Miss World 2021: ವಿಶ್ವ ಸುಂದರಿ ಸ್ಪರ್ಧೆ ಗೆದ್ದ ಪೋಲೆಂಡ್​ನ ಕರೋಲಿನಾ ಬಿಲಾವ್ಸ್ಕಾ

Karolina Bielawska : ಪೋರ್ಟೊ ರಿಕೊದ ಸ್ಯಾನ್ ಜುವಾನ್‌ನಲ್ಲಿ ನಡೆದ  70 ನೇ ಆವೃತ್ತಿಯ ಮಿಸ್ ವರ್ಲ್ಡ್ 2021ರ ಸ್ಪರ್ಧೆಯನ್ನು ಪೋಲೆಂಡ್​ನ ಕರೋಲಿನಾ ಬಿಲಾವ್ಸ್ಕಾ ಗೆದ್ದು ವಿಶ್ವ ಸುಂದರಿ ಪಟ್ಟವನ್ನು ಪಡೆದುಕೊಂಡಿದ್ದಾರೆ.

Miss World 2021: ವಿಶ್ವ ಸುಂದರಿ ಸ್ಪರ್ಧೆ ಗೆದ್ದ ಪೋಲೆಂಡ್​ನ ಕರೋಲಿನಾ ಬಿಲಾವ್ಸ್ಕಾ
ವಿಶ್ವ ಸುಂದರಿ ಸ್ಪರ್ಧೆ ಗೆದ್ದ ಪೊಲಾಂಡ್​ನ ಕರೊಲಿನಾ
Edited By:

Updated on: Mar 17, 2022 | 5:30 PM

ಪೋರ್ಟೊ ರಿಕೊದ ಸ್ಯಾನ್ ಜುವಾನ್‌ನಲ್ಲಿ ನಡೆದ  70 ನೇ ಆವೃತ್ತಿಯ ಮಿಸ್ ವರ್ಲ್ಡ್ 2021ರ (Miss World 2021)  ಸ್ಪರ್ಧೆಯಲ್ಲಿ ಕಿರೀಟವನ್ನು ಪೋಲೆಂಡ್‌ನ ಕರೋಲಿನಾ ಬಿಲಾವ್ಸ್ಕಾ (Karolina Bielawska)ಪಡೆದುಕೊಂಡಿದ್ದಾರೆ. ಈ ಮೂಲಕ 2021ರ ವಿಶ್ವ ಸುಂದರಿಯಾಗಿ ಕರೊಲಿನಾ ಹೊರಹೊಮ್ಮಿದ್ದಾರೆ. ಯುಎಸ್ಎ, ಇಂಡೋನೇಷ್ಯಾ, ಮೆಕ್ಸಿಕೋ, ಉತ್ತರ ಐರ್ಲೆಂಡ್ ಮತ್ತು ಕೋಟ್ ಡಿ ಐವೊರ್ ಸ್ಪರ್ಧಿಗಳನ್ನು ಸೋಲಿಸಿ ಪ್ರಶಸ್ತಿಯನ್ನು ಪಡೆದರು. 2019 ರ ವಿಶ್ವ ಸುಂದರಿ  ಜಮೈಕಾದ ಟೋನಿ-ಆನ್ ಸಿಂಗ್ ಫೈನಲ್‌ನಲ್ಲಿ ಈ ಬಾರಿಯ ವಿಜೇತೆ ಕರೋಲಿನಾಗೆ ಕಿರೀಟವನ್ನು ತೊಡಿಸಿದ್ದಾರೆ. ಸ್ಪರ್ಧೆಯಲ್ಲಿ ಯುಎಸ್‌ಎಯ ಶ್ರೀ ಸೈನಿ ಮತ್ತು ಕೋಟ್ ಡಿ’ಐವೊರ್‌ನ ಒಲಿವಿಯಾ ಯಾಸೆ  ಮೊದಲ ಮತ್ತು ಎರಡನೇ ರನ್ನರ್‌ ಅಪ್‌ಗಳಾಗಿದ್ದಾರೆ.

ಸದ್ಯ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಿರುವ ಕರೋಲಿನಾ ತನ್ನ ಪಿಎಚ್‌ಡಿ ಮಾಡುವ ಕನಸು ಕಂಡಿದ್ದಾರೆ. ಪ್ರಸ್ತುತ, ಮಾಡೆಲ್ ಆಗಿ ಕೆಲಸ ಮಾಡುತ್ತಿರುವ ಅವರು ಇದೀಗ 2021ರ ಮಿಸ್​ ವರ್ಲ್ಡ್​ ಆಗಿ ಹೊರಹೊಮ್ಮಿದ್ದಾರೆ. ಸ್ಪರ್ಧೆ ಗೆದ್ದ ಬಳಿಕ ಮಾತನಾಡಿದ ಕರೋಲಿನಾ “ ವಿಜೇತೆಯಾಗಿ ನನ್ನ ಹೆಸರನ್ನು ಕೇಳಿದಾಗ ನನಗೆ ಆಘಾತವಾಯಿತು, ನನಗೆ ಇನ್ನೂ ನಂಬಲಾಗುತ್ತಿಲ್ಲ. ವಿಶ್ವ ಸುಂದರಿ ಕಿರೀಟವನ್ನು ಧರಿಸಲು ನನಗೆ ಗೌರವವಿದೆ. ಪೋರ್ಟೊ ರಿಕೊದಲ್ಲಿನ ಈ ಅದ್ಭುತ ಅಧ್ಯಾಯವನ್ನು ನನ್ನ ಜೀವನದುದ್ದಕ್ಕೂ ನಾನು ನೆನಪಿಸಿಕೊಳ್ಳುತ್ತೇನೆ, ”ಎಂದು ಹೇಳಿದ್ದಾರೆ.

ಇನ್ನು ಸ್ಪರ್ಧೆಯಲ್ಲಿ ರನ್ನರ್ ಅಪ್​ ಆಗಿರುವ ಶ್ರೀ ಶೈನಿ ಭಾರತೀಯ ಮೂಲದವರಾಗಿದ್ದಾರೆ. ಸದ್ಯ ಅಮೆರಿಕ ಪ್ರಜೆಯಾಗಿರುವ ಇವರು ಸ್ವಲ್ಪದರಲ್ಲೇ ವಿಶ್ವ ಸುಂದರಿ ಪಟ್ಟವನ್ನು ತಪ್ಪಿಸಿಕೊಂಡು, ಮೊದಲನೇ ರನ್ನರ್​ಅಪ್​ ಆಗಿದ್ದಾರೆ. ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಬ್ಯೂಟಿ ವಿತ್ ಎ ಪರ್ಪಸ್ ಸ್ಪರ್ಧೆಯಲ್ಲಿ ಗೆದ್ದಿರುವ ಶ್ರೈಸೈನಿ, ವಿಶ್ವ ಸುಂದರಿ ಪ್ರಶಸ್ತಿಗಾಗಿ ಟಾಪ್ ಆರರಲ್ಲಿ ಬಂದು, ನಂತರ ಮೊದಲ ರನ್ನರ್ ಅಪ್ ಆಗಿದ್ದಾರೆ. ಈ ಮೂಲಕ ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಅಮೆರಿಕನ್ ಮಹಿಳೆ ಎನಿಸಿಕೊಂಡಿದ್ದಾರೆ.

ಇನ್ನು ಭಾರತದಿಂದ ಮಾನಸ ವಾರಣಾಸಿ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.  ಮಾನಸಾ ಅವರು ಸ್ಪರ್ಧೇಯಲ್ಲಿ 6ನೇ ಸ್ಥಾನ ಪಡೆದುಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ ಜನಿಸಿದ ಅವರು ವೃತ್ತಿಯಿಂದ ಹಣಕಾಸು ಮಾಹಿತಿ ವಿನಿಮಯ ವಿಶ್ಲೇಷಕರಾಗಿದ್ದಾರೆ. 23 ವರ್ಷದ ಮಾನಸ ವಾರಾಣಸಿ ವಾಸವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದ್ದಾರೆ.

ಇದನ್ನೂ ಓದಿ:

Harnaaz Sandhu: ತೃತೀಯಲಿಂಗಿ ವಿನ್ಯಾಸಗೊಳಿಸಿದ ಗೌನ್ ಧರಿಸಿ ಮಿಂಚಿದ ಭುವನ ಸುಂದರಿ ಹರ್ನಾಜ್ ಸಂಧು!

Published On - 3:01 pm, Thu, 17 March 22