ಮಗುವಿನ ಅಳುವಿನಲ್ಲೇ ಗೊತ್ತಾಗುತ್ತಂತೆ ತಂದೆಯ ವಯಸ್ಸು!
ಸಾಮಾನ್ಯವಾಗಿ ಎಲ್ಲಾ ಶಿಶುಗಳ ಅಳು ಒಂದೇ ರೀತಿ ಕೇಳುತ್ತದೆ ಹಾಗಾಗಿ ಅಳುವಿನ ಕಡೆ ಯಾರೂ ಅಷ್ಟೊಂದು ಗಮನಕೊಡುವುದಿಲ್ಲ. ಮಗುವಿನ ಅಳುವಿನಲ್ಲೇ ತಂದೆಯ ವಯಸ್ಸು ಗೊತ್ತಾಗುತ್ತೆ ಎಂದು ಅಧ್ಯಯನವೊಂದು ಹೇಳಿದೆ.
ಸಾಮಾನ್ಯವಾಗಿ ಎಲ್ಲಾ ಶಿಶುಗಳ ಅಳು ಒಂದೇ ರೀತಿ ಕೇಳುತ್ತದೆ ಹಾಗಾಗಿ ಅಳುವಿನ ಕಡೆ ಯಾರೂ ಅಷ್ಟೊಂದು ಗಮನಕೊಡುವುದಿಲ್ಲ. ಮಗುವಿನ ಅಳುವಿನಲ್ಲೇ ತಂದೆಯ ವಯಸ್ಸು ಗೊತ್ತಾಗುತ್ತೆ ಎಂದು ಅಧ್ಯಯನವೊಂದು ಹೇಳಿದ್ದು ಆಶ್ಚರ್ಯ ಮೂಡಿಸಿದೆ.
ತಂದೆಯ ವಯಸ್ಸು ಹಾಗೂ ಮಗುವಿನ ಅಳು ಒಂದಕ್ಕೊಂದು ಸಂಬಂಧವನ್ನು ಹೊಂದಿದೆ ಎಂದು ವಿವರಿಸಿದೆ. ಮಗುವಿನ ಧ್ವನಿಯು ದೇಹದ ತೂಕ, ಬೆಳವಣಿಗೆಯ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿಯಲು ಅಧ್ಯಯನ ನಡೆಸಲಾಗಿದೆ.
ಶಿಶುಗಳ ಅಳು ಮಗುವಿನ ಬೆಳವಣಿಗೆಯ ಸೂಚಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಂಶೋಧನೆ ಸೂಚಿಸುತ್ತದೆ. ಮಗುವಿನ ಬದಲಾದ ಅಳುವುದು ಸ್ವಲೀನತೆ ಸ್ಪೆಕ್ಟ್ರಮ್ ಅಸ್ವಸ್ಥತೆ ಅಥವಾ ಇತರ ನರಗಳ ಬೆಳವಣಿಗೆಯ ಅಸ್ವಸ್ಥತೆಗಳ ಅಪಾಯವನ್ನು ಸೂಚಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ವಯಸ್ಸಾದ ಬಳಿಕ ಮದುವೆಯಾಗುತ್ತಿದ್ದು, ಇದು ಶಿಶುಗಳ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ. ಮಗು ಬೇರೆ ಸ್ವರದಲ್ಲಿ ಅತ್ತರೆ ಮಗುವಿಗೆ ಆಟಿಸಮ್ ಸ್ಪೆಕ್ಟ್ರಮ್ ಡಿಸಾರ್ಡರ್ ಇರಬಹುದು ಎಂದು ಅಧ್ಯಯನ ಹೇಳಿದೆ. ಅಷ್ಟೇ ಅಲ್ಲದೆ ನರ ದೌರ್ಬಲ್ಯವೂ ಇರಬಹುದು ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೆ ಮಗುವಿನ ತೂಕ ಕೂಡ ಕಡಿಮೆ ಇರುತ್ತದೆ.
ಈ ಕುರಿತು ಪ್ರೊಫೆಸರ್ ನೊರಿಕೊ ಒಸುಮಿ ನೇತೃತ್ವದ ಸಂಶೋಧನಾ ತಂಡ, ಟೊಹೊಕು ಯೂನಿವರ್ಸಿಟಿ ಗ್ರಾಜುಯೇಟ್ ಸ್ಕೂಲ್ ಆಫ್ ಮೆಡಿಸಿನ್ ಅಧ್ಯಯನ ನಡೆಸಿದೆ.
ವಯಸ್ಸಾದ ತಂದೆಗೆ ಜನಿಸಿದ ಶಿಶುವಿನ ಸ್ವರವು ಇಲಿಗಳ ಸ್ವರದಂತೆಯೇ ಇರುತ್ತದೆ. ಹಾಗೆಯೇ ಕಡಿಮೆ ವಯಸ್ಸಿನ ವ್ಯಕ್ತಿಗೆ ಜನಿಸಿದ ಮಗುವಿನ ಸ್ವರ ಎರಡರ ವ್ಯತ್ಯಾಸವನ್ನೂ ನೋಡಲಾಯಿತು. ಒಂದೊಮ್ಮೆ ನಾಯಿಯಿಂದ ಅದರ ಮರಿಯನ್ನು ಬೇರ್ಪಡಿಸಿದಾಗ ಮರಿಗಳು ಒಂದು ರೀತಿಯಲ್ಲಿ ಕೂಗುತ್ತವೆ. ತಾಯಿ ಈ ಶಬ್ದಗಳನ್ನು ಆಲಿಸಿದಾಗ ಮರಿಯ ಬಳಿ ಓಡೋಡಿ ಬರುತ್ತದೆ. ಇಲಿಗಳಲ್ಲಿನ ನಡವಳಿಕೆಯು ಮಾನವರಂತೆಯೇ ಇರುತ್ತದೆ.
ಇತ್ತೀಚಿನ ದಿನಗಳಲ್ಲಿ ವಯಸ್ಸಾದ ಮೇಲೆ ಮದುವೆ ಹಾಗೂ ಮಗುವಿಗೆ ಜನ್ಮ ನೀಡುತ್ತಿದ್ದು, ಇದು ಶಿಶುಗಳ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತಿದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ