AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shaving Tips: ಶೇವಿಂಗ್ ನಂತರ ಉಂಟಾಗುವ ಗುಳ್ಳೆಗಳನ್ನು ತಡೆಗಟ್ಟಲು ಈ ಸಲಹೆಗಳನ್ನು ಪಾಲಿಸಿ

ಮುಂದಿನ ಬಾರಿ ನೀವು ಶೇವಿಂಗ್ ರೇಜರ್‌ನ್ನು ಬಳಸುವ ಮೊದಲು, ಚರ್ಮರೋಗ ತಜ್ಞೆ ಡಾ. ಚಿತ್ರಾ ಆನಂದ್ ಸೂಚಿಸಿರುವ ಸಲಹೆಗಳನ್ನು ಪಾಲಿಸಿ.

Shaving Tips: ಶೇವಿಂಗ್ ನಂತರ ಉಂಟಾಗುವ ಗುಳ್ಳೆಗಳನ್ನು ತಡೆಗಟ್ಟಲು ಈ ಸಲಹೆಗಳನ್ನು ಪಾಲಿಸಿ
ಸಾಂದರ್ಭಿಕ ಚಿತ್ರ
TV9 Web
| Updated By: ಅಕ್ಷತಾ ವರ್ಕಾಡಿ|

Updated on: Jan 15, 2023 | 2:17 PM

Share

ವ್ಯಾಕ್ಸಿಂಗ್(Hair Wax) ಮೂಲಕ ದೇಹದ ಕೂದಲನ್ನು ತೆಗೆಯಲು ಸಾಧ್ಯವಿದ್ದರೂ ಕೂಡ, ಅದು ಸಾಕಷ್ಟು ನೋವುಂಟು ಮಾಡುತ್ತದೆ. ಆದ್ದರಿಂದ ಹೆಚ್ಚಿನವರು ಶೇವಿಂಗ್ ಬ್ಲೆಡ್ ಬಳಸುತ್ತಾರೆ. ಈ ಪ್ರಕ್ರಿಯೆ ನಿಮಗೆ ನೋವನ್ನುಂಟು ಮಾಡಿಲ್ಲದಿದ್ದರೂ ಕೂಡ ಕೆಲವೊಮ್ಮೆ ರೇಜರ್ ಮಾಡಿದ ಬಳಿಕ ದೇಹದಲ್ಲಿ ಸಣ್ಣ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಮುಂದಿನ ಬಾರಿ ನೀವು ಶೇವಿಂಗ್ ಮಾಡುವ ಮೊದಲು ತಜ್ಞರು ಸೂಚಿಸಿರುವ ಸಲಹೆಗಳನ್ನು ಪಾಲಿಸಿ. ಬೆಂಗಳೂರು ಮೂಲದ ಚರ್ಮರೋಗ ತಜ್ಞೆ ಡಾ. ಚಿತ್ರಾ ಆನಂದ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಸಲಹೆಗಳು ಇಲ್ಲಿವೆ. ಅವರ ಹಂಚಿಕೊಂಡಿರುವ ಪೋಸ್ಟ್ ಇಲ್ಲಿದೆ.

ನೀವು ಶೇವಿಂಗ್ ರೇಜರ್‌ನ್ನು ಬಳಸುವ ಮೊದಲು ಈ ಟಿಪ್ಸ್ ಪಾಲಿಸಿ

ಡ್ರೈ ಶೇವ್ ಮಾಡದಿರಿ:

ಶೇವ್ ಮಾಡಬೇಕೆಂದು ಬಯಸುವ ದೇಹದ ಪ್ರದೇಶಕ್ಕೆ ತೇವಾಂಶ ಅಗತ್ಯವಿರುತ್ತದೆ. ಆದ್ದರಿಂದ ಶೇವಿಂಗ್ ಮೊದಲು ಅಲೋವೆರಾ ಜೆಲ್​​ ಹಚ್ಚಿ. ಹೀಗೆ ಮಾಡುವುದರಿಂದ ನಿಮ್ಮ ಕೂದಲು ಮೃದುವಾಗುತ್ತದೆ ಮತ್ತು ಶೇವಿಂಗ್ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ.

ನೊರೆಯನ್ನು ದೇಹದ ಭಾಗಕ್ಕೆ ಅನ್ವಯಿಸಿ:

ಶೇವಿಂಗ್ ಮಾಡುವ ಮೊದಲು ಕೂದಲಿಗೆ ನೊರೆಯನ್ನು ಅನ್ವಯಿಸಬೇಕು. ಹೀಗೆ ನೊರೆ ಹಾಕುವುದರಿಂದ ಕೂದಲನ್ನು ಶೇವ್ ಮಾಡಲು ಸುಲಭವಾಗುತ್ತದೆ ಎಂದು ಎಂದು ಡಾ. ಚಿತ್ರಾ ಹೇಳಿದ್ದಾರೆ.

ಶವರ್ ಜೆಲ್ ಬಳಸಿ:

ಶೇವಿಂಗ್ ಮಾಡಿದ ನಂತರ ಗುಳ್ಳೆಗಳು ಬರದೇ ಇರಲು ಶವರ್ ಜೆಲ್‌ನ್ನು ಬಳಸುವುದು ಅತ್ಯಂತ ಅಗತ್ಯವಾಗಿದೆ.

ಇದನ್ನೂ ಓದಿ: ಮುಟ್ಟಿನ ಸಮಯದಲ್ಲಿ ಚರ್ಮದಲ್ಲಾಗುವ ಬದಲಾವಣೆಯ ಬಗ್ಗೆ ತಿಳಿದುಕೊಳ್ಳಿ

ಪ್ರತಿ ಬಾರಿ ಹೊಸ ಬ್ಲೇಡ್ ಬಳಸಿ:

ಯಾವುದೇ ಸೋಂಕು ಅಥವಾ ಗುಳ್ಳೆ ತಡೆಗಟ್ಟಲು ನೀವು ಶೇವಿಂಗ್ ಮಾಡುವಾಗ ಯಾವಾಗಲೂ ಹೊಸ ಬ್ಲೇಡ್ ಬಳಸಬೇಕೆಂದು ಸೂಚಿಸುತ್ತಾರೆ. ಇದಲ್ಲದೆ ಇದು ಶೇವಿಂಗ್‌ನ್ನು ಸುಲಭಗೊಳಿಸುತ್ತದೆ.

ಎಕ್ಸ್ಪೋಲಿಯೇಟ್ ಅಗತ್ಯ:

ಶೇವಿಂಗ್ ಮಾಡುವ ಮೊದಲು ನಿಮ್ಮ ಚರ್ಮವನ್ನು ಎಕ್ಸ್ಫೋಲಿಯೇಟ್ ಮಾಡಿ. ಇದು ಶೇವಿಂಗ್ ನಂತರ ದೇಹದಲ್ಲಿ ಒಳ ಕೂದಲು ಕಾಣದ ಹಾಗೆ ಮಾಡುತ್ತದೆ. ಜೊತೆಗೆ ಚಳಿಗಾಲದಲ್ಲಿ ನಿಮ್ಮ ಚರ್ಮಕ್ಕೆ ರಕ್ಷಣೆ ನೀಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: