AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Manasa Varanasi: 2021ರ ವಿಶ್ವ ಸುಂದರಿ ಪಟ್ಟವೇರುತ್ತಾರಾ ಭಾರತದ ಸ್ಪರ್ಧಿ ಮಾನಸ ವಾರಾಣಸಿ?

Miss World 2021: ಡಿ. 16ರಂದು ನಡೆಯಲಿರುವ ವಿಶ್ವ ಸುಂದರಿ 2021 ಸ್ಪರ್ಧೆಯಲ್ಲಿ ಭಾರತದಿಂದ ಮಾನಸ ವಾರಾಣಸಿ ಸ್ಪರ್ಧಿಸಲಿದ್ದಾರೆ. ಹೈದರಾಬಾದ್‌ನಲ್ಲಿ ಜನಿಸಿದ ಅವರು ವೃತ್ತಿಯಿಂದ ಹಣಕಾಸು ಮಾಹಿತಿ ವಿನಿಮಯ ವಿಶ್ಲೇಷಕರಾಗಿದ್ದಾರೆ. 23 ವರ್ಷದ ಮಾನಸ ವಾರಾಣಸಿ ವಾಸವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದ್ದಾರೆ.

Manasa Varanasi: 2021ರ ವಿಶ್ವ ಸುಂದರಿ ಪಟ್ಟವೇರುತ್ತಾರಾ ಭಾರತದ ಸ್ಪರ್ಧಿ ಮಾನಸ ವಾರಾಣಸಿ?
ಮಾನಸ ವಾರಾಣಸಿ
TV9 Web
| Edited By: |

Updated on:Dec 15, 2021 | 2:16 PM

Share

ನವದೆಹಲಿ: ಈಗಾಗಲೇ ಹರ್ನಾಜ್ ಸಂಧು 2021ರ ಮಿಸ್ ಯೂನಿವರ್ಸ್ ಕಿರೀಟ ಧರಿಸಿ ಭಾರತಕ್ಕೆ ಹೆಮ್ಮೆ ತಂದುಕೊಟ್ಟಿದ್ದಾರೆ. ನಾಳೆ (ಡಿ. 16) ವಿಶ್ವ ಸುಂದರಿ 2021 (Miss Universe 2021) ಸ್ಪರ್ಧೆಯಲ್ಲಿ 2020ರ ಮಿಸ್ ಇಂಡಿಯಾ ಖ್ಯಾತಿಯ ಮಾನಸ ವಾರಾಣಸಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಮಿಸ್ ಇಂಡಿಯಾ 2020 ಮಾನಸಾ ವಾರಾಣಸಿ (Manasa Varanasi) ಅವರು ನಿನ್ನೆ ವಿಶ್ವ ಭುವನ ಸುಂದರಿ ಪಟ್ಟಕ್ಕೇರಿದ ಹರ್ನಾಜ್ ಸಂಧು (Harnaaz Sandhu) ಅವರನ್ನು ಅಭಿನಂದಿಸಿದ್ದಾರೆ.

ಮಿಸ್ ಯೂನಿವರ್ಸ್ 2021 ಆಗಿ ಹರ್ನಾಜ್ ಸಂಧು ಅವರಿಗೆ ಅಭಿನಂದನೆ ಸಲ್ಲಿಸಿರುವ ಮಾನಸ ವಾರಾಣಸಿ, “ಭಾರತವು 21 ವರ್ಷಗಳ ನಂತರ ಭುವನ ಸುಂದರಿ ಕಿರೀಟವನ್ನು ಗೆದ್ದಿದೆ. ಹರ್ನಾಜ್ ಕೌರ್ ಸಂಧು ಮಿಸ್ ಯೂನಿವರ್ಸ್ 2021 ಆಗಿ ಆಯ್ಕೆಯಾಗಿದ್ದಾರೆ” ಎಂದು ಬ್ಯೂಟಿ ಕ್ವೀನ್ ಮಾನಸ ವಾರಾಣಸಿ ತಮ್ಮ ಪೋಸ್ಟ್‌ನಲ್ಲಿ ಹಾಕಿದ್ದಾರೆ. ಮಾನಸ ಅವರ ಪೋಸ್ಟ್ ಇತರ ಮಹಿಳೆಯರನ್ನು ಬೆಂಬಲಿಸುವ ಮಹಿಳೆಯರ ಮನೋಭಾವವನ್ನು ಪ್ರದರ್ಶಿಸುತ್ತದೆ ಮತ್ತು ಇಂದು ನೀವು ನೋಡುವ ಅತ್ಯುತ್ತಮ ವಿಷಯವಾಗಿದೆ. ಹರ್ನಾಜ್ ಸಂಧು 2021ರ ಮಿಸ್ ಯೂನಿವರ್ಸ್ ಕಿರೀಟವನ್ನು ಅಲಂಕರಿಸಿದ್ದಾರೆ. ಅದೇ ರೀತಿ ಡಿಸೆಂಬರ್ 16ರಂದು ನಡೆಯಲಿರುವ 70ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಸ್ಪರ್ಧಿ ಮಾನಸ ವಾರಾಣಸಿ ಬಗ್ಗೆ ಮಾಹಿತಿ ಇಲ್ಲಿದೆ.

ಮಿಸ್ ಇಂಡಿಯಾ 2020ಕ್ಕೆ ಫಲ್ಗುಣಿ ಶೇನ್ ಪೀಕಾಕ್, ನೇಹಾ ಧೂಪಿಯಾ, ಚಿತ್ರಾಂಗದಾ ಸಿಂಗ್ ಮತ್ತು ಪುಲ್ಕಿತ್ ಸಾಮ್ರಾಟ್ ತೀರ್ಪುಗಾರರಾಗಿದ್ದರು. ಅಪರಶಕ್ತಿ ಖುರಾನಾ ಕಾರ್ಯಕ್ರಮ ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಮಾನಸ ವಾರಾಣಸಿ ಮಿಸ್ ಇಂಡಿಯಾ ವರ್ಲ್ಡ್ 2020 ಕಿರೀಟವನ್ನು ಪಡೆದಿದ್ದರು.

ಮಾನಸ ವಾರಾಣಸಿ ಯಾರು?:

ಮಿಸ್ ಇಂಡಿಯಾ 2020 ವಿಜೇತೆ ಮಾನಸ ವಾರಾಣಸಿ ತಮ್ಮ ತಾಯಿ, ಅಜ್ಜಿ ಮತ್ತು ತಂಗಿ ತನ್ನ ಜೀವನದ ಮೂರು ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ವಿಶ್ವ ಸುಂದರಿ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಮಾನಸ ವಾರಾಣಸಿ ಅವರಿಗೆ ಪ್ರಿಯಾಂಕಾ ಚೋಪ್ರಾ ಜೋನಸ್ ಸ್ಫೂರ್ತಿಯಂತೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವ ಮಾನಸ ವಾರಾಣಸಿ, ನನಗೆ ಎಲ್ಲ ನಟಿಯರಿಗಿಂತಲೂ ಪ್ರಿಯಾಂಕಾ ಚೋಪ್ರಾ ಎಂದರೆ ಅಚ್ಚುಮೆಚ್ಚು. ಸಂಗೀತ, ಚಲನಚಿತ್ರಗಳು, ಉದ್ಯಮ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಆಕೆ ತನ್ನ ಛಾಪು ಮೂಡಿಸಿದ್ದಾಳೆ. ಆಕೆಯಿಂದ ನಾನು ಬಹಳ ಸ್ಫೂರ್ತಿ ಪಡೆಯುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Harnaaz Sandhu: ತೃತೀಯಲಿಂಗಿ ವಿನ್ಯಾಸಗೊಳಿಸಿದ ಗೌನ್ ಧರಿಸಿ ಮಿಂಚಿದ ಭುವನ ಸುಂದರಿ ಹರ್ನಾಜ್ ಸಂಧು!

2021ರ ವಿಶ್ವ ಸುಂದರಿ ಪಟ್ಟ ಗೆದ್ದ ಹರ್ನಾಜ್​ ಸಂಧು ಯಾರು ಗೊತ್ತಾ? ತೀರ್ಪುಗಾರರು ಮನಸೋತಿದ್ದು ಹರ್ನಾಜ್ ಅವರ ಈ ಉತ್ತರಕ್ಕೆ- ಇಲ್ಲಿದೆ ಸ್ಟೋರಿ

Published On - 2:12 pm, Wed, 15 December 21

Follow Us
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ