Protein deficiency in children: ಮಕ್ಕಳಲ್ಲಿ ಪ್ರೋಟೀನ್ ಕೊರತೆಯಿಂದ ಎಷ್ಟೆಲ್ಲಾ ತೊಂದರೆಗಳಾಗುತ್ತವೆ ಗೊತ್ತೆ?

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 03, 2024 | 6:56 PM

ಮಕ್ಕಳ ಸರಿಯಾದ ಬೆಳವಣಿಗೆಗೆ ಸಾಕಷ್ಟು ಪ್ರೋಟೀನ್ ಸೇವನೆ ಮಾಡಬೇಕು. ಏಕೆಂದರೆ ಇದು ಸ್ನಾಯುಗಳ ಬೆಳವಣಿಗೆಯಿಂದ ಹಿಡಿದು ಮೆದುಳಿನ ಕಾರ್ಯದ ವರೆಗೆ ಎಲ್ಲಕ್ಕೂ ಅವಶ್ಯವಾಗಿದೆ. ದುರದೃಷ್ಟವಶಾತ್, ವಿಶ್ವದ ಅನೇಕ ಭಾಗಗಳಲ್ಲಿ ಪ್ರೋಟೀನ್ ಕೊರತೆ ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ, ಇದು ಮಕ್ಕಳ ಬೆಳವಣಿಗೆಯ ಮೇಲೆ ಪರಿಣಾಮ ಬಿರುತ್ತದೆ. ಈ ಸಮಸ್ಯೆಗೆ ಪರಿಹಾರ ನೀಡಲು, ನ್ಯೂಸ್ 9ಲೈವ್ ಸಂವಾದ ನಡೆಸಿದ್ದು, ಎಎಸ್- ಐಟಿ- ಐಎಸ್ ನ್ಯೂಟ್ರಿಷನ್ ಪೌಷ್ಟಿಕತಜ್ಞೆ ಪ್ರೀತಿ ಕೊರ್ಗಾಂವ್ಕರ್ ಅವರು ಮಕ್ಕಳ ಆಹಾರದಲ್ಲಿ ಪ್ರೋಟೀನ್ಗಳ ಪ್ರಾಮುಖ್ಯತೆ ಮತ್ತು ಮ್ಯಾಕ್ರೋನ್ಯೂಟ್ರಿಯಂಟ್ ಸಾಕಷ್ಟು ಸಿಗದಿದ್ದಾಗ ಏನಾಗುತ್ತದೆ ಎಂಬುದನ್ನು ಸವಿವರವಾಗಿ ವಿವರಿಸಿದ್ದಾರೆ.

Protein deficiency in children: ಮಕ್ಕಳಲ್ಲಿ ಪ್ರೋಟೀನ್ ಕೊರತೆಯಿಂದ ಎಷ್ಟೆಲ್ಲಾ ತೊಂದರೆಗಳಾಗುತ್ತವೆ ಗೊತ್ತೆ?
Follow us on

ಪ್ರೋಟೀನ್, ದೇಹದ ಅಂಗಾಂಶಗಳ ಬೆಳವಣಿಗೆಗೆ ಅತ್ಯವಶ್ಯಕ. ಅದರಲ್ಲಿಯೂ ಮಕ್ಕಳ ಸರಿಯಾದ ಬೆಳವಣಿಗೆಗೆ ಸಾಕಷ್ಟು ಪ್ರೋಟೀನ್ ಸೇವನೆ ಮಾಡಬೇಕು. ಏಕೆಂದರೆ ಇದು ಸ್ನಾಯುಗಳ ಬೆಳವಣಿಗೆಯಿಂದ ಹಿಡಿದು ಮೆದುಳಿನ ಕಾರ್ಯದ ವರೆಗೆ ಎಲ್ಲಕ್ಕೂ ಅವಶ್ಯವಾಗಿದೆ. ದುರದೃಷ್ಟವಶಾತ್, ವಿಶ್ವದ ಅನೇಕ ಭಾಗಗಳಲ್ಲಿ ಪ್ರೋಟೀನ್ ಕೊರತೆ ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ, ಇದು ಮಕ್ಕಳ ಬೆಳವಣಿಗೆಯ ಮೇಲೆ ಪರಿಣಾಮ ಬಿರುತ್ತದೆ. ಈ ಸಮಸ್ಯೆಗೆ ಪರಿಹಾರ ನೀಡಲು, ನ್ಯೂಸ್ 9ಲೈವ್ ಸಂವಾದ ನಡೆಸಿದ್ದು, ಎಎಸ್- ಐಟಿ- ಐಎಸ್ ನ್ಯೂಟ್ರಿಷನ್ ಪೌಷ್ಟಿಕತಜ್ಞೆ ಪ್ರೀತಿ ಕೊರ್ಗಾಂವ್ಕರ್ ಅವರು ಮಕ್ಕಳ ಆಹಾರದಲ್ಲಿ ಪ್ರೋಟೀನ್ಗಳ ಪ್ರಾಮುಖ್ಯತೆ ಮತ್ತು ಮ್ಯಾಕ್ರೋನ್ಯೂಟ್ರಿಯಂಟ್ ಸಾಕಷ್ಟು ಸಿಗದಿದ್ದಾಗ ಏನಾಗುತ್ತದೆ ಎಂಬುದನ್ನು ಸವಿವರವಾಗಿ ವಿವರಿಸಿದ್ದಾರೆ.

ಪ್ರೋಟೀನ್ ಅಮೈನೋ ಆಮ್ಲಗಳಿಂದ ಮಾಡಲ್ಪಟ್ಟಿದೆ, ಅವು ದೇಹದ ಬಿಲ್ಡಿಂಗ್ ಬ್ಲಾಕ್ಗಳಾಗಿವೆ. ಈ ಅಮೈನೋ ಆಮ್ಲಗಳು ವಿವಿಧ ಶಾರೀರಿಕ ಪ್ರಕ್ರಿಯೆಗಳಿಗೆ ಅತ್ಯಗತ್ಯ, ಅವುಗಳೆಂದರೆ:

ಸ್ನಾಯು ಬೆಳವಣಿಗೆ: ಸ್ನಾಯು ಅಂಗಾಂಶಗಳ ಬೆಳವಣಿಗೆ ಪ್ರೋಟೀನ್ ಅವಶ್ಯಕ. ಬಾಲ್ಯದಲ್ಲಿ, ಬೆಳವಣಿಗೆಯು ತ್ವರಿತವಾಗಿದ್ದಾಗ, ಪ್ರೋಟೀನ್ ನ ಸ್ಥಿರ ಪೂರೈಕೆ ಅತ್ಯಗತ್ಯವಾಗಿರುತ್ತದೆ.

ಮೆದುಳಿನ ಕಾರ್ಯ: ಪ್ರೋಟೀನ್ ಗಳು ಮೆದುಳಿನ ಜೀವಕೋಶಗಳ ನಡುವಿನ ಸಂವಹನವನ್ನು ಸುಗಮಗೊಳಿಸುವ ರಾಸಾಯನಿಕಗಳಾಗಿವೆ. ಬೆಳವಣಿಗೆ, ಕಲಿಕೆ ಮತ್ತು ಸ್ಮರಣೆಗೆ ಸಾಕಷ್ಟು ಪ್ರೋಟೀನ್ ಸೇವನೆ ಅವಶ್ಯಕ.

ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ: ಪ್ರೋಟೀನ್ ಕೊರತೆಯಾದರೆ ಸೋಂಕಿನ ವಿರುದ್ಧ ಹೋರಾಡುವ ಮಗುವಿನ ಸಾಮರ್ಥ್ಯ ದುರ್ಬಲಗೊಳ್ಳುತ್ತದೆ.

ಹಾರ್ಮೋನ್ ಉತ್ಪಾದನೆ: ಪ್ರೋಟೀನ್ ಕೊರತೆಯು ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗಬಹುದು, ಇದು ಒಟ್ಟಾರೆ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: ಯಾವ ಬೆರಳಿಗೆ ಯಾವ ಉಂಗುರ ಧರಿಸಬೇಕು… ಯಾವ ಬೆರಳಿಗೆ ಹಾಕಿಕೊಳ್ಳಬಾರದು? ಇಲ್ಲಿದೆ ತಜ್ಞರ ವಿವರಣೆ

ಮಕ್ಕಳಲ್ಲಿ ಪ್ರೋಟೀನ್ ಕೊರತೆಯಾಗಿದೆ ಎಂದು ಹೇಗೆ ತಿಳಿಯುತ್ತದೆ?

ಮಕ್ಕಳಲ್ಲಿ ಪ್ರೋಟೀನ್ ಕೊರತೆಯು ವಿವಿಧ ರೀತಿಯಲ್ಲಿ ಕಂಡು ಬರುತ್ತದೆ. ಆದರೆ ಪೋಷಕರು ಈ ಲಕ್ಷಣಗಳನ್ನು ನಿರ್ಲಕ್ಷಿಸದೆಯೇ ಗುರುತಿಸಬೇಕು. ಅಂತಹ ಕೆಲವು ಸಾಮಾನ್ಯ ಸೂಚಕಗಳು ಇಲ್ಲಿವೆ:

ಬೆಳವಣಿಗೆಯಲ್ಲಿ ಕುಂಠಿತವಾಗುವುದು ಜೊತೆಗೆ ತೂಕ ಹೆಚ್ಚಳವಾಗದಿರುವುದು: ಮಕ್ಕಳಲ್ಲಿ ಪ್ರೋಟೀನ್ ಕೊರತೆಯಾಗಿದೆ ಎಂದು ತಿಳಿಯುವುದು ಮಕ್ಕಳ ಬೆಳವಣಿಗೆ ಕುಂಠಿತಗೊಂಡಾಗ ಅಥವಾ ತೂಕ ಹೆಚ್ಚಿಸಲು ವಿಫಲವಾದಾಗ. ಮೂಳೆಗಳು, ಸ್ನಾಯುಗಳು ಮತ್ತು ಇತರ ಅಂಗಾಂಶಗಳ ಬೆಳವಣಿಗೆಗೆ ಪ್ರೋಟೀನ್ ಅತ್ಯಗತ್ಯ, ಮತ್ತು ಅದರ ಕೊರತೆಯು ನಿಧಾನಗತಿಯ ಬೆಳವಣಿಗೆಗೆ ಕಾರಣವಾಗಬಹುದು.

ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆ: ಪ್ರೋಟೀನ್ ಕೊರತೆಯಿರುವ ಮಕ್ಕಳು ಸೋಂಕು ಮತ್ತು ಕಾಯಿಲೆಗಳಿಗೆ ಹೆಚ್ಚು ಒಳಗಾಗುತ್ತಾರೆ. ದುರ್ಬಲ ರೋಗನಿರೋಧಕ ಶಕ್ತಿಯಿಂದಾಗಿ ಅವರಿಗೆ ಆಗಾಗ ಶೀತ, ಉಸಿರಾಟದ ಸಮಸ್ಯೆ ಸೇರಿದಂತೆ ಇತರ ಕಾಯಿಲೆಗಳು ಪದೇ ಪದೇ ಕಂಡುಬರುತ್ತದೆ.

ಆಯಾಸ: ಪ್ರೋಟೀನ್ ಶಕ್ತಿಯ ಮೂಲವಾಗಿದೆ, ಹಾಗಾಗಿ ಸಾಕಷ್ಟು ಪ್ರೋಟೀನ್ ಸೇವನೆಯು ದೀರ್ಘಕಾಲದ ಆಯಾಸದ ಜೊತೆಗೆ ದೈಹಿಕ ಚಟುವಟಿಕೆ ಕಡಿಮೆಯಾಗಲು ಕಾರಣವಾಗಬಹುದು. ಮಕ್ಕಳಲ್ಲಿ ಆಲಸ್ಯ ಹೆಚ್ಚಾಗಬಹುದು.

ಕೂದಲು, ಚರ್ಮ ಮತ್ತು ಉಗುರು ಸಮಸ್ಯೆಗಳು: ಪ್ರೋಟೀನ್ ಕೊರತೆಯಾದರೆ ಮಗುವಿನ ಕೂದಲು, ಚರ್ಮ ಮತ್ತು ಉಗುರುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೂದಲು ಒಡೆಯುವುದು ಅಥವಾ ತೆಳುವಾಗುವುದು, ಒಣ ಮತ್ತು ಚಪ್ಪಟೆಯಾದ ಚರ್ಮ ಮತ್ತು ದುರ್ಬಲ ಅಥವಾ ಹಿಗ್ಗಿರುವ ಉಗುರುಗಳು ಕಂಡುಬರಬಹುದು.

ಗಾಯ ಗುಣಪಡಿಸುವಿಕೆ ವಿಳಂಬವಾಗುವುದು: ಪ್ರೋಟೀನ್ ಕೊರತೆಯಿರುವ ಮಕ್ಕಳಿಗೆ ಗಾಯವಾದರೆ ಅದು ಗುಣವಾಗಲು ಸಮಯ ತೆಗೆದುಕೊಳ್ಳಬಹುದು.

ಹಾಗಾಗಿ ಮಕ್ಕಳಲ್ಲಿ ಪ್ರೋಟೀನ್ ಕೊರತೆಯನ್ನು ತಡೆಯಲು ಉತ್ತಮ ಪ್ರಮಾಣದ ಪ್ರೋಟೀನ್ ಒಳಗೊಂಡಿರುವ ಸಮತೋಲಿತ ಆಹಾರವನ್ನು ಸೇವನೆ ಮಾಡಬೇಕು. ಹೇಗೆ? ಇಲ್ಲಿದೆ ಸರಳ ಪರಿಹಾರ.

ಪ್ರೋಟೀನ್ ಭರಿತ ಆಹಾರಗಳನ್ನು ಮಗುವಿನ ಆಹಾರದಲ್ಲಿ ಸೇರಿಸಿ: ತೆಳ್ಳಗಿನ ಮಾಂಸ, ಕೋಳಿ, ಮೀನು, ಮೊಟ್ಟೆ, ಡೈರಿ ಉತ್ಪನ್ನಗಳು, ಬೀನ್ಸ್, ಮಸೂರ, ಬೀಜ ಮತ್ತು ಧಾನ್ಯಗಳಂತಹ ವಿವಿಧ ಪ್ರೋಟೀನ್ ಭರಿತ ಆಹಾರಗಳನ್ನು ನಿಮ್ಮ ಮಗುವಿನ ಆಹಾರದಲ್ಲಿ ಸೇರಿಸಿ. ಜೊತೆಗೆ ಕ್ವಿನೋವಾದಂತಹ ಸಸ್ಯ ಆಧಾರಿತ ಪ್ರೋಟೀನ್ಗಳು ಅತ್ಯುತ್ತಮ ಮೂಲಗಳಾಗಿವೆ.

ವಯಸ್ಸಿಗೆ ತಕ್ಕಂತೆ ಪ್ರೋಟೀನ್ ಸೇವನೆಯನ್ನು ಹೆಚ್ಚಿಸಿ: ಮಗುವಿನ ಪ್ರೋಟೀನ್ ಅಗತ್ಯಗಳ ಬಗ್ಗೆ ಜಾಗರೂಕರಾಗಿರಿ, ಇದು ವಯಸ್ಸು, ತೂಕ ಮತ್ತು ಚಟುವಟಿಕೆಯ ಮಟ್ಟವನ್ನು ಅವಲಂಬಿಸಿ ಬದಲಾಗುತ್ತದೆ. ಸಾಮಾನ್ಯವಾಗಿ, ಮಕ್ಕಳಿಗೆ ಪ್ರತಿದಿನ ದೇಹದ ತೂಕಕ್ಕೆ ಅನುಗುಣವಾಗಿ ಪ್ರೋಟೀನ್ ಅಗತ್ಯವಿರುತ್ತದೆ. ಹಾಗಾಗಿ ಮಕ್ಕಳ ತಜ್ಞರು ಅಥವಾ ಪೌಷ್ಟಿಕ ತಜ್ಞರನ್ನು ಸಂಪರ್ಕಿಸಿ ನಿಮ್ಮ ಮಗುವಿಗೆ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ.

ಶಿಕ್ಷಣ ಮತ್ತು ಜಾಗೃತಿ: ಮಕ್ಕಳ ಬೆಳವಣಿಗೆಯಲ್ಲಿ ಪ್ರೋಟೀನ್ ನ ಪ್ರಾಮುಖ್ಯತೆಯ ಬಗ್ಗೆ ನೀವು ತಿಳಿದುಕೊಂಡು ಇತರರಿಗೆ ಸರಿಯಾದ ಮಾಹಿತಿ ನೀಡಿ. ಇದು ಪ್ರೋಟೀನ್ ಕೊರತೆ ಮತ್ತು ಅದಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ತಡೆಯಲು, ಈ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ, ಆದರೆ ನಿಮ್ಮ ಮಗುವಿಗೆ ಯಾವುದೇ ರೀತಿಯ ಪ್ರೋಟೀನ್ ಪೂರಕ ಆಹಾರವನ್ನು ಪ್ರಾರಂಭಿಸುವ ಮೊದಲು ವೃತ್ತಿಪರ ಸಲಹೆಯನ್ನು ಪಡೆಯುವುದು ಅತ್ಯಗತ್ಯ. ಪ್ರೋಟೀನ್ ಕೊರತೆಯು ಮಗುವಿನ ಬೆಳವಣಿಗೆಗೆ, ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಇದರ ಲಕ್ಷಣಗಳನ್ನು ಮುಂಚಿತವಾಗಿ ಗುರುತಿಸಿ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ