Rice Cooking Tips: ಅನ್ನ ಅಂಟಾಗದಿರಲು ತಡೆಯಲು ಪ್ರತಿ ಬಾರಿ ಈ ಟಿಪ್ಸ್​​ ಫಾಲೋ ಮಾಡಿ

| Updated By: ಅಕ್ಷತಾ ವರ್ಕಾಡಿ

Updated on: Feb 07, 2023 | 5:31 PM

ಪ್ರತಿ ಬಾರಿ ನೀವು ಅಕ್ಕಿ ಬೇಯಿಸಿದಾಗ ಅದು ಅಂಟು ಅಂಟಾಗಿರುತ್ತದೆ ಎಂಬ ಚಿಂತೆಯೇ? ಇನ್ನು ಮುಂದೆ ಪ್ರತಿಬಾರಿ ಅಕ್ಕಿ ಬೇಯಲು ಇಡುವ ಮುಂಚೆ ಈ ಕೆಳಗಿನ ಸಲಹೆಗಳನ್ನು ಪಾಲಿಸಿ. ಇದು ಅನ್ನವನ್ನು ಗರಿ ಗರಿಯಾಗಿರಲು ಸಹಾಯ ಮಾಡುತ್ತದೆ.

Rice Cooking Tips: ಅನ್ನ ಅಂಟಾಗದಿರಲು ತಡೆಯಲು ಪ್ರತಿ ಬಾರಿ ಈ ಟಿಪ್ಸ್​​ ಫಾಲೋ ಮಾಡಿ
ಸಾಂದರ್ಭಿಕ ಚಿತ್ರ
Image Credit source: NDTV
Follow us on

ಪ್ರತಿ ಬಾರಿ ನೀವು ಅಕ್ಕಿ ಬೇಯಿಸಿದಾಗ ಅದು ಅಂಟು ಅಂಟಾಗಿರುತ್ತದೆ ಎಂಬ ಚಿಂತೆಯೇ? ಇನ್ನು ಮುಂದೆ ಪ್ರತಿಬಾರಿ ಅಕ್ಕಿ ಬೇಯಲು ಇಡುವ ಮುಂಚೆ ಈ ಕೆಳಗಿನ ಸಲಹೆಗಳನ್ನು ಪಾಲಿಸಿ. ಇದು ಅನ್ನವನ್ನು ಗರಿ ಗರಿಯಾಗಿರಲು ಸಹಾಯ ಮಾಡುತ್ತದೆ. ಜೊತೆಗೆ ಯಾವುದೇ ರೀತಿಯ ಸಾಂಬಾರಿನೊಂದಿಗೆ ರುಚಿಕರವಾಗಿವಾಗಿ ಸವಿಯಬಹುದಾಗಿದೆ. ಅಕ್ಕಿ ದೇಶದ ಅತ್ಯಂತ ಸರ್ವತ್ರ ಮತ್ತು ಜನಪ್ರಿಯ ಆಹಾರ ಧಾನ್ಯಗಳಲ್ಲಿ ಒಂದಾಗಿದೆ. ಇದನ್ನು ಬಿರಿಯಾನಿ, ಪಾಯಸ ಹಾಗೂ ಅನೇಕ ಬಗೆಯ ಆಹಾರಗಳಲ್ಲಿ ಬಳಸಲಾಗುತ್ತದೆ. ಆ ಸಮಯದಲ್ಲಿ ಅನ್ನ ಅಂಟು ಅಂಟಾಗಿದ್ದರೆ ಅದು ನಿಮ್ಮ ಪಾಕವನ್ನೇ ಹಾಳು ಮಾಡುತ್ತದೆ.

ಅನ್ನ ಗರಿಗರಿಯಾಗಿರಲು ಈ ಕೆಳಗಿನ ಟಿಪ್ಸ್​​​ ಫಾಲೋ ಮಾಡಿ:

ಅಕ್ಕಿಯನ್ನು ಸರಿಯಾಗಿ ತೊಳೆಯಿರಿ:

ಅಕ್ಕಿಯನ್ನು ಸರಿಯಾಗಿ ಕೈಗಳಿಂದ ತೊಳೆಯಿರಿ. ಮೂರರಿಂದ ನಾಲ್ಕು ಬಾರಿ ಅಕ್ಕಿಯನ್ನು ತೊಳೆಯಿರಿ. ಸರಿಯಾಗಿ ಅಕ್ಕಿಯನ್ನು ತೊಳೆಯದಿದ್ದರೆ ಅಂಟಾಗುವ ಸಾಧ್ಯತೆ ಹೆಚ್ಚಿದೆ.

ಸ್ವಲ್ಪ ಹೊತ್ತು ಅಕ್ಕಿಯನ್ನು ನೆನೆಸಿಡಿ:

ನೀವು ಪ್ರತಿಬಾರಿ ಅಕ್ಕಿಯನ್ನು ಬೇಯಿಸುವ ಮೊದಲು 30 ನಿಮಿಷಗಳ ಕಾಲ ನೆನೆಸಿಡಿ. ಈ ರೀತಿ ಮಾಡುವುದರಿಂದ ಅಕ್ಕಿ ಮೃದುವಾಗುವುದರ ಜೊತೆಗೆ ಗರಿ ಗರಿಯಾಗಿರುತ್ತದೆ.

ಸರಿಯಾದ ಪ್ರಮಾಣದಲ್ಲಿ ನೀರು:

ಪ್ರತಿ ಕಪ್ ಅಕ್ಕಿಗೆ ಎರಡು ಕಪ್ ನೀರುಹಾಕಿ. ಸರಿಯಾದ ಪ್ರಮಾಣದಲ್ಲಿ ನೀರು ಹಾಕಿ ಅಕ್ಕಿಯನ್ನು ಬೇಯಿಸುವುದರಿಂದ, ಅನ್ನ ಅಂಟು ಗಟ್ಟದಂತೆ ನೋಡಿಕೊಳ್ಳಬಹುದು.

ಇದನ್ನೂ ಓದಿ: ಹುಣಸೆ ಹಣ್ಣಿನ ಹಿತವಾದ ಪಾನಕ ಮಾಡುವ ವಿಧಾನ ಇಲ್ಲಿದೆ

ಹೆಚ್ಚು ಬೆರೆಸಬೇಡಿ:

ಅಕ್ಕಿಯಲ್ಲಿ ಕುದಿ ಬರುತ್ತಿರುವಾಗಲೇ ಬೆರೆಸಬೇಡಿ. ನೀವು ಆಗಾಗ ಅಕ್ಕಿಯನ್ನು ಬೆರೆಸುತ್ತಿದ್ದಂತೆ ಅದು ಅನ್ನವಾದಾಗ ಅಂಟು ಗಟ್ಟುತ್ತಾ ಹೋಗುತ್ತದೆ.

ಮುಚ್ಚಳ ಮುಚ್ಚಿ ಬೇಯಿಸಿ:

ಅಕ್ಕಿಯನ್ನು ಬೇಯಿಸುವಾಗ ಮುಚ್ಚಳದಿಂದ ಮುಚ್ಚಿಡುವುದು ಅಗತ್ಯವಾಗಿದೆ. ಈ ರೀತಿ ಮಾಡುವುದರಿಂದ ಹಬೆಯು ಒಳಗಡೆಯೇ ಉಳಿದುಕೊಳ್ಳುತ್ತದೆ ಮತ್ತು ಅನ್ನ ಸರಿಯಾಗಿ ಅಂದರೆ ಗರಿ ಗರಿಯಾಗಿರುತ್ತದೆ.

ಹತ್ತು ನಿಮಿಷ ಬಿಡಿ:

ಅಕ್ಕಿ ಕುದಿ ಬಂದ ನಂತರ ಅದನ್ನು ತಕ್ಷಣ ತೆಗೆದು ಅನ್ನ ಹಾಗೂ ನೀರನ್ನು ಬೇರ್ಪಡಿಸಬೇಡಿ. ಸ್ವಲ್ಪ ಅನ್ನ ಬೆಂದ ನಂತರ ಸ್ವಲ್ಪ ಹೊತ್ತು ಹಾಗೆಯೇ ಬಿಡಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 5:30 pm, Tue, 7 February 23