಧಗಳನ್ನು ಬೆಳೆಸಲು ಸಹಾಯ ಮಾಡುತ್ತದೆ ಎಂದು ಥೈಲ್ಯಾಂಡ್ ಜನರು ನಂಬುತ್ತಾರೆ. ಅದರಲ್ಲೂ ಪ್ರವಾಸಿಗರನ್ನು ನಗು ಮೊಗದಿಂದ ಸ್ವಾಗತಿಸುತ್ತಾರೆ ಮತ್ತು ದಯೆಯಿಂದ ವರ್ತಿಸುತ್ತಾರೆ, ಉತ್ತಮ ಆತಿಥ್ಯವನ್ನೂ ನೀಡುತ್ತಾರೆ. ಈ ಕಾರಣಕ್ಕಾಗಿಯೇ ಥೈಲ್ಯಾಂಡನ್ನು ನಗುವಿನ ದೇಶ ಎಂದು ಕರೆಯುವುದು.

ಬೌದ್ಧ ಬೋಧನೆಗಳಿಂದ ಮಾರ್ಗದರ್ಶಿಸಲ್ಪಟ್ಟ ಇಲ್ಲಿನ ಜನರು ಶಾಂತವಾಗಿರುವುದು, ಸಂಘರ್ಷ, ಜಗಳಗಳನ್ನು ತಪ್ಪಿಸುವುದು ಮತ್ತು ದಯೆಯನ್ನು ಹರಡುವುದರಲ್ಲಿ ನಂಬಿಕೆಯನ್ನು ಹೊಂದಿದ್ದಾರೆ. ಜೊತೆಗೆ ಕಠಿಣ ಸಂದರ್ಭಗಳಲ್ಲಿಯೂ ಸಹ, ಸೌಮ್ಯವಾದ ನಗುವಿನಿಂದ ಪ್ರತಿಕ್ರಿಯಿಸುವುದು ಒಂದು ಸುಂದರವಾದ ಮಾರ್ಗವೆಂದು ಅವರು ಪರಿಗಣಿಸುತ್ತಾರೆ.  ಇವರು ಶಾಂತಿಯಿಂದ ಬದುಕುವುದು ಮತ್ತು ಇತರರ ಬಗ್ಗೆ ಸಹಾನುಭೂತಿ ತೋರಿಸುವುದು ಮುಂತಾದ ಬೌದ್ಧ ತತ್ವಗಳನ್ನು ಅನುಸರಿಸುತ್ತಾರೆ. ಇಲ್ಲಿನ ಜನ ಎಲ್ಲರೊಂದಿಗೂ ನಗು ಮೊಗದೊಂದಿಗೆಯೇ ಸಂವಹನ ನಡೆಸುತ್ತಾರೆ.

ಇದನ್ನೂ ಓದಿ: ಹೆಚ್ಚಿನ ಡೆನಿಮ್‌ ಜೀನ್ಸ್‌ಗಳಲ್ಲಿ ಹಳದಿ ದಾರದ ಸ್ಟಿಚಿಂಗ್ ಏಕೆ ಇರುತ್ತವೆ ಗೊತ್ತಾ?‌

ಥೈಲ್ಯಾಂಡ್‌ ದೇಶದ ಆಸಕ್ತಿದಾಯಕ ಸಂಗತಿಗಳು:

  • ಥಾಯ್ “ವಾಯ್” ಶುಭಾಶಯ: ಸಾಂಪ್ರದಾಯಿಕ ಥಾಯ್ ಶುಭಾಶಯವನ್ನು ವಾಯ್ ಎಂದು ಕರೆಯಲಾಗುತ್ತದೆ, ಇಲ್ಲಿನ ಜನ ತಲೆ ಬಾಗಿ  ಕೈಗಳನ್ನು ಜೋಡಿಸಿ ನಮಸ್ಕರಿಸಿ ಶುಭಾಶಯಗಳನ್ನು ತಿಳಿಸುತ್ತಾರೆ. ಈ ಶುಭಾಶಯವು ಥಾಯ್ ಸಂಸ್ಕೃತಿಯಲ್ಲಿ ಗೌರವ ಮತ್ತು ನಮ್ರತೆಯನ್ನು ಪ್ರತಿಬಿಂಬಿಸುತ್ತದೆ.
  • ಬೌದ್ಧ ಧರ್ಮದ ಪ್ರಭಾವ: ಥೈಲ್ಯಾಂಡ್‌ನಲ್ಲಿ ಹೆಚ್ಚಿನ ಜನರು ಬೌದ್ಧಧರ್ಮವನ್ನು ಅನುಸರಿಸುತ್ತಾರೆ, ಬೌದ್ಧ ಧರ್ಮ  ಕರುಣೆ, ಶಾಂತಿ ಮತ್ತು ಭಾವನಾತ್ಮಕ ಸಮತೋಲನವನ್ನು ಕಲಿಸುತ್ತದೆ, ನಗುವುದನ್ನು ಆಂತರಿಕ ಶಾಂತತೆಯನ್ನು ಕಾಪಾಡಿಕೊಳ್ಳಲು ಮತ್ತು ಸಕಾರಾತ್ಮಕ ಶಕ್ತಿಯನ್ನು ಹರಡಲು ಒಂದು ಮಾರ್ಗವೆಂದು ಇಲ್ಲಿನ ಜನ ಪರಿಗಣಿಸಿದ್ದಾರೆ.
  • ನಗುವುದು: ಥೈಲ್ಯಾಂಡ್‌ನಲ್ಲಿ, ನಗು ದೈನಂದಿನ ಸಂವಹನದ ಭಾಗವಾಗಿದೆ ಮತ್ತು ಇದು ಇಲ್ಲಿ  ಕೃತಜ್ಞತೆ, ಸಭ್ಯತೆ, ಕ್ಷಮೆಯಾಚನೆಯ ಭಾಗವೂ ಹೌದು.
  • ಆತಿಥ್ಯ ಮತ್ತು ಪ್ರವಾಸೋದ್ಯಮ ಸಂಸ್ಕೃತಿ: ಥೈಲ್ಯಾಂಡ್ ತನ್ನ ಸ್ನೇಹಪರ ವರ್ತನೆ, ಸಂಸ್ಕೃತಿಯಿಂದಲೇ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರನ್ನು ಸ್ವಾಗತಿಸುತ್ತದೆ. ಹೀಗೆ ಥೈಲ್ಯಾಂಡ್‌  ಸ್ನೇಹಪರ ಸ್ಥಳೀಯರು ತಮ್ಮ ಆತ್ಮೀಯ ಆತಿಥ್ಯಕ್ಕೆ ಹೆಸರುವಾಸಿಯಾಗಿದ್ದು, ಇದೇ ಕಾರಣಕ್ಕೆ ಈ ದೇಶವನ್ನು ನಗುವಿನ ನಾಡು ಎಂದು ಕರೆಯುವುದು.
  • ಆತ್ಮೀಯ ಸ್ವಾಗತಗಳಿಗೆ ಹೆಸರುವಾಸಿಯಾದ ನಗರಗಳು: ಬ್ಯಾಂಕಾಕ್, ಫುಕೆಟ್, ಚಿಯಾಂಗ್ ಮಾಯ್, ಪಟ್ಟಾಯ ಮತ್ತು ಕ್ರಾಬಿಯಂತಹ ತಾಣಗಳು ತಮ್ಮ ನಿಸರ್ಗ ಸೌಂದರ್ಯ ಮತ್ತು ಬಗೆ ಬಗೆಯ ಆಹಾರಕ್ಕಾಗಿ ಮಾತ್ರವಲ್ಲದೆ ಪ್ರವಾಸಿಗರನ್ನು ನಿಜವಾದ ನಗುಮುಖದಿಂದ ಸ್ವಾಗತಿಸುವ ಸ್ಥಳೀಯರ ಸ್ನೇಹಪರ ಸ್ವಭಾವಕ್ಕೂ ಜನಪ್ರಿಯವಾಗಿವೆ. ಜೊತೆಗೆ ಈ ದೇಶ ಕೈಗೆಟಕುವ ದರದ ಪ್ರವಾಸದ ಕಾರಣಕ್ಕೂ ಹೆಸರುವಾಸಿಯಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:34 pm, Tue, 4 November 25

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಮುಳುಗಿಸಿದ ಕೊಳಚೆ ನೀರು
ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಮುಳುಗಿಸಿದ ಕೊಳಚೆ ನೀರು
ಮೊಬೈಲ್ ನಂಬರ್​ನ ಕೊನೇ 2 ಸಂಖ್ಯೆ ಯಾವುದಿರಬೇಕು?
ಮೊಬೈಲ್ ನಂಬರ್​ನ ಕೊನೇ 2 ಸಂಖ್ಯೆ ಯಾವುದಿರಬೇಕು?
ಇಂದು ಈ ರಾಶಿಯವರ ವಿವಾಹ ವಿಚಾರದಲ್ಲಿ ಪ್ರಗತಿ
ಇಂದು ಈ ರಾಶಿಯವರ ವಿವಾಹ ವಿಚಾರದಲ್ಲಿ ಪ್ರಗತಿ
ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿ ಮುಂದೆ ಕಣ್ಣೀರಿಟ್ಟ ತಾಯಿ
ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿ ಮುಂದೆ ಕಣ್ಣೀರಿಟ್ಟ ತಾಯಿ
ಮೃತರ ಸಂಖ್ಯೆ 35ಕ್ಕೆ ಏರಿಕೆ: ಫಿಲಿಫೈನ್ ಭೂಕಂಪದ ಕರಾಳತೆ ಹೇಗಿತ್ತು ನೋಡಿ
ಮೃತರ ಸಂಖ್ಯೆ 35ಕ್ಕೆ ಏರಿಕೆ: ಫಿಲಿಫೈನ್ ಭೂಕಂಪದ ಕರಾಳತೆ ಹೇಗಿತ್ತು ನೋಡಿ
ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಚುನಾವಣೆಯಲ್ಲಿ ನಿಲ್ಲದೇ ಸಿಎಂ ಆದ ಕಥೆ: ಇದು ‘ಕಾಮನ್ ಮ್ಯಾನ್’ ಸಸ್ಪೆನ್ಸ್
ಚುನಾವಣೆಯಲ್ಲಿ ನಿಲ್ಲದೇ ಸಿಎಂ ಆದ ಕಥೆ: ಇದು ‘ಕಾಮನ್ ಮ್ಯಾನ್’ ಸಸ್ಪೆನ್ಸ್
ಕೆನಡಾದಲ್ಲಿ ಭಾರತೀಯ ಯುವಕರ ಬಳಿ ಸಹಾಯ ಕೇಳಿದ ಯುವತಿ
ಕೆನಡಾದಲ್ಲಿ ಭಾರತೀಯ ಯುವಕರ ಬಳಿ ಸಹಾಯ ಕೇಳಿದ ಯುವತಿ
ಟ್ರಕ್​ಗೆ ಡಿಕ್ಕಿಯಾಗಿ KSRTC ಬಸ್ ನುಜ್ಜುಗುಜ್ಜು: ತಪ್ಪಿದ ಭಾರೀ ಅನಾಹುತ
ಟ್ರಕ್​ಗೆ ಡಿಕ್ಕಿಯಾಗಿ KSRTC ಬಸ್ ನುಜ್ಜುಗುಜ್ಜು: ತಪ್ಪಿದ ಭಾರೀ ಅನಾಹುತ