ಸುಗ್ಗಿ ಹಬ್ಬವನ್ನು ದೇಶದ ಹಲವು ಭಾಗಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಈ ಸುಗ್ಗಿ ಹಬ್ಬವನ್ನು ಮಕರ ಸಂಕ್ರಾಂತಿ(Makar Sankranti) ಎಂದು ಆಚರಿಸಿದರೆ, ಕೇರಳ ತಮಿಳನಾಡು ಮತ್ತು ಆಂಧ್ರ ಪ್ರದೇಶಗಳಲ್ಲಿ ಪೊಂಗಲ್ ಎಂದು ಆಚರಿಸಲಾಗುತ್ತದೆ. ಹಬ್ಬಗಳ ಸಮಯದಲ್ಲಿ ಸಿಹಿ ತಿನಸುಗಳು ಕೂಡ ಪ್ರಮುಖವಾಗಿರುತ್ತದೆ. ಈ ಪೊಂಗಲ್ ಸಮಯದಲ್ಲಿ ಪ್ರತಿಯೊಂದು ಮನೆಗಳಲ್ಲಿ ಪಾಲ್ ಪಾಯಸಂ(Paal Payasam) ಮಾಡುವುದು ಸಂಪ್ರದಾಯ. ಆದ್ದರಿಂದ ಪೊಂಗಲ್ ಹಬ್ಬದ ಸಮಯದಲ್ಲಿ ತಯಾರಿಸುವ ಪಾಲ್ ಪಾಯಸದ ರೆಸಿಪಿಯನ್ನು ಇಲ್ಲಿ ವಿವರಿಸಲಾಗಿದೆ.
ಕೇರಳ ಮತ್ತು ತಮಿಳುನಾಡಿನಲ್ಲಿ ಹಬ್ಬದ ಸಮಯದಲ್ಲಿ ಈ ಪಾಲ್ ಪಾಯಸಂ ಪ್ರಮುಖವಾಗಿದೆ. ಪಾಲ್ ಪಾಯಸಂ ಎಂದರೆ ಅಕ್ಕಿ ಮತ್ತು ಹಾಲಿನಿಂದ ತಯಾರಿಸಲಾಗುವ ಪಾಯಸವಾಗಿದೆ. ಅಕ್ಕಿಯನ್ನು ಕೆಲವು ಗಂಟೆಗಳ ಕಾಲ ನೆನೆಸಿಟ್ಟು ತಯಾರಿಸಲಾಗುತ್ತದೆ. ಜೊತೆಗೆ ಗೋಡಂಬಿ ಮತ್ತು ಒಣದ್ರಾಕ್ಷಿಗಳನ್ನು ಈ ಪಾಯಸದಲ್ಲಿ ಬಳಸುವುದರಿಂದ ರುಚಿಯ ಜೊತೆಗೆ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ. ನೀವು ಕೂಡ ಈ ಹಬ್ಬದ ಸಮಯದಲ್ಲಿ ಈ ಪಾಲ್ ಪಾಯಸಂ ತಯಾರಿಸಿ.
ಇದನ್ನು ಓದಿ: ಪೊಂಗಲ್ ಹಬ್ಬದ ಸಮಯದಲ್ಲಿ ತಯಾರಿಸುವ ಪಾಲ್ ಪಾಯಸಂ ಅಥವಾ ಅಕ್ಕಿ ಪಾಯಸದ ಸಂಪೂರ್ಣ ಪಾಕ ವಿಧಾನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.
ಪಾಯಸ ಅಥವಾ ಖೀರ್, ಹಾಲು, ಧಾನ್ಯಗಳು, ಬೆಲ್ಲ ಅಥವಾ ಸಕ್ಕರೆಯಂತಹ ಸಿಹಿಕಾರಕವನ್ನು ಬಳಸಿ ಮಾಡಿದ ಸಾಂಪ್ರದಾಯಿಕ ದಕ್ಷಿಣ ಭಾರತೀಯ ಸಿಹಿ. ತೊಗರಿ ಬೇಳೆಯಿಂದ ಹಿಡಿದು ಸಾಕಷ್ಟು ಪದಾರ್ಧಗಳಲ್ಲಿ ಪಯಾಸವನ್ನು ತಯಾರಿಸಲಾಗುತ್ತದೆ. ಜೊತೆಗೆ ಗೋಡಂಬಿ ಮತ್ತು ಒಣದ್ರಾಕ್ಷಿಗಳಿಂದ ಅಲಂಕರಿಸಲಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:23 pm, Wed, 11 January 23