Republic Day 2025: ಗಣರಾಜ್ಯೋತ್ಸವ ದಿನ ಆಕರ್ಷಕವಾಗಿ ಕಾಣಿಸ್ಬೇಕಾ? ಹಾಗಾದ್ರೆ ಈ ರೀತಿ ಡ್ರೆಸ್ ಮಾಡ್ಕೊಳ್ಳಿ
ಭಾರತದ ಇತಿಹಾಸದಲ್ಲಿ ಗಣರಾಜ್ಯ ದಿನವು ಪ್ರಮುಖ ದಿನವಾಗಿದ್ದು ಇಡೀ ದೇಶವೇ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. 1950 ಜನವರಿ 26 ರಂದು ಭಾರತ ಸಂವಿಧಾನವನ್ನು ಅಂಗೀಕರಿಸಿದ ದಿನವಾಗಿದೆ. ಹೀಗಾಗಿ ಪ್ರತಿಯೊಂದು ಶಾಲೆ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಗಣರಾಜ್ಯೋತ್ಸವ ಆಚರಿಸಲಾಗುತ್ತದೆ. ಗಣರಾಜ್ಯೋತ್ಸವಕ್ಕೆ ತಕ್ಕದಾದ ಥೀಮ್ ನಲ್ಲಿ ಡ್ರೆಸ್ ಮಾಡಿಕೊಂಡು ಹಬ್ಬದಂತೆ ಆಚರಿಸಬಹುದಾಗಿದ್ದು, ಈ ಕೆಲವು ಟಿಪ್ಸ್ ಇಲ್ಲಿದೆ.
ಗಣರಾಜ್ಯೋತ್ಸವ ಪ್ರತಿಯೊಬ್ಬ ಭಾರತೀಯನಿಗೂ ಹಬ್ಬವಿದ್ದಂತೆಯೇ ಸರಿ. ಹೌದು,ಭಾರತೀಯ ಪಾಲಿಗೆ ಜನವರಿ 26 ಹೆಮ್ಮೆಯ ದಿನವಾಗಿದೆ. ದೇಶದ ಸಂವಿಧಾನ ಅಸ್ತಿತ್ವಕ್ಕೆ ಬಂದ ದಿನ. ಹೀಗಾಗಿ ಸ್ವಾತಂತ್ರ್ಯ ಸಿಕ್ಕ ದಿನವನ್ನು ಎಷ್ಟು ಸಂಭ್ರಮದಿಂದ ಆಚರಿಸುತ್ತೇವೋ ಅಷ್ಟೇ ಸಂಭ್ರಮದಿಂದ ಈ ದಿನವನ್ನು ಆಚರಿಸುತ್ತೇವೆ. ಈ ವರ್ಷ ನಾವು 76 ನೇ ವರ್ಷದ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಈ ಗಣರಾಜ್ಯೋತ್ಸವ ದಿನ ಈ ರೀತಿ ಉಡುಗೆ ತೊಟ್ಟು ಹಬ್ಬದಂತೆ ಈ ದಿನವನ್ನು ಸಂಭ್ರಮಿಸಬಹುದು.
- ತ್ರಿವರ್ಣ ಬಣ್ಣದ ಸೀರೆ ಆಯ್ಕೆ ಮಾಡಿ : ಯಾವುದೇ ಕಾರ್ಯಕ್ರಮವಿದ್ದರೂ ಸೀರೆ ಹೆಣ್ಣು ಮಕ್ಕಳ ಸೌಂದರ್ಯವನ್ನು ಹೆಚ್ಚಿಸುತ್ತದೆ. ಕೇಸರಿ, ಬಿಳಿ ಹಾಗೂ ಹಸಿರು ಬಣ್ಣಗಳನ್ನೊಳಗೊಂಡ ಮೂರು ಬಣ್ಣದ ಸೀರೆಯೂ ಗಣರಾಜ್ಯೋತ್ಸವಕ್ಕೆ ಹೇಳಿ ಮಾಡಿಸಿದ ಉಡುಗೆಯಾಗಿದೆ. ನೀವು ತ್ರಿವರ್ಣ ಸೀರೆ ಧರಿಸಲು ಸಾಧ್ಯವಾಗದಿದ್ದರೆ ಬಿಳಿ ಬಣ್ಣದ ಸೀರೆ ಧರಿಸಿ ಮೂರು ಬಣ್ಣಗಳ ಒಳಗೊಂಡ ಶಾಲನ್ನು ವಿಭಿನ್ನವಾಗಿ ಧರಿಸಿ ಆಕರ್ಷಕವಾಗಿ ಕಂಗೊಳಿಸಬಹುದು.
- ಇಂಡೋ-ವೆಸ್ಟರ್ನ್ ಲುಕ್ ನಲ್ಲಿ ಕಂಗೊಳಿಸಿ : ಇಂಡೋ-ವೆಸ್ಟರ್ನ್ ಲುಕ್ ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗಿದೆ. ಬಿಳಿ ಸ್ಕರ್ಟ್ ಅನ್ನು ಹಸಿರು ಅಥವಾ ಕೇಸರಿ ಬಣ್ಣದ ಕ್ರಾಪ್ ಟಾಪ್ ನೊಂದಿಗೆ ಮಿಸ್ ಮ್ಯಾಚ್ ಮಾಡಿಕೊಳ್ಳಬಹುದು. ಎಥ್ನಿಕ್ ಟಚ್‌ಗಾಗಿ ಫ್ಲೋಯಿ ಸ್ಕರ್ಟ್‌ನೊಂದಿಗೆ ಉದ್ದವಾದ ಕುರ್ತಾವನ್ನು ಧರಿಸಬಹುದು.
- ಬಿಳಿ ಸಲ್ವಾರ್ ಆಯ್ಕೆಯಿರಲಿ : ಬಿಳಿ ಬಣ್ಣದ ಸಲ್ವಾರ್ ಗೆ ಬಿಳಿ ಬಣ್ಣದ ಪ್ಯಾಂಟ್ ಹಾಕಿಕೊಂಡು ಕೇಸರಿ ಮತ್ತು ಹಸಿರು ಬಣ್ಣದ ಮಿಕ್ಸ್ ಇರುವ ದುಪಟ್ಟಾ ಹಾಕಿಕೊಂಡರೆ ಆಕರ್ಷಕವಾಗಿ ಕಾಣಿಸಿಕೊಳ್ಳಬಹುದು. ಬಿಳಿ ಟಾಪ್ಗೆ ಹಸಿರು ಅಥವಾ ಕೇಸರಿ ಬಣ್ಣದ ಪ್ಯಾಂಟ್ ಕೂಡ ಧರಿಸಬಹುದು. ಬಿಳಿ ಟಾಪ್ ಗೆ ಟೈಟ್ ಪ್ಯಾಂಟ್, ಪಲಾಜೋ, ಬೆಲ್ ಬಾಟಂ ಪ್ಯಾಂಟ್ಗಳು ಹೊಂದಿಕೆಯಾಗುತ್ತವೆ.
- ಕೈಬಳೆ, ಕಿವಿಯೋಲೆ ಮ್ಯಾಚಿಂಗ್ ಇರಲಿ : ಗಣರಾಜ್ಯೋತ್ಸವದ ದಿನ ಎಲ್ಲರ ಗಮನ ಸೆಳೆಯಲು ಬಯಸಿದರೆ ಕೈಬಳೆಗಳು ಹಾಗೂ ಕಿವಿಯೋಲೆ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದಿಂದ ಕೂಡಿರಲಿ. ಬಟ್ಟೆಗೆ ಹೊಂದುವಂತೆ ತ್ರಿವರ್ಣದ ಸ್ಟಿಕರ್ ಹಾಗೂ ಕ್ಲಿಪ್ ಬಗ್ಗೆ ಹೆಚ್ಚು ಗಮನ ಕೊಡಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ