
ಬೇಸಿಗೆಯಲ್ಲಿ ನಮ್ಮ ದೇಹದಲ್ಲಿ ನೀರಿನಾಂಶ ಇಟ್ಟುಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ. ಏಕೆಂದರೆ ಹವಾಮಾನವು ಬಿಸಿಯಾಗಿರುವಾಗ, ನಾವು ಹೆಚ್ಚು ಬೆವರುತ್ತೇವೆ. ಮತ್ತು ಇದರಿಂದ ನಮ್ಮ ದೇಹದಲ್ಲಿನ ಹೆಚ್ಚಿನ ನೀರಿನಾಂಶವನ್ನು ಕಳೆದುಕೊಳ್ಳುತ್ತೇವೆ. ಇದು ಆಯಾಸ, ಅಶಕ್ತಿ ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಬೇಸಿಗೆಯಲ್ಲಿ ನಮ್ಮ ದೇಹವನ್ನು ಹೈಡ್ರೇಟ್ ಆಗಿ ಇರಿಸುವಂತಹ ಅನೇಕ ಪಾನೀಯಗಳಿವೆ. ಅವುಗಳಲ್ಲಿ ನಿಂಬೆ ಶುಂಠಿ ಮಾವಿನಹಣ್ಣಿನ ಸಂಯೋಜನೆಯ ಪಾನಕವು ಬೆಸಿಗೆಯಲ್ಲಿ ಸೇವಿಸಲು ಉತ್ತಮವಾದ ಪಾನೀಯವಾಗಿದೆ. ಜೊತೆಗೆ ಇದು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ಮಾವು ಮತ್ತು ಶುಂಠಿಯು ಉತ್ಕರ್ಷಣ ನಿರೋಧಕ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಹಾಗೂ ಇವುಗಳ ತ್ವಚೆಯ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದರ ನಿರ್ವಿಶೀಕರಣ ಗುಣಲಕ್ಷಣಗಳು ದೇಹದಿಂದ ಹಾನಿಕಾರಕ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹಾಗಾಗಿ ಇದು ಬೇಸಿಗೆಯಲ್ಲಿ ಸೇವನೆ ಮಾಡಲು ಉತ್ತಮ ಪಾನೀಯವಾಗಿದೆ.
ರೆಫ್ರೆಶ್: ನಿಂಬೆ ಪಾನಕವು ಬೇಸಿಗೆಯಲ್ಲಿ ಸೇವಿಸಬಹುದಾದ ಉತ್ತಮ ಪಾನೀಯವಾಗಿದೆ. ಮತ್ತು ಇದಕ್ಕೆ ಮಾವು ಮತ್ತು ಶುಂಠಿಯನ್ನು ಸೇರಿಸಿ ಕುಡಿಯುವುದರಿಂದ ಇದು ಬಾಯಾರಿಕೆಯನ್ನು ತಣಿಸುತ್ತದೆ.
ಇದನ್ನೂ ಓದಿ:Upma For Weight Loss: ತೂಕ ನಷ್ಟಕ್ಕೆ ಸಹಾಯಕವಾಗುವ ಆರೋಗ್ಯಕರ ರಾಗಿ ಉಪ್ಪಿಟ್ಟು ಪಾಕವಿಧಾನ ಇಲ್ಲಿದೆ
ನೀರಿನಾಂಶ: ಬೇಸಿಗೆಯಲ್ಲಿ ದೇಹದಲ್ಲಿನ ನಿರ್ಜಲೀಕರಣವನ್ನು ತಡೆಯಲು ನಿಂಬೆ ಪಾನಕವು ಅತ್ಯುತ್ತಮ ಪಾನೀಯವಾಗಿದೆ. ಮಾವಿನ ಹಣ್ಣಿನಲ್ಲಿ 83% ನೀರಿನಾಂಶ ಇರುವುದರಿಂದ ನಿಂಬೆ ಹಣ್ಣಿನ ಪಾನಕದೊಂದಿಗೆ ಇದನ್ನು ಸೇರಿಸಿ ಕುಡಿಯವುದರಿಂದ ಇನ್ನಷ್ಟು ಉತ್ತಮ ಫಲಿತಾಂಶವನ್ನು ನೀಡುತ್ತದೆ.
ಜೀರ್ಣಕ್ರಿಯೆಗೆ ಸಹಕಾರಿ: ಶುಂಠಿಯು ಅದರ ಜೀರ್ಣಕಾರಿ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಇದು ಹೊಟ್ಟೆಯ ಕಾಯಿಲೆಯನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಊಟದ ನಂತರ ಮಾವು ನಿಂಬೆ ಪಾನಕಕ್ಕೆ ಶುಂಠಿಯನ್ನು ಸೇರಿಸಿ ಕುಡಿಯುವುದರಿಂದ ಇದು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ.
ಪೋಷಕಾಂಶಗಳಿಂದ ಕೂಡಿದೆ: ಈ ಪಾನೀಯವು ಅಧಿಕ ಪೊಷಕಾಂಶಗಳಿಂದ ಕೂಡಿದೆ. ಮಾವು ವಿಟಮಿನ್ ಎ ಮತ್ತು ಸಿ ಯ ಸಮೃದ್ಧ ಮೂಲವಾಗಿದೆ. ನಿಂಬೆಯು ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತ ವಿರೋಧಿ ಲಕ್ಷಣಗಳನ್ನು ಹೊಂದಿದೆ. ಮತ್ತು ಶುಂಠಿಯು ಅದರ ಆಂಟಿವೈರಲ್ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ.
ಶುಂಠಿ ಹಸಿವನ್ನು ನಿಗ್ರಹಿಸುತ್ತದೆ. ಇದು ತೂಕನಷ್ಟಕ್ಕೆ ಕೂಡಾ ಸಹಕಾರಿಯಾಗಿದೆ. ಜೊತೆಗೆ ಇದು ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ. ನಿಂಬೆ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಿಂದ ಹೇರಳವಾಗಿದೆ, ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗಾಗಿ ಮೂರು ಪದಾರ್ಥಗಳ ಸಂಯೋಜನೆಯ ಪಾನೀಯವು ಆರೋಗ್ಯಕ್ಕೆ ಅದ್ಭುತ ಪ್ರಯೋಜನವನ್ನು ನೀಡುತ್ತದೆ.
ಬೇಕಾಗುವ ಪದಾರ್ಥಗಳು: ಶುಂಠಿ, ನಿಂಬೆ, ಮಾವಿನ ಹಣ್ಣು, ಜೇನುತುಪ್ಪ ಹಾಗೂ ಕೆಲವು ಮೂಲ ಪದಾರ್ಥಗಳು.
ವಿಧಾನ: ಮಾವಿನ ಹಣ್ಣಿನ ಪ್ಯೂರಿಯನ್ನು ತಯಾರಿಸಿ ಹಾಗೂ ಇದನ್ನು ನಿಂಬೆರಸ, ಜೇನು ತುಪ್ಪ, ತುರಿದ ಶುಂಠಿ ಮತ್ತು ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಿಮ್ಮ ರುಚಿಗೆ ತಕ್ಕಂತೆ ಸಿಹಿಯನ್ನು ಹೊಂದಿಸಿ. ರೆಫ್ರಿಜರೆಟರ್‌ನಲ್ಲಿ ಇಟ್ಟು ತಣ್ಣಗಾಗಿಸಿ ನಂತರ ಸೇವಿಸಿ.
Published On - 1:45 pm, Sat, 8 April 23