ಪೆಟ್ರೋಲಿಯಂ ಜೆಲ್ಲಿ ಅಥವಾ ವ್ಯಾಸಲಿನ್ ಪ್ರಪಂಚದಾದ್ಯಂತ ಪ್ರತಿಯೊಂದು ಮನೆಯಲ್ಲೂ ತ್ವಚೆಗೆ ಬಳಸುವ ಒಂದು ಉತ್ಪನ್ನವಾಗಿದೆ. ಒಣಗಿದ ಚರ್ಮದ ಸಮಸ್ಯೆಗಳಿಂದ ಗಾಯದ ಗುಣಪಡಿಸುವಿಕೆಯವರೆಗೆ ಈ ಪೆಟ್ರೋಲಿಯಂ ಜೆಲ್ಲಿಯನ್ನು ಬಳಸಲಾಗುತ್ತದೆ. ಹಲವು ಸಮಯದಿಂದಲೂ ಪೆಟ್ರೋಲಿಯಂ ಜೆಲ್ಲಿಯನ್ನು ಚರ್ಮದ ಆರೋಗ್ಯಕ್ಕೆ ಬಳಸಲಾಗುತ್ತಿದೆ. ಆದರೆ, ಈ ಪೆಟ್ರೋಲಿಯಂ ಜೆಲ್ಲಿ ಅಥವಾ ವ್ಯಾಸಲಿನ್ ನಿಮ್ಮ ಚರ್ಮಕ್ಕೆ ಒಳ್ಳೆಯದಾ?
ಪೆಟ್ರೋಲಿಯಂ ಜೆಲ್ಲಿಯು ನಿಮ್ಮ ಚರ್ಮಕ್ಕೆ ಬಹಳ ಪ್ರಯೋಜನವನ್ನು ನೀಡುತ್ತದೆ. ಅದನ್ನು ಸರಿಯಾದ ರೀತಿಯಲ್ಲಿ ಹೇಗೆ ಬಳಸುವುದು? ಮತ್ತು ವ್ಯಾಸಲಿನ್ನ ಅಡ್ಡ ಪರಿಣಾಮಗಳೇನು? ಅದನ್ನು ತಡೆಗಟ್ಟಲು ನೀವು ಏನು ಮಾಡಬೇಕೆಂಬ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: Beauty Tips: ನಿಮ್ಮ ಚರ್ಮಕ್ಕೆ ನೈಸರ್ಗಿಕ ಹೊಳಪು ನೀಡುವ 5 ಜ್ಯೂಸ್ಗಳು ಇಲ್ಲಿವೆ
ಪೆಟ್ರೋಲಿಯಂ ಜೆಲ್ಲಿ ಎಂದರೇನು?:
ಪೆಟ್ರೋಲಿಯಂ ಜೆಲ್ಲಿಯನ್ನು ಮೇಣಗಳು ಮತ್ತು ಖನಿಜ ತೈಲಗಳ ಸಂಯೋಜನೆಯಿಂದ ತಯಾರಿಸಲಾಗುತ್ತದೆ. ಹೈಡ್ರೋಕಾರ್ಬನ್, ಬಿಳಿ ಪೆಟ್ರೋಲಾಟಮ್ ಅಥವಾ ಮೃದುವಾದ ಪ್ಯಾರಾಫಿನ್ ಎಂದೂ ಕರೆಯಲ್ಪಡುವ ಪೆಟ್ರೋಲಿಯಂ ಜೆಲ್ಲಿ ಅರೆ-ಘನ ಜೆಲ್ಲಿ ತರಹದ ವಸ್ತುವಾಗಿದೆ. ಇದು ಚರ್ಮವನ್ನು ನಯಗೊಳಿಸುತ್ತದೆ.
ಚರ್ಮವನ್ನು ಮೃದುಗೊಳಿಸುವುದರಿಂದ ಪೆಟ್ರೋಲಿಯಂ ಜೆಲ್ಲಿಯನ್ನು ವಿವಿಧ ಚರ್ಮದ ಲೋಷನ್‌ಗಳು, ಕ್ರೀಮ್‌ಗಳು ಮತ್ತು ಸೌಂದರ್ಯವರ್ಧಕಗಳಲ್ಲಿ ಬಳಸಲಾಗುತ್ತದೆ. ಚರ್ಮಕ್ಕೆ ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚುವುದರಿಂದ ಏನು ಪ್ರಯೋಜನಗಳಿವೆ?
1. ಒಣ ಚರ್ಮಕ್ಕೆ ಅತ್ಯುತ್ತಮ ಆಯ್ಕೆ:
ಪೆಟ್ರೋಲಿಯಂ ಜೆಲ್ಲಿಯನ್ನು ಚರ್ಮಕ್ಕೆ ಹಚ್ಚುವುದರಿಂದ ತೇವಾಂಶವನ್ನು ಕಾಪಾಡುತ್ತದೆ.
2. ಗಾಯಗಳನ್ನು ಗುಣಪಡಿಸುತ್ತದೆ:
ಪೆಟ್ರೋಲಿಯಂ ಜೆಲ್ಲಿ ಸಣ್ಣ ಗಾಯ, ಗೀರುಗಳಿಂದ ಉಂಟಾಗುವ ಚರ್ಮದ ಗಾಯಗಳನ್ನು ಮುಚ್ಚಲು ಸಹಾಯ ಮಾಡುತ್ತದೆ. ಗಾಯಗೊಂಡ ಚರ್ಮವನ್ನು ತೇವವಾಗಿಡಲು ಇದು ಸಹಾಯ ಮಾಡುತ್ತದೆ. ಇದು ತುರಿಕೆ ಮತ್ತು ಕಲೆಗಳನ್ನು ತಡೆಯುತ್ತದೆ.
3. ಡೈಪರ್ ರ್ಯಾಶ್ ನಿಯಂತ್ರಣಕ್ಕೆ ಸಹಕಾರಿ:
ಮಕ್ಕಳಲ್ಲಿ ಡೈಪರ್ ರ್ಯಾಶ್ ಸಾಮಾನ್ಯ. ಮಗುವಿನ ಚರ್ಮಕ್ಕೆ ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚುವುದರಿಂದ 4-5 ದಿನಗಳಲ್ಲಿ ರ್ಯಾಶಸ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
4. ಉಗುರುಗಳ ಆರೋಗ್ಯ ಕಾಪಾಡುತ್ತದೆ:
ಪೆಟ್ರೋಲಿಯಂ ಜೆಲ್ಲಿಯನ್ನು ಉಗುರುಗಳಿಗೆ ನಿಯಮಿತವಾಗಿ ಹಚ್ಚುವುದರಿಂದ ಬೆರಳಿನ ಉಗುರುಗಳ ಸೂಕ್ಷ್ಮತೆ ಮತ್ತು ಚಿಪ್ಪಿಂಗ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಉತ್ತಮ ಫಲಿತಾಂಶಕ್ಕಾಗಿ ನಿಮ್ಮ ಉಗುರುಗಳು ತೇವವಾಗಿರುವಾಗ ನೀವು ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚಿಕೊಳ್ಳಬೇಕು.
ಪೆಟ್ರೋಲಿಯಂ ಜೆಲ್ಲಿಯ ಅಡ್ಡ ಪರಿಣಾಮಗಳೇನು?:
ಪೆಟ್ರೋಲಿಯಂ ಜೆಲ್ಲಿಯನ್ನು ಬಳಸುವುದರಿಂದ ಕೆಲವು ಅಡ್ಡಪರಿಣಾಮಗಳು ಕೂಡ ಆಗಬಹುದು.
– ಕೆಲವು ಜನರು ವಿಶೇಷವಾಗಿ ಎಣ್ಣೆಯುಕ್ತ ಚರ್ಮ ಹೊಂದಿರುವವರು ಪೆಟ್ರೋಲಿಯಂ ಜೆಲ್ಲಿಯ ಅತಿಯಾದ ಅಪ್ಲಿಕೇಶನ್‌ನಿಂದ ಚರ್ಮದ ರಂಧ್ರಗಳು ಮುಚ್ಚಿಹೋಗಿ, ಮೊಡವೆಗಳು ಉಂಟಾಗಬಹುದು. ಹೀಗಾಗಿ, ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚುವ ಮೊದಲು ನಿಮ್ಮ ಚರ್ಮವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು.
ಇದನ್ನೂ ಓದಿ: ಸ್ನಾನ ಮಾಡಿದ ತಕ್ಷಣ ಬೆವರುತ್ತೀರಾ? ಇದಕ್ಕೆ ಪರಿಹಾರವೇನು?
– ಕೆಲವು ಜನರಿಗೆ ಪೆಟ್ರೋಲಿಯಂ ಉತ್ಪನ್ನಗಳಿಂದ ಅಲರ್ಜಿ ಉಂಟಾಗುತ್ತದೆ.
– ಮಕ್ಕಳಿಗೆ ಪೆಟ್ರೋಲಿಯಂ ಜೆಲ್ಲಿಯನ್ನು ಮೂಗಿನ ಪ್ರದೇಶದ ಸುತ್ತಲೂ ಹಚ್ಚಿದಾಗ ನ್ಯುಮೋನಿಯಾ ಉಂಟಾಗಬಹುದು.
– ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚುವ ಮೊದಲು ನೀವು ನಿಮ್ಮ ಚರ್ಮವನ್ನು ಸ್ವಚ್ಛಗೊಳಿಸದಿದ್ದರೆ ಅಥವಾ ಸರಿಯಾಗಿ ಒಣಗಲು ಬಿಡದಿದ್ದರೆ ಅದು ಕೆಲವು ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳ ಸೋಂಕಿಗೆ ಕಾರಣವಾಗಬಹುದು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ