AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship: ಸಂಬಂಧಗಳು ತುಂಬಾ ಸೂಕ್ಷ್ಮ, ಇಬ್ಬರೂ ಭಾವನಾತ್ಮಕವಾಗಿ ಸ್ಪಂದಿಸಿದರೆ ಮಾತ್ರ ಜೀವನ ಪಾವನ

ಸಂಬಂಧ(Relationship)ಗಳು ತುಂಬಾ ಸೂಕ್ಷ್ಮ ಇಬ್ಬರೂ ಭಾವನಾತ್ಮಕವಾಗಿ ಸ್ಪಂದಿಸಿದರೆ ಮಾತ್ರ ಜೀವನ ಸುಖಮಯವಾಗಿರಲು ಸಾಧ್ಯ.

Relationship: ಸಂಬಂಧಗಳು ತುಂಬಾ ಸೂಕ್ಷ್ಮ, ಇಬ್ಬರೂ ಭಾವನಾತ್ಮಕವಾಗಿ ಸ್ಪಂದಿಸಿದರೆ ಮಾತ್ರ ಜೀವನ ಪಾವನ
RelationshipImage Credit source: Healthshots.com
ನಯನಾ ರಾಜೀವ್
|

Updated on: Jun 26, 2023 | 3:28 PM

Share

ಸಂಬಂಧ(Relationship)ಗಳು ತುಂಬಾ ಸೂಕ್ಷ್ಮ ಇಬ್ಬರೂ ಭಾವನಾತ್ಮಕವಾಗಿ ಸ್ಪಂದಿಸಿದರೆ ಮಾತ್ರ ಜೀವನ ಸುಖಮಯವಾಗಿರಲು ಸಾಧ್ಯ. ಹಣವಿದೆ, ಬೆಟ್ಟದಷ್ಟು ಪ್ರೀತಿ ಮಾಡ್ತೀನಿ ಇನ್ನೇನು ಬೇಕು ಎಂದೆನಿಸಬಹುದು ಆದರೆ ಕಾಳಜಿಯೂ ಕೂಡ ಮುಖ್ಯವಾಗುತ್ತದೆ. ಆಕೆ ಅಥವಾ ಆತ ಅತ್ತಾಗ ಸಂತೈಸುವ ಕೈಗಳು ಬೇಕು, ಸಂತಸದ ಸಮಯದಲ್ಲಿ ನಮ್ಮ ಜತೆಯೇ ನಗುವ ಮುಖಗಳೂ ಕೂಡ ಬೇಕು, ಬೇಸರ ಬೇಡ ನಾನಿದ್ದೇನೆ ಎನ್ನುವ ಸಾಂತ್ವನ ನೀಡುವ ಮಾತುಗಳೂ ಬೇಕು. ಹಣದಿಂದ ಇವೆಲ್ಲವನ್ನು ಖರೀದಿಸಲು ಸಾಧ್ಯವಿಲ್ಲ.

ಭಾವನಾತ್ಮಕವಾಗಿ ಹತ್ತಿರವಿಲ್ಲದ ನಿಮ್ಮ ಸಂಗಾತಿಯು ತನ್ನ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಕೂಡ ಕಷ್ಟ ಅನುಭವಿಸಬಹುದು. ಭಾವನಾತ್ಮಕವಲ್ಲದ ಸಂಗಾತಿಯು ನಿಮ್ಮ ಯಾವ ಭಾವನೆಗಳಿಗೂ ಪ್ರತಿಕ್ರಿಯಿಸುವುದಿಲ್ಲ, ಭಾವನಾತ್ಮಕ ವಿಷಯಗಳನ್ನು ಚರ್ಚಿಸಿದಾಗ ಅಥವಾ ಬೆಂಬಲವನ್ನು ಬಯಸಿದಾಗ ಸಂಗಾತಿಯ ಭಾವನೆಯನ್ನು ನಿರ್ಲಕ್ಷಿಸಬಹುದು.

ಇಂತಹ ಸಂಗಾತಿಯು ಸಾಮಾನ್ಯವಾಗಿ ಬೇರೆಯವರ ಭಾವನೆಗಳಿಗೆ ಬೆಲೆ ಕೊಡದೆ ಕೇವಲ ವೈಯಕ್ತಿಕ ಅಗತ್ಯಗಳಿಗೆ ಆದ್ಯತೆ ನೀಡುತ್ತಾರೆ. ಸಾಕಷ್ಟು ಮಂದಿ ಜತೆಗೆ ಬೆರೆಯುವುದನ್ನು ಕಲಿಯಿರಿ, ಭಾವನೆಗಳಿಗೆ ಬೆಲೆ ಕೊಡಿ ಆಗ ನಿಮ್ಮ ಮಧ್ಯೆ ಯಾವ ಕಲಹವೂ ಇರುವುದಿಲ್ಲ.

ಭಾವನೆ ಎಂಬುದು ಮನುಷ್ಯ ಜೀವನದ ಸುಂದರ ಅಂಶಗಳಲ್ಲಿ ಒಂದು ಎಂದು ಹೇಳಬಹುದು, ಅತಿಯಾದರೆ ಅಮೃತವೂ ವಿಷಯ ಎಂಬಂತೆ ನಮ್ಮ ಆಲೋಚನೆಗಳು ನಿಯಂತ್ರಣ ತಪ್ಪಿದರೆ ಹೇಗೆ ಮರುಳು ಎನಿಸಿಕೊಳ್ಳುತ್ತದೆಯೋ ಹಾಗೆಯೇ ಭಾವನೆಗಳು ಕೂಡ. ಸಮಸ್ಯೆ ಇರುವುದು ಭಾವನೆಗಳಲ್ಲಲ್ಲ.

ಮತ್ತಷ್ಟು ಓದಿ: ಒತ್ತಡ ಮತ್ತು ಆತಂಕವನ್ನು ನಿವಾರಿಸುವ ಭ್ರಮರಿ ಪ್ರಾಣಾಯಾಮದ ಬಗ್ಗೆ ಇಲ್ಲಿದೆ ಮಾಹಿತಿ

ವಿಷಾದ, ನೋವು, ಬೇಸರದ ಭಾವನೆಗಳಿರುವ ಕಾರಣದಿಂದಲೇ ನಮಗೆ ಅವು ಸಮಸ್ಯೆಗಳಂತೆ ಕಾಣುತ್ತದೆ. ಸಂತೋಷವಾಗಿದ್ದರೆ ಖುಷಿ, ಖುಷಿಯಾಗಿದ್ದರೆ ಯಾರಿಗಾದರೂ ತೊಂದರೆ ಅನಿಸುವುದಿಲ್ಲ, ಸಂತೃಪ್ತಿಯ ಭಾವ, ಸಹಾನುಭೂಮಿ ಇದ್ಯಾವುದೂ ನಮಗೆ ಕಷ್ಟವನ್ನು ಕೊಡುವುದಿಲ್ಲ.

ಭಾವನೆಗಳೇ ಬೇಡವೆಂದರೆ ಜೀವನವು ಶೂನ್ಯ ಎನಿಸುತ್ತದೆ, ಭಾವನೆಗಳಿದ್ದರಷ್ಟೇ ಮನುಷ್ಯ ಜೀವನಕ್ಕೆ ಒಂದು ಅರ್ಥ, ಭಾವನೆಗಳು ಬದುಕಿನ ಅವಿಭಾಜ್ಯ ಅಂಗ, ಅವುಗಳನ್ನು ನಿಭಾಯಿಸುವುದು, ಆಳವಾಗಿ ಅರಿತುಕೊಳ್ಳುವುದನ್ನು ನೀವು ಪ್ರಯತ್ನಿಸಬೇಕು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ