ನಿಮ್ಮವರೊಂದಿಗಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಇಲ್ಲಿದೆ ಟಾಪ್ 5 ಸಲಹೆಗಳು

ನಿಮ್ಮವರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವುದು, ಪ್ರತಿಬಾರಿಯೂ ಬೆಂಬಲ ನೀಡುವುದು ಮತ್ತು ಅವರಿಗಾಗಿ ನೀವು ಸದಾ ಜೊತೆಯಾಗಿ ಇದ್ದೀರಿ ಎಂದು ಅವರಿಗೆ ತಿಳಿಸುವುದು ಇವೆಲ್ಲವೂ ಮುಖ್ಯ.

ನಿಮ್ಮವರೊಂದಿಗಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಇಲ್ಲಿದೆ ಟಾಪ್ 5 ಸಲಹೆಗಳು
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Oct 21, 2022 | 5:00 PM

ಯಾವುದೇ ಸಂಬಂಧಗಳಲ್ಲಿ ಜಗಳಗಳು, ಮನಸ್ತಾಪಗಳು ಸರ್ವೇ ಸಾಮಾನ್ಯ. ಇವೆಲ್ಲವೂಗಳನ್ನು ಬದಿಗಿಟ್ಟು ನಿಮ್ಮ ಪ್ರೀತಿ ಪಾತ್ರರೊಂದಿಗೆ ಉತ್ತಮ ಸಂಬಂಧವನ್ನು ಮುನ್ನಡೆಸುವುದು ಅಗತ್ಯ. ಯಾವುದೇ ಏರಿಳಿತಗಳಿದ್ದರೂ ಕೂಡ ಜೊತೆಯಾಗಿ ನಿಂತು ಎದುರಿಸುವುದೇ ನಿಜವಾದ ಸಂಬಂಧದ ಪ್ರಮುಖ ಲಕ್ಷಣ. ಉತ್ತಮ, ತಾಳ್ಮೆಯ ಮಾತುಕತೆ ಶೈಲಿಯು ನಿಮ್ಮಲಿರುವ ಭಿನ್ನಾಭಿಪ್ರಾಯಗಳನ್ನು ನಿಭಾಯಿಸಲು ಆರೋಗ್ಯಕರ ಸಂಬಂಧವನ್ನು ರೂಪಿಸಲು ಸಹಾಯ ಮಾಡುತ್ತದೆ. ಮುಕ್ತವಾದ ಮಾತುಕತೆ ನಿಮ್ಮ ಭಾವನೆಗಳನ್ನು ಮತ್ತು ಅವಶ್ಯಕತೆಗಳನ್ನು ಇತರ ವ್ಯಕ್ತಿಗೆ ವ್ಯಕ್ತಪಡಿಸಲು ನಿಮಗೆ ಸಹಾಯ ಮಾಡಿಕೊಡುತ್ತದೆ.

ಮೌಖಿಕ, ಲಿಖಿತ ಮತ್ತು ಭೌತಿಕ ವಿಧಾನಗಳ ಮೂಲಕ ನಿಮ್ಮ ಪ್ರೀತಿ ಪಾತ್ರರಾದವರೊಂದಿಗೆ ಸಂವಹನ ನಡೆಸಬಹುದಾಗಿದೆ. ನಿಮ್ಮವರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವುದು, ಪ್ರತಿಬಾರಿಯೂ ಬೆಂಬಲ ನೀಡುವುದು ಮತ್ತು ಅವರಿಗಾಗಿ ನೀವು ಸದಾ ಜೊತೆಯಾಗಿ ಇದ್ದೀರಿ ಎಂದು ಅವರಿಗೆ ತಿಳಿಸುವುದು ಇವೆಲ್ಲವೂ ಮುಖ್ಯ.

ನಿಮ್ಮ ಪ್ರೀತಿ ಪಾತ್ರರಾದವರೊಂದಿಗಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಸಹಾಯ ಮಾಡುವ ಕೆಲವು ಪ್ರಮುಖ ಅಂಶಗಳೆಂದರೆ:

ಸರ್ಟಿಫೈಡ್ ರಿಲೇಷನ್ ಶಿಫ್ ನ ತರಬೇತುದಾರರಾದ ಅಲೆಕ್ಸಾಂಡ್ರಾ ಅವರು ತಮ್ಮ ಇತ್ತೀಚಿನ Instagram ಪೋಸ್ಟ್‌ನಲ್ಲಿ ಒಂದೊಳ್ಳೆ ಆರೋಗ್ಯಕರವಾದ ಸಂಬಂಧದದಲ್ಲಿ ಇರಬೇಕಾದ ಪ್ರಮುಖ ಅಂಶಗಳನ್ನು ಹಂಚಿಕೊಂಡಿದ್ದಾರೆ. ಅವುಗಳು ಈ ಕೆಳಗಿನಂತಿವೆ.

1.ಭಿನ್ನಾಭಿಪ್ರಾಯಗಳನ್ನು ತಾಳ್ಮೆಯಿಂದ ನಿಭಾಯಿಸಿ: ನಿಮ್ಮ ಪ್ರೀತಿ ಪಾತ್ರರಾದವರೊಂದಿಗೆ ನೀವು ಸಂಭಾಷಣೆ ನಡೆಸುತ್ತಿದ್ದರೆ ಆದಷ್ಟು ಮುಕ್ತವಾಗಿ ಹಾಗೂ ತಾಳ್ಮೆಯಿಂದ ನಿಭಾಯಿಸಿ. ಭಿನ್ನಾಭಿಪ್ರಾಯಗಳು ಯಾವುದೇ ಕಾರಣಕ್ಕೂ ವಾದ ವಿವಾದಗಳು ಹಾಗೂ ಜಗಳಕ್ಕೆ ತಿರುಗದ್ದಂತೆ ಎಲ್ಲವನ್ನು ತಾಳ್ಮೆಯಿಂದ ನಿಭಾಯಿಸಿ.

2. ಪರಸ್ಪರ ಜೊತೆಯಾಗಿ ನಿಂತು ಸಹಕರಿಸಿ: ನೀವು ಪ್ರತಿ ಭಾರಿಯೂ ಯಾವುದೇ ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ತಂಡದಂತೆ ಭಾವಿಸಿ ಜೊತೆಯಾಗಿ ನಿಂತು ಸಮಸ್ಯೆಯನ್ನು ಬಗೆಹರಿಸಿ. ಇದ್ದಲ್ಲದೇ ವಾದ ವಿವಾದಗಳು ಉಂಟಾದ ಸಮಯದಲ್ಲಿ ಕೇವಲ ನಿಮ್ಮ ಕಡೆಯಿಂದ ಮಾತ್ರ ಯೋಚಿಸದೇ, ಅವರ ಜಾಗದಲ್ಲಿ ನಿಂತು ಯೋಚಿಸಿ ವಾದ ಮಾಡುವುದು ಉತ್ತಮ.

3. ಉದ್ವೇಗವನ್ನು ಕಡಿಮೆ ಮಾಡಿ: ಯಾವುದೇ ಸಂಭಾಷಣೆಗಳು ನಡೆಯುತ್ತಿರುವ ಸಂದರ್ಭದಲ್ಲಿ ನೀವು ಹೇಗೆ ಕಾಣಿಸಿಕೊಳ್ಳುತ್ತೀರಿ ಎಂಬುದಕ್ಕೆ ನೀವೇ ಜವಾಬ್ದಾರರಾಗಿರಿರುತ್ತೀರಿ. ತಮ್ಮ ಮಾತಿನ ಮೇಲೆ ನಿಗಾ ವಹಿಸುವುದು ಉತ್ತಮ. ಎಕೆಂದರೆ ಮಾತು ಆಡಿದರೆ ಹೋಯಿತು, ಮುತ್ತು ಉದುರಿದರೆ ಹೋಯಿತು ಎಂಬ ಮಾತಿದೆ.

4.ನಿಮ್ಮವರ ಮಾತು ಆಲಿಸುವ ತಾಳ್ಮೆಯಿರಲಿ: ನಿಮ್ಮ ಪ್ರೀತಿ ಪಾತ್ರರಾದವರನ್ನು ಅರ್ಥಮಾಡಿಕೊಳ್ಳಲು ಅವರ ಮಾತುಗಳನ್ನು ಆಲಿಸಿ ಪ್ರತಿಕ್ರಿಯಿಸಬೇಡಿ. ನಿಮ್ಮ ಮಾತು ನಿಮ್ಮ ಸಂಗಾತಿಯು ಕೇಳಿಸಿಕೊಂಡರೆ, ನೀವು ಸುರಕ್ಷಿತ ಸ್ಥಳವನ್ನು ರಚಿಸುತ್ತಿದ್ದೀರಿ ಎಂದರ್ಥ. ನೀವು ಆರೋಗ್ಯಕರ, ಸ್ಥಿರವಾದ ಸಂಬಂಧವನ್ನು ನಿರ್ಮಿಸಲು ಬಯಸಿದರೆ ಸುರಕ್ಷಿತ ಮತ್ತು ಅರ್ಥಮಾಡಿಕೊಳ್ಳುವ ಭಾವನೆ ಅಗತ್ಯವಾಗಿದೆ.

5. ನಿಮ್ಮ ಸಂಗಾತಿಯ ಇಚ್ಛೆ,ಆಸಕ್ತಿಗಳನ್ನು ತಿಳಿದುಕೊಳ್ಳಿ: ನಿಮ್ಮ ಸಂಗಾತಿಯು ತಮ್ಮ ವಿಷಯಗಳನ್ನು ಹಂಚಿಕೊಳ್ಳಲು ಇಚ್ಛಿಸಿದರೆ, ಮುಕ್ತವಾಗಿ ಒಪ್ಪಿಕೊಳ್ಳಿ. ಇದ್ದರಿಂದ ಸಂಬಂಧಗಳು ಇನ್ನಷ್ಟು ಗಟ್ಟಿಗೊಳ್ಳಲು ಹಾಗೂ ಮುಕ್ತವಾದ ಮಾತುಕತೆ ನಿಮ್ಮ ಭಾವನೆಗಳನ್ನು ಮತ್ತು ಅವಶ್ಯಕತೆಗಳನ್ನು ಇತರ ವ್ಯಕ್ತಿಗೆ ವ್ಯಕ್ತಪಡಿಸಲು ನಿಮಗೆ ಸಹಾಯ ಮಾಡಿಕೊಡುತ್ತದೆ ಎಂದು ತರಬೇತುದಾರರಾದ ಅಲೆಕ್ಸಾಂಡ್ರಾ ಅವರು ಹೇಳುತ್ತಾರೆ.

Published On - 4:36 pm, Fri, 21 October 22