
ಸಂಕ್ರಾಂತಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳಿದ್ದು ಪೂರ್ವ ತಯಾರಿ ಈಗಾಗಲೇ ಆರಂಭವಾಗಿದೆ. ಅದರಲ್ಲಿಯೂ ಹಬ್ಬದ ದಿನ ದೇವರ ನೈವೇದ್ಯಕ್ಕೆ ಹಾಗೂ ಎಲ್ಲರಿಗೂ ಇಷ್ಟವಾಗುವಂತೆ ಯಾವ ರೀತಿಯ ತಿಂಡಿ- ತಿನಿಸುಗಳನ್ನು ಮಾಡಬೇಕು ಎಂದು ಯೋಚಿಸುತ್ತಿರುವವರಿಗೆ ತೆಂಗಿನಕಾಯಿ ಲಡ್ಡು ಉತ್ತಮ ಆಯ್ಕೆಯಾಗಿದೆ. ನಿಮ್ಮ ಪ್ರೀತಿ ಪಾತ್ರರಿಗಾಗಿ ಸುಲಭವಾಗಿ ತಯಾರಿಸಿ ಕೊಡಬಹುದಾದ ಸಿಹಿ ತಿಂಡಿಗಳಲ್ಲಿ ಇದು ಒಂದಾಗಿದೆ. ಇವುಗಳನ್ನು ತಯಾರಿಸುವುದು ತುಂಬಾ ಸುಲಭ ಮತ್ತು ಕೇವಲ 10 ನಿಮಿಷಗಳಲ್ಲಿ ಇದನ್ನು ನೀವು ತಯಾರಿಸಬಹುದು. ಇದರಿಂದ ಹಬ್ಬದ ದಿನಗಳಲ್ಲಿ ನೀವು ದೇವರಿಗೆ ಇಡುವ ನೈವೇದ್ಯವನ್ನು ಬೇಗನೆ ಮಾಡಿ ಮುಗಿಸಬಹುದು. ಇದನ್ನು ಮಾಡಲು ನಿಮಗೆ ಬೇಕಾಗಿರುವುದು ತೆಂಗಿನ ತುರಿ, ಗಸಗಸೆ ಬೀಜಗಳು, ಬೆಲ್ಲ ಮತ್ತು ಏಲಕ್ಕಿ ಪುಡಿ. ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ರುಬ್ಬಿ ನುಣ್ಣಗೆ ಪುಡಿ ಮಾಡಿ ಮತ್ತು ನಿಮ್ಮ ಕೈಗಳ ಸಹಾಯದಿಂದ ಬಾಲ್ ಆಕೃತಿಯಲ್ಲಿ ಮಾಡಿ. ಈ ಲಡ್ಡುಗಳು ರುಚಿಯಲ್ಲಿ ಅದ್ಭುತವಾಗಿರುತ್ತದೆ ಮತ್ತು ಪೌಷ್ಟಿಕವಾಗಿಯೂ ಇರುತ್ತದೆ.
ಇದನ್ನೂ ಓದಿ: ಸಂಕ್ರಾಂತಿಯಂದು ಸುಲಭವಾಗಿ ತಯಾರಿಸಬಹುದಾದ ಪಾಕವಿಧಾನಗಳು ಇಲ್ಲಿವೆ
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 12:07 pm, Sat, 13 January 24