ಬೇಸಿಗೆಯಲ್ಲಿ ಬಾಯಾರಿಕೆ ತಣಿಸಿ, ಶಕ್ತಿ ನೀಡುವ ಸಿಂಪಲ್ ಸ್ಮೂಥಿ ರೆಸಿಪಿ ಇಲ್ಲಿದೆ! ನೀವೂ ಟ್ರೈ ಮಾಡಿ ನೋಡಿ
ಬೇಸಿಗೆಯ ಶಾಖದಿಂದ ದೇಹ ದಣಿದು, ಆಯಾಸಗೊಳ್ಳುವುದು ಸಾಮಾನ್ಯ. ಈ ಸಮಯದಲ್ಲಿ ಉಂಟಾಗುವ ಬಾಯಾರಿಕೆಯನ್ನು ತಣಿಸುವುದರ ಜೊತೆಗೆ ನಮ್ಮ ದೇಹಕ್ಕೂ ಶಕ್ತಿ ನೀಡುವಂತಹ ಸ್ಮೂಥಿಗಳನ್ನು ಕುಡಿಯಲು ಬೇಡ ಎನ್ನುವ ಮನಸ್ಸು ಯಾರಿಗಿದೆ? ಆದರೆ ಪ್ರತಿನಿತ್ಯವೂ ಒಂದೇ ಬಗೆಯ ಜ್ಯೂಸ್ ಅಥವಾ ಸ್ಮೂಥಿ ಕುಡಿಯಲು ಇಷ್ಟವಾಗುವುದಿಲ್ಲ. ಪದೇ ಪದೇ ಕುಡಿದರೆ ಇಷ್ಟವಾಗಿದ್ದ ಆಹಾರ ಕಷ್ಟವಾಗುತ್ತದೆ. ಅದು ಮನುಷ್ಯನ ಸಹಜ ಗುಣ. ಹಾಗಾಗಿ ಸರಳವಾಗಿ ಮಾಡಿಕೊಳ್ಳಬಹುದಾದ ಸ್ಮೂಥಿ ಅಥವಾ ಜ್ಯೂಸ್ ರೆಸಿಪಿ ಸಿಕ್ಕರೆ ಟ್ರೈ ಮಾಡಬಹುದು ಅಲ್ಲವೇ? ಅಂತವರಿಗಾಗಿ ಸರಳವಾದ ಸ್ಮೂಥಿ ರೆಸಿಪಿ ಇಲ್ಲಿದೆ.

ಬೇಸಿಗೆ (Summer) ಬಂದರೆ ಸಾಕು ಬಾಯಾರಿಕೆ ತಣಿಸಿಕೊಳ್ಳಲು ಯಾವುದಾದರೂ ಜ್ಯೂಸ್, ಸ್ಮೂಥಿಗಳ ಕಡಿಯುವ ಬಯಕೆಯಾಗುವುದು ಸುಳ್ಳಲ್ಲ. ಅದರಲ್ಲಿಯೂ ಬೇಸಿಗೆಯ ಶಾಖದಿಂದ ದೇಹ ದಣಿದು, ಆಯಾಸಗೊಳ್ಳುತ್ತದೆ, ಹಾಗಾಗಿ ಬಾಯಾರಿಕೆಯನ್ನು ನೀಗಿಸಿಕೊಳ್ಳುವುದರ ಜೊತೆಗೆ ನಮ್ಮ ದೇಹಕ್ಕೆ ಶಕ್ತಿ ನೀಡುವ ಸ್ಮೂಥಿ (Smoothie) ಗಳ ರುಚಿ ಹೀರಲು ಬಹಳ ಖುಷಿಯಾಗುತ್ತದೆ. ಏಕೆಂದರೆ ಗಂಟಲನ್ನು ತಂಪು ಮಾಡುವುದರ ಜೊತೆಗೆ ದೇಹಕ್ಕೆ ಶಕ್ತಿ ನೀಡುವುದಾದರೆ ಬೇಡ ಎನ್ನುವ ಮನಸ್ಸು ಯಾರಿಗಿರುತ್ತದೆ? ಆದರೆ ಪ್ರತಿನಿತ್ಯ ಒಂದೇ ರೀತಿಯ ಜ್ಯೂಸ್ ಕುಡಿಯಲು ನಮ್ಮ ಬಾಯಿ ಮತ್ತು ಮನಸ್ಸು ಎರಡೂ ಒಪ್ಪುವುದಿಲ್ಲ. ಹಾಗಾಗಿ ಮನೆಯಲ್ಲಿಯೇ ಇರುವ, ಅದರಲ್ಲಿಯೂ ಸರಳವಾಗಿ ಮಾಡಿಕೊಳ್ಳಬಹುದಾದ ಸ್ಮೂಥಿ ಅಥವಾ ಜ್ಯೂಸ್ ರೆಸಿಪಿ ಸಿಕ್ಕರೆ ಟ್ರೈ ಮಾಡಿ ಬಿಡೋಣ ಎನಿಸುತ್ತದೆ. ಅಂತಹದ್ದೇ ಬಾಯಿಯ ರುಚಿ ಹೆಚ್ಚಿಸುವ, ಸರಳವಾದ ಸ್ಮೂಥಿ ರೆಸಿಪಿ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು:
6- 7 ಬಾದಾಮಿ 6- 7 ಗೋಡಂಬಿ 10 ಪಿಸ್ತಾ 3 ಖರ್ಜೂರ 10 ಒಣದ್ರಾಕ್ಷಿ 10- 12 ಎಳೆ ಕೇಸರಿ 1 ಕಪ್ ಹಾಲು 1 ಸೇಬು, (ಸಿಪ್ಪೆ ಸುಲಿದು ಕತ್ತರಿಸಿ ಇಟ್ಟುಕೊಂಡಿದ್ದು)
ಮಾಡುವ ವಿಧಾನ:
ಒಂದು ಬೌಲ್ ನಲ್ಲಿ, ಮೇಲೆ ಹೇಳಿರುವ ಪ್ರಮಾಣದಲ್ಲಿ ಬಾದಾಮಿ, ಗೋಡಂಬಿ, ಪಿಸ್ತಾ, ಖರ್ಜೂರ, ಒಣದ್ರಾಕ್ಷಿ, ಕೇಸರಿಯನ್ನು ಹಾಲಿನೊಂದಿಗೆ ಅರ್ಧಗಂಟೆ ನೆನೆಯಲು ಬಿಡಿ. ಇಲ್ಲಿ ಹೇಳಿರುವ ಡ್ರೈ ಫ್ರೂಟ್ಸ್ ಗಳನ್ನು ಹೊರತು ಪಡಿಸಿ ನಿಮಗೆ ಅಗತ್ಯವಿರುವ ಡ್ರೈ ಫ್ರೂಟ್ಸ್ ಗಳನ್ನು ಸೇರಿಸಿಕೊಳ್ಳಬಹುದು. ಬಳಿಕ ಹಾಲಿನಲ್ಲಿ ಚೆನ್ನಾಗಿ ನೆನೆದ ಡ್ರೈ ಫ್ರೂಟ್ಸ್ ಗಳನ್ನು ಒಂದು ಮಿಕ್ಸಿ ಜಾರ್ ಗೆ ಸೇರಿಸಿ. ಬಳಿಕ ಅದಕ್ಕೆ ಕತ್ತರಿಸಿ ಇಟ್ಟಂತಹ ಸೇಬುವನ್ನು ಸೇರಿಸಿಕೊಳ್ಳಿ. ಸೇಬು ಬದಲಿಗೆ ಬಾಳೆ ಹಣ್ಣುಗಳನ್ನು ಕೂಡ ಹಾಕಿಕೊಳ್ಳಬಹುದು. ಬಳಿಕ ಇದನ್ನು ಮಿಕ್ಸಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ, ಬೇಕಾದಲ್ಲಿ ನಿಮಗಿಷ್ಟವಾದ ಡ್ರೈ ಫ್ರೂಟ್ಸ್ ಗಳನ್ನು ಸೇರಿಸಿಕೊಂಡು ಕುಡಿಯಬಹುದು ಇದು ಬಾಯಾರಿಕೆ ತಣಿಸುವುದಲ್ಲದೆ ಬೇಸಿಗೆಯಲ್ಲಿ ಕಂಡು ಬರುವ ದಣಿವನ್ನು ಕೂಡ ನಿವಾರಿಸುತ್ತದೆ. ಸೇಬು ಅಥವಾ ಬಾಳೆಹಣ್ಣು ಎರಡು ಇಷ್ಟವಿಲ್ಲದವರು ಬೇರೆ ಹಣ್ಣುಗಳನ್ನು ಬೆರೆಸಿಕೊಂಡು ಸಿಂಪಲ್ ಸ್ಮೂಥಿಯನ್ನು ತಯಾರಿಸಿಕೊಳ್ಳಬಹುದು.
ಇದನ್ನೂ ಓದಿ: ರಾಮನವಮಿ ಹಬ್ಬಕ್ಕೆ ಸುಲಭವಾಗಿ ಮಾಡಿ ಕ್ಯಾರೆಟ್ ಪಾಯಸ
ಕೆಲವರಿಗೆ ಡ್ರೈ ಫ್ರೂಟ್ಸ್ ಗಳ ಸೇವನೆ ದೇಹಕ್ಕೆ ಆಗಿಬರುವುದಿಲ್ಲ ಅಂತವರು ವೈದ್ಯರ ಸಲಹೆ ಪಡೆದುಕೊಂಡು ಇದನ್ನು ಟ್ರೈ ಮಾಡಬಹುದು. ಇದನ್ನು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಎಲ್ಲರೂ ಸೇವನೆ ಮಾಡಬಹುದು. ಗರ್ಭಿಣಿಯರೂ ಕೂಡ ಇದನ್ನು ನಿಯಮಿತವಾಗಿ ಸೇವನೆ ಮಾಡಬಹುದು ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಇರುವುದಿಲ್ಲ. ಈ ರೆಸಿಪಿಯನ್ನು ನಿಕಿತಾ ಎನ್ನುವವರು ತಮ್ಮ ಇನ್ಸ್ಟಾ (nikiiceipe) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ