
ನಾವು ಹೇಗೆ ನಡೆದುಕೊಳ್ಳುತ್ತೇವೆ, ನಾವು ಮಾತನಾಡುವ ಶೈಲಿ, ನಮ್ಮ ಅಭ್ಯಾಸಗಳು, ನಮ್ಮ ಗುಣ ನಡತೆ ನಮ್ಮ ವ್ಯಕ್ತಿತ್ವವನ್ನು (Personality) ಅನಾವರಣಗೊಳಿಸುತ್ತದೆ. ಈ ಎಲ್ಲಾ ಗುಣ ನಡತೆಯ (Manners) ಆಧಾರದ ಮೇಲೆ ಜನ ನಮ್ಮ ವ್ಯಕ್ತಿತ್ವ ಎಂತಹದ್ದು ಎಂಬುದನ್ನು ನಿರ್ಧರಿಸುತ್ತಾರೆ. ಇಷ್ಟೇ ಅಲ್ಲದೆ ನಮ್ಮ ಜನ್ಮ ದಿನ (birth day), ಜನ್ಮ ದಿನಾಂಕ, ಕಣ್ಣಿನ ಬಣ್ಣ(eye color), ಕಿವಿ (ear) ಮೂಗು (nose) ಕಣ್ಣಿನ (eye) ಆಕಾರ, ದೇಹದ ಆಕಾರ, ನಡೆಯುವ ಶೈಲಿ ಇತ್ಯಾದಿ ಅಂಶಗಳ ಮೂಲಕವೂ ನಮ್ಮ ನಿಗೂಢ ವ್ಯಕ್ತಿತ್ವವನ್ನು (hidden personality) ತಿಳಿಯಬಹುದಾಗಿದೆ. ವ್ಯಕ್ತಿತ್ವ ಪರೀಕ್ಷೆಯ ಇಂತಹ ಸಾಕಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇರುತ್ತವೆ. ನೀವು ದೇಹಾಕಾರ, ಕಣ್ಣಿನ ಬಣ್ಣದ ಮೂಲಕ ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿದಿರುತ್ತೀರಿ ಅಲ್ವಾ. ಅದೇ ರೀತಿ ನಿಮ್ಮ ಕೂದಲ ಪ್ರಕಾರದ (hair type) ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ಎಂತಹದ್ದು ಎಂಬುದನ್ನು ಪರೀಕ್ಷಿಸಿ.
ನಿಮ್ಮ ವೇವಿ ಹೇರ್ ಆಗಿದ್ರೆ ನೀವು ಏನೇ ಬಂದರೂ ಬರಲಿ, ನಾನು ಅದನ್ನು ಎದುರಿಸಿ ನಿಲ್ಲುವೆ ಎಂಬ ವ್ಯಕ್ತಿತ್ವವನ್ನು ಹೊಂದಿದವರಾಗಿರುತ್ತೀರಿ. ಈ ನಿಮ್ಮ ಗುಣ ನೋವು ಮತ್ತು ವಿಷಾದಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ. ನೀವು ಗುರಿ ಆಧಾರಿತ ಮನಸ್ಥಿತಿಯನ್ನು ಹೊಂದಿರುವವರಾಗಿದ್ದು, ನಿಮ್ಮ ಗುರಿಗಳಿಗೆ ಅಡ್ಡಿಯಾಗುವ ಪ್ರತಿಯೊಂದು ಅಂಶಗಳನ್ನು ನೀವು ತ್ಯಜಿಸುತ್ತೀರಿ, ಅದು ಸಂಬಂಧವೇ ಆಗಿದ್ದರೂ ಸರಿ. ನೀವು ನಿಮ್ಮ ಜೀವನವನ್ನು ಸಂತೋಷದಿಂದ ಮತ್ತು ಯಾವುದೇ ಒತ್ತಡವಿಲ್ಲದೆ ಬದುಕಲು ಇಷ್ಟಪಡುತ್ತೀರಿ. ನಿರ್ಭಯವಾಗಿ ಸ್ವತಂತ್ರ್ಯವಾಗಿ ಜೀವಿಸಲು ಬಯಸುವ ನೀವು ಏಕಾಂತತೆಗೆ ಹೆಚ್ಚಿನ ಮಹತ್ವವನ್ನು ನೀಡುವವರಾಗಿರುತ್ತೀರಿ.
ಇದನ್ನೂ ಓದಿ: ಬೇಸಿಗೆಯಲ್ಲಿ ಬಾಯಾರಿಕೆ ತಣಿಸಿ, ಶಕ್ತಿ ನೀಡುವ ಸಿಂಪಲ್ ಸ್ಮೂಥಿ ರೆಸಿಪಿ ಇಲ್ಲಿದೆ! ನೀವೂ ಟ್ರೈ ಮಾಡಿ ನೋಡಿ
ಗುಂಗುರು ಕೂದಲಿನ ಜನರು ಉತ್ಸಾಹಭರಿತ, ಚೈತನ್ಯ, ಮತ್ತು ತಮಾಷೆಯ ಸ್ವಭಾವವನ್ನು ಪ್ರತಿಬಿಂಬಿಸುವ ವ್ಯಕ್ತಿತ್ವದವರಾಗಿರುತ್ತಾರೆ. ಕೆಲವರಿಗೆ ಈ ನಿಮ್ಮ ಸ್ವಭಾವ ನಾಟಕೀಯದಂತೆ ಭಾಸವಾಗಬಹುದು. ಯಾವಾಗಲೂ ನಿಮಗಾಗಿ ವಕಾಲತ್ತು ವಹಿಸುವ ನೀವು ಯಾವುದೇ ವಿಷಯದ ಬಗ್ಗೆ ತ್ವರಿತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ ಮತ್ತು ನಿಮ್ಮ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸುತ್ತೀರಿ. ಅಷ್ಟೇ ಅಲ್ಲದೆ ನಿಮಗೆ ಕ್ರಿಯಾತ್ಮಕ ನಾಯಕತ್ವ ಗುಣವೂ ಇದೆ. ಜೊತೆಗೆ ನೀವು ಸುಲಭವಾಗಿ ಸ್ನೇಹಿತರನ್ನು ಮಾಡಿಕೊಳ್ಳುತ್ತೀರಿ. ಆದರೆ ಪ್ರೀತಿಯ ವಿಷಯಕ್ಕೆ ಬಂದಾಗ, ನೀವು ಬಹಳ ಚಿಂತನಶೀಲವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವವರಾಗಿರುತ್ತೀರಿ. ಮುಖ್ಯವಾಗಿ ಹಿಂದೊಂದು ಮುಂದೊಂದು ಮಾತನಾಡುವ ಎರಡು ಮುಖದ ಜನರನ್ನು ನೀವು ಇಷ್ಟಪಡುವುದಿಲ್ಲ.
ನೇರ ಕೂದಲನ್ನು ಹೊಂದಿರುವ ಜನ ಯಾವಾಗಲೂ ತಮ್ಮ ಗುರಿಗಳ ಕಡೆಗೆ ಗಮನವನ್ನು ಕೇಂದ್ರೀಕರಿಸುವವರಾಗಿರುತ್ತಾರೆ. ಸವಾಲುಗಳನ್ನು ಹೇಗೆ ಎದುರಿಸಬೇಕು ಎಂದು ತಿಳಿದಿರುವ ಇವರು ಅಡೆತಡೆಗಳನ್ನು ದಾಟಿ, ಜನರು ಅಸಾಧ್ಯವೆಂದು ಪರಿಗಣಿಸುವ ಕೆಲಸವನ್ನು ಸಹ ಜಯಿಸುವ ವ್ಯಕ್ತಿತ್ವದವರಾಗಿರುತ್ತಾರೆ. ಅಷ್ಟೇ ಅಲ್ಲದೆ ಇವರು ಸಂಘಟಿತ, ಶಿಸ್ತುಬದ್ಧ ಮತ್ತು ಗುರಿ ಆಧಾರಿತ ಜೀವನವನ್ನು ನಡೆಸುವವರಾಗಿರುತ್ತಾರೆ. ಮತ್ತು ಆಕರ್ಷಕ ಹಾಗೂ ಶಾಂತ ಸ್ವಭಾವದ ವ್ಯಕ್ತಿಗಳಾಗಿರುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ