Teachers Day 2024 : ನಿಮ್ಮ ಕೈಯಾರೆ ಈ ಗ್ರೀಟಿಂಗ್ ಕಾರ್ಡ್ ಮಾಡಿ ಶಿಕ್ಷಕರಿಗೆ ಶುಭಾಶಯ ತಿಳಿಸಿ
ಶಿಕ್ಷಕ ಹಾಗೂ ತತ್ವಜ್ಞಾನಿಯಾಗಿರುವ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ. ರಾಧಾಕೃಷ್ಣನ್ ಜನ್ಮದಿನವನ್ನು ಶಿಕ್ಷಕರ ದಿನ ಎಂದು ದೇಶದೆಲ್ಲೆಡೆ ಆಚರಿಸಲಾಗುತ್ತದೆ. ಈ ದಿನದಂದು ನಿಮ್ಮ ನೆಚ್ಚಿನ ಶಿಕ್ಷಕರಿಗೆ ಗ್ರೀಟಿಂಗ್ ಕಾರ್ಡ್, ಹೂವುಗಳು ಹಾಗೂ ಉಡುಗೊರೆಯನ್ನು ನೀಡುವ ಮೂಲಕ ಗೌರವ, ಅಭಿನಂದನೆ ಹಾಗೂ ಶುಭಾಶಯಗಳನ್ನು ತಿಳಿಸುತ್ತಾರೆ. ಈ ಬಾರಿಯ ಶಿಕ್ಷಕರ ದಿನಕ್ಕೆ ಕೈಯಾರೆ ವಿವಿಧ ವಿನ್ಯಾಸದ ಕಾರ್ಡ್ ಗಳನ್ನು ತಯಾರಿಸಿ ನೀಡಬಹುದು.
ಪ್ರತಿಯೊಬ್ಬರ ಜೀವನದಲ್ಲಿಯೂ ತಂದೆ ತಾಯಿಯಂತೆ ಶಿಕ್ಷಕರ ಪಾತ್ರವು ಅಗಾಧವಾದದ್ದು. ಕೈಹಿಡಿದು ಅಕ್ಷರ ತಿದ್ದಿ, ಓದಿ–ಬರೆಯಲು ಕಲಿಸಿದ್ದು ಮಾತ್ರವಲ್ಲದೇ ಜೀವನ ಮೌಲ್ಯಗಳನ್ನು ಹೇಳುತ್ತಾ ಉತ್ತಮ ಪ್ರಜೆಯನ್ನಾಗಿ ರೂಪಿಸಿದವರು ಈ ಶಿಕ್ಷಕರು. ಪ್ರತಿವರ್ಷ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಶಾಲಾ ಕಾಲೇಜುಗಳಲ್ಲಿ ಅತ್ಯಂತ ವಿಜೃಂಭಣೆ ಮತ್ತು ಸಡಗರದಿಂದ ವಿಭಿನ್ನ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ತಮ್ಮ ಕೈಯಾರೆ ಮಾಡಿದ ಗ್ರೀಟಿಂಗ್ ಕಾರ್ಡ್ ಶಿಕ್ಷಕರಿಗೆ ನೀಡಿ ಅವರ ಮುಖದಲ್ಲಿ ನಗು ಮೂಡಿಸಬಹುದು.
- ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಶುಭಾಶಯ ಕೋರಲು ಗ್ರೀಟಿಂಗ್ ಕಾರ್ಡ್ ನೀಡಲು ಬಯಸಿದ್ದರೆ ಬಿಳಿ ಡ್ರಾಯಿಂಗ್ ಹಾಳೆಯ ಮೇಲೆ ವಿವಿಧ ಸಾಲುಗಳನ್ನು ಬರೆದು ಆಕರ್ಷಕವಾಗಿ ಕಾಣಲು ಸ್ಕೆಚ್ ಪೆನ್ನುಗಳನ್ನು ಬಳಸಬಹುದು. ಈ ಗ್ರೀಟಿಂಗ್ ಕಾರ್ಡ್ ಮೂಲಕ ಶಿಕ್ಷಕರ ಬಗ್ಗೆ ನಿಮ್ಮ ಭಾವನೆಯನ್ನು ವ್ಯಕ್ತಪಡಿಸಬಹುದು.
- ಮಕ್ಕಳು ಪಾಪ್ ಅಪ್ ಕಾರ್ಡ್ ವಿನ್ಯಾಸವನ್ನು ಆಯ್ಕೆ ಮಾಡಬಹುದು. ಈ ಕಾರ್ಡ್ ತಯಾರಿಕೆಯೂ ಸುಲಭವಾಗಿದ್ದು, ಕಾಗದದ ಮೇಲೆ ವಿವಿಧ ಆಕಾರಗಳನ್ನು ಕತ್ತರಿಸಿ ಹಾಳೆಯ ಮೇಲೆ ಅಂಟಿಸುವುದು. ಇಲ್ಲವಾದರೆ ಅಲಂಕಾರಿಕ ವಸ್ತುಗಳನ್ನು ಅಂಟಿಸಿ ಆಕರ್ಷಕವಾಗಿ ಗ್ರೀಟಿಂಗ್ ಕಾರ್ಡ್ ಕಾಣುವಂತೆ ಮಾಡಬಹುದು.
- ಸೃಜನಶೀಲವಾಗಿ ಕಾರ್ಡ್ ವಿನ್ಯಾಸ ಮಾಡಬೇಕೆಂದು ಕೊಂಡಿರುವ ಮಕ್ಕಳಿಗೆ ಈ ಗ್ರೀಟಿಂಗ್ ಕಾರ್ಡ್ ವಿನ್ಯಾಸಗಳು ಉತ್ತಮ ಆಯ್ಕೆಯಾಗಿದೆ. ಶಿಕ್ಷಕರ ಕುರಿತಾದ ಕೆಲವು ಸಾಲುಗಳೊಂದಿಗೆ ಜೇನುನೊಣಗಳ ಚಿತ್ರವನ್ನು ಬಿಡಿಸಬಹುದು. ಹೆಬ್ಬೆರಳನ್ನು ಬಳಸಿಕೊಂಡು ಈ ರೇಖಾಚಿತ್ರ ವಿನ್ಯಾಸವನ್ನು ಬರೆಯಬಹುದಾಗಿದೆ.
- ಕೆಲವು ಕಾಗದದ ಕಲಾಕೃತಿಗಳನ್ನು ತಯಾರಿಸಿ ಈ ಗ್ರೀಟಿಂಗ್ ಕಾರ್ಡ್ ತಯಾರಿಸಬಹುದು. ಶಿಕ್ಷಕರ ದಿನಾಚರಣೆಗಾಗಿ ಈ ವಿಶೇಷ ಕಾರ್ಡ್ ಮಾಡಲು ಡಿಸೈನರ್ ಟೇಪ್‌ಗಳ ಜೊತೆಗೆ ಹೂವಿನ ಡಿಸೈನ್ ಜೊತೆಗೆ ನಿಮ್ಮ ನೆಚ್ಚಿನ ಶಿಕ್ಷಕರ ಹೆಸರನ್ನು ಸೇರಿಸುವ ಮೂಲಕ ಈ ಕಾರ್ಡ್ ಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡಬಹುದು. ಈ ವಿಭಿನ್ನವಾದ ಕಾರ್ಡ್ ಗಳನ್ನು ಮಾಡಲು ಯುಟ್ಯೂಬ್ ಸಹಾಯವನ್ನು ಪಡೆದುಕೊಳ್ಳಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:47 am, Wed, 4 September 24