Shocking News: ರೆಸ್ಟೋರೆಂಟ್​​ನಲ್ಲಿ ಮೋಮೋಸ್ ತಿನ್ನುವಾಗ​ ಗಂಟಲಲ್ಲಿ ಸಿಕ್ಕಿ ವ್ಯಕ್ತಿ ಸಾವು!

| Updated By: ಸುಷ್ಮಾ ಚಕ್ರೆ

Updated on: Jun 15, 2022 | 11:44 AM

ಅವಸರದಲ್ಲಿ ತಿನ್ನಬಾರದು ಮತ್ತು ತಿನ್ನುವ ಮೊದಲು ಆಹಾರವನ್ನು ಸರಿಯಾಗಿ ಅಗಿಯಬೇಕು. ಹಣ್ಣು ಮತ್ತು ತರಕಾರಿಗಳಂತಹ ಗಟ್ಟಿಯಾದ ಆಹಾರ ಪದಾರ್ಥಗಳನ್ನು ಬೇಯಿಸಿದ ನಂತರ ತಿನ್ನಬೇಕು. ಆಹಾರವನ್ನು ಯಾವಾಗಲೂ ಕೂತು ತಿನ್ನಬೇಕು ಎಂದು ತಜ್ಞರು ಸೂಚಿಸಿದ್ದಾರೆ.

Shocking News: ರೆಸ್ಟೋರೆಂಟ್​​ನಲ್ಲಿ ಮೋಮೋಸ್ ತಿನ್ನುವಾಗ​ ಗಂಟಲಲ್ಲಿ ಸಿಕ್ಕಿ ವ್ಯಕ್ತಿ ಸಾವು!
ಮೋಮೋಸ್
Image Credit source: Twitter
Follow us on

ನವದೆಹಲಿ: ದೆಹಲಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, 50 ವರ್ಷದ ವ್ಯಕ್ತಿಯೊಬ್ಬರು ರೆಸ್ಟೋರೆಂಟ್‌ನಲ್ಲಿ ಊಟ ಮಾಡುತ್ತಿದ್ದಾಗ ಗಂಟಲಲ್ಲಿ ಮೋಮೋಸ್ (Momos) ಸಿಲುಕಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಶವಪರೀಕ್ಷೆ ನಡೆಸಿದ ವೈದ್ಯರು ಆ ವ್ಯಕ್ತಿ ತಿಂದಿದ್ದ ಮೋಮೋ ಗಂಟಲಿನ ನಾಳದಲ್ಲಿ ಸಿಕ್ಕಿಹಾಕಿಕೊಂಡಿರುವುದನ್ನು ಕಂಡುಹಿಡಿದಿದ್ದಾರೆ ಎಂದು ಏಮ್ಸ್ ವರದಿಯಲ್ಲಿ ತಿಳಿಸಿದೆ.

ಕಂಪ್ಯೂಟರ್ ಟೋಪೋಲಜಿ ಸ್ಕ್ಯಾನ್ ಮೂಲಕ ಆ ವ್ಯಕ್ತಿ ತಿಂದಿದ್ದ ಆಹಾರ ಗಂಟಲಿನ ನಾಳದ ಮೇಲ್ಭಾಗದಲ್ಲಿ ಸಿಕ್ಕಿಕೊಂಡಿರುವುದು ಶವಪರೀಕ್ಷೆ ವೇಳೆ ಪತ್ತೆಯಾಗಿದೆ. ಇದರಿಂದಲೇ ಸಾವು ಸಂಭವಿಸಿದ ಎನ್ನಲಾಗಿದೆ. 12 ಲಕ್ಷ ಜನರಲ್ಲಿ ಒಬ್ಬರು ಆಹಾರದಲ್ಲಿ ಉಸಿರುಗಟ್ಟಿ ಸಾಯುತ್ತಾರೆ. ಸಾಯುವ ಮೊದಲು ಆ ವ್ಯಕ್ತಿ ಕುಡಿದಿದ್ದರು ಎಂದು ಏಮ್ಸ್ ವರದಿ ಹೇಳಿದೆ. ಮೋಮೋಸ್ ತಿನ್ನುತ್ತಿದ್ದ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: Shocking News: ಹೆಂಡತಿಗೆ ಸರ್ಕಾರಿ ಕೆಲಸ ಸಿಕ್ಕಿದ್ದಕ್ಕೆ ಆಕೆಯ ಕೈ ಕತ್ತರಿಸಿದ ಗಂಡ!; ಹೀಗೂ ಇರ್ತಾರಾ?

ಇದನ್ನೂ ಓದಿ
ಅಮೆರಿಕಾದಲ್ಲಿರುವ ಭಾರತೀಯ ರೆಸ್ಟೋರೆಂಟ್ ಈಗ ಅಮೆರಿಕದ ಅತ್ಯುತ್ತಮ ರೆಸ್ಟೋರೆಂಟ್
Relationship: ಸಂಗಾತಿ ಜತೆ ನಿಮ್ಮ ಬಂಧ ಗಟ್ಟಿಯಾಗಿರಬೇಕೆಂದರೆ ಮಾತಿನ ಶೈಲಿ ಬದಲಿಸಿಕೊಳ್ಳಿ
Viral Video : ‘ಪಸೂರಿ’ ಹಾಡನ್ನು ಅಡುಗೆ ಮನೆಯಲ್ಲಿ ಅದ್ಭುತವಾಗಿ ಹಾಡಿದ ಯುವತಿ!

ಆಹಾರ ತಿನ್ನುವಾಗ ಉಸಿರುಗಟ್ಟಿಸುವುದನ್ನು ತಪ್ಪಿಸಲು ಜನರು ಆಹಾರವನ್ನು ಸಣ್ಣ ಭಾಗಗಳಾಗಿ ಮಾಡಿಕೊಂಡು, ನಿಧಾನವಾಗಿ ತಿನ್ನಬೇಕು. ಅವಸರದಲ್ಲಿ ತಿನ್ನಬಾರದು ಮತ್ತು ತಿನ್ನುವ ಮೊದಲು ಆಹಾರವನ್ನು ಸರಿಯಾಗಿ ಅಗಿಯಬೇಕು. ಹಣ್ಣು ಮತ್ತು ತರಕಾರಿಗಳಂತಹ ಗಟ್ಟಿಯಾದ ಆಹಾರ ಪದಾರ್ಥಗಳನ್ನು ಬೇಯಿಸಿದ, ತುರಿದ ಅಥವಾ ಹಿಸುಕಿದ ನಂತರ ತಿನ್ನಬೇಕು. ಆಹಾರವನ್ನು ಯಾವಾಗಲೂ ಕೂತು ತಿನ್ನಬೇಕು ಎಂದು ತಜ್ಞರು ಸೂಚಿಸಿದ್ದಾರೆ.

ಮೋಮೋಸ್​ ಇತ್ತೀಚೆಗೆ ಹೆಚ್ಚು ಪ್ರಸಿದ್ಧಿ ಪಡೆಯುತ್ತಿರುವ ಖಾದ್ಯವಾಗಿದ್ದು, ಕುಕ್ಕರ್​​ನಲ್ಲಿ ನೀರು ಹಾಕಿ, ಹಬೆಯಲ್ಲಿಯೇ ಇದನ್ನು ಬೇಯಿಸಲಾಗುತ್ತದೆ. ಕಡುಬಿನ ರೀತಿಯಲ್ಲಿರುವ ಈ ಮೋಮೋಸ್​ ಒಳಗೆ ವೆಜ್ ಮಸಾಲೆ ಅಥವಾ ನಾನ್​ವೆಜ್ ಮಸಾಲೆಯನ್ನು ತುಂಬಿ ಬೇಯಿಸಲಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:33 am, Wed, 15 June 22