ಸಣ್ಣ ಸಣ್ಣ ವಿಷಯಕ್ಕೂ ಜಗಳ, ಇದು ಅನಾರೋಗ್ಯಕರ ಸಂಬಂಧದ ಸಂಕೇತವೇ, ನಿವಾರಿಸುವುದು ಹೇಗೆ?

ಸಂಬಂಧವನ್ನು ಗಟ್ಟಿಯಾಗಿಸಿಕೊಳ್ಳಲು ಸಾಕಷ್ಟು ದಾರಿಗಳಿವೆ, ಹಾಗೆಯೇ ಯಾವುದೋ ಒಂದು ಮನಸ್ತಾಪದಿಂದ ಸಂಬಂಧಗಳು ದೂರ ಆಗಬಹುದು. ಮಾತು ಮಾತಿಗೂ ಮುನಿಸು, ನಿಮ್ಮ ಸಂಗಾತಿ ಏನೇ ಹೇಳಿದ್ದರೂ ಅದರಲ್ಲಿ ತಪ್ಪು ಕಂಡುಹಿಡಿದು ಅದೇ ವಿಚಾರವನ್ನು ಇಟ್ಟುಕೊಂಡು ವಾದ ಮಾಡುವುದು ಇದೆಲ್ಲವೂ ಅನಾರೋಗ್ಯಕರ ಸಂಬಂಧದ ಸಂಕೇತ.

ಸಣ್ಣ ಸಣ್ಣ ವಿಷಯಕ್ಕೂ ಜಗಳ, ಇದು ಅನಾರೋಗ್ಯಕರ ಸಂಬಂಧದ ಸಂಕೇತವೇ, ನಿವಾರಿಸುವುದು ಹೇಗೆ?
ಸಂಬಂಧImage Credit source: Healthshots.com
Follow us
ನಯನಾ ರಾಜೀವ್
|

Updated on: Jun 15, 2023 | 9:00 AM

ಸಂಬಂಧವನ್ನು ಗಟ್ಟಿಯಾಗಿಸಿಕೊಳ್ಳಲು ಸಾಕಷ್ಟು ದಾರಿಗಳಿವೆ, ಹಾಗೆಯೇ ಯಾವುದೋ ಒಂದು ಮನಸ್ತಾಪದಿಂದ ಸಂಬಂಧಗಳು ದೂರ ಆಗಬಹುದು. ಮಾತು ಮಾತಿಗೂ ಮುನಿಸು, ನಿಮ್ಮ ಸಂಗಾತಿ ಏನೇ ಹೇಳಿದ್ದರೂ ಅದರಲ್ಲಿ ತಪ್ಪು ಕಂಡುಹಿಡಿದು ಅದೇ ವಿಚಾರವನ್ನು ಇಟ್ಟುಕೊಂಡು ವಾದ ಮಾಡುವುದು ಇದೆಲ್ಲವೂ ಅನಾರೋಗ್ಯಕರ ಸಂಬಂಧದ ಸಂಕೇತ. ಪ್ರತಿಯೊಬ್ಬರು ಪರಸ್ಪರ ಗೌರವಿಸಲೇಬೇಕು, ಅರ್ಥಮಾಡಿಕೊಳ್ಳಬೇಕು.

ಅನಾರೋಗ್ಯಕರ ಸಂಬಂಧದ ಚಿಹ್ನೆಗಳು 1 ಸಂವಹನ ಸ್ಥಗಿತ ಏನಾದರೂ ಸಣ್ಣ ಪುಟ್ಟ ಜಗಳವಾಯಿತು ಎಂದರೆ ತಿಂಗಳುಗಳ ಕಾಲ ಮಾತನಾಡದೇ ಇರುವುದು ಅನಾರೋಗ್ಯಕರ ಸಂಬಂಧವನ್ನು ಸೂಚಿಸುತ್ತದೆ. ಮುಕ್ತವಾಗಿ ಚರ್ಚೆ ಮಾಡದಿರುವುದು, ಮನಸ್ಸಿನಲ್ಲಿ ನೀವೇ ಏನೋ ಅಂದುಕೊಳ್ಳುವುದು, ನಿಮ್ಮ ಮಾತು ನಿಮ್ಮ ಸಂಗಾತಿಯ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.

2 ನಂಬಿಕೆಯ ಕೊರತೆ ದಿನಗಳೆದಂತೆ ನಂಬಿಕೆ ಹೆಚ್ಚಾಗಬೇಕೆ ಹೊರತು ಕಡಿಮೆಯಾಗಬಾರದು ಹಾಗಾದಾಗ ಅಸೂಯೆ, ಅನುಮಾನ ಎಲ್ಲವೂ ಸೃಷ್ಟಿಯಾಗುತ್ತದೆ. ಯಾರೊಂದಿಗೆ ಮಾತನಾಡಿದರೂ ನನಗಿಂತ ಅವರ ಬಳಿಯೇ ಹೆಚ್ಚು ಮಾತನಾಡುತ್ತಾರೆ ಅನ್ನಿಸುವುದು ಈ ರೀತಿಯ ಭಾವನೆಗಳು ಮೂಡುತ್ತವೆ. 3 ಪ್ರತಿಕ್ರಿಯೆ ಇರುವುದಿಲ್ಲ ಅನಾರೋಗ್ಯಕರ ಸಂಬಂಧದಲ್ಲಿ ಪರಸ್ಪರರ ಗಡಿ, ಆಲೋಚನೆಗಳು ಅಥವಾ ಭಾವನೆಗಳಿಗೆ ಗೌರವದ ಕೊರತೆ ಉಂಟಾಗಬಹುದು ಒಬ್ಬ ಸಂಗಾತಿ ಮತ್ತೊಬ್ಬರು ಹೇಳಿದ್ದನ್ನು ಕೇಳದೆ ಅವಮಾನಿಸಬಹುದು ಅಥವಾ ನಿರಾಕರಿಸಬಹುದು.

ಮತ್ತಷ್ಟು ಓದಿ: Relationship Tips: ಯುವ ಪೀಳಿಗೆ ದೀರ್ಘಕಾಲ ಸಂಬಂಧದಲ್ಲಿ ಆಸಕ್ತಿ ಇಲ್ಲ, ತಜ್ಞರ ಅಭಿಪ್ರಾಯ ಇಲ್ಲಿದೆ

4 ಪರಸ್ಪರ ನಿಯಂತ್ರಿಸಲು ಪ್ರಯತ್ನಿಸುವುದು ಎಲ್ಲವೂ ನಾನಂದುಕೊಂಡಂತೆ ನಡೆಯಬೇಕು ಎಂಬುದನ್ನು ಪಕ್ಕಕ್ಕಿಡಿ, ಒಮ್ಮೆ ನಿಮ್ಮ ಸಂಗಾತಿ ಹೇಳಿದಂತೆಯೂ ಕೇಳಿ ನೋಡಿ ಅದರಲ್ಲಿ ಸಿಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ, ಹಠವನ್ನು ಸ್ವಲ್ಪ ಕಡಿಮೆ ಮಾಡಿ. ನೀನು ಹೀಗೆಯೇ ಇರಬೇಕು ಹಾಗೆಯೇ ಇರಬೇಕು ಎನ್ನುವ ಬೇಲಿಯನ್ನು ಹಾಕಬೇಡಿ.

5 ಬೆಂಬಲ ನೀಡದಿರುವುದು ನಿಮ್ಮಂತೆಯೇ ನಿಮ್ಮ ಸಂಗಾತಿಗೂ ಕೂಡ ಹಲವು ಕನಸುಗಳು, ಗುರಿ, ಆಸೆಗಳಿರುತ್ತವೆ ಅದಕ್ಕೂ ಗೌರವ ನೀಡುವುದು ನಿಮ್ಮ ಕರ್ತವ್ಯ, ನೀವು ಅವರ ಪ್ರತಿಯೊಂದು ಹೆಜ್ಜೆಯನ್ನೂ ಬೆಂಬಲಿಸಬೇಕು. ಭಾವನಾತ್ಮಕ ನಿರ್ಲಕ್ಷ್ಯ ಅಥವಾ ಅಸಹಕಾರ ವರ್ತನೆಯು ಅನಾರೋಗ್ಯಕರ ಸಂಬಂಧದ ಚಿಹ್ನೆಗಳಾಗಿರಬಹುದು.

6 ಯಾವುದೋ ವಿಷಯದ ಬಗ್ಗೆ ಜಗಳವಾಡುವುದು ಸಂಘರ್ಷವು ಉಲ್ಬಣಗೊಂಡರೆ, ಎಂದಿಗೂ ಪರಿಹರಿಸದಿದ್ದರೆ ಅಥವಾ ಭಾವನಾತ್ಮಕ ಅಥವಾ ದೈಹಿಕ ನಿಂದನೆಗೆ ಕಾರಣವಾದರೆ, ಅದು ಅನಾರೋಗ್ಯಕರ ಸಂಬಂಧವನ್ನು ಸೂಚಿಸುತ್ತದೆ. ಸುರಕ್ಷತೆಗೆ ಆದ್ಯತೆ ನೀಡುವುದು ಮತ್ತು ಅಂತಹ ಸಂದರ್ಭಗಳಲ್ಲಿ ಸಹಾಯ ಪಡೆಯುವುದು ಮುಖ್ಯವಾಗಿದೆ

ಅಂತಹ ಸಂಬಂಧವನ್ನು ಸುಧಾರಿಸಲು ತಜ್ಞರ ಸಲಹೆ 1 .ಪರಸ್ಪರ ಕೂಲ್ ಆಗಿ ಮಾತನಾಡಿ ಮುಕ್ತ ಮತ್ತು ಪ್ರಾಮಾಣಿಕ ರೀತಿಯಲ್ಲಿ ಸಂವಹನವು ಆರೋಗ್ಯಕರ ಸಂಬಂಧದ ಪ್ರಮುಖ ಸೂಚಕವಾಗಿದೆ ಎಂದು ಡಾ. ಅಶುತೋಷ್ ಶ್ರೀವಾಸ್ತವ ಸಲಹೆ ನೀಡುತ್ತಾರೆ.

2.ನಿಮ್ಮನ್ನು ನಂಬಲು ಪ್ರಾರಂಭಿಸಿ ನಂಬಿಕೆಯು ಆರೋಗ್ಯಕರ ಸಂಬಂಧದ ಅಡಿಪಾಯವಾಗಿದೆ. ಸಂಗಾತಿಯು ಎಲ್ಲದರಲ್ಲೂ ಒಬ್ಬರನ್ನೊಬ್ಬರು ನಂಬುತ್ತಾರೆ. ಅವರ ಉದ್ದೇಶಗಳಲ್ಲಿ ವಿಶ್ವಾಸವಿದೆ. ಅವರು ಸುರಕ್ಷಿತವಾಗಿರುತ್ತಾರೆ ಮತ್ತು ಪರಸ್ಪರ ನಂಬಬಹುದು.

3.ಗೌರವ ಕೊಟ್ಟರೆ ನಿಮಗೂ ಸಿಗುತ್ತದೆ ನಿಮ್ಮ ಸಂಗಾತಿಗೆ ನೀವು ಗೌರವ ಕೊಟ್ಟರೆ ಅವರೂ ಕೂಡ ನಿಮಗೆ ಗೌರವ ಕೊಡುತ್ತಾರೆ. ಆಗ ಅವರು ಪರಸ್ಪರರ ಗಡಿಗಳು, ಆಲೋಚನೆಗಳು ಮತ್ತು ಸ್ವಾಯತ್ತತೆಯನ್ನು ಗೌರವಿಸುತ್ತಾರೆ.

4. ಸಮಾನತೆ ಡಾ. ಅಶುತೋಷ್ ಶ್ರೀವಾಸ್ತವ ಅವರು ಆರೋಗ್ಯಕರ ಸಂಬಂಧದಲ್ಲಿ ಇಬ್ಬರೂ ಸಮಾನವಾದ ಮಾತು ಮತ್ತು ಶಕ್ತಿಯನ್ನು ಹೊಂದಿರುತ್ತಾರೆ ಎಂದು ನಂಬುತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್