Skin Care: ನಿಮ್ಮ ಮುಖದ ಚರ್ಮ ಹೊಳಪು ಪಡೆಯಲು ಈ ವಿಧಾನ ಅನುಸರಿಸಿ
ನೆಲ್ಲಿಕಾಯಿಯನ್ನು ಫೇಸ್ ಪ್ಯಾಕ್ ಮತ್ತು ಸ್ಕ್ರಬ್ ಆಗಿ ಬಳಸಬಹುದು. ಇದು ಮುಖದಲ್ಲಿ ಏಳುವ ಮೊಡವೆ ಹಾಗೂ ಇತರ ಚರ್ಮದ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಆಮ್ಲಾ ದೇಹಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆರೋಗ್ಯದ ದೃಷ್ಟಿಯಿಂದ ಅನೇಕ ಪ್ರಯೋಜನಗಳಿವೆ. ಸೌಂದರ್ಯ ಚಿಕಿತ್ಸೆಗಾಗಿ ನೆಲ್ಲಿಕಾಯಿಯಿಂದ ತಯಾರಿಸಿದ ಎಣ್ಣೆ ಅತ್ಯಂತ ಪ್ರಯೋಜಕಾರಿ. ಇದು ಉತ್ತಮ ಉತ್ಕರ್ಷಣ ನಿರೋಧಕಗಳ ಮೂಲವಾಗಿದೆ. ವಿಟಮಿನ್ ಸಿ ಮತ್ತು ಬಿ ಅಂಶವನ್ನು ಹೊಂದಿರುವ ನೆಲ್ಲಿಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತ ಶುದ್ಧಿಯಾಗುತ್ತದೆ. ಇದರ ಜತೆಗೆ ಚರ್ಮದ ಆರೈಕೆಯನ್ನು ಮಾಡಿಕೊಳ್ಳಬಹುದಾಗಿದೆ. ಹಾಗಿರುವಾಗ ನೆಲ್ಲಿಕಾಯಿಯನ್ನು ಯಾವ ರೀತಿ ಬಳಸಬೇಕು ಎಂಬುದನ್ನು ತಿಳಿದುಕೊಳ್ಳಿ.
ಇದು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಚರ್ಮವು ತಾರುಣ್ಯ ಹಾಗೂ ತಾಜಾತನದಲ್ಲಿರುವಂತೆ ನೋಡಿಕೊಳ್ಳುತ್ತದೆ. ನೆಲ್ಲಿಕಾಯಿಯನ್ನು ಫೇಸ್ ಪ್ಯಾಕ್ ಮತ್ತು ಸ್ಕ್ರಬ್ ಆಗಿ ಬಳಸಬಹುದು. ಇದು ಮುಖದಲ್ಲಿ ಏಳುವ ಮೊಡವೆ ಹಾಗೂ ಇತರ ಚರ್ಮದ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಪಪ್ಪಾಯಿಯನ್ನೂ ಬಳಸಿ ನೀವು ಫೇಸ್ಪ್ಯಾಕ್ ತಯಾರಿಸಬಹುದು. ಇದು ಚರ್ಮದ ಶುದ್ಧೀಕರಣಕ್ಕೆ ಸಹಾಯಕವಾಗಿದೆ. ಎರಡು ಚಮಚ ಆಮ್ಲಾ ರಸ, ಎರಡು ಚಮಚ ಪಪ್ಪಾಯ ರಸವನ್ನು ಮಿಶ್ರಣ ಮಾಡಿ. ಹತ್ತಿಯ ಸಹಾಯದಿಂದ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷಗಳ ಕಾಲ ಹಾಗೆಯೇ ಇರಿ. ಬಳಿಕ ಮುಖವನ್ನು ತಣ್ಣೀರಿನಿಂದ ತೊಳೆಯಬಹುದು. ಈ ರೀತಿಯಾಗಿ ಒಂದು ವಾರ ಮಾಡುವ ಮೂಲಕ ನಿಮ್ಮ ಮುಖ ಹೊಳಪು ಪಡೆಯಲು ಸಹಾಯವಾಗುತ್ತದೆ.
ಆಮ್ಲಾ, ಮೊಸರು ಮತ್ತು ಜೇನುತುಪ್ಪದೊಂದಿಗೆ ಫೇಸ್ ಪ್ಯಾಕ್ ಚರ್ಮದ ಟೋನ್ ಸುಧಾರಿಸಲು ನೆಲ್ಲಿಕಾಯಿಯಲ್ಲಿರುವ ಅಂಶ ಸಹಾಯ ಮಾಡುತ್ತದೆ. ಎರಡು ಚಮಚ ನೆಲ್ಲಿಕಾಯಿ ಪುಡಿ, ಒಂದು ಚಮಚ ಮೊಸರು ಮತ್ತು ಒಂದು ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ. ಇದನ್ನು ನಿಮ್ಮ ಮುಖಕ್ಕೆ ಹಚ್ಚಿ 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆಯಿರಿ.
ಆಮ್ಲಾ, ಸಕ್ಕರೆ ಸ್ಕ್ರಬ್ ಮತ್ತು ರೋಸ್ ವಾಟರ್ ಅರ್ಧ ಕಪ್ ತಾಜಾ ನೆಲ್ಲಿಕಾಯಿಯ ಪೌಡರ್ ತೆಗೆದುಕೊಳ್ಳಿ. ಇದಕ್ಕೆ ಅರ್ಧ ಕಪ್ ಸಕ್ಕರೆ ಹಾಗೂ ಒಂದು ಚಮಚ ರೋಸ್ ವಾಟರ್ ಸೇರಿಸಿ ಮಿಶ್ರಣ ಮಾಡಿ. ನಿಮ್ಮ ಮುಖಕ್ಕೆ ಮೃದುವಾಗಿ ಉಜ್ಜಿ. ಸ್ವಲ್ಪ ಸಮಯದ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ನೆಲ್ಲಿಕಾಯಿಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ಚರ್ಮವನ್ನು ಹೊಳಪು ಮಾಡುತ್ತದೆ. ಜತೆಗೆ ಚರ್ಮದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು.
ಇದನ್ನೂ ಓದಿ:
Health Tips: ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಲು ಹೀಗಿರಲಿ ನಿಮ್ಮ ಆಹಾರ ಕ್ರಮ
Health Tips: ಬೆಳಿಗ್ಗೆ ಎದ್ದ ತಕ್ಷಣ ಈ ರೀತಿ ಮಾಡುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ
(Skin Care Tips Use amla to health skin check in kannada)
Published On - 8:07 am, Fri, 3 September 21