AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rice Kheer Recipe: ಕೇವಲ 15 ನಿಮಿಷಗಳಲ್ಲಿ ಸುಲಭವಾಗಿ ಅಕ್ಕಿ ಪಾಯಸ ತಯಾರಿಸಿ

ಸಾಂಪ್ರದಾಯಿಕವಾಗಿ ಅಕ್ಕಿ ಪಾಯಸವನ್ನು ಹಾಲು, ಸಕ್ಕರೆ ಮತ್ತು ಕೆಲವು ಡ್ರೈ ಫುಟ್ಸ್​ಗಳೊಂದಿಗೆ ತಯಾರಿಸಲಾಗುತ್ತದೆ. ಜೊತೆಗೆ ಕೇಸರಿ, ಏಲಕ್ಕಿ, ಜಾಯಿಕಾಯಿ, ಇತ್ಯಾದಿ ಕೆಲವು ಮಸಾಲೆಗಳು ಮತ್ತು ರೋಸ್ ವಾಟರ್ ಕೂಡ ಬಳಸಲಾಗುತ್ತದೆ.

Rice Kheer Recipe: ಕೇವಲ 15 ನಿಮಿಷಗಳಲ್ಲಿ ಸುಲಭವಾಗಿ ಅಕ್ಕಿ ಪಾಯಸ ತಯಾರಿಸಿ
ಸಾಂದರ್ಭಿಕ ಚಿತ್ರImage Credit source: Pinterest
TV9 Web
| Updated By: ಅಕ್ಷತಾ ವರ್ಕಾಡಿ|

Updated on:Jan 03, 2023 | 3:25 PM

Share

ಭಾರತೀಯ ಸಿಹಿ ಖಾದ್ಯಗಳ ಪಟ್ಟಿಯಲ್ಲಿ ಪಾಯಸ(Kheer) ಅತ್ಯಂತ ಸುಲಭ ಹಾಗೂ ಜನಪ್ರಿಯ ಪಾಕವಾಗಿದೆ. ಇದು ಉತ್ತಮ ರುಚಿಯನ್ನು ನೀಡುವುದರ ಜೊತೆಗೆ ಆರೋಗ್ಯವನ್ನು ಕಾಪಾಡುವಲ್ಲಿ ಕೂಡ ಸಹಕಾರಿಯಾಗಿದೆ. ಇದರಲ್ಲಿ ಬಳಸುವ ಧವಸ ಧಾನ್ಯಗಳು, ಹಣ್ಣು ತರಕಾರಿಗಳು ನಿಮ್ಮ ದೇಹಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಸಾಂಪ್ರದಾಯಿಕವಾಗಿ ಹಾಲು, ಸಕ್ಕರೆ ಮತ್ತು ಕೆಲವು ಒಣ ಹಣ್ಣುಗಳೊಂದಿಗೆ ತಯಾರಿಸಲಾಗುತ್ತದೆ. ಜೊತೆಗೆ ಕೇಸರಿ, ಏಲಕ್ಕಿ, ಜಾಯಿಕಾಯಿ, ಇತ್ಯಾದಿ ಕೆಲವು ಮಸಾಲೆಗಳು ಮತ್ತು ರೋಸ್ ವಾಟರ್ ಕೂಡ ಬಳಸಲಾಗುತ್ತದೆ.

ಅಕ್ಕಿ ಪಾಯಸಕ್ಕೆ ಬೇಕಾಗುವ ಸಾಮಾಗ್ರಿಗಳು:

1/4 ಕಪ್ ಅಕ್ಕಿ

1ಲೀಟರ್ ಹಾಲು

1 ಚಮಚ ಕೇಸರಿ

5 ರಿಂದ 6 ಟೇಬಲ್ ಸ್ಪೂನ್ ಸಕ್ಕರೆ

ಒಂದು ಟೀ ಚಮಚ ಏಲಕ್ಕಿ ಪುಡಿ

1 ಚಮಚ ಬಾದಾಮಿ, ಗೋಡಂಬಿ, ಪಿಸ್ತಾ

1 ಚಮಚ ರೋಸ್ ವಾಟರ್

ಅಕ್ಕಿ ಪಾಯಸ ಮಾಡುವ ವಿಧಾನ:

1/4 ಕಪ್ ಬಾಸ್ಮತಿ ಅಕ್ಕಿಯನ್ನು ನೀರಿನಲ್ಲಿ ಒಂದೆರಡು ಬಾರಿ ತೊಳೆಯಿರಿ ಮತ್ತು ನಂತರ 15 ರಿಂದ 20 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ಒಂದು ಪ್ಯಾನ್ ಅಥವಾ ಕಡಾಯಿ ತೆಗೆದುಕೊಂಡು ಅದಕ್ಕೆ 1-ಲೀಟರ್ ಹಾಲನ್ನು ಹಾಕಿ ಬಿಸಿ ಮಾಡಿ. ಕುದಿಯುತ್ತಿರುವ ಹಾಲಿನಿಂದ ಒಂದು ಚಮಚ ಹಾಲು ತೆಗೆದುಕೊಂಡು ಒಂದು ಚಿಕ್ಕ ಬೌಲ್​​ಗೆ ಹಾಕಿ ಮತ್ತು ಅದಕ್ಕೆ ಕೇಸರಿ ಹಾಕಿ.

ಈಗಾಗಲೇ ನೆನೆಸಿಟ್ಟ ಅಕ್ಕಿಯಿಂದ ನೀರನ್ನು ತೆಗೆದು ಕುದಿಯುತ್ತಿರುವ ಹಾಲಿಗೆ ಹಾಕಿ. ಇದನ್ನು ಮಧ್ಯಮ ಹುರಿಯಲ್ಲಿಟ್ಟು ಕೈಯಾಡಿಸುತ್ತಾ ಇರಿ. ಇಲ್ಲದಿದ್ದರೆ ಇದು ಪಾತ್ರೆಯ ತಳ ಹಿಡಿಯುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ಚಳಿಗಾಲದಲ್ಲಿ ಗರ್ಭಿಣಿಯರು ಯಾವ ರೀತಿಯ ಆಹಾರ ಸೇವಿಸಬೇಕು, ಇಲ್ಲಿದೆ ಮಾಹಿತಿ

ಅಕ್ಕಿ ಬೇಯುತ್ತಾ ಬಂದ ಹಾಗೇ ಅದಕ್ಕೆ 5 ರಿಂದ 6 ಟೇಬಲ್ ಸ್ಪೂನ್ ಸಕ್ಕರೆಯನ್ನು ಸೇರಿಸಿ. ಇದನ್ನು ಇನ್ನೂ ಸ್ವಲ್ಪ ಹೊತ್ತು ಹಾಗೆಯೇ ಮಧ್ಯಮ ಉರಿಯಲ್ಲಿ ಬೇಯಿಸಿ. ನಂತರ ಇದಕ್ಕೆ ಒಂದು ಟೀ ಚಮಚ ಏಲಕ್ಕಿ ಪುಡಿ ಸೇರಿಸಿ. ನಂತರ 1 ಚಮಚ ಬಾದಾಮಿ, ಗೋಡಂಬಿ, ಪಿಸ್ತಾ ಸೇರಿಸಿ. ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ.

ಈಗ ಇದಕ್ಕೆ ಆಗಲೇ ತೆಗೆದಿಟ್ಟ ಕೇಸರಿ ಹಾಲು ಸೇರಿಸಿ. ನಂತರ ಕೊನೆಯದಾಗಿ ರೋಸ್ ವಾಟರ್​ ಸೇರಿಸಿ. ಈಗ ಅಕ್ಕಿ ಪಾಯಾಸ ಸಿದ್ದವಾಗಿದೆ. ಈಗ ಸರ್ವಿಂಗ್ ಬೌಲ್‌ಗಳಲ್ಲಿ ಅಕ್ಕಿ ಪಾಯಸವನ್ನು ಸುರಿಯಿರಿ ಮತ್ತು ಬಿಸಿಯಾಗಿ ಸವಿಯಿರಿ. ಉತ್ತಮ ಸುವಾಸನೆಯೊಂದಿಗೆ ರುಚಿಯಂತೂ ಅಧ್ಭುತ. ಉಳಿದ ಅಕ್ಕಿ ಪಾಯಸವನ್ನು ಫ್ರಿಜ್​​ನಲ್ಲಿ ಇರಿಸಿ. ಇದನ್ನು 2 ದಿನಗಳ ವರೆಗೆ ಸೇವಿಸಬಹುದಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 3:20 pm, Tue, 3 January 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ