ನೀವು ಧ್ವನಿ ಎತ್ತದೆಯೇ ನಿಮ್ಮ ಸಂಗಾತಿ ನೀವು ಅನುಭವಿಸುತ್ತಿರುವ ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಾರೆ ಎಂದು ನೀವು ನಿರೀಕ್ಷಿಸುತ್ತೀರಾ? ಅಥವಾ ಅವರು ನಿಮ್ಮನ್ನು ಬದಲಾಯಿಸುತ್ತಾರೆ, ಅದು ನಿಮ್ಮನ್ನು ಪ್ರೀತಿಸುವ ಸಂಕೇತವೇ? ಎಂದೆಲ್ಲ ಯೋಚಿಸುತ್ತೀರಾ? ಬಳಿಕ ನೀವು ಇವುಗಳನ್ನು ಸಾಮಾನ್ಯ ವಿಷಯಗಳು ಎಂದು ಭಾವಿಸುತ್ತಿರಿ, ಆದರೆ ತಜ್ಞರು ಅವುಗಳನ್ನು ‘ಅವಾಸ್ತವಿಕ ನಿರೀಕ್ಷೆಗಳು’ ಅಥವಾ ಅಸಹಜ ಎಂದು ಬಣ್ಣಿಸುತ್ತಾರೆ. ಇದು ದೀರ್ಘಾವಧಿಯಲ್ಲಿ ನಿಮ್ಮ ಸಂಬಂಧವನ್ನು ಹಾಳುಮಾಡುತ್ತದೆ. ಬದಲಾಗಿ, ನಿಮ್ಮ ಸಂಗಾತಿಯ ಮಿತಿಗಳನ್ನು ಅರ್ಥಮಾಡಿಕೊಂಡಲ್ಲಿ ತೃಪ್ತಿದಾಯಕ ಸಂಬಂಧ ನಿಮ್ಮದಾಗಬಹುದು.
-ಅವರು ನಿಮಗಾಗಿ ಬದಲಾಗುತ್ತಾರೆ ಎಂದು ಭಾವಿಸುವುದು.
-ನಿಮಗೆ ಏನು ಬೇಕು ಎಂದು ಅವರು ತಿಳಿದಿರಬೇಕು ಎಂದು ಯೋಚಿಸುವುದು (ನೀವು ಅದನ್ನು ಹೇಳದೆ).
-ನೀವು ಪರಸ್ಪರ ಇಬ್ಬರೂ ಪ್ರತಿಯೊಂದು ವಿಷಯವನ್ನು ಪ್ರೀತಿಸಬೇಕು ಎಂದು ಯೋಚಿಸುವುದು.
– ನೀವು ತಾಳ್ಮೆಯಿಂದ ಕಾಯುತ್ತಿದ್ದ ಸಂತೋಷವನ್ನು ಅವರೇ ಒದಗಿಸುತ್ತಾರೆ ಎಂದು ಯೋಚಿಸುವುದು.
ಪ್ರತಿಯೊಬ್ಬ ವ್ಯಕ್ತಿಯು ತನ್ನ ಸಂಗಾತಿಯಿಂದ ನಿರೀಕ್ಷೆ ಇಟ್ಟುಕೊಳ್ಳುವುದು ಸಾಮಾನ್ಯ. ಆದಾಗ್ಯೂ, ಇತರ ಜವಾಬ್ದಾರಿಗಳನ್ನು ಗಮನದಲ್ಲಿಟ್ಟುಕೊಳ್ಳದೆ ಹೊದರೇ, ಅವು ಅವಾಸ್ತವಿಕವಾಗಬಹುದು ಏಕೆಂದರೆ ಇನ್ನೊಂದು ಬದಿಯಲ್ಲಿರುವ ವ್ಯಕ್ತಿಗೆ ಅವುಗಳನ್ನು ಪೂರೈಸಲು ಸಾಧ್ಯವಾಗದಿರಬಹುದು.
ಇದನ್ನೂ ಓದಿ: Relationships Tips: ನಿಮ್ಮಲ್ಲಿ ಈ ಗುಣವಿದ್ದರೆ ಮಾತ್ರ ನಿಮ್ಮ ಪ್ರೀತಿ ನಿಜವಾಗಿರಲು ಸಾಧ್ಯ
ನಿರೀಕ್ಷೆಗಳು ಅವಾಸ್ತವಿಕವಾದಾಗ ಅದು ಅತೃಪ್ತಿ, ನಿರಾಶೆ ಮತ್ತು ಅದರ ಪರಿಣಾಮವಾಗಿ ಅಸಮಾಧಾನ, ಕೋಪ ಹಾಗೂ ಅತೃಪ್ತಿಗೆ ಕಾರಣವಾಗಬಹುದು. ಇದು ದಂಪತಿ ಮಧ್ಯೆ ಸಂಘರ್ಷಗಳಿಗೆ ಕಾರಣವಾಗಬಹುದು. ಕೆಲವೊಮ್ಮೆ ಸಂದರ್ಭಗಳು ಎಲ್ಲದಕ್ಕೂ ಕಾರಣವಾಗುತ್ತದೆ. ಹಾಗಾಗಿ ನೀವು ಅವರನ್ನು ಅರ್ಥ ಮಾಡಿಕೊಳ್ಳುವುದು ಒಳ್ಳೆಯದು.
ಅವಾಸ್ತವಿಕ ನಿರೀಕ್ಷೆಗಳನ್ನು ಬಾರದಿರಲು ಏನು ಮಾಡಬಹುದು?
– ನಿಮ್ಮ ನಿರೀಕ್ಷೆಗಳನ್ನು ಮೌಲ್ಯಮಾಪನ ಮಾಡಲು ಸಿದ್ಧರಾಗಿ. ಅಂದರೆ ಸರಿಯೋ ತಪ್ಪೋ ಯೋಚಿಸಿ.
– ಇತರ ವ್ಯಕ್ತಿಯ ಸಾಮರ್ಥ್ಯ ಏನು ಎಂದು ಯೋಚಿಸಿ, ಇನ್ನೊಬ್ಬರೊಂದಿಗೆ ಹೋಲಿಕೆ ಮಾಡ ಬೇಡಿ.
– ನಿಮ್ಮ ಸಂತೋಷ ಕ್ಕಾಗಿ ಇನ್ನೊಬ್ಬರಿಗೆ ಹೊರೆಯಾಗಲು ಬಿಡಬೇಡಿ.
– ಅವರು ನಿಮಗಾಗಿ ಏನು ಮಾಡಬಹುದು ಎಂಬುದನ್ನುಅರ್ಥಮಾಡಿಕೊಳ್ಳಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:48 pm, Thu, 20 April 23