ಚಳಿಗಾಲ(Winter)ದಲ್ಲಿ ತ್ವಚೆಯ ಆರೈಕೆ(Skincare) ಮಾಡುವುದು ಅತ್ಯಂತ ಅಗತ್ಯವಾಗಿರುತ್ತದೆ. ಶೀತ ವಾತಾವರಣವು ನಿಮ್ಮ ದೇಹದ ತೇವಾಂಶವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಇದರಿಂದಾಗಿ ಚರ್ಮಗಳು ಒಡೆದು ಹೋಗುವ ಸಾಧ್ಯತೆ ಹೆಚ್ಚಿದೆ. ವಿಶೇಷವಾಗಿ ತುಟಿ, ಪಾದದ ಇಮ್ಮಡಿ ಒಡೆದು ಸಾಕಷ್ಟು ನೋವುಂಟು ಮಾಡುತ್ತದೆ. ಆದ್ದರಿಂದ ಚಳಿಗಾಲದಲ್ಲಿ ನೀವು ಮಾಡುವ ಕೆಲವೊಂದು ನಿರ್ಲಕ್ಷ್ಯ ಹಾಗೂ ತಪ್ಪುಗಳು ನಿಮ್ಮ ತ್ವಚೆಯ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
ಬಿಸಿಲಿನ ಸಮಯದಲ್ಲಿ ಮಾತ್ರ ಸನ್‌ಸ್ಕ್ರೀನ್ ಬಳಸುವ ಅಭ್ಯಾಸ ನಿಮ್ಮಲ್ಲಿದ್ದರೆ ಈ ಅಭ್ಯಾಸವನ್ನು ಈಗಲೇ ಬಿಟ್ಟು ಬಿಡಿ. ಚಳಿಗಾಲದಲ್ಲಿಯೂ ಸನ್‌ಸ್ಕ್ರೀನ್ ಬಳಸುವ ಅಭ್ಯಾಸ ರೂಡಿಸಿಕೊಳ್ಳಿ. ಇದು ನಿಮ್ಮ ತ್ವಚೆಯನ್ನು ರಕ್ಷಿಸುವಲ್ಲಿ ಸಹಾಯಕವಾಗಿದೆ.
ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವ ಬದಲಾಗಿ, ಹೆಚ್ಚಿನವರು ತುಂಬಾ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವ ಅಭ್ಯಾಸವನ್ನು ಇಟ್ಟುಕೊಳ್ಳುತ್ತಾರೆ. ಬಿಸಿ ನೀರಿನ ಸ್ನಾನವು ಚರ್ಮದ ಎಣ್ಣೆಯನ್ನು ತೆಗೆದು ಹಾಕುತ್ತದೆ. ಬಿಸಿ ನೀರಿನ ಸ್ನಾನದ ನಂತರ ನಿಮ್ಮ ಚರ್ಮವು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇದು ನಿಮ್ಮ ಚರ್ಮ ಹದಗೆಡುವಂತೆ ಮಾಡುತ್ತದೆ. ಆದ್ದರಿಂದ ಆದಷ್ಟು ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ.
ಇದನ್ನೂ ಓದಿ: ಹಸಿ ಹಾಗೂ ಬೇಯಿಸಿದ ತರಕಾರಿ ಯಾವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ
ಚಳಿಗಾಲದಲ್ಲಿ ನಿಮ್ಮ ದೇಹವು ತೇವಾಂಶವನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ಮಾಯಿಶ್ಚರೈಸರ್ ಬಳಸುವುದು ಅತ್ಯಂತ ಅಗತ್ಯವಾಗಿದೆ. ಆದ್ದರಿಂದ ಸಾರಯುಕ್ತ ತೈಲಗಳನ್ನು ನಿಮ್ಮ ಚರ್ಮಕ್ಕೆ ಬಳಸಿ. ಸೂರ್ಯಕಾಂತಿ, ಆವಕಾಡೊ, ಕ್ಯಾಸ್ಟರ್ ಸೀಡ್, ತೆಂಗಿನಕಾಯಿಯ ಮಾಯಿಶ್ಚರೈಸರ್ ಆಯ್ಕೆ ಮಾಡಿ. ಇದು ಚಳಿಗಾಲದಲ್ಲಿ ನಿಮ್ಮ ಚರ್ಮಕ್ಕೆ ಬೇಕಾಗುವ ತೇವಾಂಶವನ್ನು ನೀಡುತ್ತದೆ. ಜೊತೆಗೆ ಚರ್ಮ ಒಡೆದು ಹೋಗದಂತೆ ರಕ್ಷಿಸುತ್ತದೆ.
ಚಳಿಗಾಲದಲ್ಲಿ ತುಟಿಗಳು ಹಾಗೂ ಪಾದದ ಹಿಮ್ಮಡಿ ಒಡೆಯುವುದರಿಂದ, ಇದು ದಿನ ನಿತ್ಯದ ಜೀವನದಲ್ಲಿ ಸಾಕಷ್ಟು ಕಿರಿ ಕಿರಿಯನ್ನುಂಟು ಮಾಡುತ್ತದೆ. ಆದ್ದರಿಂದ ತ್ವಚೆಯ ಸ್ವಚ್ಚತೆಯಲ್ಲಿ ನಿರ್ಲಕ್ಷ್ಯ ತೋರದಿರಿ. ಮೊದಲು ಮಾಡಬೇಕಾದ ಪ್ರಮುಖ ವಿಷಯವೆಂದರೆ ಹೈಡ್ರೇಟ್ ಮಾಡುವುದು. ನಿಮ್ಮ ಮುಖವನ್ನು ತೊಳೆಯಲು ಆರ್ಧ್ರಕವಾಗಿರುವ ಸೌಮ್ಯವಾದ ಕ್ಲೆನ್ಸರ್ ಬಳಸಿ. ಮೇಕಪ್ ಬಳಸುವವರು ಮುಖವನ್ನು ಸ್ವಚ್ಛಗೊಳಿಸಲು ಮೈಕೆಲರ್ ನೀರನ್ನು ಬಳಸಬೇಕು. ನಂತರ ಮುಂದಿನ ಹಂತವಾಗಿ ಚರ್ಮವನ್ನು ಸ್ವಲ್ಪ ತೇವಗೊಳಿಸಬೇಕು. ಒಣ ಚರ್ಮದಿಂದ ಸಾಮಾನ್ಯ ಚರ್ಮಕ್ಕಾಗಿ ಕ್ರೀಮ್ ಆಧಾರಿತ ಮಾಯಿಶ್ಚರೈಸರ್ ಮತ್ತು ಎಣ್ಣೆಯುಕ್ತ ಚರ್ಮಕ್ಕಾಗಿ ಜೆಲ್ ಆಧಾರಿತ ಮಾಯಿಶ್ಚರೈಸರ್ ಆಯ್ಕೆಮಾಡಿ. ಸ್ಕ್ರಬ್ ಮತ್ತು ಎಫ್ಫೋಲಿಯೇಟ್ ಮಾಡಲು ಪ್ರಯತ್ನಿಸಿ. ಅದರ ನಂತರ ಸನ್‌ಸ್ಕ್ರೀನ್ ಬಳಸಿ.
ಇದನ್ನೂ ಓದಿ: Makar Sankranti 2023: ಕೈಗಳ ಅಂದವನ್ನು ಹೆಚ್ಚಿಸುವ ಮೆಹಂದಿ ಡಿಸೈನ್ಸ್ಗಳು ಇಲ್ಲಿವೆ
ಬೇಸಿಗೆಗೆ ಹೋಲಿಸಿದರೆ, ಚಳಿಗಾಲದಲ್ಲಿ ಬಾಯಾರಿಕೆ ಆಗುವುದು ಕಡಿಮೆ. ಆದ್ದರಿಂದ ನೀರು ಕುಡಿಯುವುದೇ ಮರೆತು ಬಿಡುತ್ತಾರೆ. ಇಂತಹ ಅಭ್ಯಾಸ ನಿಮ್ಮ ತ್ವಚೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಜೊತೆಗೆ ಕಡಿಮೆ ನೀರು ಕುಡಿಯುವುದರಿಂದ ದೇಹದಲ್ಲಿ ತೇವಾಂಶ ಕಳೆದುಹೋಗಲು ಕಾರಣವಾಗುತ್ತದೆ. ಇದು ತುಟಿಗಳು ಬಿರುಕುಗೊಳ್ಳಲು ಕಾರಣವಾಗುತ್ತದೆ. ದೇಹದಿಂದ ವಿಷವನ್ನು ತೆಗೆದುಹಾಕಲು ಮತ್ತು ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳಲು, ದಿನಕ್ಕೆ ಕನಿಷ್ಠ 8 ಗ್ಲಾಸ್ (2 ಲೀಟರ್) ನೀರನ್ನು ಕುಡಿಯಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: