AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Polydipsia: ತುಂಬಾ ಬಾಯಾರಿಕೆಯಾಗುತ್ತಿದೆಯೇ, ಈ 5 ಕಾಯಿಲೆಗಳಿರಬಹುದು ಎಚ್ಚರ

ಈಗ ಬೇಸಿಗೆಯಾಗಿರುವುದರಿಂದ ಅದರಲ್ಲಿಯೂ ತಾಪಮಾನವು ದಾಖಲೆಯ ಗರಿಷ್ಠ ಮಟ್ಟದಲ್ಲಿರುವುದರಿಂದ ವಿಪರೀತ ಶಾಖಕ್ಕೆ ಬಾಯಾರಿಕೆಯಾಗುತ್ತಿರಬಹುದು ಎಂದು ಸುಮ್ಮನಾಗುತ್ತೇವೆ. ನಿಯಮಿತವಾಗಿ ನೀರು ಕುಡಿಯುವುದು ಒಳ್ಳೆಯದು ಆದರೆ ಕೆಲವರು ಸಾಮಾನ್ಯಕ್ಕಿಂತ ಹೆಚ್ಚು ನೀರನ್ನು ಕುಡಿಯುತ್ತಾರೆ. ಪದೇ ಪದೇ ಬಾಯಾರಿಕೆಯಾಗುತ್ತಿದ್ದರೆ, ಅದನ್ನು ಕಡೆಗಣಿಸುವಂತಿಲ್ಲ. ಅಂತವರು ವೈದ್ಯರನ್ನು ಸಂಪರ್ಕಿಸಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

Polydipsia: ತುಂಬಾ ಬಾಯಾರಿಕೆಯಾಗುತ್ತಿದೆಯೇ, ಈ 5 ಕಾಯಿಲೆಗಳಿರಬಹುದು ಎಚ್ಚರ
ಪ್ರೀತಿ ಭಟ್​, ಗುಣವಂತೆ
| Edited By: |

Updated on:Jun 05, 2024 | 1:01 PM

Share

ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು, ಈಗ ಬೇಸಿಗೆಯಾಗಿರುವುದರಿಂದ ಅದರಲ್ಲಿಯೂ ತಾಪಮಾನವು ದಾಖಲೆಯ ಗರಿಷ್ಠ ಮಟ್ಟದಲ್ಲಿರುವುದರಿಂದ ವಿಪರೀತ ಶಾಖಕ್ಕೆ ಬಾಯಾರಿಕೆಯಾಗುತ್ತಿರಬಹುದು ಎಂದು ಸುಮ್ಮನಾಗುತ್ತೇವೆ. ನಿಯಮಿತವಾಗಿ ನೀರು ಕುಡಿಯುವುದು ಒಳ್ಳೆಯದು ಆದರೆ ಕೆಲವರು ಸಾಮಾನ್ಯಕ್ಕಿಂತ ಹೆಚ್ಚು ನೀರನ್ನು ಕುಡಿಯುತ್ತಾರೆ. ಪದೇ ಪದೇ ಬಾಯಾರಿಕೆಯಾಗುತ್ತಿದ್ದರೆ, ಅದನ್ನು ಕಡೆಗಣಿಸುವಂತಿಲ್ಲ. ಅಂತವರು ವೈದ್ಯರನ್ನು ಸಂಪರ್ಕಿಸಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

ಹೆಚ್ಚು ಬಾಯಾರಿಕೆಯಾಗಲು ಕಾರಣವೇನು?

ಅನೇಕರಿಗೆ ಎಷ್ಟು ನೀರು ಕುಡಿದರೂ ಬಾಯಾರಿಕೆ ತಣಿಯುವುದಿಲ್ಲ. ಅಥವಾ ತಣ್ಣನೆಯ ಹಣ್ಣಿನ ರಸ ಮತ್ತು ತಂಪು ಪಾನೀಯಗಳನ್ನು ಕುಡಿದರೂ ಏನು ಪ್ರಯೋಜನವಾಗುವುದಿಲ್ಲ. ಈ ವೈದ್ಯಕೀಯ ಸ್ಥಿತಿಯನ್ನು ಪಾಲಿಡಿಪ್ಸಿಯಾ ಎಂದೂ ಕರೆಯುತ್ತಾರೆ. ನಿಮಗೂ ಈ ರೀತಿ ಲಕ್ಷಣಗಳು ಕಂಡು ಬರುತ್ತಿದ್ದರೆ ಅದನ್ನು ಲಘುವಾಗಿ ಪರಿಗಣಿಸಬೇಡಿ. ಇದರ ಜೊತೆಗೆ ಅತಿಯಾದ ಬಾಯಾರಿಕೆಯು, ಬೇರೆ ಯಾವ ಕಾಯಿಲೆಯ ಸಂಕೇತವಾಗಿರಬಹುದು. ವೈದ್ಯಕೀಯ ತಜ್ಞರು ಈ ಬಗ್ಗೆ ಹೇಳುವುದೇನು? ಇಲ್ಲಿದೆ ಮಾಹಿತಿ.

ನಿರ್ಜಲೀಕರಣ: ದೇಹವು ಈಗಾಗಲೇ ನಿರ್ಜಲೀಕರಣಗೊಂಡಿದ್ದರೆ, ಒಂದು ಅಥವಾ ಎರಡು ಲೋಟ ನೀರು ಕುಡಿಯುವುದರಿಂದ ಬಾಯಾರಿಕೆ ತಣಿಯುವುದಿಲ್ಲ. ಜೊತೆಗೆ ಅವರಲ್ಲಿ ತಲೆತಿರುಗುವಿಕೆ, ತಲೆನೋವು, ವಾಂತಿ, ಅತಿಸಾರ ಮತ್ತು ದೌರ್ಬಲ್ಯದಂತಹ ಸಮಸ್ಯೆಗಳು ಕಂಡುಬರಬಹುದು.

ಬಾಯಿ ಒಣಗುವುದು: ಬಾಯಿ ಒಣಗಿದಾಗ ಸ್ವಲ್ಪ ಸಮಯದವರೆಗೆ ನೀರು ಕುಡಿಯುವ ಬಯಕೆ ಇರುತ್ತದೆ. ಅದರ ಗ್ರಂಥಿಗಳು ಲಾಲಾರಸವನ್ನು ಸರಿಯಾಗಿ ಮಾಡಲು ಸಾಧ್ಯವಾಗದಿದ್ದಾಗ ಬಾಯಿ ಒಣಗುತ್ತದೆ. ಆಗ ಪದೇ ಪದೇ ನೀರು ಕುಡಿದರೂ ಅವರ ಬಾಯಾರಿಕೆಯನ್ನು ನೀಗಿಸಲು ಸಾಧ್ಯವಿಲ್ಲ.ಈ ಕಾರಣದಿಂದಾಗಿ, ಒಬ್ಬ ವ್ಯಕ್ತಿಯು ವಸಡು ಸೋಂಕು ಮತ್ತು ಬಾಯಿಯ ವಾಸನೆಯನ್ನು ಎದುರಿಸಬೇಕಾಗುತ್ತದೆ.

ಮಧುಮೇಹ: ಮಧುಮೇಹವು ಅನೇಕ ರೋಗಗಳ ಮೂಲವಾಗಿದೆ. ಮಧುಮೇಹ ರೋಗಿಗಳ ಮುಖ್ಯ ಸಮಸ್ಯೆಯೆಂದರೆ ಅವರಿಗೆ ಅತಿಯಾದ ಬಾಯಾರಿಕೆಯಾಗುತ್ತದೆ. ಈ ಸಮಸ್ಯೆ ಇರುವ ಜನರು ಪದೇ ಪದೇ ನೀರು ಕುಡಿಯಬೇಕು ಎಂದು ಅಂದುಕೊಳ್ಳುತ್ತಾರೆ. ಒಬ್ಬ ವ್ಯಕ್ತಿಗೆ ಮೊದಲ ಬಾರಿಗೆ ಮಧುಮೇಹ ಬಂದಾಗ, ಅದನ್ನು ಕಂಡುಹಿಡಿಯುವುದು ಸುಲಭವಲ್ಲ, ಅತಿಯಾದ ಬಾಯಾರಿಕೆ ಮಧುಮೇಹದ ಸಂಕೇತವಾಗಿರಬಹುದು ಎಂಬುದನ್ನು ನೆನಪಿಡಿ. ಹಾಗಾಗಿ ನಿಮಗೆ ತುಂಬಾ ಬಾಯಾರಿಕೆಯಾದಾಗ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷೆ ಮಾಡಿ.

ಇದನ್ನೂ ಓದಿ: ನಿಮ್ಮ ಮನೆಯ ಕನ್ನಡಿ ಫಳಫಳ ಹೊಳೆಯುವಂತೆ ಮಾಡುವುದೇಗೆ? ಈ ಟಿಪ್ಸ್ ಫಾಲೋ ಮಾಡಿ

ಆಹಾರ ಪದ್ಧತಿ: ನೀವು ಜಂಕ್ ಫುಡ್ ಅಥವಾ ಹೆಚ್ಚು ಮಸಾಲೆಯುಕ್ತ ಆಹಾರವನ್ನು ಸೇವಿಸಿದರೆ, ಮತ್ತೆ ಮತ್ತೆ ಬಾಯಾರಿಕೆಯಾಗುವುದು ಸಹಜ. ಹಾಗಾಗಿ ಆಹಾರ ಪದ್ಧತಿಯನ್ನು ಸಾಧ್ಯವಾದರೆ ಬದಲಾಯಿಸಿಕೊಳ್ಳಿ.

ರಕ್ತಹೀನತೆ: ನಮ್ಮ ದೇಹದಲ್ಲಿ ಕೆಂಪು ರಕ್ತ ಕಣಗಳ ಕೊರತೆ ಉಂಟಾದಾಗ ರಕ್ತಹೀನತೆ ಉಂಟಾಗುತ್ತದೆ. ಇದನ್ನು ಸಾಮಾನ್ಯ ಭಾಷೆಯಲ್ಲಿ ರಕ್ತದ ಕೊರತೆ ಎಂದೂ ಕರೆಯುತ್ತಾರೆ. ದೇಹದಲ್ಲಿ ರಕ್ತದ ಅನುಪಸ್ಥಿತಿಯನ್ನು ರಕ್ತಹೀನತೆ ಎಂದು ಕರೆಯಲಾಗುತ್ತದೆ. ಹಿಮೋಗ್ಲೋಬಿನ್ ಕೊರತೆ ಇದ್ದರೆ ನೀರು ಕುಡಿದ ನಂತರವೂ ಬಾಯಾರಿಕೆಯಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 2:34 pm, Tue, 4 June 24

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ