ಹೆಣ್ಣು ಮಕ್ಕಳು ರಹಸ್ಯವಾಗಿಟ್ಟುಕೊಳ್ಳುವ ವಿಚಾರಗಳು ಇವೆ ನೋಡಿ

ಹೆಣ್ಣು ಚಂಚಲ ಸ್ವಭಾವದವಳು, ಮೀನಿನ ಹೆಜ್ಜೆಯನ್ನಾದರೂ ಕಂಡುಹಿಡಿಯಬಹುದು ಆದರೆ ಹೆಣ್ಣಿನ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಮಾತಿದೆ. ಅದಲ್ಲದೇ, ಹೆಣ್ಣು ಮಕ್ಕಳನ್ನು ಕೆಲವು ವಿಷ್ಯಗಳಲ್ಲಿ ರಹಸ್ಯವನ್ನು ಕಾಪಾಡಿಕೊಳ್ಳುತ್ತಾರೆ. ಅಷ್ಟೇ ಅಲ್ಲದೇ ಈ ಕೆಲವು ವಿಚಾರದಲ್ಲಿ ಸಿಹಿ ಸುಳ್ಳನ್ನೇ ಹೇಳುತ್ತಾರೆ. ಹಾಗಾದ್ರೆ ಆ ಬಗೆಗಿನ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಹೆಣ್ಣು ಮಕ್ಕಳು ರಹಸ್ಯವಾಗಿಟ್ಟುಕೊಳ್ಳುವ ವಿಚಾರಗಳು ಇವೆ ನೋಡಿ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 23, 2025 | 1:52 PM

ಹೆಣ್ಣನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ ಎನ್ನುವುದು ಅನೇಕರ ಅಭಿಪ್ರಾಯವಾಗಿದೆ. ಆದರೆ ತನ್ನ ಜೀವಮಾನವನ್ನು ತನ್ನ ಪತಿ ಮಕ್ಕಳ ಸಂತೋಷಕ್ಕಾಗಿ ಮೀಸಲಿಡುವ ಹೆಣ್ಣಿಗೂ ಆಸೆ ಆಕಾಂಕ್ಷೆಗಳಿರುತ್ತದೆ. ಎಷ್ಟೇ ನೋವಿದ್ದರೂ ತಾನೇ ಅನುಭವಿಸಿಕೊಂಡು ಎಲ್ಲರ ಮುಂದೆ ನಗುವ ಮುಖವಾಡ ಧರಿಸಿಕೊಂಡಿರುತ್ತಾಳೆ. ಯಾವುದೇ ಕಾರಣಕ್ಕೂ ಹೆಣ್ಣುಮಕ್ಕಳು ಈ ವಿಷಯದಲ್ಲಿ ಸತ್ಯವನ್ನು ಹೇಳುವುದಿಲ್ಲ. ಆದರೆ ಹೆಚ್ಚಿನ ಹೆಣ್ಣುಮಕ್ಕಳು ಕೆಲವು ವಿಷಯಗಳಲ್ಲಿ ಸುಳ್ಳನ್ನೇ ಹೇಳುತ್ತಾರಂತೆ.

  • ಎಲ್ಲಾ ಮಹಿಳೆಯರಿಗೆ ಶಾಪಿಂಗ್ ಮಾಡುವುದೆಂದರೆ ಇಷ್ಟ. ಆದರೆ ಶಾಪಿಂಗ್ ಮಾಡುವಾಗ ಎಷ್ಟು ಹಣ ಖರ್ಚು ಮಾಡಿದ್ದೇವೆ ಎನ್ನುವುದರ ಲೆಕ್ಕ ನೀಡುವುದಿಲ್ಲ. ಅದರಲ್ಲಿ ತನ್ನ ಗಂಡಂದಿರಿಗೆ ಈ ವಿಷಯದ ಬಗ್ಗೆ ತಪ್ಪದೇ ಸುಳ್ಳು ಹೇಳುತ್ತಾರೆ. ಒಂದು ವೇಳೆ ಖರ್ಚಿನ ಲೆಕ್ಕ ಕೇಳಿದರೆ ಕಡಿಮೆ ಅಥವಾ ಹೆಚ್ಚು ಬೆಲೆಯ ಬಗ್ಗೆ ಹೇಳುತ್ತಾರೆ. ಹೀಗೆ ಹೇಳಿಯೇ ಹಣವನ್ನು ಉಳಿಸುವ ಪ್ರಯತ್ನ ಹೆಣ್ಣು ಮಕ್ಕಳದ್ದು ಆಗಿರುತ್ತದೆ.
  • ಹೆಂಗಳೆಯರಿಗೆ ತಮ್ಮ ಸೌಂದರ್ಯದ ಬಗ್ಗೆ ಎಲ್ಲಿಲ್ಲದ ಕಾಳಜಿ ಇರುತ್ತದೆ. ಎಲ್ಲರ ಮುಂದೆ ಚೆನ್ನಾಗಿ ಕಾಣಿಸಬೇಕೆನ್ನುವ ಹಂಬಲದೊಂದಿಗೆ ತಮ್ಮ ತೂಕದ ಬಗ್ಗೆ ಯಾರಿಗೂ ಹೇಳಲ್ಲ. ತನ್ನ ಪತಿಯ ಬಳಿ ತನ್ನ ತೂಕ ಎಷ್ಟಿದೆ ಎನ್ನುವುದನ್ನು ಹೇಳುವುದಿಲ್ಲ. ಯಾರದರೂ ತೂಕದ ಬಗ್ಗೆ ಕೇಳಿದರೆ ಇರುವ ತೂಕಕ್ಕಿಂತ ಕಡಿಮೆಯೇ ಹೇಳುತ್ತಾರೆ.
  • ಹಿರಿಯರು ಹೇಳುವಂತೆ ಗಂಡಿನ ಸಂಬಳ ಹಾಗೂ ಹೆಣ್ಣಿನ ವಯಸ್ಸಿನ ಬಗ್ಗೆ ಕೇಳಬಾರದಂತೆ. ಆದರೆ ಈ ವಿಚಾರದಲ್ಲಿ ಹೆಣ್ಣು ಮಕ್ಕಳು ಸುಳ್ಳು ಹೇಳುವುದೇ ಹೆಚ್ಚು. ತಮ್ಮ ಹುಟ್ಟಿದ ದಿನಾಂಕ ಹಾಗೂ ವಯಸ್ಸಿನ ಬಗ್ಗೆ ನಿಖರವಾದ ಮಾಹಿತಿ ನೀಡುವುದಿಲ್ಲ. ವಯಸ್ಸನ್ನು ಕಡಿಮೆ ಹೇಳಿ ನಿಖರವಾದ ವಯಸ್ಸಿನ ಮಾಹಿತಿಯನ್ನು ಬಿಟ್ಟುಕೊಡುವುದಿಲ್ಲ.
  • ಗಂಡು ಮಕ್ಕಳಿಗೆ ಹೋಲಿಸಿದರೆ ಹೆಣ್ಣು ಮಕ್ಕಳು ಲವ್ ನಲ್ಲಿ ಬಿದ್ದಿದ್ರು, ರಿಲೇಷನ್ಶಿಪ್ ನಲ್ಲಿದ್ರು ಆ ಬಗ್ಗೆ ಎಲ್ಲಿಯೂ ಕೂಡ ಹೇಳಲ್ಲ. ಆತ್ಮ ಸ್ನೇಹಿತರ ಬಳಿ ಸಮಯ ಸಂದರ್ಭದ ನೋಡಿ ಈ ಬಗ್ಗೆ ಹೇಳಿಕೊಳ್ಳುತ್ತಾರೆ. ಕೆಲವು ಸಂಬಂಧವಚ್ ರಹಸ್ಯವಾಗಿಯೇ ಕಾಪಾಡಿಕೊಂಡು ಹೋಗುವ ಪ್ರಯತ್ನ ಮಾಡುತ್ತಾರೆ. ಅದಲ್ಲದೇ ಮದುವೆಯಾದ ಬಳಿಕ ತನ್ನ ಪತಿಯ ಬಳಿ ಹಳೆಯ ಸಂಬಂಧದ ಹೇಳಿಕೊಳ್ಳುವುದೇ ಇಲ್ಲ.
  • ಹೆಣ್ಣು ಮಕ್ಕಳು ಸಮಯ ವಿಚಾರದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದಿಲ್ಲ. ಮನೆ ಕೆಲಸ ಹಾಗೂ ವೈಯುಕ್ತಿಕ ಜೀವನ ಹೀಗೆ ಎಲ್ಲವನ್ನು ನಿಭಾಯಿಸಿಕೊಂಡು ಹೋಗಬೇಕಾದ ಕಾರಣ, ಯಾರ ಬಳಿಯಾದರೂ ಈ ಸಮಯಕ್ಕೆ ಬರುತ್ತೇನೆ ಎಂದರೆ ಅದನ್ನು ಪಾಲಿಸುವುದು ಕಷ್ಟವಾಗುತ್ತದೆ. ಅದಲ್ಲದೇ, ನಿಗದಿತ ಸ್ಥಳವನ್ನು ತಲುಪಲು ಇನ್ನು ಸಮಯ ಬೇಕಾದರೂ ಐದು ನಿಮಿಷದಲ್ಲಿ ಇರುತ್ತೇನೆ ಎನ್ನುವ ಸುಳ್ಳನ್ನು ಹೇಳುತ್ತಾರೆ.
  • ಹೆಚ್ಚಿನ ಮಹಿಳೆಯರು ತಾವು ಇರುವ ಸ್ಥಳದ ಬಗ್ಗೆ ಹೇಳಿಕೊಳ್ಳುವುದಿಲ್ಲ. ಅದರಲ್ಲಿ ತಾವು ಎಲ್ಲಿ ಹೋಗುತ್ತೇವೆ ಎನ್ನುವ ಬಗ್ಗೆ ಎಲ್ಲಿಯೂ ರಿವೀಲ್ ಮಾಡುವುದಿಲ್ಲ. ಈ ಬಗ್ಗೆ ಮಹಿಳೆಯರು ಸುಳ್ಳನ್ನೇ ಹೇಳುತ್ತಾರೆ.
  • ಮಹಿಳೆಯರು ತಮ್ಮ ಆರೋಗ್ಯದ ವಿಚಾರಗಳ ಬಗ್ಗೆ ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ. ತಮಗೆ ಆರೋಗ್ಯ ಕೈ ಕೊಟ್ಟಿದ್ದರೂ ಚೆನ್ನಾಗಿದ್ದೇವೆ ಎಂದು ಸುಳ್ಳು ಹೇಳುತ್ತಾರೆ. ಅನಾರೋಗ್ಯ ಕಾಡುತ್ತಿದೆ ಎಂದರೆ ನಮ್ಮನ್ನು ಎಲ್ಲರೂ ದೂರ ಮಾಡುತ್ತಾರೆ ಎನ್ನುವ ಆತಂಕವು ಇರುತ್ತದೆ. ಈ ವಿಚಾರದಲ್ಲಿ ಹೆಚ್ಚಿನವರು ಸುಳ್ಳನ್ನೇ ಹೇಳುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ