Raksha Bandhan 2021: ರಾಖಿ ಕಟ್ಟುವ ಜೊತೆಗೆ ಈ ಸಿಹಿ ತಿಂಡಿಯನ್ನು ನಿಮ್ಮ ಸಹೋದರರಿಗೆ ತಿನಿಸಿ
ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಇದನ್ನು ಮನೆಯಲ್ಲೇ ಮಾಡಿ ತಿನ್ನಿ. ಸಂಜೆ ಹೊತ್ತಿಗೆ ಬಿಸಿ ಬಿಸಿ ಕಾಫಿ ಜೊತೆಗೆ ಇದನ್ನು ಸೇವಿಸಬಹುದು. ಮಕ್ಕಳಿಗೆ ಇಷ್ಟವಾಗುವ ತಿಂಡಿಗಳಲ್ಲಿ ಇದು ಒಂದಾಗಿದೆ.

ಸಿಹಿ ತಿಂಡಿಯನ್ನು ಇಷ್ಟಪಡದವರು ಯಾರಿದ್ದಾರೆ ಹೇಳಿ? ಯಾವುದೇ ಶುಭ ಸಂದರ್ಭದಲ್ಲಿ ಸಿಹಿಯನ್ನು ತಿಂದು ಆ ಕ್ಷಣವನ್ನೂ ಪ್ರತಿಯೊಬ್ಬರೂ ಆನಂದಿಸುತ್ತಾರೆ. ಹಬ್ಬ- ಹರಿದಿನ ಸೇರಿ ಯಾವುದೇ ಖುಷಿ ಸಂದರ್ಭದಲ್ಲೂ ಸಿಹಿಯನ್ನು ಸೇವಿಸುವುದು ಭಾರತದ ಸಂಸ್ಕೃತಿಯಾಗಿ ಬಿಟ್ಟಿದೆ. ಇನ್ನು ಅಣ್ಣ- ತಂಗಿಯ ಪವಿತ್ರ ಸಂಬಂಧಕ್ಕೆ ಅರ್ಥ ಕಲ್ಪಿಸುವ ದಿನವಾದ ರಕ್ಷಾ ಬಂಧನ (Raksha Bandhan) ದಿನದಂದು ಮನೆಯಲ್ಲಿ ಸಿಹಿ ಮಾಡಿ ಸವಿಯಿರಿ. ಕಡಿಮೆ ಸಮಯದಲ್ಲಿ ಯಾವ ಸಿಹಿ ತಿಂಡಿ ಮಾಡಬಹುದು ಅಂತ ನೀವು ಯೋಚಿಸುತ್ತಿದ್ದರೆ, ನಾವು ಶಂಕರಪಾಲಿ ಮಾಡುವ ವಿಧಾನವನ್ನು ತಿಳಿಸುತ್ತೇವೆ ನೋಡಿ.
ಶಂಕರಪಾಲಿ ತಿಂಡಿ ತಿನ್ನಲು ತುಂಬಾ ರುಚಿಯಿರುತ್ತದೆ. ಇದು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಇದನ್ನು ಮನೆಯಲ್ಲೇ ಮಾಡಿ ತಿನ್ನಿ. ಸಂಜೆ ಹೊತ್ತಿಗೆ ಬಿಸಿ ಬಿಸಿ ಕಾಫಿ ಜೊತೆಗೆ ಇದನ್ನು ಸೇವಿಸಬಹುದು. ಮಕ್ಕಳಿಗೆ ಇಷ್ಟವಾಗುವ ತಿಂಡಿಗಳಲ್ಲಿ ಇದು ಒಂದಾಗಿದೆ.
ಶಂಕರಪಾಲಿಯನ್ನು ಮಾಡಲು, ಮೈದಾ ಹಿಟ್ಟು, ಎಣ್ಣೆ, ಉಪ್ಪು, ಏಲಕ್ಕಿ ಮತ್ತು ಸಕ್ಕರೆ ಬೇಕಾಗುತ್ತದೆ. ಮಾಡುವ ವಿಧಾನವನ್ನು ಈ ಕೆಳಗಂಡಂತೆ ತಿಳಿಸಲಾಗಿದೆ.
ಮೈದಾ ಹಿಟ್ಟು- ಅರ್ಧ ಕಪ್ ಸಕ್ಕರೆ – 4 ಚಮಚ ಏಲಕ್ಕಿ ಪುಡಿ- ಅರ್ಧ ಚಮಚ ಉಪ್ಪು – 1 ಚಿಟಕಿ ಎಣ್ಣೆ – 2 ಚಮಚ
ಒಂದು ಬೌಲ್ಗೆ ಎಣ್ಣೆ ಹಾಕಿ. ಅದಕ್ಕೆ ಅರ್ಧ ಕಪ್ ಮೈದಾ ಹಿಟ್ಟು ಮತ್ತು ಸಕ್ಕರೆ ಸೇರಿಸಿ. ನಂತರ ಏಲಕ್ಕಿ ಪುಡಿ ಹಾಕಿ ಕಲಸಿ. ಸ್ವಲ್ಪ ನೀರು ಸೇರಿಸಿ ಹದವಾಗಿ ಮಿಶ್ರಣ ಮಾಡಿ. ಒಂದು ಚಿಟಕಿ ಉಪ್ಪು ಹಾಕಿ. ಬಳಿಕ ಮಿಶ್ರಣಗೊಂಡ ಹಿಟ್ಟನ್ನು ಸ್ವಲ್ಪ ಸ್ವಲ್ಪ ತೆಗೆದುಕೊಂಡು ದಪ್ಪವಾಗಿ ಲಟ್ಟಿಸಿ. ಚಪಾತಿ ರೀತಿ ಲಟ್ಟಿಸಿ. ಲಟ್ಟಿಸುವಾಗ ಮಿಶ್ರಣದ ಹಿಟ್ಟಿನ ಕೆಳಗೆ ಮತ್ತು ಮೇಲೆ ಸ್ವಲ್ಪ ಮೈದಾ ಹಿಟ್ಟನ್ನು ಹಾಕಿಕೊಳ್ಳಿ.
ಲಟ್ಟಿಸಿದ ನಂತರ ಡೈಮಂಡ್ ಆಕಾರದಲ್ಲಿ ಚಾಕುವಿನಿಂದ ಕತ್ತರಿಸಿ. ಕತ್ತರಿಸಿದ ತುಂಡುಗಳನ್ನು ಕಾದ ಎಣ್ಣೆಯಲ್ಲಿ ಕರಿಯಿರಿ. ಗೋಲ್ಡನ್ ಬಣ್ಣ ಬರುವವರೆಗೆ ಕರಿಯಿರಿ. ಬಿಸಿ ಬಿಸಿಯಾದ ಶಂಕರಪಾಲಿಯನ್ನು ನಿಮ್ಮ ಸಹೋದರರಿಗೆ ತಿನಿಸಿ ರಕ್ಷಾ ಬಂಧನವನ್ನು ಆಚರಿಸಿ.

ಶಂಕರಪಾಲಿ
ಇದನ್ನೂ ಓದಿ
Hair Care Tips: ನಿಮಗೆ ಉದ್ದ ಕೂದಲು ಇಷ್ಟನಾ? ಆಲಿವ್ ಎಣ್ಣೆಯನ್ನು ಹೀಗೆ ಬಳಸಿ
(Sweet shankarpali recipe for raksha bandhan)
Published On - 5:00 pm, Sat, 21 August 21