Relationship Tips: ನಿಮ್ಮ ಸಂಗಾತಿಯ ಜೊತೆಗಿನ ಸಂಬಂಧವನ್ನು ಉತ್ತಮವಾಗಿಸಲು ಈ ಕ್ರಮಗಳನ್ನು ಪಾಲಿಸಿ
ದಾಂಪತ್ಯ ಜೀವನದಲ್ಲಿ ಕಹಿ ನೆನಪುಗಳು ಆಗುವುದು ಸಹಜ ಆದರೆ ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಜೀವನ ನಡೆಸುವುದು ಸರಿಯಲ್ಲ, ನಿಮ್ಮ ಸಂಗಾತಿಯ ಜೊತೆಗೆ ಆರೋಗ್ಯಕರವಾದ ಜೀವನ ನಡೆಸುವುದು ಉತ್ತಮ. ಅಧ್ಯಯನಗಳು ಹೇಳುವಂತೆ ನಿಮ್ಮ ಹಳೆಯ ಸವಿನೆನಪುಗಳನ್ನು ನಿಮ್ಮ ಸಂಗಾತಿಯ ಜೊತೆಗೆ ಕಳೆಯುವಂತೆ ನೋಡಿಕೊಳ್ಳಿ.
ಜೀವನದಲ್ಲಿ ಒಂದು ಒಳ್ಳೆಯ ಸಂಗಾತಿ ಬೇಕು ಎನ್ನುವುದು ನಿಜ. ಆದರೆ ಆ ಸಂಗಾತಿಯ ಜೊತೆಗಿನ ಸಂಬಂಧವನ್ನು ಕೊನೆಯವರೆಗೆ ಉಳಿಸಿಕೊಳ್ಳವುದು ಹೇಗೆ? ಜೀವನದಲ್ಲಿ ಸಾಮಾಜಿಕ ನೆಲೆಯನ್ನು ಕಂಡುಕೊಳ್ಳಬೇಕಾದರೆ ಇಬ್ಬರ ಸಹಕಾರ ಅಗತ್ಯ. ನಿಮ್ಮ ದಂಪತಿ ಜೀವನದ ಆರಂಭದಲ್ಲಿ ಕೆಲವೊಂದು ಬದಲಾವಣೆ ಕಾಣದಿದ್ದರು, ಜೊತೆಯಲ್ಲಿ ಜೀವನ ಸಾಗಿಸುತ್ತಿರುವಾಗ ಕೆಲವೊಂದು ಸಂಬಂಧಗಳು ಹಾಗೂ ಪರಿಸ್ಥಿತಿಗಳನ್ನು ಅನುಭವಿಸುವುದು ಖಂಡಿತ, ಮೊದಲಿಗೆ ಅದು ಕಷ್ಟವಾದರೂ, ಅದು ಅಭ್ಯಾಸವಾಗುತ್ತ, ಕೊನೆಗೆ ಇದು ನಮ್ಮ ಜೀವನದಲ್ಲಿ ಸಹಜ ಎನ್ನುವ ಪರಿಕಲ್ಪನೆ ಮೂಡುತ್ತದೆ. ಆದರೆ ನಿಮ್ಮ ಸಂಗಾತಿಯನ್ನು ನೀವು ಅರ್ಥ ಮಾಡಿಕೊಳ್ಳಲು ಕೆಲವೊಂದು ಗುಣಗಳನ್ನು ಅನುಸರಿಸಿಕೊಳ್ಳಬೇಕು. ಈ ಜೀವನದಲ್ಲಿ ನಿರಂತರ ಪ್ರಯತ್ನಗಳು, ಕ್ಷಮೆ ಮತ್ತು ದ್ವೇಷ ಎಲ್ಲವೂ ಇರುತ್ತದೆ. ಆದರೆ ಅದನ್ನು ಬಿಟ್ಟು ಜೊತೆಯಲ್ಲಿ ಜೀವನ ನಡೆಸುವುದು ಉತ್ತಮ. ವಯಸ್ಸು ಮುಂದಕ್ಕೆ ಹೋಗುತ್ತಿರುವಾಗ ಇದೆಲ್ಲ ಸಹಜ ಆದರೆ ಅದು ಮತ್ತೊಬ್ಬರಿಗೆ ಆದರ್ಶವಾಗುವುದು ಖಂಡಿತ.
ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ಸ್ಯಾಂಡಲ್ವುಡ್ ನಟ ದಿಗಂತ್ ಆಸ್ಪತ್ರೆಗೆ ದಾಖಲು
ದಾಂಪತ್ಯ ಜೀವನದಲ್ಲಿ ಕಹಿ ನೆನಪುಗಳು ಆಗುವುದು ಸಹಜ ಆದರೆ ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಜೀವನ ನಡೆಸುವುದು ಸರಿಯಲ್ಲ, ನಿಮ್ಮ ಸಂಗಾತಿಯ ಜೊತೆಗೆ ಆರೋಗ್ಯಕರವಾದ ಜೀವನ ನಡೆಸುವುದು ಉತ್ತಮ. ಅಧ್ಯಯನಗಳು ಹೇಳುವಂತೆ ನಿಮ್ಮ ಹಳೆಯ ಸವಿನೆನಪುಗಳನ್ನು ನಿಮ್ಮ ಸಂಗಾತಿಯ ಜೊತೆಗೆ ಕಳೆಯುವಂತೆ ನೋಡಿಕೊಳ್ಳಿ. ನಿಮ್ಮ ಸಂಗಾತಿಯ ಜೊತೆಗೆ ಕೋಪ ಮಾಡಿಕೊಳ್ಳವ ಮೊದಲು ಕೆಲವೊಂದು ವಿಷಯಗಳನ್ನು ನೀವು ತಿಳಿದುಕೊಳ್ಳಬೇಕು. ಇದರ ಜೊತೆಗೆ ಅವರನ್ನು ಹೇಗೆ ನೀವು ಸಂತೋಷದಲ್ಲಿ ಇಡುತ್ತಿರ ಎಂಬುದನ್ನು ಕೂಡ ತಿಳಿದುಕೊಳ್ಳಬೇಕು.
ನಿಮ್ಮವರ ಮೇಲೆ ಹೆಚ್ಚು ಗಮನವಿರಲಿ
ನಿಮ್ಮವರನ್ನು ತುಂಬಾ ಕಾಳಜಿ ವಹಿಸಿ ಇದು ನಿಮ್ಮ ಸಂಬಂಧದ ಮೇಲೆ ಧನತ್ಮಾಕ ಪರಿಣಾಮವನ್ನು ಉಂಟು ಮಾಡುತ್ತದೆ. ನಿಮ್ಮ ಸ್ನೇಹಿತರ ಜೊತೆಗೆ ಇರುವ ಸಮಯದಲ್ಲೂ ನಿಮ್ಮವರನ್ನು ಹೆಚ್ಚು ಪ್ರೀತಿಯಿಂದ ನೋಡಿ, ಅವರಲ್ಲೂ ಪ್ರೀತಿಯಿಂದ ಮಾತನಾಡಿ. ಆದರೆ ಅವರಿಗೆ ನಿಮ್ಮ ಸ್ನೇಹಿತರ ಮುಂದೆ ಯಾವ ರೀತಿಯಲ್ಲೂ ಮುಜುಗರ ಆಗುವಂತೆ ನಡೆದುಕೊಳ್ಳಬೇಡಿ.
ತಪ್ಪುಗಳನ್ನು ಗುರುತಿಸಬೇಡಿ
ಹೌದು ನಿಮ್ಮವರು ತಪ್ಪು ಮಾಡಿದಾಗ ಅವರು ಮಾಡಿದ ತಪ್ಪುಗಳನ್ನು ಮತ್ತೆ ಮತ್ತೆ ಹೇಳುವುದು ಅಥವಾ ಅದನ್ನು ಎತ್ತಿಹಿಡಿಯುವ ಕೆಲಸವನ್ನು ಮಾಡಬೇಡಿ, ಏಕೆಂದರೆ ಅದು ಅವರನ್ನು ಮತ್ತಷ್ಟು ಕುಗ್ಗಿಸಬಹುದು. ಅವರು ಮಾಡುವ ಸಮಸ್ಯೆಗಳನ್ನು ನೀವು ಪರಿಹಾರ ಮಾಡಲು ಪ್ರಯತ್ನಿಸಿ.
ಸ್ವಲ್ಪ ಸಮಯ ನೀಡಿ
ನಿಮ್ಮವರ ಜೊತೆಗೆ ಸ್ವಲ್ಪ ಸಮಯವನ್ನು ಕಳೆಯುವ ಅಭ್ಯಾಸವನ್ನು ಬೆಳೆಸಿಕೊಳ್ಳಿ, ಏಕೆಂದರೆ ಅವರಿಗೂ ನಿಮ್ಮ ಜೊತೆಗೆ ಸಮಯ ಕಳೆಯಬೇಕು ಎಂಬ ಆಸೆ ಇರುತ್ತದೆ. ಸಿನಿಮಾ ನೋಡುವುದು, ಊಟ ಮಾಡವುದು, ಬೆಳಿಗ್ಗಿನ ವ್ಯಾಯಮ ಮಾಡುವುದು, ವಾಕಿಂಗ್ ಹೋಗುವುದು ಇವುಗಳನ್ನು ಮಾಡಿದಾಗ ನಿಮ್ಮ ಸಂಬಂಧಗಳು ಇನ್ನೂ ಉತ್ತಮವಾಗಿರುವುದು.
ಅವರ ವೈಯಕ್ತಿಕ ಆಸಕ್ತಿಗಳನ್ನು ತಿಳಿರಿ
ನಿಮ್ಮವರ ವೈಯಕ್ತಿಕ ಆಸಕ್ತಿಗಳ ಬಗ್ಗೆ ಗಮನ ನೀಡಿ. ಏಕೆಂದರೆ ಅವರ ವೈಯಕ್ತಿಕ ಆಸಕ್ತಿಗಳಿಗೆ ಬೆಂಬಲ ನೀಡುವ ಮನಸ್ಸುಗಳು ಬೇಕು. ಅದು ನಿಮ್ಮ ಮತ್ತು ಅವರ ಸಂಬಂಧಗಳನ್ನು ಇನ್ನೂ ಗಟ್ಟಿಗೊಳಿಸಬಹುದು. ವೈಯಕ್ತಿ ಆಸಕ್ತಿಗಳು ಏನು ? ಎಂಬುದನ್ನು ಮೊದಲು ನೀವು ತಿಳಿದುಕೊಳ್ಳಬೇಕು.
ಹೆಚ್ಚು ನಿಕಟವಾಗಿರಿ
ನಿಮ್ಮವರ ಜೊತೆಗೆ ಹೆಚ್ಚು ನಿಕಟವಾಗಿರಿ, ಅದು ನಿಮ್ಮ ವ್ಯವಹಾರ ಅಥವಾ ವೈಯಕ್ತಿಕ ವಿಚಾರವಾಗಿರಬಹುದು, ಲೈಂಗಿಕ ಸಂಪರ್ಕದಲ್ಲೂ ನಿಮ್ಮವರ ಜೊತೆಗೆ ಮುಕ್ತವಾಗಿ ಮಾತನಾಡಿ ಯಾವುದೇ ಭಯವಿಲ್ಲ ನಿಮ್ಮ ಇಷ್ಟ-ಕಷ್ಟಗಳನ್ನು ಹೇಳಿಕೊಳ್ಳಿ, ಜೊತೆಗೆ ಆ ಇಷ್ಟ-ಕಷ್ಟಗಳನ್ನು ತಿಳಿದುಕೊಳ್ಳವ ಪ್ರಯತ್ನವನ್ನು ಮಾಡಿ.
ತಾಜಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:08 pm, Tue, 21 June 22