Sleep Divorce:ದಾಂಪತ್ಯ ಬಲಪಡಿಸುವ ಈ ವಿಚ್ಛೇದನದ ಮೊರೆ ಹೋಗುತ್ತಿರುವವರಲ್ಲಿ ಭಾರತೀಯರಿಗೆ ಅಗ್ರಸ್ಥಾನ, ಕಾರಣಗಳು ಇವೆ ನೋಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 22, 2025 | 6:27 PM

ಇತ್ತೀಚೆಗಿನ ದಿನಗಳಲ್ಲಿ ಡಿವೋರ್ಸ್ ಪಡೆಯುವುದು ಕೂಡ ಟ್ರೆಂಡ್ ಆಗಿದೆ. ಅದರಲ್ಲಿಯೂ ಚಿತ್ರವಿಚಿತ್ರ ಡಿವೋರ್ಸ್ ಗಳಿದ್ದು ಅದರಲ್ಲಿ ಒಂದು ಸ್ಲೀಪ್ ಡಿವೋರ್ಸ್. ದಂಪತಿಗಳಿಬ್ಬರೂ ತಮ್ಮ ಅಗತ್ಯಗಳು ಮತ್ತು ಆರಾಮದಾಯಕವಾಗಿರಲು ಬೇರೆ ಬೇರೆಯಾಗಿ ಮಲಗಲು ಸ್ಲೀಪ್ ಡಿವೋರ್ಸ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದೀಗ ರೆಸ್‌ಮೆಡ್‌ನ 2025 ರ ಜಾಗತಿಕ ನಿದ್ರೆಯ ಸಮೀಕ್ಷೆಯ ಪ್ರಕಾರವಾಗಿ, ಭಾರತದಲ್ಲಿ ಶೇಕಡಾ 78% ದಂಪತಿಗಳು ಸ್ಲೀಪ್ ಡಿವೋರ್ಸ್ ಮೊರೆ ಹೋಗಿದ್ದಾರೆ ಎನ್ನುವುದು ಅಂಕಿಅಂಶಗಳಿಂದ ಬಹಿರಂಗವಾಗಿದೆ.

Sleep Divorce:ದಾಂಪತ್ಯ ಬಲಪಡಿಸುವ ಈ ವಿಚ್ಛೇದನದ ಮೊರೆ ಹೋಗುತ್ತಿರುವವರಲ್ಲಿ ಭಾರತೀಯರಿಗೆ ಅಗ್ರಸ್ಥಾನ, ಕಾರಣಗಳು ಇವೆ ನೋಡಿ
ಸಾಂದರ್ಭಿಕ ಚಿತ್ರ
Follow us on

ಇತ್ತೀಚೆಗಿನ ದಿನಗಳಲ್ಲಿ ಡಿವೋರ್ಸ್ (Divorce) ಪ್ರಕರಣಗಳು ಹೆಚ್ಚಾಗುತ್ತಿವೆ. ಇಂದಿನ ಬಿಡುವಿಲ್ಲದ ಜೀವನ ಶೈಲಿ, ಒತ್ತಡ, ಹೊಂದಾಣಿಕೆ ಕೊರತೆ, ಆರ್ಥಿಕ ಸ್ವಾತಂತ್ರ್ಯ ಹೀಗೆ ಹಲವು ಕಾರಣಗಳಿಂದ ವಿಚ್ಛೇದನ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. ಆದರೆ ಇದೀಗ ಸ್ಲೀಪಿಂಗ್ ಡಿವೋರ್ಸ್ (Sleeping divorce) ಟ್ರೆಂಡ್ ನಲ್ಲಿದೆ. ಇದರಲ್ಲಿ ದಂಪತಿಗಳು ತಮ್ಮ ಅಗತ್ಯಗಳು ಮತ್ತು ಆರಾಮಕ್ಕೆ ಅನುಗುಣವಾಗಿ ಬೇರೆ ಬೇರೆಯಾಗಿ ಮಲಗಲು ಇದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಅಂಕಿಅಂಶಗಳ ಪ್ರಕಾರವಾಗಿ ಸ್ಲೀಪಿಂಗ್ ಡಿವೋರ್ಸ್ ಪಡೆಯುವವರಲ್ಲಿ ಭಾರತೀಯರು ಮುಂದಿದ್ದಾರೆ. ಹಾಗಾದ್ರೆ ಸ್ಲೀಪಿಂಗ್ ವಿಚ್ಛೇದನಕ್ಕೆ ಕಾರಣಗಳೇನು? ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ.

ಏನಿದು ಸ್ಲೀಪ್‌ ಡಿವೋರ್ಸ್‌?

ಇತ್ತೀಚೆಗಿನ ದಿನಗಳಲ್ಲಿ ಸ್ಲೀಪ್‌ ಡಿವೋರ್ಸ್ ಟ್ರೆಂಡ್ ಆಗುತ್ತಿದೆ. ಸಾಮಾನ್ಯವಾಗಿ ದಂಪತಿಗಳು ಒಟ್ಟಿಗೆ ಮಲಗುತ್ತಾರೆ. ಆದರೆ ಈ ಸ್ಲೀಪ್ ಡಿವೋರ್ಸ್ ನಲ್ಲಿ ಉತ್ತಮ ಗುಣಮಟ್ಟದ ನಿದ್ರೆಗಾಗಿ ಸಂಗಾತಿಗಳು ಬೇರೆ ಬೇರೆ ಕೋಣೆಗಳಲ್ಲಿ ಮಲಗಲು ಇಷ್ಟ ಪಡುತ್ತಾರೆ. ಈ ಸ್ಲೀಪ್ ಡಿವೋರ್ಸ್ ನಲ್ಲಿ ಯಾವುದೇ ಅಡೆತಡೆಗಳಿಲ್ಲದೇ ಉತ್ತಮ ನಿದ್ರೆಯನ್ನು ಪಡೆಯುವ ಉದ್ದೇಶವಾಗಿದೆ. ಇಲ್ಲಿ ಮುಖ್ಯವಾಗಿ ದಂಪತಿಗಳು ದೈಹಿಕವಾಗಿ ದೂರವಿದ್ದರೂ ಭಾವನಾತ್ಮಕವಾಗಿ ಜೊತೆಯಿರುತ್ತಾರೆ. ಆದರೆ ಈ ನಿದ್ರೆ ವಿಚ್ಛೇದನ ಪ್ರವೃತ್ತಿಯೂ ಗಂಡ ಹೆಂಡತಿಯ ಸಂಬಂಧವನ್ನು ಬಲಪಡಿಸುತ್ತದೆ ಎನ್ನಲಾಗಿದೆ.

ಸ್ಲೀಪ್ ಡಿವೋರ್ಸ್ ನಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?

ರೆಸ್‌ಮೆಡ್‌ನ 2025 ರ ಜಾಗತಿಕ ನಿದ್ರೆಯ ಸಮೀಕ್ಷೆಯ ಪ್ರಕಾರ, ನಿದ್ರೆ ವಿಚ್ಛೇದನದಲ್ಲಿ ಭಾರತವು ಅಗ್ರಸ್ಥಾನದಲ್ಲಿದೆ. ಭಾರತದಲ್ಲಿ ಶೇಕಡಾ 78 ರಷ್ಟು ದಂಪತಿಗಳು ಸ್ಲೀಪ್ ಡಿವೋರ್ಸ್ ಪ್ರವೃತ್ತಿಯನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಇನ್ನು ಉಳಿದಂತೆ ಚೀನಾದಲ್ಲಿ ಶೇಕಡಾ 67 ಮತ್ತು ದಕ್ಷಿಣ ಕೊರಿಯಾ ಶೇಕಡಾ 65 ರಷ್ಟು ದಂಪತಿಗಳು ಸ್ಲೀಪ್ ಡಿವೋರ್ಸ್ ಮೊರೆ ಹೋಗುತ್ತಿದ್ದಾರೆ ಎನ್ನುವುದು ಸಮೀಕ್ಷೆಯಿಂದ ಬಹಿರಂಗವಾಗಿದೆ. ಈ ಸಮೀಕ್ಷೆಗೆ 13 ದೇಶಗಳಲ್ಲಿ 30,000 ಕ್ಕೂ ಹೆಚ್ಚು ಜನರನ್ನು ಒಳಪಡಿಸಲಾಗಿದ್ದು, ಈ ಸಮೀಕ್ಷೆಯು ಜಾಗತಿಕ ನಿದ್ರೆಯ ಬಿಕ್ಕಟ್ಟನ್ನು ಬಹಿರಂಗಪಡಿಸಿದೆ. ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಶೇಕಡಾ 50 ರಷ್ಟು ದಂಪತಿಗಳು ಒಟ್ಟಿಗೆ ಮಲಗಲು ಇಷ್ಟ ಪಟ್ಟರೆ, ಇನ್ನು ಶೇಕಡಾ 50 ರಷ್ಟು ಪ್ರತ್ಯೇಕವಾಗಿ ಮಲಗಲು ಇಷ್ಟಪಡುತ್ತಾರೆ ಎನ್ನಲಾಗಿದೆ.

ಇದನ್ನೂ ಓದಿ
ವಯಸ್ಸು 108 ಆದ್ರೂ ಕುಂದದ ಜೀವನೋತ್ಸಾಹ
ಸೂಪ್‌ಗೆ ಮೂತ್ರ ವಿಸರ್ಜನೆ ಮಾಡಿ ಹುಚ್ಚಾಟ ಮೆರೆದ ಯುವಕರು
ತಮ್ಮ ಮಗುವಿನ ಸಲುವಾಗಿ ಸಹ ಪ್ರಯಾಣಿಕರಿಗೆ ಕ್ಯೂಟ್‌ ಪತ್ರದೊಂದಿಗೆ ಗಿಫ್ಟ್‌
ಪ್ಲಾಸ್ಟಿಕ್‌ ಬಾಟಲಿಯಿಂದ ತಯಾರಾದ ಸನ್‌ಲೈಟ್‌ ಪವರ್ಡ್‌ ಬಲ್ಬ್‌ ಇದು

ಇದನ್ನೂ ಓದಿ: ನಿಮ್ಮ ಬ್ಲಡ್ ಗ್ರೂಪ್ ನಲ್ಲಿ ಅಡಗಿದೆ ನಿಗೂಢ ವ್ಯಕ್ತಿತ್ವ

ದಂಪತಿಗಳಲ್ಲಿ ನಿದ್ರಾಭಂಗಕ್ಕೆ ಕಾರಣಗಳು ಇವು

ದಂಪತಿಗಳಿಬ್ಬರೂ ಬೇರೆ ಬೇರೆಯಾಗಿ ಮಲಗುವುದು ಅಸಾಮಾನ್ಯವೆಂದು ತೋರುತ್ತದೆಯಾದರೂ, ಆದರೆ ನಿದ್ರೆಯ ಗುಣಮಟ್ಟ ಮತ್ತು ಒಟ್ಟಾರೆ ಸಂಬಂಧದ ಯೋಗಕ್ಷೇಮವನ್ನು ಸುಧಾರಿಸುವಲ್ಲಿ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ. ನಿದ್ರಾಭಂಗಕ್ಕೆ ಸಾಮಾನ್ಯ ಕಾರಣಗಳಲ್ಲಿ ಸಂಗಾತಿಯ ಗೊರಕೆ, ಶೇಕಡಾ 32 ರಷ್ಟು ಜೋರಾಗಿ ಉಸಿರಾಡುವುದು, ಶೇಕಡಾ 12 ರಷ್ಟು ಚಡಪಡಿಕೆ, ಶೇಕಡಾ 12 ರಷ್ಟು ಹೊಂದಿಕೆಯಾಗದ ನಿದ್ರೆಯ ವೇಳಾಪಟ್ಟಿಗಳು ಹಾಗೂ ಶೇಕಡಾ 8 ರಷ್ಟು ರಾತ್ರಿ ಹಾಸಿಗೆಯ ಮೇಲೆ ತಮ್ಮ ಹೆಚ್ಚು ಸಮಯ ಪರದೆಯಲ್ಲೇ ಕಳೆಯುವುದು ಸೇರಿವೆ. ಈ ಕಾರಣಗಳಿಂದಲೇ ಹೆಚ್ಚಿನವರು ಸ್ಲೀಪ್ ಡಿವೋರ್ಸ್ ಮೊರೆ ಹೋಗುತ್ತಿದ್ದಾರೆ ಎನ್ನಲಾಗಿದೆ. ನಿದ್ರೆ ಸರಿಯಾಗಿ ಆಗದಿರಲು ಶೇಕಡಾ 69 ರಷ್ಟು ಭಾರತೀಯರಿಗೆ ಒತ್ತಡವು ಪ್ರಮುಖ ಕಾರಣವಾಗಿದೆ. ಇನ್ನು ಉಳಿದಂತೆ ದಕ್ಷಿಣ ಕೊರಿಯಾ, ಥೈಲ್ಯಾಂಡ್, ಸಿಂಗಾಪುರ ಮತ್ತು ಜರ್ಮನಿ ಪ್ರಮುಖ ದೇಶಗಳಲ್ಲಿ ಒತ್ತಡವು ನಿದ್ರಾಭಂಗಕ್ಕೆ ಪ್ರಮುಖ ಕಾರಣವೆನ್ನುವುದು ವರದಿಯಾಗಿವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ