Relationship: ಸಂಗಾತಿ ಪ್ರೀತಿ ಉಳಿಸಿಕೊಳ್ಳುವ ಸಲುವಾಗಿ ಈ ವಿಷಯಗಳನ್ನು ಎಂದಿಗೂ ಸಹಿಸಿಕೊಳ್ಳಬೇಡಿ

| Updated By: ನಯನಾ ರಾಜೀವ್

Updated on: Jun 24, 2022 | 12:55 PM

ಸಾಮಾನ್ಯವಾಗಿ ಎಲ್ಲರೂ ತಮ್ಮ ಸಂಗಾತಿಯೊಂದಿಗೆ ಸಂಬಂಧವನ್ನು ಕಾಪಾಡಿಕೊಳ್ಳಲು ಮಾನಸಿಕವಾಗಿ ಪರಿಣಾಮ ಬೀರುವ ಬಹಳಷ್ಟು ವಿಷಯಗಳನ್ನು ನಿರ್ಲಕ್ಷಿಸುತ್ತಾರೆ.

Relationship: ಸಂಗಾತಿ ಪ್ರೀತಿ ಉಳಿಸಿಕೊಳ್ಳುವ ಸಲುವಾಗಿ ಈ ವಿಷಯಗಳನ್ನು ಎಂದಿಗೂ ಸಹಿಸಿಕೊಳ್ಳಬೇಡಿ
Relationship
Follow us on

ಸಾಮಾನ್ಯವಾಗಿ ಎಲ್ಲರೂ ತಮ್ಮ ಸಂಗಾತಿಯೊಂದಿಗೆ ಸಂಬಂಧವನ್ನು ಕಾಪಾಡಿಕೊಳ್ಳಲು ಮಾನಸಿಕವಾಗಿ ಪರಿಣಾಮ ಬೀರುವ ಬಹಳಷ್ಟು ವಿಷಯಗಳನ್ನು ನಿರ್ಲಕ್ಷಿಸುತ್ತಾರೆ. ಸ್ನೇಹಿತರೊಂದಿಗೆ ತಡರಾತ್ರಿಯವರೆಗೆ ಪಾರ್ಟಿ ಮಾಡುವುದು ನಿಮ್ಮ ಅಭ್ಯಾಸ, ನಿಮಗೆ ಯಾವುದೇ ಕೆಲಸವನ್ನು ಸರಿಯಾಗಿ ಮಾಡಲು ತಿಳಿದಿಲ್ಲ. ನೀವು ನೋಡಲು ಚೆನ್ನಾಗಿಲ್ಲ ಇಂತಹ ಅನೇಕ ಕಾಮೆಂಟ್‌ಗಳು ದಿನನಿತ್ಯದ ಜೀವನದಲ್ಲಿ ನಿಮ್ಮ ಸಂಗಾತಿಯಿಂದ ಕೇಳಿಬರುತ್ತವೆ.

ಈ ಸಣ್ಣಪುಟ್ಟ ವಿಷಯಗಳು ನಮ್ಮ ಜೀವನದ ಮೇಲೆ ದುಷ್ಪರಿಣಾಮ ಬೀರುವುದಿಲ್ಲ ಎಂದು ನಂಬಿರುತ್ತಾರೆ. ಆದರೆ ನಿಮಗೆ ಮಾನಸಿಕವಾಗಿ ನೋವುಂಟು ಮಾಡುವ ಇಂತಹ ಅನೇಕ ವಿಷಯಗಳಿವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ.
ಹೌದು, ನಿಮ್ಮ ಸಂಬಂಧವು ಎಷ್ಟು ಆಳವಾಗಿ ಮತ್ತು ನಿಜವಾಗಿದ್ದರೂ, ನಿಮ್ಮ ಗೌರವವನ್ನು ಕಾಪಾಡಿಕೊಳ್ಳಲು, ನೀವು ಕೆಲವು ವಿಷಯಗಳನ್ನು ಎಂದಿಗೂ ಸಹಿಸಬಾರದು ಎಂದು ತಜ್ಞರು ಹೇಳುತ್ತಾರೆ.

ಅನಗತ್ಯವಾಗಿ ಸಂಗಾತಿಯನ್ನು ನೋಯಿಸುವುದು
ಪತಿ-ಪತ್ನಿಯರಲ್ಲಿ ಒಬ್ಬರು ಹೆಚ್ಚು ಪ್ರಾಬಲ್ಯ ಹೊಂದಿದ್ದರೆ ಮತ್ತು ಅನಗತ್ಯವಾಗಿ ಅವರು ಇನ್ನೊಬ್ಬ ವ್ಯಕ್ತಿಯನ್ನು ಮಾನಸಿಕವಾಗಿ ನೋಯಿಸಬಹುದು. ಆದರೆ ಸಂಗಾತಿಯ ಈ ವರ್ತನೆಯನ್ನು ಎಂದಿಗೂ ಸಹಿಸಬಾರದು ಏಕೆಂದರೆ ಇದು ಕೆಲವೇ ದಿನಗಳಲ್ಲಿ ಇಬ್ಬರ ನಡುವಿನ ಅಂತರವನ್ನು ಹೆಚ್ಚಿಸಲು ಕಾರಣವಾಗಬಹುದು.

ಯಾವುದೇ ಕಾರಣವಿಲ್ಲದೆ ಅವಮಾನಿಸುವುದು
ಯಾವುದೇ ಸಮಯದಲ್ಲಿ ನಿಮ್ಮ ಸಂಗಾತಿಯು ನಿಮ್ಮನ್ನು ಅನಗತ್ಯವಾಗಿ ಅನುಮಾನಿಸಿದರೆ ಮತ್ತು ಯಾವುದೇ ಕಾರಣವಿಲ್ಲದೆ ನೀವು ಅವಮಾನ ಸ್ವೀಕರಿಸಿದರೆ, ಅದು ನಿಮಗೆ ಒಳ್ಳೆಯದಲ್ಲ. ಏಕೆಂದರೆ ಹೀಗೆ ಮಾಡುವುದರಿಂದ ನಿಮ್ಮ ನಡುವೆ ಅಂತರ ಉಂಟಾಗಬಹುದು.

ಪರಸ್ಪರ ಗೌರವಿಸುವುದು ಮುಖ್ಯ
ಯಾವುದೇ ಸಂಬಂಧ ಉತ್ತಮವಾಗಿರಲು, ಪರಸ್ಪರ ಗೌರವಿಸುವುದು ಬಹಳ ಮುಖ್ಯ. ನಿಮ್ಮ ಕೆಲಸವನ್ನು ಚಿಕ್ಕದಾಗಿ ಪರಿಗಣಿಸುವುದು, ನೀವು ಮಾಡುವ ಅಡುಗೆಯ ಬಗ್ಗೆ ಪದೇ ಪದೇ ಕೆಟ್ಟದಾಗಿ ಮಾತನಾಡುವುದು. ಅಥವಾ ನಿಮ್ಮ ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ವಿಷಯಗಳಲ್ಲಿ ನಿಮ್ಮನ್ನು ಗೌರವಿಸದಿದ್ದರೆ ನಿಮ್ಮ ಸಂಬಂಧ ಚೆನ್ನಾಗಿರುವುದಿಲ್ಲ.

ಸುಳ್ಳು ಹೇಳಬೇಡಿ
ಅನೃಕ ಬಾರಿ ಸಂಗಾತಿಯನ್ನು ಖುಷಿ ಪಡಿಸಲು ಕೆಲವು ಸುಳ್ಳು ಹೇಳಬೇಕಾಗುತ್ತದೆ. ಆದರೆ ಮುಂದೊಂದು ದಿನ ಅವರಿಗೆ ದುಃಖ ನೀಡಬಲ್ಲ ಸುಳ್ಳುಗಳನ್ನು ಮಾತ್ರ ಹೇಳಬೇಡಿ.

ಮಾಡದ ತಪ್ಪನ್ನು ಒಪ್ಪಿಕೊಳ್ಳಬೇಡಿ
ಕೆಲವು ಬಾರಿ ತಪ್ಪು ನಿಮ್ಮದಾಗಿರದಿದ್ದರೂ ಒಪ್ಪಿಕೊಳ್ಳುತ್ತೀರಿ, ಖಂಡಿತವಾಗಿಯೂ ಹಾಗೆ ಮಾಡಬೇಡಿ, ತಪ್ಪು ನಿಮ್ಮದಲ್ಲದೇ ಇದ್ದರೆ ಯಾವುದೇ ಕಾರಣಕ್ಕೂ ನಿಮ್ಮದೇ ತಪ್ಪೆಂದು ಒಪ್ಪಿಕೊಳ್ಳಬೇಡಿ.

ದೈಹಿಕ ನ್ಯೂನತೆಯನ್ನು ಒತ್ತಿ ಹೇಳುವುದು
ನಿಮ್ಮ ಸಂಗಾತಿಗೆ ಯಾವುದೇ ದೈಹಿಕ ನ್ಯೂನತೆಯಿದ್ದರೆ ಪದೇ ಪದೇ ಅದನ್ನು ನೆನಪಿಸುವುದು, ಸಂಗಾತಿಯನ್ನು ಕೀಳಾಗಿ ಕಾಣುವುದು, ಬಾಡಿ ಶೇಮಿಂಗ್ ಮಾಡುವಂತೆ ಒತ್ತಾಯಿಸುವುದು ಇಂತಹ ವಿಷಯಗಳಿದ್ದರೆ ನೀವೂ ಕೂಡ ನೇರವಾಗಿ ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು.

ನಿಮ್ಮನ್ನು ನೋಯಿಸುವ ಹಕ್ಕು ಯಾರಿಗೂ ಇಲ್ಲ
ನಿಮ್ಮ ಸಂಗಾತಿ ಅನಗತ್ಯವಾಗಿ ಪದೇ ಪದೇ ನಿಮಗೆ ದೈಹಿಕ ಹಾಗೂ ಮಾನಸಿಕವಾಗಿ ನೋವುಂಟು ಮಾಡಿದರೆ ಅದನ್ನು ಖಂಡಿತವಾಗಿಯೂ ಸಹಿಸಬೇಡಿ, ನಿಮ್ಮನ್ನು ನೋಯಿಸುವ ಹಕ್ಕು ಯಾರಿಗೂ ಇಲ್ಲ.

 

Published On - 12:53 pm, Fri, 24 June 22