ಬಟ್ಟೆಗಳಿಂದ ಪೆನ್ ಶಾಯಿ ಕಲೆ ತೆಗೆಯುವುದು ತುಂಬಾ ಸುಲಭ, ಹೀಗೆ ಮಾಡಿ ಸಾಕು

ಗೃಹಿಣಿಯರಿಗೆ ದೊಡ್ಡ ತಲೆ ನೋವಾಗುವುದೇ ಮಕ್ಕಳ ಹಾಗೂ ಗಂಡನ ಬಟ್ಟೆಯಲ್ಲಿರುವ ಕಲೆಯನ್ನು ತೆಗೆಯುವುದು. ಅದರಲ್ಲೂ ಪೆನ್ನಿನ ಶಾಯಿಯನ್ನು ತೆಗೆಯುವುದು ದೊಡ್ಡ ಸವಾಲಾಗಿದೆ. ಆದರೆ ಅದಕ್ಕಾಗಿ ಚಿಂತೆ ಮಾಡುವ ಅಥವಾ ಯಾವುದೇ ದುಬಾರಿ ಹಣ ಖರ್ಚು ಮಾಡುವ ಅಗತ್ಯ ಇಲ್ಲ. ಮನೆಯಲ್ಲಿರುವ ಈ ಕೆಲವು ವಸ್ತುಗಳನ್ನು ಬಳಸಿಕೊಂಡೇ ಕಲೆಯನ್ನು ತೆಗೆದು ಹಾಕಬಹುದಂತೆ. ಈ ಬಗ್ಗೆ ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ ದೀಪ್ತಿ ಕಪೂರ್ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

ಬಟ್ಟೆಗಳಿಂದ ಪೆನ್ ಶಾಯಿ ಕಲೆ ತೆಗೆಯುವುದು ತುಂಬಾ ಸುಲಭ, ಹೀಗೆ ಮಾಡಿ ಸಾಕು
ಸಾಂದರ್ಭಿಕ ಚಿತ್ರ

Updated on: Jul 08, 2025 | 6:20 PM

ಮನೆಯಲ್ಲಿರುವ ಮಹಿಳೆಯರಿಗೆ ಯಾವ ಕೆಲಸವು ಅಸಾಧ್ಯ ಎಂಬುದು ಇಲ್ಲ. ಆದರೆ ಅವರಿಗೆ ದೊಡ್ಡ ತಲೆ ನೋವು ಎಂದರೆ ಈ ಮಕ್ಕಳು ಹಾಗೂ ಮನೆಯ ಗಂಡಸರ ಬಟ್ಟೆಯ ಕಲೆಯನ್ನು ತೆಗೆಯುವುದು. ಈ ಬಗ್ಗೆ ಅನೇಕ ಮಹಿಳೆಯರು ದೂರುತ್ತಲೇ ಇರುತ್ತಾರೆ. ಅದರಲ್ಲೂ ಬಟ್ಟೆಯಲ್ಲಾಗುವ ಪೆನ್ ಶಾಯಿಯ ಕಲೆ (pen ink out of clothes), ಇದನ್ನು ತೆಗೆದು ಹಾಕುವುದೇ ದೊಡ್ಡ ಸಮಸ್ಯೆ. ಶಾಲೆಯಲ್ಲಿ ಮಕ್ಕಳ ಬಟ್ಟೆಯಲ್ಲಿ ಪೆನ್ ಶಾಯಿ ಕಲೆ ಆಗುವುದು ಸಹಜ, ಆದರೆ ಅದನ್ನು ಹೋಗಲಾಡಿಸುವುದೇ ದೊಡ್ಡ ಕೆಲಸವಾಗುತ್ತದೆ. ಸಿಕ್ಕ ಸಿಕ್ಕ ಸಾಬೂನು ಎಲ್ಲವನ್ನು ಉಪಯೋಗಿಸಿದ್ರು, ಯಾವುದೇ ಪ್ರಯೋಜನ ಇಲ್ಲ, ಅದಕ್ಕಾಗಿ ಈ ಪ್ರಯೋಗವನ್ನು ಒಮ್ಮೆ ಟ್ರೈ ಮಾಡುವುದು ಒಳ್ಳೆಯದು, ಈ ಬಗ್ಗೆ ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ ದೀಪ್ತಿ ಕಪೂರ್ ಕೆಲವೊಂದು ಸಲಹೆಗಳನ್ನು ಹಾಗೂ ಐಡಿಯಾವನ್ನು ನೀಡಿದ್ದಾರೆ.

ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ದೀಪ್ತಿ ಕಪೂರ್ ಅವರು ಶಾಯಿಯನ್ನು ಹೇಗೆ ತೆಗೆಯುವುದು ಹೇಗೆ ಎಂಬ ಬಗ್ಗೆ ಸಲಹೆ ನೀಡಿದ್ದಾರೆ. ಈ ವೀಡಿಯೊದಲ್ಲಿ, ದೀಪ್ತಿ ಶಾಯಿಯನ್ನು ಸ್ವಚ್ಛಗೊಳಿಸಲು ತುಂಬಾ ಸುಲಭ ಮತ್ತು ಪರಿಣಾಮಕಾರಿ ಮಾರ್ಗವನ್ನು ಹೇಳಿದ್ದಾರೆ. ಇದರಲ್ಲಿ ಇನ್ನೊಂದು ಅದ್ಭುತವಾದ ವಿಷಯವೆಂದರೆ ಈ ಶಾಯಿಯನ್ನು ತೆಗೆಯಲು ಯಾವುದೇ ದುಬಾರಿ ಉತ್ಪನ್ನದ ಅಗತ್ಯವಿಲ್ಲ, ನಿಮ್ಮ ಮನೆಯಲ್ಲಿ ಇರುವ ಕೆಲವು ಸಾಮಾನ್ಯ ವಸ್ತುಗಳು ಸಾಕು ಎಂದು ಹೇಳಿದ್ದಾರೆ.

ಇದನ್ನೂ ಓದಿ
ಹೆಂಡತಿಯಾದವಳು ಈ ವಿಷಯಗಳನ್ನು ಗಂಡನಿಂದ ಮುಚ್ಚಿಡುತ್ತಾಳಂತೆ
ಗಂಡನಾದವನು ತನ್ನ ಸಂಸಾರದ ಈ ವಿಷಯಗಳ ಬಗ್ಗೆ ಯಾರ ಬಳಿಯೂ ಹೇಳಬಾರದು
ಗಂಡನ ಕೋಪವನ್ನು ಈ ರೀತಿ ಕಮ್ಮಿ ಮಾಡಿ
ಗಂಡ-ಹೆಂಡ್ತಿಯ ನಡುವೆ ವಯಸ್ಸಿನ ಅಂತರ ಎಷ್ಟಿದ್ದರೆ ಸೂಕ್ತ?

ವಿಡಿಯೋ ಇಲ್ಲಿದೆ ನೋಡಿ:

ಪೆನ್ನಿನ ಕಲೆಗಳನ್ನು ತೆಗೆದುಹಾಕುವುದು ಹೇಗೆ?

ಮೊದಲನೆಯದಾಗಿ, ಪೆನ್ನಿನ ಶಾಯಿ ತಾಗಿದ ಭಾಗದಲ್ಲಿ ಹ್ಯಾಂಡ್ ಸ್ಯಾನಿಟೈಸರ್, ಡೆಟಾಲ್ ಅಥವಾ ಸಾವ್ಲಾನ್ ನಂತಹ ಸ್ವಲ್ಪ ಪ್ರಮಾಣದ ನಂಜುನಿರೋಧಕ ದ್ರವವನ್ನು ಹಾಕಿ. ಇದಾದ ನಂತರ, ಕಲೆ ತಾಗಿದ ಆ ಜಾಗವನ್ನು ಮೃದುವಾದ ಬ್ರಷ್ (ಟೂತ್ ಬ್ರಷ್) ಸಹಾಯದಿಂದ ನಿಧಾನವಾಗಿ ಉಜ್ಜಿ. ಬ್ರಷ್ ನಲ್ಲಿ ಗಟ್ಟಿಯಾಗಿ ಉಜ್ಜಬೇಡಿ. ಹಾಗೆ ಮಾಡುವುದರಿಂದ ಬಟ್ಟೆಗೆ ಹಾನಿಯಾಗಬಹುದು.

ಇದನ್ನೂ ಓದಿ: ಚಾಣಕ್ಯರ ಪ್ರಕಾರ ಈ ತಪ್ಪುಗಳಿಂದ ಸುಂದರ ಸಂಬಂಧ ಹಾಳಾಗುತ್ತಂತೆ

ಹೀಗೆ ಮಾಡುವುದರಿಂದ ಕೆಲವು ನಿಮಿಷಗಳಲ್ಲಿ ಶಾಯಿ ಕಲೆ ನಿಧಾನವಾಗಿ ಕಡಿಮೆ ಆಗುತ್ತದೆ. ಆನಂತರ ಆ ಪ್ರದೇಶವನ್ನು ಶುದ್ಧ ಮತ್ತು ತಣ್ಣೀರಿನಿಂದ ತೊಳೆಯಿರಿ. ಬೇಕಾದರೆ ಈ ಪ್ರಯೋಗವನ್ನು ಮತ್ತೊಮ್ಮೆ ಮಾಡಬಹುದು. ಹ್ಯಾಂಡ್ ಸ್ಯಾನಿಟೈಸರ್, ಡೆಟಾಲ್ ಅಥವಾ ಸಾವ್ಲಾನ್ ನಂತಹ ನಂಜುನಿರೋಧಕ ದ್ರವಗಳು ಆಲ್ಕೋಹಾಲ್ ಆಧಾರಿತವಾಗಿದ್ದು, ಶಾಯಿಯನ್ನು ಕರಗಿಸಿ, ಬಟ್ಟೆಯಿಂದ ಕಲೆಯನ್ನು ದೂರು ಮಾಡುತ್ತದೆ. ಯಾವುದೇ ಬಟ್ಟೆಗೆ ಈ ಪ್ರಯೋಗ ಮಾಡುವ ಮುನ್ನ, ಆ ಬಟ್ಟೆಯ ತುದಿ ಭಾಗಕ್ಕೆ ಮೊದಲು ಇದನ್ನು ಪ್ರಯೋಗ ಮಾಡಿ ಎಂದು ಇಲ್ಲಿ ಹೇಳಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ