AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಡಿಯನ್ನು ಒತ್ತಿ ಹಿಡಿದರೆ ನಿದ್ರಾಹೀನತೆ ಸಮಸ್ಯೆ ಮಾಯ!

ನಿದ್ರೆ ಬಾರದಿರಲು ಹಲವು ಕಾರಣಗಳಿರಬಹುದು. ನಿದ್ರಾಹೀನತೆ ಎಂಬುದು ವಿಶ್ವಾದ್ಯಂತ ಕಂಡುಬರುವ ಸಾಮಾನ್ಯ ಸಮಸ್ಯೆಯಾಗಿದೆ. ಉತ್ತಮ ನಿದ್ರೆ ಬರುವಂತೆ ಮಾಡಲು ಸಾಕಷ್ಟು ಮಾರ್ಗಗಳಿವೆ. ನಾಡಿಯನ್ನು ಒತ್ತಿ ಹಿಡಿಯುವುದರಿಂದ ನಿದ್ರಾಹೀನತೆ ದೂರವಾಗುತ್ತದೆ.

ನಾಡಿಯನ್ನು ಒತ್ತಿ ಹಿಡಿದರೆ ನಿದ್ರಾಹೀನತೆ ಸಮಸ್ಯೆ ಮಾಯ!
WristImage Credit source: Verywell health
TV9 Web
| Edited By: |

Updated on: Jun 24, 2022 | 4:07 PM

Share

ನಿದ್ರೆ ಬಾರದಿರಲು ಹಲವು ಕಾರಣಗಳಿರಬಹುದು. ನಿದ್ರಾಹೀನತೆ ಎಂಬುದು ವಿಶ್ವಾದ್ಯಂತ ಕಂಡುಬರುವ ಸಾಮಾನ್ಯ ಸಮಸ್ಯೆಯಾಗಿದೆ. ಉತ್ತಮ ನಿದ್ರೆ ಬರುವಂತೆ ಮಾಡಲು ಸಾಕಷ್ಟು ಮಾರ್ಗಗಳಿವೆ. ನಾಡಿಯನ್ನು ಒತ್ತಿ ಹಿಡಿಯುವುದರಿಂದ ನಿದ್ರಾಹೀನತೆ ದೂರವಾಗುತ್ತದೆ. 2010 ರಲ್ಲಿ ಇಂಟರ್​ನ್ಯಾಷನಲ್ ಜರ್ನಲ್ ಆಫ್ ನರ್ಸಿಂಗ್ ಸ್ಟಡೀಸ್​ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಐದು ವಾರಗಳ ಆಕ್ಯುಪ್ರೆಶರ್ ಚಿಕಿತ್ಸೆಯ ನಂತರ, ನಿದ್ರಾಹೀನತೆಯಿಂದ ಬಳಲುತ್ತಿರುವ ರೋಗಿಗಳ ಸ್ಥಿತಿಯು ಸುಧಾರಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕೈಯಿಂದ ಎದೆ, ಕುತ್ತಿಗೆಯಿಂದ ತಲೆ, ಕಾಲಿನಿಂದ ಸೊಂಟ ಹೀಗೆ ದೇಹದ ಹಲವು ಭಾಗಗಳಲ್ಲಿ ನಿದ್ರೆಯನ್ನು ತರುವ ಪಾಯಿಂಟ್​ಗಳಿವೆ. ಆಕ್ಯುಪ್ರೆಷರ್ ಹಾಗೂ ಆಕ್ಯುಪಂಕ್ಚರ್ ಉತ್ತಮ ನಿದ್ರೆಗೆ ತುಂಬಾ ಸಹಾಯಕವಾಗಿದೆ.

1. ಸ್ಪಿರಿಟ್ ಗೇಟ್ ಇದು ಕೈಯ ಕಿರುಬೆರಳಿನ ಸಾಲಿನಲ್ಲಿ ಮಣಿಕಟ್ಟಿನ ಎದುರು ಭಾಗದಲ್ಲಿದೆ. ಸಣ್ಣ ಗೋಳವನ್ನು ಕಲ್ಪಿಸಿಕೊಂಡು, ಮೇಲಿನಿಂದ ಕೆಳಕ್ಕೆ ಅಥವಾ ವೃತ್ತಾಕಾರವಾಗಿ ಹಗುರವಾದ ಕೈಗಳಿಂದ ಅದರ ಮೇಲೆ ಒತ್ತಡವನ್ನು ಹಾಕಿ. ಎರಡು ಮೂರು ನಿಮಿಷಗಳ ಕಾಲ ಇದನ್ನು ಮಾಡಿ. ಈ ಬಿಂದುವನ್ನು ಕೆಲವು ಸೆಕೆಂಡುಗಳ ಕಾಲ ಒತ್ತಿ ಹಿಡಿದುಕೊಳ್ಳಿ. ಈಗ ಇನ್ನೊಂದು ಕೈಯಲ್ಲಿಯೂ ಹಾಗೆಯೇ ಮಾಡಿ.

2. ತ್ರೀ ಇನ್ ಛೇದಕ ತ್ರೀ ಇನ್ ಇಂಟರ್​ಸೆಕ್ಷನ್ ಪಾಯಿಂಟ್ ಕಾಲಿನ ಸ್ವಲ್ಪ ಮೇಲ್ಭಾಗದಲ್ಲಿರುತ್ತದೆ ಆಂಕಲ್​ನಿಂದ ಸ್ವಲ್ಪ ಮೇಲ್ಭಾಗದಲ್ಲಿರುತ್ತದೆ ಸ್ವಲ್ಪ ಒತ್ತಡವನ್ನು ಹಾಕಿ. 4 ರಿಂದ 5 ಸೆಕೆಂಡುಗಳ ಕಾಲ ಅದನ್ನು ಒತ್ತಿಡಿ ಅಥವಾ ಮೇಲಿನಿಂದ ಕೆಳಕ್ಕೆ ಪ್ರೆಸ್ ಮಾಡಿ ಗರ್ಭಿಣಿಯರು ಈ ಬಿಂದುವನ್ನು ಒತ್ತಬಾರದು.

3. ಬಬ್ಲಿಂಗ್ ಸ್ಪ್ರಿಂಗ್ ಈ ಬಿಂದುವು ಪಾದದ ಅಡಿಭಾಗದಲ್ಲಿದೆ. ಕಾಲಿನ ಬೆರಳುಗಳನ್ನು ಒಳಮುಖವಾಗಿ ತಿರುಗಿಸಿದಾಗ ಆ ಐದು ಬೆರಳುಗಳ ಮಧ್ಯೆ ಈ ಬಿಂದು ಇರುತ್ತದೆ. ಈಗ ವೃತ್ತಾಕಾರ ಅಥವಾ ಮೇಲಕ್ಕೆ-ಕೆಳಗಿನ ದಿಕ್ಕಿನಲ್ಲಿ ಕೆಲವು ನಿಮಿಷಗಳ ಕಾಲ ಪಿಟ್ ಪ್ರದೇಶದ ಮೇಲೆ ಒತ್ತಡವನ್ನು ಹಾಕಿ.

4. ಇನ್ನರ್ ಫ್ರಾಂಟಿಯರ್ ಗೇಟ್ ಈ ಬಿಂದುವು ಎರಡು ಮುಖ್ಯ ನರಗಳ ನಡುವೆ ಮಣಿಕಟ್ಟಿನ ಬಳಿ ಒಳಭಾಗದಲ್ಲಿದೆ. ಮಣಿಕಟ್ಟಿನ ಕೆಳಗೆ ಮೂರು ಬೆರಳುಗಳ ಎರಡೂ ನರಗಳ ಮಧ್ಯದಲ್ಲಿ ಬಿಂದುವನ್ನು ಹೊಂದಿಸಿ. ಈಗ ವೃತ್ತಾಕಾರದ ಚಲನೆಯಲ್ಲಿ ಅಥವಾ ಮೇಲಕ್ಕೆ ಮತ್ತು ಕೆಳಕ್ಕೆ ಈ ಹಂತದಲ್ಲಿ ಒತ್ತಡವನ್ನು ಹಾಕಿ.

5. ವಿಂಡ್ ಪೂಲ್ ವಿಂಡ್‌ಪೂಲ್ ಪಾಯಿಂಟ್‌ಗಳು ಕುತ್ತಿಗೆಯ ಹಿಂದೆ ಇವೆ. ಈಗ 4 ರಿಂದ 5 ಸೆಕೆಂಡುಗಳ ಕಾಲ ಹೆಬ್ಬೆರಳುಗಳಿಂದ ಗುರುತಿಸಲಾದ ಬಿಂದುಗಳ ಮೇಲೆ ವೃತ್ತಾಕಾರದ ಅಥವಾ ಮೇಲಕ್ಕೆ-ಕೆಳಗಿನ ಒತ್ತಡ ಹಾಕುವುದರಿಂದ ನಿದ್ರಾಹೀನತೆ ಸುಧಾರಿಸುತ್ತದೆ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ