Personality Test : ನಾಲಿಗೆಯ ಬಣ್ಣದಿಂದಲೇ ನಿಮ್ಮ ವ್ಯಕ್ತಿತ್ವ ತಿಳಿಯುತ್ತೆ, ನಿಮ್ಮ ನಾಲಿಗೆ ಬಣ್ಣ ಯಾವುದು?

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 23, 2025 | 11:25 AM

ಒಬ್ಬ ವ್ಯಕ್ತಿಯು ಅತಿಯಾಗಿ ಮಾತನಾಡಿದರೆ ನಾಲಿಗೆ ಹೆಚ್ಚು ಹರಿಬಿಡಬೇಡ ಹಿಡಿತದಲ್ಲಿರಲಿ ಎಂದು ಬುದ್ಧಿ ಹೇಳುತ್ತೇವೆ. ಈ ನಾಲಿಗೆಯು ಕೇವಲ ತಿನ್ನುವ ಆಹಾರದ ರುಚಿಯನ್ನು ಮಾತ್ರ ತಿಳಿಸುವುದಲ್ಲ, ನಾಲಿಗೆಯ ಬಣ್ಣದಿಂದ ವ್ಯಕ್ತಿಯ ನಿಜವಾದ ಗುಣಸ್ವಭಾವ ಹಾಗೂ ವ್ಯಕ್ತಿತ್ವ ತಿಳಿಯಬಹುದು. ಒಬ್ಬ ವ್ಯಕ್ತಿಯ ನಾಲಿಗೆಯೂ ಯಾವ ಬಣ್ಣದಲ್ಲಿದೆ ಎನ್ನುವ ಆಧಾರದ ಮೇಲೆ ಆ ವ್ಯಕ್ತಿಯ ಅಸಲಿ ಗುಣವನ್ನು ತಿಳಿಯಬಹುದಂತೆ, ಹಾಗಾದ್ರೆ ಆ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

Personality Test : ನಾಲಿಗೆಯ ಬಣ್ಣದಿಂದಲೇ ನಿಮ್ಮ ವ್ಯಕ್ತಿತ್ವ ತಿಳಿಯುತ್ತೆ, ನಿಮ್ಮ ನಾಲಿಗೆ ಬಣ್ಣ ಯಾವುದು?
ಸಾಂದರ್ಭಿಕ ಚಿತ್ರ
Follow us on

ಈ ಜಗತ್ತಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಒಂದೊಂದು ರೀತಿಯ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಹೀಗಾಗಿ ಎಲ್ಲರೂ ಒಂದೇ ರೀತಿಯ ವ್ಯಕ್ತಿತ್ವ ಹೊಂದಿರಲು ಸಾಧ್ಯವಿಲ್ಲ. ನಿಮ್ಮ ಸಸುತ್ತಮುತ್ತಲಿರುವ ವ್ಯಕ್ತಿ ಹೇಗೆಂದು ತಿಳಿಯಲು ಆತನ ಜೊತೆಗೆ ಸ್ವಲ್ಪ ಹೊತ್ತು ಬೆರೆತರೆ ಸಾಕು. ಅದಲ್ಲದೇ, ಆ ವ್ಯಕ್ತಿಯ ದೇಹದ ಅಂಗಾಂಗಳ ಆಕಾರದ ಮೇಲೆ ವ್ಯಕ್ತಿತ್ವವನ್ನು ತಿಳಿಯಬಹುದಂತೆ. ಕಣ್ಣು, ಮೂಗು, ಹುಬ್ಬು, ಕಿವಿ, ನಾಲಿಗೆ ಹೀಗೆ ದೇಹದ ಪ್ರತಿಯೊಂದು ಅಂಗಗಳು ಕೂಡ ವ್ಯಕ್ತಿತ್ವ, ಗುಣವನ್ನು ರಿವೀಲ್ ಮಾಡುತ್ತದೆ. ಹೀಗಾಗಿ ವ್ಯಕ್ತಿಯ ನಾಲಿಗೆ ಬಣ್ಣದಿಂದಲೇ ಆ ವ್ಯಕ್ತಿಯಲ್ಲಿ ಈ ರೀತಿ ಗುಣವಿದು ಹೇಳಬಹುದು.

  • ನಾಲಿಗೆ ಕಪ್ಪಾಗಿರುವವರು : ಕೆಲವರ ನಾಲಿಗೆ ಕಪ್ಪಾಗಿರುತ್ತದೆ. ಅಂತಹ ವ್ಯಕ್ತಿ ಗಳು ತಾವು ಮಾಡುವ ಕೆಲಸದಲ್ಲಿ ಹೆಚ್ಚು ಅಡೆತಡೆ ಎದುರಿಸುತ್ತಾರೆ. ಸಾಕಷ್ಟು ಶ್ರಮ ವಹಿಸಿ ಕೆಲಸ ಮಾಡುವ ವ್ಯಕ್ತಿಗಳಾಗಿದ್ದು, ದೀರ್ಘಕಾಲದವರೆಗೆ ಕೆಲಸ ಮಾಡುವುದರಿಂದ ಇವರಿಗೆ ಸಾಕಷ್ಟು ಸಮಸ್ಯೆಗಳು ಎದುರಾಗುವುದೇ ಹೆಚ್ಚು ಎನ್ನಬಹುದು. ಯಾವುದೇ ಕೆಲಸಕ್ಕೆ ಕೈಹಾಕಿದರೂ ಅದನ್ನು ಅರ್ಧದಲ್ಲೇ ಕೈ ಬಿಡುತ್ತಾರೆ.
  • ನಾಲಿಗೆ ಮೇಲೆ ಮಚ್ಚೆ ಹೊಂದಿರುವವರು : ಕೆಲವರಿಗೆ ನಾಲಿಗೆ ಮೇಲೆ ಮಚ್ಚೆಯಿರುತ್ತದೆ. ಈ ವ್ಯಕ್ತಿಗಳು ಉತ್ತಮ ವಾಗ್ಮಿಗಳಾಗಿದ್ದು ಮಾತಿನಿಂದಲೇ ಎಲ್ಲರನ್ನು ಮೋಡಿ ಮಾಡುವ ಗುಣ ಹೊಂದಿರುತ್ತಾರೆ. ಉತ್ತಮ ಮಾತುಗಾರರಾಗಿರುವ ಕಾರಣ ರಾಜಕೀಯ ರಂಗದಲ್ಲಿ ಯಶಸ್ಸುಗಳಿಸುತ್ತಾರೆ ಈ ವ್ಯಕ್ತಿಗಳಲ್ಲಿ ಆತ್ಮವಿಶ್ವಾಸ ಅಧಿಕವಾಗಿದ್ದು, ಆದರೆ ಹೆಚ್ಚಿನ ಸಂದರ್ಭದಲ್ಲಿ ಅಸಡ್ಡೆ ಭಾವನೆ ತೋರುತ್ತಾರೆ. ಕೆಲವೊಮ್ಮೆ ಆತುರದಿಂದ ಕೈಗೊಳ್ಳುವ ನಿರ್ಧಾರದಿಂದಲೇ ತೊಂದರೆಗೆ ಸಿಲುಕಿ ಕೊಳ್ಳುತ್ತಾರೆ.
  • ನಾಲಿಗೆ ವಿವಿಧ ಬಣ್ಣದಲ್ಲಿರುವವರು : ಕೆಲವರ ನಾಲಿಗೆ ವಿವಿಧ ಬಣ್ಣದಲ್ಲಿರುತ್ತದೆ. ಅಂತಹ ವ್ಯಕ್ತಿಗಳು ಕೆಟ್ಟವರ ಸಹವಾಸಕ್ಕೆ ಬೀಳುವುದೇ ಹೆಚ್ಚು. ಉದ್ಯೋಗ ಸ್ಥಳದಲ್ಲಿರುವ ನಿಯಮಗಳನ್ನು ಪಾಲಿಸುವುದಿಲ್ಲ. ಹೀಗಾಗಿ ಇವರು ನಿಯಮಗಳನ್ನು ಉಲ್ಲಂಘಿಸುವುದರಲ್ಲಿ ನಿಪುಣರೆನ್ನಬಹುದು. ಈ ವ್ಯಕ್ತಿಗಳಿಗೆ ಆರೋಗ್ಯಕ್ಕೆ ಆಗಾಗ ಕೈಕೊಡುತ್ತಿರುತ್ತದೆ.
  • ನಾಲಿಗೆ ಕೆಂಪಾಗಿರುವವರು : ನಾಲಿಗೆ ಕೆಂಪಾಗಿದ್ದು ತುಂಬಾ ತೆಳ್ಳಗೆ ಇರುವ ಜನರು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಸಾಧಿಸುತ್ತಾರೆ. ಈ ವ್ಯಕ್ತಿಗಳು ತಮ್ಮ ಶ್ರಮದಿಂದಲೇ ಉನ್ನತ ಸ್ಥಾನಕ್ಕೆ ಏರುತ್ತಾರೆ. ಈ ವ್ಯಕ್ತಿಗಳು ತಮ್ಮ ವ್ಯಕ್ತಿತ್ವದಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. ಈ ವ್ಯಕ್ತಿಗಳು ಸ್ನೇಹ ಬಳಗ ಹಾಗೂ ಹಿತೈಷಿಗಳು ಹೆಚ್ಚಾಗಿರುತ್ತಾರೆ. ಈ ವ್ಯಕ್ತಿಗಳ ಆರೋಗ್ಯವು ಕೂಡ ಉತ್ತಮವಾಗಿರುತ್ತದೆ.
  • ಹಳದಿ ಬಣ್ಣದ ನಾಲಿಗೆ ಹೊಂದಿರುವವರು : ಕೆಲವರ ನಾಲಿಗೆ ಹಳದಿ ಬಣ್ಣದಲ್ಲಿರುತ್ತದೆ. ಈ ರೀತಿ ಬಣ್ಣದಲ್ಲಿದ್ದರೆ ಮಂಗಳಕರವೆಂದು ಹೇಳಲಾಗುತ್ತದೆ. ನಾಲಿಗೆಯೂ ಹಳದಿ ಬಣ್ಣದಲ್ಲಿದ್ದರೆ ಕಳಪೆ ಆರೋಗ್ಯ ಸ್ಥಿತಿಯನ್ನು ತೋರಿಸುತ್ತದೆ. ತಾರ್ಕಿಕ ಶಕ್ತಿಯೂ ದುರ್ಬಲವಾಗಿದ್ದು, ಈ ಜನರನ್ನು ಯಾರು ಕೂಡ ಇಷ್ಟ ಪಡುವುದಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ