ಎಡ ಜೇಬಿನಲ್ಲಿ ಮೊಬೈಲ್ ಇಟ್ಟುಕೊಂಡರೆ ಹೃದಯದ ಬಡಿತಕ್ಕೆ ತೊಂದರೆಯಾಗುತ್ತಾ? ವೈದ್ಯರು ಹೇಳುವುದೇನು?

ಶರ್ಟ್‌ನ ಎಡ ಜೇಬಿನಲ್ಲಿ ಮೊಬೈಲ್ ಇಟ್ಟುಕೊಂಡರೆ ಹೃದಯದ ಬಡಿತಕ್ಕೆ ತೊಂದರೆಯಾಗುತ್ತದೆಯೇ? ಮೊಬೈಲ್‌ನ ರೇಡಿಯೊ ತರಂಗಗಳು ಆರೋಗ್ಯವಂತ ವ್ಯಕ್ತಿಗಳ ಹೃದಯದ ಲಯದ ಮೇಲೆ ಪರಿಣಾಮ ಬೀರುತ್ತವೆ ಎಂಬುದಕ್ಕೆ ಪುರಾವೆ ಇಲ್ಲ ಎಂದು ಹೃದ್ರೋಗ ತಜ್ಞರು ಹೇಳಿದ್ದಾರೆ. ಆದರೆ ಪೇಸ್‌ಮೇಕರ್‌ ಅಥವಾ ಇತರ ಹೃದಯ ಸಾಧನ ಹೊಂದಿರುವವರು ಮೊಬೈಲ್ ಇಡುವ ವಿಚಾರದಲ್ಲಿ ಮುನ್ನೆಚ್ಚರಿಕೆ ವಹಿಸಬೇಕು.

ಎಡ ಜೇಬಿನಲ್ಲಿ ಮೊಬೈಲ್ ಇಟ್ಟುಕೊಂಡರೆ ಹೃದಯದ ಬಡಿತಕ್ಕೆ ತೊಂದರೆಯಾಗುತ್ತಾ? ವೈದ್ಯರು ಹೇಳುವುದೇನು?
Phone Left Pocket
Edited By:

Updated on: Oct 02, 2026 | 9:30 AM

ಮುಖ್ಯಾಂಶಗಳು

  • ಎಡ ಜೇಬಿನಲ್ಲಿ ಮೊಬೈಲ್ ಇಟ್ಟರೆ ಹೃದಯದ ಬಡಿತ ಬದಲಾಗುತ್ತಾ?
  • ಮೊಬೈಲ್ ಕಂಪಿಸಿದಾಗ ಹೃದಯ ಬಡಿತ ಹೆಚ್ಚಾದಂತೆ ಏಕೆ ಅನಿಸುತ್ತದೆ?
  • ಪೇಸ್‌ಮೇಕರ್‌ ಇರುವವರು ಮೊಬೈಲ್‌ ಅನ್ನು ಎಲ್ಲಿ ಇಡಬಾರದು?

ಮೊಬೈಲ್ ಫೋನ್‌ (Mobile Phone) ಈಗ ನಮ್ಮ ದಿನನಿತ್ಯದ ಜೀವನದ ಅವಿಭಾಜ್ಯ ಭಾಗವಾಗಿದೆ. ಕರೆ ಮಾತನಾಡಲು, ಸಂದೇಶ ನೋಡಲು ಅಥವಾ ತಕ್ಷಣ ಮೊಬೈಲ್ ಬಳಸಲು ಅನುಕೂಲವಾಗಲಿ ಎಂದು ಕೆಲವರು ಶರ್ಟ್‌ನ ಎಡಭಾಗದ ಜೇಬಿನಲ್ಲಿ ಫೋನ್ ಇಟ್ಟುಕೊಳ್ಳುತ್ತಾರೆ. ಹೃದಯ ಇರುವ ಭಾಗಕ್ಕೆ ಹತ್ತಿರದಲ್ಲೇ ಮೊಬೈಲ್ ಇರುವುದರಿಂದ ಇದರಿಂದ ಹೃದಯದ ಬಡಿತದ ಮೇಲೆ ಪರಿಣಾಮವಾಗುತ್ತದೆಯೇ ಎಂಬ ಅನುಮಾನವೂ ಕೆಲವರಲ್ಲಿದೆ. ಈ ಬಗ್ಗೆ ಹೃದ್ರೋಗ ತಜ್ಞರು ಸ್ಪಷ್ಟನೆ ನೀಡಿದ್ದಾರೆ.

ಮೊಬೈಲ್‌ನ ತರಂಗಗಳು ಹೃದಯಕ್ಕೆ ಹಾನಿ ಮಾಡುತ್ತವೆಯೇ?

ಮೊಬೈಲ್‌ಗಳು ಮೊಬೈಲ್ ನೆಟ್‌ವರ್ಕ್ ಮತ್ತು ಇತರ ವೈರ್‌ಲೆಸ್ ಸಾಧನಗಳೊಂದಿಗೆ ಸಂಪರ್ಕ ಸಾಧಿಸಲು ರೇಡಿಯೊಫ್ರೀಕ್ವೆನ್ಸಿ ತರಂಗಗಳನ್ನು ಬಳಸುತ್ತವೆ. ಆದರೆ ಇವು ಅಯಾನೀಕರಿಸದ ವಿಕಿರಣಕ್ಕೆ ಸೇರಿವೆ. ಅಂದರೆ, ಎಕ್ಸ್‌ರೇಯಂತಹ ಅಯಾನೀಕರಿಸುವ ವಿಕಿರಣಕ್ಕೆ ಹೋಲಿಸಿದರೆ, ಡಿಎನ್‌ಎಗೆ ನೇರವಾಗಿ ಹಾನಿ ಮಾಡುವಷ್ಟು ಶಕ್ತಿ ಈ ತರಂಗಗಳಲ್ಲಿ ಇರುವುದಿಲ್ಲ ಎಂದು ತಜ್ಞರು ವಿವರಿಸಿದ್ದಾರೆ.

ದೆಹಲಿ ಧರ್ಮಶಿಲಾ ನಾರಾಯಣ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ. ಸಮೀರ್ ಕುಬ್ಬಾ ಅವರ ಪ್ರಕಾರ, ಸಾಮಾನ್ಯವಾಗಿ ಮೊಬೈಲ್ ಬಳಸುವುದರಿಂದ ಆರೋಗ್ಯವಂತ ವ್ಯಕ್ತಿಗಳಲ್ಲಿ ಹೃದಯದ ಬಡಿತದ ಲಯ ಅಸಹಜವಾಗುತ್ತದೆ ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳು ಲಭ್ಯವಿಲ್ಲ. ಹಾಗಾಗಿ ಎಡ ಜೇಬಿನಲ್ಲಿ ಫೋನ್ ಇಟ್ಟುಕೊಂಡಿದ್ದರಿಂದಲೇ ಹೃದಯದ ಬಡಿತದಲ್ಲಿ ಏರುಪೇರಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ಮೊಬೈಲ್ ಕಂಪಿಸಿದಾಗ ಹೃದಯ ಬಡಿತ ಹೆಚ್ಚಾದಂತೆ ಏಕೆ ಅನಿಸುತ್ತದೆ?

ಮೊಬೈಲ್ ಫೋನ್ ಜೇಬಿನಲ್ಲಿದ್ದಾಗ ಅದು ಕಂಪಿಸಿದರೆ, ಎದೆಯ ಭಾಗದಲ್ಲಿ ಅದರ ಕಂಪನವನ್ನು ನಾವು ನೇರವಾಗಿ ಅನುಭವಿಸಬಹುದು. ವಿಶೇಷವಾಗಿ ಈಗಾಗಲೇ ತಮ್ಮ ಹೃದಯದ ಬಡಿತದ ಬಗ್ಗೆ ಹೆಚ್ಚು ಗಮನ ಹರಿಸುವವರು, ದೇಹದಲ್ಲಿ ಆಗುವ ಸಾಮಾನ್ಯ ಅನುಭವಗಳನ್ನೂ ಹೃದಯದ ಬಡಿತದಲ್ಲಿನ ಬದಲಾವಣೆ ಎಂದು ಭಾವಿಸಬಹುದು ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ಮೊಬೈಲ್ ಕಂಪನವನ್ನು ಅನುಭವಿಸುವುದು ಎಂದರೆ ಹೃದಯದ ಲಯ ಅಸಹಜವಾಗಿದೆ ಎಂದರ್ಥವಲ್ಲ.

ದೊಡ್ಡ ಕಾರ್ಯಕ್ರಮಕ್ಕೂ ಮುನ್ನ ಹೇರ್‌ಕಟ್ ಮಾಡಿಸಬೇಕೆ? ಯಾವಾಗ ಮಾಡಿದರೆ ಸೂಕ್ತ?

ಯಾರಿಗೆ ಹೆಚ್ಚಿನ ಮುನ್ನೆಚ್ಚರಿಕೆ ಅಗತ್ಯ?

ಸಾಮಾನ್ಯ ಆರೋಗ್ಯವಂತ ವ್ಯಕ್ತಿಗಳು ಈ ಬಗ್ಗೆ ಹೆಚ್ಚು ಆತಂಕಪಡುವ ಅಗತ್ಯವಿಲ್ಲ. ಆದರೆ ಹೃದಯದಲ್ಲಿ ಪೇಸ್‌ಮೇಕರ್‌ ಅಥವಾ ಇಂಪ್ಲಾಂಟೆಡ್ ಕಾರ್ಡಿಯೋವೆರ್ಟರ್ ಡಿಫಿಬ್ರಿಲೇಟರ್‌ (ಐಸಿಡಿ) ನಂತಹ ಸಾಧನಗಳನ್ನು ಅಳವಡಿಸಿಕೊಂಡಿರುವವರು ಹೆಚ್ಚು ಎಚ್ಚರಿಕೆ ವಹಿಸಬೇಕು.

ಕೆಲವು ಮೊಬೈಲ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಇರುವ ಆಯಸ್ಕಾಂತಗಳು ಇಂತಹ ಅಳವಡಿಸಲಾದ ಹೃದಯ ಸಾಧನಗಳಿಗೆ ತುಂಬಾ ಹತ್ತಿರದಲ್ಲಿದ್ದಾಗ ತಾತ್ಕಾಲಿಕವಾಗಿ ಅಡ್ಡಿಪಡಿಸುವ ಸಾಧ್ಯತೆ ಇದೆ. ಇದರಿಂದ ಸಾಧನದ ಕಾರ್ಯನಿರ್ವಹಣೆಯಲ್ಲಿ ತಾತ್ಕಾಲಿಕ ಬದಲಾವಣೆ ಉಂಟಾಗಬಹುದು. ಆದ್ದರಿಂದ ಪೇಸ್‌ಮೇಕರ್ ಅಥವಾ ಐಸಿಡಿ ಹೊಂದಿರುವವರು ತಮ್ಮ ಸಾಧನ ತಯಾರಕರು ಸೂಚಿಸಿರುವ ಸುರಕ್ಷಿತ ಅಂತರ ಮತ್ತು ಮೊಬೈಲ್ ಇಡುವ ವಿಧಾನವನ್ನು ಪಾಲಿಸಬೇಕು.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us